ಸಿದ್ಧರಾಮೋತ್ಸವ ಬಳಿಕ ಬೆಣ್ಣೆನಗರಿಯಲ್ಲಿ ಮತ್ತೊಂದು ಬೃಹತ್ ಸಮಾವೇಶ

ಎಸ್‌ಎಸ್‌ಎಂ 55  ಅದ್ದೂರಿ ಕಾರ್ಯಕ್ರಮಕ್ಕೆ ಭೂಮಿಪೂಜೆ ಸುದ್ದಿ360 ದಾವಣಗೆರೆ, ಸೆ.09: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರವರ 55ನೇ ಜನ್ಮದಿನಾಚರಣೆ ಇದೇ ತಿಂಗಳ 22 ರಂದು ನಡೆಯಲಿದ್ದು, ಜನ್ಮದಿನಾಚರಣೆ ಅಂಗವಾಗಿ ನಗರದ ಎಸ್‌ಎಸ್ ಲೇಔಟ್ ಬಿ ಬ್ಲಾಕ್‌ನಲ್ಲಿರುವ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ (ಎಂಬಿಎ ಕಾಲೇಜು) ಮೈದಾನದಲ್ಲಿ ಶುಕ್ರವಾರ ಎಸ್‌ಎಸ್‌ಎಂ 55ನೇ ಜನ್ಮದಿನ ಸಮಾರಂಭದ ವೇದಿಕೆ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು. ಎಸ್‌ಎಸ್‌ಎಂ ಅಭಿಮಾನಿ ಬಳಗ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಬೆಣ್ಣೆನಗರಿಯಲ್ಲಿ ಯಶಸ್ವಿಯಾಗಿ ಮತ್ತು ಅದ್ದೂರಿಯಾಗಿ … Read more

ಬೆಂಗಳೂರಿನ ಮಳೆ ಅವಘಡಕ್ಕೆ ಎಲ್ಲ ಪಕ್ಷದವರೂ ಪಾಲುದಾರರೇ . . . ದಾವಣಗೆರೆಯಲ್ಲಿ ಬಿ.ಸಿ. ಪಾಟೀಲ್ ಹೇಳಿಕೆ

ಸುದ್ದಿ360 ದಾವಣಗೆರೆ, ಸೆ. 06: ಬೆಂಗಳೂರಿನಲ್ಲಿ ಆಗಿರುವ ಮಳೆ ಅವಘಡಕ್ಕೆ ಯಾರನ್ನು ದೂಷಿಸುವುದು ಸರಿಯಲ್ಲ.  ಅವರು ಇವರೆನ್ನದೆ ಎಲ್ಲರೂ ಪ್ರಾಕೃತಿಕ ವಿಕೋಪಕ್ಕೆ ಕಾರಣರಾಗಿದ್ದಾರೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು. ದಾವಣಗೆರೆಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ಆಗಿರುವ ಮಳೆ ಅವಘಡಕ್ಕೆ ಯಾವುದೇ ಪಕ್ಷವನ್ನು ದೂಷಿಸುವಂತಹದ್ದಲ್ಲ. ಕೆಲವು ಸಂದರ್ಭಗಳಲ್ಲಿ ಸರಿಯಾದ ರೀತಿಯಲ್ಲಿ ಕಾಲುವೆ ವ್ಯವಸ್ಥೆಯನ್ನು ಮಾಡಿರದೇ ಇರುವುದು. ಟೌನ್ ಪ್ಲಾನಿಂಗ್ ಸಂದರ್ಭದಲ್ಲಿ ಬೇಕಾಬಿಟ್ಟಿ ಒಪ್ಪಿಗೆ ಕೊಟ್ಟಿರುವುದು ಸೇರಿದಂತೆ. ಬೆಂಗಳೂರು ಸಂಪೂರ್ಣ … Read more

ಬಡಾವಣೆಗಳು ಜಲಾವೃತ: ಕಾಂಗ್ರೆಸ್ ಸರ್ಕಾರದ ದುರಾಡಳಿತದ ಫಲ – ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಸೆ.06: ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಯೋಜನಾ ರಹಿತ ಹಾಗೂ ದುರಾಡಳಿತದ ಫಲವಾಗಿ ಈ ಬಡಾವಣೆಗಳು ಜಲಾವೃತಗೊಳ್ಳುವ ಸ್ಥಿತಿ  ಎದುರಿಸಬೇಕಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ  ಮಾತನಾಡಿ, ಎಗ್ಗಿಲ್ಲದೆ ಕೆರೆಗಳಲ್ಲಿ, ಕೆರೆ ಬಂಡ್ ಹಾಗೂ ಬಫರ್ ವಲಯಗಳಲ್ಲಿ ಅನುಮತಿಗಳನ್ನು ನೀಡಿದ್ದಾರೆ. ಈ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ. ಕೆರೆಗಳ ನಿರ್ವಹಣೆಯ ಬಗ್ಗೆ ಅವರು ಯೋಚಿಸಿಯೂ ಇಲ್ಲ. ನಾನು ಇದನ್ನು ಸವಾಲಾಗಿ ಸ್ವೀಕರಿಸಿದ್ದು 1500 ಕೋಟಿ … Read more

ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ವಿರುದ್ಧ ಎಸ್ ಡಿ ಪಿ ಐ ಆರೋಪ

ಸುದ್ದಿ360 ದಾವಣಗೆರೆ, ಆ.27: ನಾ ಖಾವೂಂಗಾ ನಾ ಖಾನೇ ದೂಂಗಾ ಎನ್ನುವ ಪ್ರಧಾನ ಮಂತ್ರಿ ಮೋದಿಯವರು, ಕರ್ನಾಟಕದಲ್ಲಿನ ಕಮೀಷನ್ ದಂಧೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಎಸ್ ಡಿ ಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರರು ಪ್ರಧಾನಿಯವರಲ್ಲಿ ತಮ್ಮ ಅಳಲನ್ನು ತೋಡಿಕೊಂಡರೂ ಸ್ಪಂದಿಸದ ಪ್ರಧಾನಿಯವರ ಕುಮ್ಮಕ್ಕು 40 ಪರ್ಸೆಂಟ್ ಗಿಂತಲೂ ಹೆಚ್ಚುತ್ತಿರುವ ಕಮೀಷನ್ ವ್ಯವಹಾರಕ್ಕೆ ಕುಮ್ಮಕ್ಕು ಇರುವುದಾಗಿ ಆರೋಪಿಸುವ ಸ್ಥಿತಿ ಬಂದೊದಗಿದೆ ಎಂದು ಅವರು ಹೇಳಿದರು. ಸರ್ಕಾರಿ ಉದ್ಯೋಗಗಳಲ್ಲಿನ … Read more

ವಿ.ಡಿ. ಸಾವರ್ಕರ್ ವಿವಾದ – ಡಾ. ಎಂ.ಬಿ. ಪಾಟೀಲ ಹೇಳಿದ್ದೇನು ?

ಕಾಂಗ್ರೆಸ್ ನಿಂದ ಕನ್ನಡ ಹೋರಾಟಗಾರರ ರಥಯಾತ್ರೆ ಸುದ್ದಿ360 ವಿಜಯಪುರ, ಆ.25: ಬಿಜೆಪಿಯಿಂದ ವಿ.ಡಿ.ಸಾವರ್ಕರ್ ರಥಯಾತ್ರೆಗೆ ಪ್ರತ್ಯುತ್ತರವಾಗಿ ಕನ್ನಡ ನಾಡಿನ ಹೋರಾಟಗಾರರ ರಥಯಾತ್ರೆಗೆ ಕಾಂಗ್ರೆಸ್ ಸಿದ್ದವಾಗಿದೆ. ವೀರ ರಾಣಿ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡರು, ಸುರಪುರ ನಾಯಕರು….ಹೀಗೆ ಅನೇಕ ಹೋರಾಟಗಾರರನ್ನು ಗೌರವಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ‌. ಪಾಟೀಲ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಪಾಟೀಲರು, ಬಿಜೆಪಿಗೆ ಕನ್ನಡದ ಹೋರಾಟಗಾರರು ಬೇಡವಾ? ಅವರ ಫೋಟೋ ತೆಗೆದುಕೊಂಡು ರಥ ಯಾತ್ರೆ ಮಾಡಲಿ, ಹಲಗಲಿಯ … Read more

ಕೊಡಗು ಘಟನೆಗೆ  ಮಹಬೂಬ್ ಭಾಷಾ ತೀವ್ರ ಖಂಡನೆ

ಸುದ್ದಿ360 ದಾವಣಗೆರೆ, ಆ.22: ಕೊಡಗಿಗೆ ಜನರ ಸಮಸ್ಯೆ ಆಲಿಸಲು ಹೋಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ತೀವ್ರವಾಗಿ ಖಂಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಭದ್ರತೆ ಒದಗಿಸುವುದರಲ್ಲಿ ವಿಫಲವಾಗಿರುವುದನ್ನು ನೋಡಿದರೆ ಈ ಸರ್ಕಾರ ವಿರೋಧ ಪಕ್ಷಗಳ ನಾಯಕರನ್ನು ಅಪಮಾನಿಸುವ ದುರುದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ. ಈ ದೇಶಕ್ಕೆ ಪ್ರಜಾಪ್ರಭುತ್ವದ ಗಟ್ಟಿ ಅಡಿಪಾಯವಿದೆ. ಅಭಿಪ್ರಾಯ, ವಿಚಾರ ಹಂಚಿಕೊಳ್ಳಲು ಸಂವಿಧಾನದಲ್ಲಿಯೇ ಪ್ರತಿಯೊಬ್ಬರಿಗೂ ಅವಕಾಶವಿದೆ. … Read more

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ – ಸಂಪೂರ್ಣ ತನಿಖೆಗೆ ಸಿಎಂ ಆದೇಶ

ಸುದ್ದಿ360 ಬೆಂಗಳೂರು, ಆ.19: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಒಡ್ಡಿರುವ  ವಿಷಯವನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದೆ ಹಾಗೂ ಸಂಪೂರ್ಣ ತನಿಖೆ ಮಾಡಿಸುವುದಾಗಿ  ಭರವಸೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಶುಕ್ರವಾರ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರೊಂದಿಗೆ ನೇರವಾಗಿ ಮಾತನಾಡಿದ್ದು, ಅವರಿಗೆ  ಅಥವಾ  ಸಿಬ್ಬಂದಿಗೆ ಬೆದರಿಕೆ ಕರೆಗಳು ಬಂದಿದ್ದರೆ ವಿವರಗಳನ್ನು  ನೀಡಲು ತಿಳಿಸಿದ್ದೇನೆ ಎಂದರು. ಅದರ ಜೊತೆಗೆ ಡಿಜಿ ಅವರನ್ನು … Read more

ದಾವಣಗೆರೆ: ಜನಸಾಮಾನ್ಯರ ಸಮಸ್ಯೆ ಚರ್ಚಿಸದ ‘ಸಾಮಾನ್ಯ’ ಸಭೆ

ಸುದ್ದಿ360 ದಾವಣಗೆರೆ ಆ.6: ಜನಸಾಮಾನ್ಯರ ಸಮಸ್ಯೆ ಚರ್ಚಿಸಲು ಮಹಾನಗರ ಪಾಲಿಕೆಯಲ್ಲಿ ಸಾಮಾನ್ಯ ಸಭೆಯೇ ನಡೆಯುತ್ತಿಲ್ಲ. ಬರಿಯ ಹಾರಿಕೆ ಉತ್ತರ ನೀಡಿ ಸಾಮಾನ್ಯ ಸಭೆ ಮುಂದೂಡಲಾಗುತ್ತಿದೆ ಎಂಬ ವಿಪಕ್ಷ ನಾಯಕರ ಆರೋಪದ ಬೆನ್ನಲ್ಲೇ ಇಂದು ಸಾಮಾನ್ಯ ಸಭೆ ನಡೆದಿದೆ. ಆರೂವರೆ ತಿಂಗಳ ಬಳಿಕ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜನಸಾಮಾನ್ಯರ ಯಾವುದೇ ಗಂಭೀರ ಸಮಸ್ಯೆಗಳು ಚರ್ಚೆಗೆ ಬರದೆ ಮೊದಲಾರ್ಧ ಕೇವಲ ವಾದ ವಿವಾದದಲ್ಲೇ ಅಂತ್ಯ ಕಂಡಿತು. ಸಭೆ  ಆರಂಭವಾಗುತ್ತಿದ್ದಂತೆ ನಡಾವಳಿಯ ಮೊದಲ ವಿಷಯ ‘ಹಿಂದಿನ ಸಭೆಯ ನಡಾವಳಿಗಳನ್ನು … Read more

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರಧ್ವಜ ವಿತರಣೆ

ಸುದ್ದಿ360 ದಾವಣಗೆರೆ, ಆ.05: 75 ನೇ ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಅಂಗವಾಗಿ ಇಂದು ನಗರದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರಧ್ವಜವನ್ನು ವಿತರಣೆ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿ, ಕೆ ಜಿ ಶಿವಕುಮಾರ್, ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಮಾಜಿ ವಿಪಕ್ಷನಾಯಕ ಎ ನಾಗರಾಜ್  ಅವರ ನೇತೃತ್ವದಲ್ಲಿ ನಗರದೆಲ್ಲೆಡೆ ಇಂದು ಸಾರ್ವಜನಿಕರಿಗೆ ರಾಷ್ಟ್ರಧ್ವಜ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಸ್ ಮಲ್ಲಿಕಾರ್ಜುನ್ ಯೂತ್ ಕಾಂಗ್ರೆಸ್ ನ ಸಾಗರ್ ಎಲ್ ಎಂ ಎಚ್,  ಸತೀಶ್ … Read more

ಸಿದ್ದು- ಡಿಕೆಶಿ ಕೈ ಎತ್ತಿದ್ದಾರೆ – ಯಾರು ಯಾರಿಗೆ ಚೂರಿ ಹಾಕ್ತಾರೋ ನೋಣೋಣ: ಎಚ್ ಡಿಕೆ

ಸುದ್ದಿ360 ರಾಮನಗರ, ಆ.4: ನಾನು ಕೈ ಎತ್ತಿಸ್ಕೊಂಡು ಬೆನ್ನಿಗೆ ಚೂರಿ ಹಾಕಿಸ್ಕೊಂಡಿದ್ದಾಯ್ತು. ಈಗ  ದಾವಣಗೆರೆಯಲ್ಲಿ ಇಬ್ಬರೂ ಕೈ ಕೈ ಹಿಡಿದು ಎತ್ತಿ ಜನರಿಗೆ ತೋರಿಸಿದ್ದಾರೆ. ಯಾರು ಯಾರ ಬೆನ್ನಿಗೆ ಚೂರಿ ಹಾಕ್ತಾರೋ ಮುಂದೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅವರು ಚನ್ನಪಟ್ಟಣದಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಅಮೃತ ಮಹೋತ್ಸವ ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ತಮ್ಮ ಕೈಗಳನ್ನು ಎತ್ತಿ ಜನರಿಗೆ ಒಗ್ಗಟ್ಟು ಪ್ರದರ್ಶಿಸಿರುವುದರ ಕುರಿತಾಗಿ ಮಾತನಾಡಿ, ಸಂದರ್ಭಕ್ಕೆ ತಕ್ಕಂತೆ … Read more

error: Content is protected !!