6 ನೇ ಗ್ಯಾರಂಟಿ ಮರೆತ ಸರ್ಕಾರ – ಸಿಪಿಐ ನಿಂದ ಜನಾಗ್ರಹ ಜನಾಂದೋಲನ ಚಳುವಳಿ- ಪೋಸ್ಟರ್ ಬಿಡುಗಡೆ

ಸುದ್ದಿ360 ದಾವಣಗೆರೆ (davangere) ಅ.04: ರೈತರ ಮತ್ತು ಕಾರ್ಮಿಕರ ದುಡಿಯುವ ಜನರ ಮತಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರಿಗೆ  ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಹಿಂದೆ ಬಿದ್ದಿದೆ. ಕೂಡಲೇ ಕೊಟ್ಟ ಭರವಸೆ ಈಡೇರಿಸಿ ಜನರ ನೈಜ ಸಮಸ್ಯೆಗಳನ್ನು ಪರಿಹರಿಸುವಂತೆ  ಸಿಪಿಐ ಹಿರಿಯ ಮುಖಂಡ ಹಾಗೂ  ಸಿಪಿಐ ಜಿಲ್ಲಾ ಖಜಾಂಚಿ ಆನಂದ್ ರಾಜ್  ಒತ್ತಾಯಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಸಿದರು. ನಗರದ ಜಯದೇವ ವೃತ್ತದಲ್ಲಿ ಇಂದು ‘ಜನಾಗ್ರಹ ಜನಾಂದೋಲನ ಚಳುವಳಿ’ (anagraha Janandola Movement) ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. … Read more

ನ.13ರಂದು ದಾವಣಗೆರೆ ಜಿಲ್ಲಾ ಸಿಪಿಐ ಸರ್ವ ಸದಸ್ಯರ ಸಭೆ

ಸುದ್ದಿ360 ದಾವಣಗೆರೆ ನ.12: ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಸರ್ವ ಸದಸ್ಯರ ಸಭೆಯು ನವೆಂಬರ್ 13ರ ಭಾನುವಾರ ನಡೆಯಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ. ದಾವಣಗೆರೆ ಈರುಳ್ಳಿ ಮಾರ್ಕೆಟ್ ರಸ್ತೆಯಲ್ಲಿರುವ ಶೇಖರಪ್ಪ ನಗರದ ಕಾಂ. ಹೆಚ್ ಅಡಿವೆಪ್ಪ ಸಮುದಾಯ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗುವ ಸಿಪಿಐ ಸರ್ವ ಸದಸ್ಯರ ಸಭೆಯನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಕಾಂ. ಸಾತಿ ಸುಂದರೇಶ್ ಉದ್ಘಾಟಿಸಲಿದ್ದಾರೆ. ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ಉಸ್ತುವಾರಿಗಳಾದ ಕಾಂ. … Read more

error: Content is protected !!