ಮೆರಿಟ್ ನೊಂದಿಗೆ ಕೌಶಲ್ಯ ಬೆಳೆಸಿಕೊಳ್ಳಿ- ವಿದ್ಯಾರ್ಥಿಗಳಿಗೆ ಡಾ.ಕೆ. ಶಿವಶಂಕರ್ ಸಲಹೆ
ಸುದ್ದಿ360 ದಾವಣಗೆರೆ, ಆ.26: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಮೆರಿಟ್ ಹೊಂದುವುದರ ಜೊತೆಗೆ ವಿಶೇಷ ಕೌಶಲ್ಯಗಳನ್ನು ಹೊಂದುವುದು ಇಂದು ಅತ್ಯಗತ್ಯವಾಗಿದ್ದು ಆ ನಿಟ್ಟಿನಲ್ಲಿ ಮುಂದುವರೆಯುವಂತೆ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಕೆ. ಶಿವಶಂಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಗರದ ಎಆರ್‌ಜಿ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಇಂದು ನಡೆದ ಎಆರ್‌ಜಿ ವೈಭವ 2022 ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೆ ಉದ್ಯೋಗ ನೀಡುವಾಗ ಕೇವಲ ಮೆರಿಟ್ ನೋಡುತ್ತಿದ್ದರು. ಆದರೆ ಇಂದು, ಉತ್ತಮ ಅಂಕಗಳ ಜತೆ ವೃತ್ತಿಗೆ ಅಗತ್ಯವಿರುವ ಕೌಶಲ್ಯ ಹೊಂದಿದವರನ್ನು ಉದ್ಯೋಗಕ್ಕೆ ಪರಿಗಣಿಸಲಾಗುತ್ತಿದೆ … Read more