ಬಾದಾಮಿಯಿಂದ ಸ್ಪರ್ಧಿಸಿದರೆ ಒಳ್ಳೆಯದಾಗುತ್ತೆ – ಸಿದ್ಧರಾಮಯ್ಯನವರಿಗೆ ಬನಶಂಕರಿ ದೇಗುಲದ ಅರ್ಚಕರ ಮನವಿ
ಸುದ್ದಿ360 ಬಾಗಲಕೋಟೆ ಜ.6: ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಫರ್ಧೆ ಮಾಡಿದರೆ ಸಿದ್ದರಾಮಯ್ಯ ಗೆ ಒಳ್ಳೆಯದಾಗುತ್ತದೆ ಎಂದು ಬಾದಾಮಿ ಬನಶಂಕರಿ ದೇಗುಲದ ಅರ್ಚಕರು ಹೇಳಿದ್ದಾರೆ. ಬನಶಂಕರಿ ಜಾತ್ರೆಯ ಮಹಾರಥೋತ್ಸವ ನಿಮಿತ್ತ ಬಾದಾಮಿಗೆ ಆಗಮಿಸಿದ್ದ ಸಿದ್ದರಾಮಯ್ಯರಿಗೆ ಇಲ್ಲಿನ ಅರ್ಚಕರು ಮನವಿ ಮಾಡಿದ್ದಾರೆ. ಸಿದ್ದರಾಮಯ್ಯನವರಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜಾ ಕೈಂಕರ್ಯ ಮುಗಿದ ಬಳಿಕ ಆಶೀರ್ವಾದ ಮಾಡಿದ ಅರ್ಚಕರು ಬಾದಾಮಿಯಿಂದ ಸ್ಫರ್ಧೆ ಮಾಡಿದರೆ ಒಳ್ಳೆಯದಾಗುತ್ತೆ ಎಂದು ಹೇಳಿದ್ದಾರೆ.