ಬನಶಂಕರಿ ನಿನ್ನ ಪಾದಕ ಶಂಭೂಕೋ – ಬನಶಂಕರಿ ರಥೋತ್ಸವಕ್ಕೆ ಸಂಭ್ರಮದ ಚಾಲನೆ

ಸುದ್ದಿ360 ಬಾಗಲಕೋಟೆ ಜ.6: ಜಿಲ್ಲೆಯ ಬಾದಾಮಿಯ ಬನಶಂಕರಿ ರಥೋತ್ಸವಕ್ಕೆ ಶುಕ್ರವಾರ ಸಂಭ್ರಮದ ಚಾಲನೆ ದೊರೆತಿದ್ದು, ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕ ಸಿದ್ದರಾಮಯ್ಯ ಪುಷ್ಪಾರ್ಪಣೆ ಮಾಡು ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ಜನ ಸಾಗರದಿಂದ “ಬನಶಂಕರಿ ನಿನ್ನ ಪಾದಕ ಶಂಭೂಕೋ” ಎಂಬ ಉದ್ಘೋಷ ಕೇಳಿಬರುತ್ತಿತ್ತು. ಉದ್ಘೋಷದೊಂದಿಗೆ ನಮಿಸಿದ ಭಕ್ತಸಾಗರ ದೇವಿಯ ಕೃಪೆಗೆ ಪಾತ್ರರಾದರು. ಒಂದು ತಿಂಗಳ ಜಾತ್ರೆ ಇದಾಗಿದ್ದು ಇಂದಿನಿಂದ ಅಧಿಕೃತವಾಗಿ ಪ್ರಾರಂಭಗೊಂಡಿದೆ.

error: Content is protected !!