ಆದಾಯ ಮೀರಿದ ಆಸ್ತಿ? : ಎಸಿಬಿಯಿಂದ  ಶಾಸಕ ಜಮೀರ್ ಅಹಮ್ಮದ್ ಆಸ್ತಿ ಲೆಕ್ಕಾಚಾರ

ಸುದ್ದಿ360 ಬೆಂಗಳೂರು.ಜು.05: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ಅವರ ಮನೆ ಸೇರಿದಂತೆ ಐದು ಕಡೆ ಮಂಗಳವಾರ ನಸುಕಿನಿಂದಲೇ ಎಸಿಬಿ ಶೋಧ ಕಾರ್ಯ ನಡೆಸಿದೆ. ಆದಾಯ ಮೀರಿದ ಆಸ್ತಿ ಹೊಂದಿರುವುದಾಗಿ ಎಫ್ಐಆರ್ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಜಾರಿ ನಿರ್ದೇಶನಾಲಯ ನೀಡಿರುವ ವರದಿ ಆಧರಿಸಿ ತಿನಿಖೆ ಕೈಗೊಂಡಿದೆ. ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಸಮೀಪದ ಜಮೀರ್ ಅಹಮ್ಮದ್ ಅವರ ಮನೆ, ಸಿಲ್ವರ್ ಓಕ್ ಅಪಾರ್ಟ್ ಮೆಂಟ್ ಫ್ಲ್ಯಾಟ್, ಸದಾಶಿವನಗರದಲ್ಲಿರುವ ಅತಿಥಿಗೃಹ, ಕಲಾಸಿಪಾಳ್ಯದಲ್ಲಿನ ನ್ಯಾಷನಲ್ … Read more

ಪಿಎಸ್ಐ ಅಕ್ರಮ ಪ್ರಕರಣ: ಎಡಿಜಿಪಿ ಅಮೃತ್ ಪೌಲ್ ಸಿಐಡಿ ಕಸ್ಟಡಿಗೆ

ಸುದ್ದಿ360 ಬೆಂಗಳೂರು ಜು.4: ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಓ ಎಂಆರ್ ಶೀಟ್ ಗಳನ್ನು ತಿದ್ದಿರುವ ಆರೋಪ  ಎದುರಿಸುತ್ತಿರುವ ಎಡಿಜಿಪಿ ಅಮೃತ್ ಪೌಲ್ ರನ್ನು 10 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ, 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಅಮೃತ್ ಪೌಲ್ ರನ್ನು ನಾಲ್ಕು ದಿನಗಳ ಕಾಲ ವಿಚಾರಣೆಗೊಳಪಡಿಸಿದ್ದ ಸಿಐಡಿ ಅಧಿಕಾರಿಗಳು ಇಂದು ಅವರನ್ನು ಬಂಧಿಸಲಾಗಿತ್ತು.

ಪೌರಕಾರ್ಮಿಕರ ಖಾಯಮಾತಿಗೆ ಸರ್ಕಾರದ ತಾತ್ವಿಕ ಒಪ್ಪಿಗೆ: ಸಿಎಂ ಬೊಮ್ಮಾಯಿ

shimoga-riots-were-the-result-of-the-governments-appeasement-policy-basavaraj-bommai

ಸುದ್ದಿ360 ಬೆಂಗಳೂರು.ಜು.02: ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಹಾನುಭೂತಿ ಹಾಗೂ ಮಾನವೀಯತೆಯಿಂದ ಕ್ರಮ ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ತೆಲಂಗಾಣಕ್ಕೆ ತೆರಳುವ ಮುನ್ನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ನೇರ ಪಾವತಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಲು ತಾತ್ವಿಕವಾಗಿ  ಸರ್ಕಾರ ಒಪ್ಪಿಕೊಂಡಿದೆ. ಕಾನೂನಾತ್ಮಕ ವಾಗಿ ಹಾಗೂ ತಾಂತ್ರಿಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಪೌರಕಾರ್ಮಿಕರ ಹಾಗೂ ಅಧಿಕಾರಿಗಳ ಜಂಟಿ ಸಮಿತಿಯನ್ನು … Read more

ಜು. 17 ಬಂಜಾರ ವಧುವರರ ಅನ್ವೇಷಣೆ – ಬಂಜಾರ ಸಾಂಸ್ಕೃತಿಕ ಉತ್ಸವ

ಸುದ್ದಿ360 ದಾವಣಗೆರೆ.ಜು.01: ಬೆಂಗಳೂರಿನ ವಸಂತನಗರದಲ್ಲಿರುವ ಬಂಜಾರ ಭವನದಲ್ಲಿ ಜು.17ರಂದು ರಾಜ್ಯ ಮಟ್ಟದ ಬಂಜಾರ ವಧುವರರ ಅನ್ವೇಷಣೆ ಮತ್ತು ಬಂಜಾರ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬಂಜಾರ ಲಂಬಾಣಿ ಜನಸೇವಾ ಸಂಘದ ರಾಜ್ಯಾಧ್ಯಕ್ಷ ಎ.ಆರ್. ಹನುಮಂತ ನಾಯ್ಕ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಬಂಜಾರ ಲಂಬಾಣಿ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಈ ಜಿಲ್ಲೆಗಳೂ ಸೇರಿ, ಶಿವಮೊಗ್ಗ, ತುಮಕೂರು, ಹಾಸನ, ಬಿಜಾಪುರ ಜಿಲ್ಲೆಗಳ ಸಮುದಾಯದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ … Read more

ದೇವನಗರಿಯಲ್ಲಿ ಜು.1ಕ್ಕೆ ಶ್ರೀ ಜಗನ್ನಾಥ ರಥಯಾತ್ರೆ

ಸುದ್ದಿ360 ದಾವಣಗೆರೆ. ಜೂ.29:  ದೇವನಗರಿಯಲ್ಲಿ ಇದೇ ಮೊದಲ ಬಾರಿಗೆ ಜು. 1 ರಂದು ಶ್ರೀ ಜಗನ್ನಾಥ ರಥಯಾತ್ರೆ ಮಹಾ ಮಹೋತ್ಸವ ನಡೆಯಲಿದೆ ಎಂದು ಅಂತರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ಅವಧೂತ ಚಂದ್ರದಾಸ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶುಕ್ರವಾರ ಮಧ್ಯಾಹ್ನ 2ಕ್ಕೆ ದೊಡ್ಡಪೇಟೆಯ  ಶ್ರೀ ಗಣೇಶ ದೇವಸ್ಥಾನದಿಂದ ರಥೋತ್ಸವ ಪ್ತಾರಂಭವಾಗಲಿದೆ.  ಹಾಸಭಾವಿ ವೃತ್ತ, ಚಾಮರಾಜ ಪೇಟೆ, ಮಂಡಿಪೇಟೆ, ಗಾಂಧಿ ವೃತ್ತ, ಜಯದೇವ ವೃತ್ತ, ವಿದ್ಯಾರ್ಥಿ ಭವನದ ಮೂಲಕ ಕಾರ್ಯಕ್ರಮ ನಡೆಯುವ ಶ್ರೀ … Read more

ಜಿಎಂಐಟಿಯಲ್ಲಿ ಡಿಆರ್ ಡಿಓ ಸೆಮಿನಾರ್ (ಜು.1)

ಸುದ್ದಿ360 ದಾವಣಗೆರೆ. ಜೂ.29:  ಜಿಎಂಐಟಿ ಕಾಲೇಜಿನಲ್ಲಿ  ಆಜಾದಿ ಕ ಅಮೃತ್ ಮಹೋತ್ಸವ ಟ್ಯಾಗ್ ಲೈನ್ ಅಡಿ  ಜುಲೈ 1 ರಿಂದ ಜುಲೈ 3 ರ ವರೆಗೆ ಮೂರು ದಿನಗಳ ಸೆಮಿನಾರ್ ಮತ್ತು ಪ್ರಾಜೆಕ್ಟ್ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾಹಿತಿ ನೀಡಿದರು. ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು,  ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಡಿ ಆರ್ ಡಿ ಓ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜಿಎಂಐಟಿ ಹಾಗೂ  ಡಿಆರ್ … Read more

ಕೆಐಎ ನಲ್ಲಿ ಶೀಘ್ರದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360, ಬೆಂಗಳೂರು, ಜೂ. 24: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲಿಯೇಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಮಾಡಲು ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನವದೆಹಲಿಯಿಂದ ಇಂದು ಹಿಂದಿರುಗಿದ ಸಂದರ್ಭದಲ್ಲಿ ಬೆಂಗಳೂರು ವಿಮಾನನಿಲ್ದಾಣದಲ್ಲಿರುವ ಕೆಂಪೇಗೌಡರ ಬೃಹತ್ ಮೂರ್ತಿಯ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ವಿಮಾನನಿಲ್ದಾಣದಲ್ಲಿರುವ ಕೆಂಪೇಗೌಡರ ಬೃಹತ್ ಮೂರ್ತಿ ಅಂತಿಮ ಘಟ್ಟಕ್ಕೆ ಬಂದಿದೆ. ಸ್ಟೀಲ್ ಮತ್ತು ಕಂಚಿನಿಂದ ಮಾಡಲಾಗಿರುವ ಸುಮಾರು 108 ಅಡಿ ಎತ್ತರದ ಪ್ರತಿಮೆ 220 ಟನ್ … Read more

ದಾವಣಗೆರೆಯಲ್ಲಿ ಜೂ.24ರಿಂದ 3 ದಿನಗಳ ನೀಲಕಂಠ ಆಭರಣ ಮೇಳ

ಸುದ್ದಿ360 ದಾವಣಗೆರೆ, ಜೂ.23: ನಗರದ ಶಾಮನೂರು ರಸ್ತೆಯ ಹೋಟೆಲ್ ಸದರ್ನ್ ಸ್ಟಾರ್‌ನಲ್ಲಿ ಜೂ.24ರಿಂದ ಮೂರು ದಿನಗಳ ಕಾಲ ನೀಲಕಂಠ ಜ್ಯುವೆಲ್ಲರ್ಸ್‌ ಸುವರ್ಣ ಸಮೃದ್ಧಿ  ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ನೀಲಕಂಠ ಜ್ಯುವೆಲ್ಲರ್ಸ್‌ ಮ್ಯಾನೇಜರ್ ರಮೇಶ್ ಬಾಬು ಈ ಕುರಿತು ಮಾಹಿತಿ ನೀಡಿದರು. ಜೂ.24ರಂದು ಬೆಳಗ್ಗೆ 11 ಗಂಟೆಗೆ ಉದ್ಯಮಿ ಎಸ್.ಎಸ್. ಗಣೇಶ್ ಹಾಗೂ ರೇಖಾ ಗಣೇಶ್ ಮೇಳಕ್ಕೆ ಚಾಲನೆ ನೀಡುವರು. ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ನೀಲಕಂಠ ಜ್ಯುವೆಲ್ಲರ್ಸ್‌ ಸಿಇಒ … Read more

ಐಕಿಯಾದಿಂದ ಸ್ಥಳೀಯರಿಗೆ ಶೇ 75 ರಷ್ಟು  ಉದ್ಯೋಗಾವಕಾಶ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಐಕಿಯಾ ಪೀಠೋಪಕರಣ ಮಳಿಗೆಗೆ ಮುಖ್ಯಮಂತ್ರಿ ಚಾಲನೆ ಸುದ್ದಿ360 ಬೆಂಗಳೂರು, ಜೂನ್ 22: ಐಕಿಯಾ ಪೀಠೋಪಕರಣ ಮಳಿಗೆಯಿಂದಾಗಿ ಸ್ಥಳೀಯರಿಗೆ ಅತಿ ಹೆಚ್ಚು ಉದ್ಯೋಗಾವಕಾಶ ದೊರೆಯಲಿದೆ. ಶೇ 75 ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆಯನ್ನು ಸಂಸ್ಥೆಯ ಮುಖ್ಯಸ್ಥರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಇಂದು ಸ್ವೀಡನ್ ಮೂಲದ ಗೃಹ ಪೀಠೋಪಕರಣಗಳ ಮಾರಾಟ ಕಂಪನಿ ‘ಐಕಿಯಾ’ ದ ಅತಿದೊಡ್ಡ ಮಳಿಗೆಯನ್ನು ನಗರದ ನಾಗಸಂದ್ರದಲ್ಲಿ ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ದಾವೋಸ್ ನಲ್ಲಿ ಅಂತಾರಾಷ್ಟ್ರೀಯ ಐಕಿಯಾ … Read more

ಪ್ರಧಾನಿಯಿಂದ ಕೊಮ್ಮಘಟ್ಟದಲ್ಲಿ ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ

ಸುದ್ದಿ360 ಬೆಂಗಳೂರು, ಜೂ.20: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ 100% ವಿದ್ಯುದೀಕರಣ, ಸರ್.ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸೀಕೆರೆ- ತುಮಕೂರು ಜೋಡಿ ರೈಲು ಮಾರ್ಗ ಹಾಗೂ ಹೊಸ ರೈಲು ಸೇವೆ, ಯಲಹಂಕ – ಪೆನುಕೊಂಡ ಜೋಡಿ ರೈಲು ಮಾರ್ಗ ಉದ್ಘಾಟನೆ ಹಾಗೂ ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಬೆಂಗಳೂರು ಉಪ ನಗರ ರೈಲು ಯೋಜನೆಗೆ ಹಾಗೂ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ಮಂತ್ರಿ … Read more

error: Content is protected !!