ನಿರ್ದೇಶಕ – ನಟ ಗುರುಪ್ರಸಾದ್ ಬಂಧನ – ಕೋರ್ಟ್ ಗೆ ಹಾಜರು

ಸುದ್ದಿ360 ಬೆಂಗಳೂರು ಜ.13: ಚೆಕ್ ಬೌನ್ಸ್‍ ಮೊಕದ್ದಮೆಗೆ ಸಂಬಂಧಪಟ್ಟಂತೆ ಸಿನಿಮಾ ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರನ್ನು ಗಿರಿನಗರ ಪೊಲೀಸರು ಇಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನೆಗೋಶಿಯೇಬಲ್ ಇನ್ ಸ್ಟುಮೆಂಟ್ಸ್ ಕಾಯ್ದೆಯಡಿ ಗುರುಪ್ರಸಾದ್ ವಿರುದ್ಧ ಹೂಡಲಾಗಿದ್ದ ಮೊಕದ್ದಮೆ ವಿಚಾರಣೆಗೆ ಅವರು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

ಹರಿಪ್ರಿಯ ಮೂಗೇರಿದ ಮೂಗುತಿ

ಸುದ್ದಿ360: ಮಂತ್ರಘೋಷಗಳ ಹಿಮ್ಮೇಳದಲ್ಲಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುತ್ತಿರುವ ವೀಡಿಯೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಸೀರೆಯುಟ್ಟು ಸೂಜಿಗೆ ಮುಖವೊಡ್ಡಿರುವ ಹರಿಪ್ರಿಯಾ ಸಂಪ್ರದಾಯಿಕ ಶೈಲಿಯಲ್ಲಿ ಮೂಗು ಚುಚ್ಚಿಸಿಕೊಂಡಿದ್ದಾರೆ. ಮೂಗು ಚುಚ್ಚುವಾಗ ಆದ ನೋವಿಗೆ ಕಣ್ಣಾಲಿಗಳು ತುಂಬಿವೆಯಾದರೂ ಮಂದಹಾಸ ಬೀರಿರುವ ಹರಿಪ್ರಿಯಾ ಖುಷಿ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ. “ಬದುಕಲ್ಲಿ ಬದಲಾವಣೆ ನಿರಂತರವಾಗಿರುತ್ತದೆ. ತೆರೆಯ ಮೇಲೆ ಈವರೆಗೆ ಸಾಕಷ್ಟು ಬಾರಿ ಮೂಗುತಿ ಧರಿಸಿ ಕಾಣಿಸಿಕೊಂಡಿದ್ದೇನೆ. ಆದರೆ ಅದ್ಯಾವುದೂ ರಿಯಲ್ ಆಗಿರಲಿಲ್ಲ. ಈಗ ನಿಮ್ಮೆದುರು ಕಾಣುತ್ತಿರುವುದು ಮಾತ್ರ ರಿಯಲ್. ನನಗಿದು ಬಹಳ ಖುಷಿ … Read more

ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ಎಫ್ಐಆರ್!

 ಸುದ್ದಿ360 ಸಿನೆಮಾ: ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ ಪವನ್ ಕಲ್ಯಾಣ್ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ಒಂದನ್ನು ದಾಖಲಿಸಿದ್ದಾರೆ. ಹಾಗಂತ ಪವನ್ ಏನು ಅಪರಾಧ ಮಾಡಿಲ್ಲ. ಆದರೆ ಕಾರಿನ ಮೇಲೆ ಸ್ಟಂಟ್ ಮಾಡಿದ್ದಕ್ಕಾಗಿ ಪವನ್ ಕಲ್ಯಾಣ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಅಪಾಯಕಾರಿ ಸ್ಟಂಟ್ಗಳನ್ನು ಮಾಡಬೇಡಿ ಎಂದು ಯುವಜನತೆಗೆ, ಸಮಾಜಕ್ಕೆ ತಿಳಿ ಹೇಳುವ ಸ್ಥಾನದಲ್ಲಿರುವ ಒಬ್ಬ ಸ್ಟಾರ್ ಸೆಲೆಬ್ರಿಟಿ ಆಗಿದ್ದುಕೊಂಡು ಪವನ್ ಕಲ್ಯಾಣ್ ಈ ರೀತಿ ಮಾಡಿರುವುದು ಬೇಜವಾಬ್ದಾರಿತನ ಎಂದು … Read more

error: Content is protected !!