ವೇತನ ಪರಿಷ್ಕರಣೆ ಇಂದು ಇತ್ಯರ್ಥ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಉತ್ತರ ಕನ್ನಡ ( ಸಿದ್ಧಾಪುರ) ಫೆ. 28:  ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಇಂದು ಸಂಜೆ ವೇತನ ಆಯೋಗ ಹಾಗೂ  ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು  ಇಂದು ಸಿದ್ಧಾಪುರ ವಿವಿಧ  ಯೋಜನೆಗಳ ಅಡಿಯಲ್ಲಿ ಸೌಲಭ್ಯ ವಿತರಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ  ನೀಡಿದರು. ಸರ್ಕಾರಿ ನೌಕರರು ನಮ್ಮವರು. ಅವರ ವೇತನ  ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆಯಾಗಿದೆ. ನೌಕರರು ಮಧ್ಯಂತರ ವರದಿಯನ್ನು ಪಡೆದು ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ … Read more

ಭ್ರಷ್ಟಾಚಾರಕ್ಕೆ ರಹದಾರಿ ಮಾಡಿಕೊಂಡವರು ಕಾಂಗ್ರೆಸ್ನವರು: ಸಿಎಂ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಫೆ. 15: ನಿಗಮದಲ್ಲಿ ಟೆಂಡರ್ ನೀಡುವಿಕೆಯಲ್ಲಿ ಎರಡು ಹಂತದ  ಪರಿಶೀಲನೆಯನ್ನು ತೆಗೆದು ಹಾಕಿ ಭ್ರಷ್ಟಾಚಾರಕ್ಕೆ ರಹದಾರಿ ಮಾಡಿಕೊಂಡಿದ್ದವರು ಕಾಂಗ್ರೆಸ್ನವರು. ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಿದ್ದಾಗ ಟೆಂಡರ್ ಪರಿಶೀಲನಾ ಸಮಿತಿಯನ್ನು ತೆಗೆದುಹಾಕಿದ್ದರು. ಟಿ. ಎ. ಸಿ ಯನ್ನೂ ತೆಗೆದುಹಾಕಿದ್ದರು. ನಾವು ಬಂದ ನಂತರ ಅದನ್ನು ಪುನ: ಸ್ಥಾಪನೆ ಮಾಡಿದ್ದೇವೆ. ಹೀಗಾಗಿ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು … Read more

ಸಂತ ಸೇವಾಲಾಲ ಮಹಾಮಠ ಪ್ರತಿಷ್ಠಾನಕ್ಕೆ 10 ಕೋಟಿ ರೂ. ಅನುದಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಾವಣಗೆರೆ (ನ್ಯಾಮತಿ), ಫೆ. 14 : ಸಂತ ಸೇವಾಲಾಲ ಮಹಾಮಠ ಪ್ರತಿಷ್ಠಾನಕ್ಕೆ 10 ಕೋಟಿ ರೂ. ಅನುದಾನ  ಬಿಡುಗಡೆ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶ್ರೀ ಸಂತ ಸೇವಾಲಾಲ್ ಅವರ 284 ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ವಿಶೇಷ ವಸತಿ ಶಾಲೆ ಸುರಗೊಂಡನಗೊಪ್ಪ ಇಡೀ ದೇಶಕ್ಕೆ ತಿಳಿಯಬೇಕು, ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ  ಹಕ್ಕುಪತ್ರಗಳನ್ನು ನೀಡಿರುವ ಗ್ರಾಮಗಳಲ್ಲಿ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿಯಲ್ಲಿ ಲಿಡ್ಕರ್ ಮಾದರಿ ಕಾರ್ಯಕ್ರಮವನ್ನು ರೂಪಿಸಲಾಗುವುದು.  … Read more

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಚಿಕ್ಕಮಗಳೂರು, ಜ 18 : ಚಿಕ್ಕಮಗಳೂರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಅವಶ್ಯಕವಿರುವ ಅನುದಾನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಚಿಕ್ಕಮಗಳೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಕೃಷಿ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಅರಣ್ಯ ಇಲಾಖೆ ಇವರುಗಳ ಸಹಯೋಗದಲ್ಲಿ  ಆಯೋಜಿಸಿರುವ  “ಚಿಕ್ಕಮಗಳೂರು ಹಬ್ಬ” ಉದ್ಘಾಟಿಸಿ ಮಾತನಾಡಿದರು. ಚಿಕ್ಕಮಗಳೂರು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿಸಬೇಕಿದೆ. ಜಿಲ್ಲೆಯಲ್ಲಿ ಹೆಲಿಕಾಪ್ಟರ್ ರೈಡ್ ನ್ನು  ಒಳಗೊಂಡಂತೆ ಪ್ರವಾಸಿ … Read more

ಟೀಕೆ ಟಿಪ್ಪಣಿಗೆ ಜಗ್ಗದೆ ಸಮಾಜಕ್ಕೆ ನ್ಯಾಯ ಒದಗಿಸಲು ಬದ್ಧ: ಸಿಎಂ ಬೊಮ್ಮಾಯಿ

ಸುದ್ದಿ360 ದಾವಣಗೆರೆ (ಹರಿಹರ) ಜ.14: ಟೀಕೆ ಮಾಡುವವರು ಮಾಡಲಿ ಅವುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಮಾಜಕ್ಕೆ ನ್ಯಾಯ ಒದಗಿಸಲು ನಾನು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಪಂಚಮಸಾಲಿ ಜಗದ್ಗುರು ಪೀಠ, ಹರಿಹರ ಇವರ ವತಿಯಿಂದ ಆಯೋಜಿಸಿದ್ದ ಹರಜಾತ್ರಾ 2023 ಹಾಗೂ ರೈತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯದಲ್ಲಿ ಹೆಚ್ಚಿರುವ ರೈತಾಪಿ ವರ್ಗಕ್ಕೆ ಶಕ್ತಿಯನ್ನು ತುಂಬಬೇಕು. ಶಕ್ತಿ ತುಂಬಲು ಸಾಮಾಜಿಕ ನ್ಯಾಯ ನೀಡಬೇಕು. ನಾವು ಈ ವಿಷಯದಲ್ಲಿ ಟೀಕೆಟಿಪ್ಪಣಿಗಳಿಗೆ ಗಮನ ನೀಡದೆ ಸಾಮಾಜಿಕ ಬದ್ಧತೆಯಿಂದ … Read more

ಚುನಾವಣಾ ಪ್ರೇರಿತ ಹೇಳಿಕೆಗಳಿಂದ ಕಾಂಗ್ರೆಸ್ ಜನರನ್ನು ಮರಳು ಮಾಡಲು ಹೊರಟಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ದಾವಣಗೆರೆ ಜ.14: ಚುನಾವಣೆ ಸಮೀಪಿಸುತ್ತಿದ್ದಂತೆ ಹತ್ತಾರು ಚುನಾವಣಾ ಪ್ರೇರಿತ ಹೇಳಿಕೆಗಳು ಕಾಂಗ್ರೆಸ್ಸಿಗರಿಂದ ಬರುತ್ತಲೇ ಇರುತ್ತವೆ. ಇದು ಜನರಿಗೂ ತಿಳಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹರಿಹರದ ಹರ ಜಾತ್ರೆ ಸಮಾರಂಭಕ್ಕೆ ತೆರಳುವ ಮುನ್ನ ನಗರದ ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹತಾಶ ಮನಸ್ಥಿತಿಯಲ್ಲಿರುವ ಕಾಂಗ್ರೆಸಿಗರು, ಜನರನ್ನು ಮರುಳು ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ನವರು ಕೇವಲ ಮಾತನಾಡುತ್ತಾರೆ. ಆದರೆ ನಮ್ಮ ಸರ್ಕಾರ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿ ತೋರಿಸುತ್ತಿದೆ ಎಂದರು. 200 ಯುನಿಟ್ … Read more

ಸಂಕ್ರಾಂತಿಯಂದು ಪಿಂಚಣಿ ಕ್ರಾಂತಿಗೆ ಮುಂದಾದ ಅನುದಾನಿತ ಶಾಲೆ ಕಾಲೇಜುಗಳ ನೌಕರರು

ಕುಟುಂಬ ಸಮೇತ ಕ್ರಾಂತಿಗಿಳಿದ ಪಿಂಚಣಿ ವಂಚಿತ ನೌಕರರು ಸುದ್ದಿ360 ದಾವಣಗೆರೆ ಜ.12: ನಾಡೆಲ್ಲ ಸಂಕ್ರಾಂತಿಯ ಸಡಗರಕ್ಕೆ ಸಜ್ಜಾಗುತ್ತಿದ್ದರೆ ಹತ್ತಿಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಅನುದಾನಿತ ಶಾಲೆ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ತಮ್ಮ ಸೇವೆಗೆ ಜೀವನದ ಕೊನೆಯಘಟ್ಟದಲ್ಲಿ ಪಿಂಚಣಿಯ ಬೆಳ್ಳಿಗೆರೆ ಮೂಡಲಿ ಎಂಬ ಉದ್ದೇಶದಿಂದ ಕ್ರಾಂತಿಗೆ ಮುಂದಡಿ ಇಟ್ಟಿದ್ದಾರೆ. ಈ ಕುರಿತು ಇಂದು ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ … Read more

ಮೆಟ್ರೋ ಕಾಮಗಾರಿ ದುರಂತ: ಅಧಿಕಾರಿ, ಗುತ್ತಿಗೆದಾರರ ಮೇಲೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು ಜ.10: ಮೆಟ್ರೊ ಕಾಮಗಾರಿ ದುರಂತಕ್ಕೆ ಕಾರಣರಾದ  ಹಿರಿಯ ಅಧಿಕಾರಿಗಳು, ಮುಖ್ಯಸ್ಥರ ಮೇಲೆ ಕ್ರಮಕೈಗೊಳ್ಳಲು ಸೂಚಿಸಿದ್ದು,  ಗುತ್ತಿಗೆದಾರ ಮೇಲೆ ಪ್ರಕರಣ ದಾಖಲಿಸುವುದರ ಜೊತೆಗೆ ಉನ್ನತ ಮಟ್ಟದ ತನಿಖೆ ಮಾಡುವಂತೆಯೂ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಪ್ರಶ್ನೆ ಇರುವುದು ಇಷ್ಟು ಅಸುರಕ್ಷಿತವಾಗಿ ಹೇಗೆ  ಕೆಲಸ ಮಾಡಿದರು ಎನ್ನುವುದನ್ನು ಪತ್ತೆ ಹಚ್ಚಿ, ಮುಂದೆ ಹೀಗಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತನಿಖೆ ಹಾಗೂ ತಾಂತ್ರಿಕ ಲೋಪದ ಏನು ಎಂಬುದರ ಬಗ್ಗೆ ಕ್ರಮ … Read more

ಯಡಿಯೂರಪ್ಪನವರು ಕರ್ನಾಟಕದ ಸರ್ವೊಚ್ಚ ನಾಯಕರು – ಜೆಪಿ ನಡ್ಡಾ

ಸುದ್ದಿ360 ತುಮಕೂರು (ಶಿರಾ) ಜ.6:  80 ಕೋಟಿ ಜನರಿಗೆ ಉಚಿತ ರೇಷನ್ ಕೊಟ್ಟಿರುವ  ಬಿಜೆಪಿ ಸರ್ಕಾರ, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ  ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಶಿರಾ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು,  ಯಡಿಯೂರಪ್ಪನವರು ಕರ್ನಾಟಕದ ಸರ್ವೊಚ್ಚ ನಾಯಕರು. ಎನ್ ಡಿ ಎ ಸರ್ಕಾರ ಬಂದಾಗ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸೇರಿ‌ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ನದ್ದು ಜಾತಿ ಜಾತಿ ಎಂದು ಒಡೆದು … Read more

ಜ.5,6 ಚಿತ್ರದುರ್ಗದ ಶ್ರೀ ಮಡಿವಾಳ ಮಾಚಿದೇವ ಮಠದಲ್ಲಿ ‌ಕಾಯಕ ಜನೋತ್ಸವ

ಸುದ್ದಿ360 ದಾವಣಗೆರೆ ಜ.3: ಚಿತ್ರದುರ್ಗದ ಜಗದ್ಗುರು ಶ್ರೀಮಾಚಿದೇವ ಮಹಾಸಂಸ್ಥಾನ ಮಠದ ಶಂಕುಸ್ಥಾಪನೆಯ 14ನೇ ವಾರ್ಷಿಕೋತ್ಸವ, ಮಹಾಸ್ವಾಮಿಗಳವರ ಜಂಗಮ ದೀಕ್ಷೆಯ 24ನೇ ಹಾಗೂ 39ನೇ ಜನ್ಮದಿನದ ವಾರ್ಷಿಕೋತ್ಸವ ಮತ್ತು ಜಗದ್ಗುರು ಡಾ.ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳವರ 5ನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಇದೇ ಜನವರಿ 5 ಮತ್ತು 6ರಂದು 2 ದಿನಗಳ ಕಾಲ ಕಾಯಕ ಜನೋತ್ಸವ 2023ನ್ನು ಆಯೋಜಿಸಲಾಗಿದೆ ಎಂದು  ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್ … Read more

error: Content is protected !!