ಕಾಂಗ್ರೆಸ್ 70 ವರ್ಷ ಕಡುಬು ತಿನ್ನುತ್ತಿದ್ದರಾ..? : ಮಾಜಿ ಸಿಎಂ ಯಡಿಯೂರಪ್ಪ  ಕಿಡಿ

ದಾವಣಗೆರೆ: ಚುನಾವಣೆಯ ಮುಂದೆ ಭರವಸೆ ನೀಡಿ‌ ಮರೆತುಹೋಗುವ ಕಾಂಗ್ರೆಸ್‌  ಈಗ ಜನರಿಗೆ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದೆ. ಈ‌ಮೊದಲು  7೦ ವರ್ಷ ಅಧಿಕಾರದಲ್ಲಿದ್ದಾಗ ಕಡುಬು ತಿನ್ನುತ್ತಿದ್ದರಾ..? ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಹಣ, ಹೆಂಡದ ಬಲದಿಂದ ಚುನಾವಣೆ ಗೆಲ್ಲೋದಕ್ಕೆ ಆಗಲ್ಲ. ರಾಜ್ಯದಲ್ಲಿ ಬಿಜೆಪಿ ಪರ ಜನರ ಅಲೆ ಇದೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. … Read more

ಕರ್ನಾಟಕದಲ್ಲಿ ಬೃಹತ್ ಜವಳಿ ಪಾರ್ಕ್ ಸ್ಥಾಪನೆ

ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಲು ನಿಮ್ಮ ಒಂದು ಮತ ಕಾರಣ : ಪ್ರಧಾನಿ ಮೋದಿ ದಾವಣಗೆರೆ: ವಿಶ್ವ ಭೂಪಟದಲ್ಲಿ ಹಿಂದೂಸ್ಥಾನದ ಬಗ್ಗೆ ಜೈ ಕಾರ ಕೇಳಿಬರುತ್ತಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಗೌರವ ಹೆಚ್ಚಿದೆ. ಇದಕ್ಕೆ ಮೋದಿ ಕಾರಣವಲ್ಲ, ನಿಮ್ಮ ಒಂದು ಮತ ಇದನ್ನು ಸಾಧ್ಯವಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಲಿದರು.. ದಾವಣಗೆರೆಯ ಜಿಎಂಐಟಿ ಪಕ್ಕದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು,  ಕರ್ನಾಟಕದ ಉಜ್ವಲ ಭವಿಷ್ಯ … Read more

ಮಾ.17: ಉಡುತಡಿಯಲ್ಲಿ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ

ಸುದ್ದಿ360 ಶಿವಮೊಗ್ಗ ಮಾ. 16: ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಮಾ. 17ರ ಶುಕ್ರವಾರದಂದು ಮಧ್ಯಾಹ್ನ 12.30ಕ್ಕೆ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. 77 ಅಡಿ ಎತ್ತರದ ಈ ಪುತ್ಥಳಿಯು ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳವಾಗಿರುವ ಉಡುತಡಿಯಲ್ಲಿ ಮುಖ್ಯಮಂತ್ರಿಗಳು ಅನಾವರಣಗೊಳಿಸಲಿದ್ದು, ಇದೇ ಸಂದರ್ಭದಲ್ಲಿ ದೆಹಲಿ ಅಕ್ಷರಧಾಮ ಮಾದರಿಯಲ್ಲಿ ನಿರ್ಮಿಸಿರುವ ಉದ್ಯಾನವನ್ನು ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಕೆಎಸ್‌ಆರ್‌ಟಿಸಿ ಘಟಕ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕಸಬಾ … Read more

ಮಹಾರಾಷ್ಟ್ರ ಸಚಿವ ಸಂಪುಟದ  ನಿರ್ಣಯಕ್ಕೆ ಸಿಎಂ ಬೊಮ್ಮಾಯಿ ತೀವ್ರ ಖಂಡನೆ

ಬೆಂಗಳೂರು,  ಮಾರ್ಚ್ 16: ಗಡಿ ಕನ್ನಡಿಗರಿಗೆ ಆರೋಗ್ಯ ವಿಮೆ ಯೋಜನೆಯ ಮಹಾರಾಷ್ಟ್ರ ಸಚಿವ ಸಂಪುಟದ  ನಿರ್ಣಯವನ್ನು ತೀವ್ರವಾಗಿ ಖಂಡಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ  ಮಾತನಾಡಿದರು. ಕರ್ನಾಟಕ ಗಡಿ ಭಾಗದ ಜನರಿಗೆ ಆರೋಗ್ಯ ಯೋಜನೆ ವಿಮೆ ಯೋಜನೆಯನ್ನು ಮಹಾರಾಷ್ಟ್ರದ ಸಂಪುಟ ನಿರ್ಣಯ ಘೋಷಿಸಿರುವುದು ಅಕ್ಷಮ್ಯ ಅಪರಾಧ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮಾತನಾಡಿದಾಗ ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಕಾಯಬೇಕು. ಯಾವುದೇ ಪ್ರಚೋದನೆ ಯಾಗಬಾರದೆಂದು ಒಪ್ಪಲಾಗಿತ್ತು. … Read more

ಕೆ.ಪಿ.ಟಿ. ಸಿ.ಎಲ್ ನೌಕರರಿಗೆ ಶೇ 20 – ಸಾರಿಗೆ ನೌಕರರಿಗೆ ಶೇ 15 ರಷ್ಟು ವೇತನ ಪರಿಷ್ಕರಣೆ

shimoga-riots-were-the-result-of-the-governments-appeasement-policy-basavaraj-bommai

ಸುದ್ದಿ360 ಬೆಂಗಳೂರು ಮಾ.16: ಕೆ.ಪಿ.ಟಿ. ಸಿ.ಎಲ್ ನೌಕರರು ಮತ್ತು ಸಾರಿಗೆ ಇಲಾಖೆ ನೌಕರರ ವೇತನ ಪರಿಷ್ಕರಣೆ ಸಂಬಂಧ ಇಂದು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ನಿವಾಸದ ಬಳಿ ಮಾಧ್ಯಮದವರೊಂದಿಗೆ  ಮಾತನಾಡಿ, ಕೆ.ಪಿ.ಟಿ. ಸಿ.ಎಲ್ ನೌಕರರು ವೇತನ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದರು. ನಮ್ಮ ಮಂತ್ರಿಗಳು ಸುದೀರ್ಘವಾಗಿ ಚರ್ಚಿಸಿ ಶೇ 20 ರಷ್ಟು ವೇತನ ಪರಿಷ್ಕರಣೆಗೆ  ಒಪ್ಪಿದ್ದು,  ಇಂದು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು. ಸಾರಿಗೆ ನೌಕರರಿಗೆ ಶೇ 15 ರಷ್ಟು ವೇತನ … Read more

ಬೆಂಗಳೂರು- ಮೈಸೂರು ಟೋಲ್ – ಡಿ.ಕೆ.ಶಿ ರಾಜಕಾರಣ: ಸಿಎಂ ಬೊಮ್ಮಾಯಿ

ಜನಸಾಮಾನ್ಯರ ತಕರಾರಿಲ್ಲ – ಬಹಳಷ್ಟು ಸೇವೆ ಸರ್ವಿಸ್ ರಸ್ತೆಯಲ್ಲೇ ಲಭ್ಯ – ಅಲ್ಲೆಲ್ಲೂ ಟೋಲ್ ಇಲ್ಲ ಬೆಂಗಳೂರು, ಮಾರ್ಚ್ 16 : ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಟೋಲ್ ಸಂಗ್ರಹದ ಬಗ್ಗೆ ತಕರಾರು ಜನಸಾಮಾನ್ಯರದ್ದಲ್ಲ, ಕೆಪಿಸಿಸಿ  ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜಕಾರಣ ಮಾಡುತ್ತಿದ್ದಾರೆ. ಅವರು ಬಳಸುವ ಭಾಷೆ, ನಡೆದುಕೊಂಡ  ರೀತಿ ಯಾವುದೇ ಕನ್ನಡಿಗರಿಗೆ ಶೋಭೆ ತರುವಂಥದ್ದಲ್ಲ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಟೋಲ್ ಸಂಗ್ರಹದ ಬಗ್ಗೆ ತಮ್ಮ … Read more

ವೇತನ ಪರಿಷ್ಕರಣೆ ಇಂದು ಇತ್ಯರ್ಥ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಉತ್ತರ ಕನ್ನಡ ( ಸಿದ್ಧಾಪುರ) ಫೆ. 28:  ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಇಂದು ಸಂಜೆ ವೇತನ ಆಯೋಗ ಹಾಗೂ  ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು  ಇಂದು ಸಿದ್ಧಾಪುರ ವಿವಿಧ  ಯೋಜನೆಗಳ ಅಡಿಯಲ್ಲಿ ಸೌಲಭ್ಯ ವಿತರಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ  ನೀಡಿದರು. ಸರ್ಕಾರಿ ನೌಕರರು ನಮ್ಮವರು. ಅವರ ವೇತನ  ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆಯಾಗಿದೆ. ನೌಕರರು ಮಧ್ಯಂತರ ವರದಿಯನ್ನು ಪಡೆದು ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ … Read more

ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ?

ಸುದ್ದಿ360 ದಾವಣಗೆರೆ, ಫೆ. 26: ನಗರದ ರಿಂಗ್ ರಸ್ತೆಯಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು,  ಮಾರ್ಚ್ 4ರಂದು ದಾವಣಗೆರೆಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಕುರಿತು ಮಾಹಿತಿ ನೀಡಿದರು. ನಂತರ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ ಮುಖ್ಯಮಂತ್ರಿ ಚಂದ್ರು ಅವರು ಕೊಟ್ಟ ಉತ್ತರ ಹೀಗಿತ್ತು ನೋಡಿ. . .

‘Broom’ will be an alternative to state politics – ರಾಜ್ಯ ರಾಜಕಾರಣಕ್ಕೆ ಪರ್ಯಾಯವಾಗಲಿರುವ ಪೊರಕೆ ರಾಜಕೀಯ ಶುದ್ಧಗೊಳಿಸಲಿದೆ: ಮುಖ್ಯಮಂತ್ರಿ ಚಂದ್ರು

ದಾವಣಗೆರೆಯಲ್ಲಿ ಮಾ.4ರಂದು ಆಮ್‍ ಆದ್ಮಿ ಪಕ್ಷದ ಬೃಹತ್ ಸಮಾವೇಶ ಸುದ್ದಿ360, ದಾವಣಗೆರೆ, ಫೆ. 26: ಬರುವ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಮಾತ್ರ ಸ್ಪರ್ಧಿಸುತ್ತಿಲ್ಲ. ಆಮ್ ಆದ್ಮಿ ಪಕ್ಷ ಕೂಡ ರಾಜ್ಯದ 224 ಕ್ಷೇತ್ರಗಳಲ್ಲಿಯೂ ‘ಪೊರಕೆ’ಯೊಂದಿಗೆ ಸ್ಪರ್ಧಿಸಲಿದೆ. ಪೊರಕೆ ಕೇವಲ ಮನೆ, ಬೀದಿಗಳನ್ನಷ್ಟೇ ಶುದ್ಧ ಮಾಡುವುದಿಲ್ಲ. ರಾಜಕೀಯವನ್ನು ಶುದ್ಧಮಾಡುವ ಪಣ ತೊಟ್ಟಿದೆ ಎಂದು ಎಎಪಿ ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು. ನಗರದ ರಿಂಗ್ ರಸ್ತೆಯಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ … Read more

ಸಂತ ಸೇವಾಲಾಲ ಮಹಾಮಠ ಪ್ರತಿಷ್ಠಾನಕ್ಕೆ 10 ಕೋಟಿ ರೂ. ಅನುದಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಾವಣಗೆರೆ (ನ್ಯಾಮತಿ), ಫೆ. 14 : ಸಂತ ಸೇವಾಲಾಲ ಮಹಾಮಠ ಪ್ರತಿಷ್ಠಾನಕ್ಕೆ 10 ಕೋಟಿ ರೂ. ಅನುದಾನ  ಬಿಡುಗಡೆ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶ್ರೀ ಸಂತ ಸೇವಾಲಾಲ್ ಅವರ 284 ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ವಿಶೇಷ ವಸತಿ ಶಾಲೆ ಸುರಗೊಂಡನಗೊಪ್ಪ ಇಡೀ ದೇಶಕ್ಕೆ ತಿಳಿಯಬೇಕು, ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ  ಹಕ್ಕುಪತ್ರಗಳನ್ನು ನೀಡಿರುವ ಗ್ರಾಮಗಳಲ್ಲಿ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿಯಲ್ಲಿ ಲಿಡ್ಕರ್ ಮಾದರಿ ಕಾರ್ಯಕ್ರಮವನ್ನು ರೂಪಿಸಲಾಗುವುದು.  … Read more

error: Content is protected !!