ಜ.12 ರಂದು ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮನ

ಸುದ್ದಿ360 ಬೆಂಗಳೂರು, ಜ.3: ಪ್ರಧಾನಿ ನರೇಂದ್ರ ಮೋದಿಯವರು ಜನವರಿ 12 ರ ಮಧ್ಯಾಹ್ನದಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಏಳು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ 28 ರಾಜ್ಯಗಳಿಂದ ಹಾಗೂ 8 ಕೇಂದ್ರೀಯ ಪ್ರಾಂತ್ಯದಿಂದ ಯುವಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಈ ಕಾರ್ಯಕ್ರಮವನ್ನು ಭಾಗವಹಿಸಿ  ಹಿಂದಿರುಗಲಿದ್ದಾರೆ ಎಂದು ತಿಳಿಸಿದರು. ಜ.19 ರಂದು ಪ್ರಧಾನಿ ಮೋದಿಯವರು ನಾರಾಯಣಪುರ … Read more

ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಕುಮಾರಣ್ಣ ತಿರುಗೇಟು

ಸುದ್ದಿ360 ಬೀದರ್ ಜ.6: ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಕುಮಾರಣ್ಣ ಇಂದು ಬೀದರ್ನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಒಂದು ವೀಡಿಯೋ ಕ್ಲಿಪ್ ಇಲ್ಲಿದೆ.

ಯಡಿಯೂರಪ್ಪನವರು ಕರ್ನಾಟಕದ ಸರ್ವೊಚ್ಚ ನಾಯಕರು – ಜೆಪಿ ನಡ್ಡಾ

ಸುದ್ದಿ360 ತುಮಕೂರು (ಶಿರಾ) ಜ.6:  80 ಕೋಟಿ ಜನರಿಗೆ ಉಚಿತ ರೇಷನ್ ಕೊಟ್ಟಿರುವ  ಬಿಜೆಪಿ ಸರ್ಕಾರ, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ  ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಶಿರಾ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು,  ಯಡಿಯೂರಪ್ಪನವರು ಕರ್ನಾಟಕದ ಸರ್ವೊಚ್ಚ ನಾಯಕರು. ಎನ್ ಡಿ ಎ ಸರ್ಕಾರ ಬಂದಾಗ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸೇರಿ‌ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ನದ್ದು ಜಾತಿ ಜಾತಿ ಎಂದು ಒಡೆದು … Read more

ಇಂದು ಮತ್ತು ನಾಳೆ ಜೆ.ಪಿ. ನಡ್ಡಾ, ಬಿಜೆಪಿ ನಾಯಕರ ದಾವಣಗೆರೆ ವಿಭಾಗ ಪ್ರವಾಸ

ಸುದ್ದಿ360 ದಾವಣಗೆರೆ ಜ.5: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಶಿ ಹಾಗೂ ರಾಜ್ಯಸಭಾ  ಸದಸ್ಯ ಅರುಣ್ ಸಿಂಗ್ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜ.5 ಮತ್ತು 6ರಂದು ಎರಡು ದಿನಗಳ ಕಾಲ ದಾವಣಗೆರೆ ವಿಭಾಗದಲ್ಲಿ ಪ್ರವಾಸ ಕೈಗೊಂಡಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಅವರು, ದಾವಣಗೆರೆ, ಚಿತ್ರದುರ್ಗ, ತುಮಕೂರು ಹಾಗೂ ಮಧುಗಿರಿ ವಿಭಾಗಗಳಲ್ಲಿ ಪ್ರವಾಸ ಕೈಗೊಂಡಿರುವ ಬಿಜೆಪಿ ನಾಯಕರ ತಂಡ ಪಕ್ಷ … Read more

ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದಿಂದ ಬಿ.ಎಸ್. ಜಗದೀಶ್ ಜನ್ಮದಿನಾಚರಣೆ

ಸುದ್ದಿ360 ದಾವಣಗೆರೆ ಜ.3: ಶ್ರೀ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವತಿಯಿಂದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಅವರ ಹುಟ್ಟುಹಬ್ಬವನ್ನು ಜ.5ರಂದು ಸಂಜೆ 6 ಗಂಟೆಗೆ ನಗರದ ದಾವಣಗೆರೆ-ಹರಿಹರ ಅರ್ಬನ್ ಕೋ-ಆಫ್ ಬ್ಯಾಂಕ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವುದಾಗಿ ಮಾಜಿ ಮಹಾಪೌರರಾದ ಪಿ.ಎಸ್. ಜಯಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಸೇವಕ ಕೆ.ಬಿ. ಶಂಕರನಾರಾಯಣ ಅವರು ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ, ಸಂಸದರಾದ ಡಾ. ಜಿ.ಎಂ. ಸಿದ್ದೇಶ್ವರ, ಬಿಜೆಪಿ ಜಿಲ್ಲಾಧ್ಯಕ್ಷ  ಎಸ್.ಎಂ. … Read more

‘ಎಲುಬಿಲ್ಲದ ನಾಲಗೆ ಹರಿಯಬಿಡಬೇಡಿ’

ರಾಜನಹಳ್ಳಿ ಶಿವಕುಮಾರ್ ಅವರಿಗೆ ವೀರಶೈವ ಮಹಾಸಭಾ ಗೌರವಯುತ ಸಲಹೆ – ಎಚ್ಚರಿಕೆ ಸುದ್ದಿ360 ದಾವಣಗೆರೆ ಜ.3: ರಾಜಕೀಯ ವ್ಯಕ್ತತ್ವ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಮೂಳೆ ಇಲ್ಲದ ನಾಲಗೆಯನ್ನು ಹಗುರವಾಗಿ ಹರಿಯಬಿಡಬಾರದು, ಧರ್ಮದ ವಿಚಾರವಾಗಿ ಹಾಗೂ ಹಿರಿಯರ, ರಾಷ್ಟ್ರೀಯ ಅಧ್ಯಕ್ಷರ ವಿಚಾರವಾಗಿ ಮಾತನಾಡುವಾಗ ಪೈಲ್ವಾನ್ ಶಿವಕುಮಾರ್‍ರವರು ಎಚ್ಚರದಿಂದ ಮಾತನಾಡುವಂತೆ ವೀರಶೈವ ಮಹಾಸಭಾ ವತಿಯಿಂದ ಗೌರವಯುತವಾದ ಸಲಹೆ ಮತ್ತು ಎಚ್ಚರಿಕೆಯನ್ನು ನೀಡಬಯಸುವುದಾಗಿ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಜಿ. ಶಿವಕುಮಾರ್ ಹೇಳಿದರು. ಜಿಲ್ಲಾ ವರದಿಗಾರರ ಕೂಟದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ … Read more

‘ಅಮಿತ್ ಶಾ ಹತ್ರ ಏನು ಮಂತ್ರದಂಡ ಇಲ್ಲ – ನರೇಂದ್ರ ಮೋದಿ ಬಂದ್ರು ಇಲ್ಲಿ ಗೆಲ್ಲಲ್ಲ’

ಸುದ್ದಿ360 ದಾವಣಗೆರೆ, ಡಿ.30: ಅಮಿತ್ ಶಾ ರಾಜ್ಯಭೇಟಿ ಕುರಿತಂತೆ, ಅಮಿತ್ ಶಾ ಹತ್ರ ಏನು ಮಂತ್ರದಂಡ ಇದೆಯಾ, ಅವರು ಎಷ್ಟು ಬಾರಿ ಬಂದ್ರು ಅಷ್ಟೇ, ಅವರ ಜಾದೂ ಇಲ್ಲೆನು ನಡೆಯಲ್ಲ. ನರೇಂದ್ರ ಮೋದಿಯವರೇ ಬಂದ್ರೂ ಬಿಜೆಪಿ ಗೆಲ್ಲಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಮಧ್ಯಮದವರಿಗೆ ಪ್ರತಿಕ್ರಿಯಿಸಿದರು. ಅವರು ದಾವಣಗೆರೆಯಲ್ಲಿ ನಡೆಯುತ್ತಿರುವ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ನಗರದ ಬಾಪೂಜಿ ಕಾಲೇಜು ಗ್ರೌಂಡ್‍ನಲ್ಲಿ ಸಿದ್ಧರಾಮಯ್ಯನವರು ಹೆಲೆಕಾಪ್ಟರ್‍ನಿಂದ ಇಳಿಯುತ್ತಿದ್ದ ಹಾಗೆ ಚಾಮುಂಡೇಶ್ವರಿ ತಾಯಿ … Read more

ಚುನಾವಣಾ ಗಿಮಿಕ್ ಗೆ ಮುಂದಾಗಿರುವ ಸರ್ಕಾರದಿಂದ ಮೀಸಲಾತಿ ಗೊಂದಲ : ಸಿದ್ಧರಾಮಯ್ಯ

ಸುದ್ದಿ360 ದಾವಣಗೆರೆ, ಡಿ.30: ಮೀಸಲಾತಿಯಲ್ಲಿ ರಾಜಕೀಯ ಗಿಮಿಕ್ ಮಾಡುತ್ತಿರುವ ಬಜೆಪಿಯ ಡಬ್ಬಲ್ ಇಂಜಿನ್ ಸರ್ಕಾರ ಗೊಂದಲದಲ್ಲಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮತವೊಲಿಕೆಯ ರಾಜಕಾರಣ ಮಾಡುತ್ತಿದೆ ಎಂದು ಮೀಸಲಾತಿ ಕುರಿತು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆ ವಿರೋಧಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು. ಅವರು ದಾವಣಗೆರೆಯಲ್ಲಿ ನಡೆಯುತ್ತಿರುವ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಿಸರ್ವೇಷನ್ 50 ಪರ್ಸೆಂಟ್‍ಗಿಂತ ಹೆಚ್ಚಾಗಬಾರದು ಎಂದು 1992ರಲ್ಲಿ ಸುಪ್ರೀಂಕೋರ್ಟ್ ಬೆಂಚ್ ಬಹಳ ಸ್ಪಷ್ಟವಾಗಿ ಹೇಳಿದೆ.  ಆದರೆ ಈ ಮೊದಲು … Read more

‘ಪೌರ ಕಾರ್ಮಿಕರಲ್ಲ, ಪೌರ ನೌಕರರು’ – ರಾಜ್ಯದ 42000 ಪೌರಕಾರ್ಮಿಕ ರನ್ನು ಖಾಯಂಗೊಳಿಸಲು ಕ್ರಮ : ಸಿಎಂ

ಸುದ್ದಿ360 ಬೆಳಗಾವಿ, ಡಿ.28 : ರಾಜ್ಯದಲ್ಲಿ  11133 ಪೌರ ಕಾರ್ಮಿಕರ  ನೌಕರಿಯನ್ನು ಖಾಯಂಗೊಳಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು 42 ಸಾವಿರ ಪೌರಕಾರ್ಮಿಕರಿದ್ದು, ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಖಾಯಂ ನೇಮಕಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಳಗಾವಿಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು. ಪೌರಕಾರ್ಮಿಕರಿಗೆ 2000 ರೂ. ಸಂಕಷ್ಟ ಭತ್ಯೆ : ಆಯವ್ಯಯದಲ್ಲಿ ಪೌರಕಾರ್ಮಿಕರಿಗೆ 2000 ರೂ. ಸಂಕಷ್ಟ ಭತ್ಯೆಯನ್ನು ಅವರ … Read more

ಜಿಂಕೆ ಮರಿ ಓಡ್ತಾಯ್ತೆ ನೋಡ್ಲಾ ಮಗಾ. . . ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಅಕ್ರಮ ವನ್ಯಜೀವಿ ಸಾಕಾಣಿಕೆ?

ಆಡಳಿತ ಪಕ್ಷಕ್ಕೆ ನುಂಗಲಾರದ ತುತ್ತಾಯಿತೆ. . . !? ಸುದ್ದಿ360 ದಾವಣಗೆರೆ: ಇಲ್ಲಿ ಯಾರನ್ನಾದರೂ ರಾಜಕೀಯ ಕುರಿತು ಮಾತಿಗೆಳೆದರೆ, ಜಿಂಕೆ ನಿಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಅಷ್ಟೇ ಅಲ್ಲ ಕೃಷ್ಣಮೃಗ, ಕಾಡು ಹಂದಿ, ನರಿ, ಮುಂಗಸಿ ಇವುಗಳೂ ಕೂಡ ನಿಮ್ಮ ಕಣ್ಣಮುಂದೆ ಬರದೇ ಇರವು. ಅರೆರೆ ರಾಜಕೀಯಕ್ಕು ಈ ವನ್ಯಜೀವಿಗಳಿಗೂ ಏನು ಸಂಬಂಧ ಅಂತೀರಾ . . .? ನಗರದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ವನ್ಯಜೀವಿಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಳೆದ ಒಂದು ವಾರದಿಂದ ದಾವಣಗೆರೆಯಲ್ಲಿ … Read more

error: Content is protected !!