ಚಲಿಸುತ್ತಿದ್ದ ಬೈಕ್ ಸವಾರನ ಮೇಲೆ ಮಾರಕಾಸ್ತ್ರ ಬೀಸಿ ಕೊಲೆ

ಸುದ್ದಿ360 ಬೆಳಗಾವಿ, ಆ.26: ಬೈಕ್ ಮೇಲೆ ಹೋಗುತ್ತಿದ್ದವನ ಕತ್ತು ಕತ್ತರಿಸಿ ಕೊಲೆ ಮಾಡಿರುವ ಭೀಕರ ಘಟನೆ ಶುಕ್ರವಾರ ವರದಿಯಾಗಿದೆ. ಸವದತ್ತಿ ತಾಲ್ಲೂಕಿನ ಮುನ್ನವಳ್ಳಿ ಗ್ರಾಮದ ಗದಗಯ್ಯ ಹಿರೇಮಠ (40) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಗದಗಯ್ಯ ತಮ್ಮ ಬೈಕ್ ಮೇಲೆ ಹಲಗಾ ಮಾರ್ಗವಾಗಿ ಹೊರಟಿದ್ದ ವೇಳೆ ಹಿಂಬದಿಯಿಂದ ಬೈಕ್ ಮೇಲೆ ಬಂದ  ಆರೋಪಿಗಳು ಈ ದುಶ್ಕೃತ್ಯ ಎಸಗಿದ್ದಾರೆ. ಬೈಕ್ ಚಲನೆಯಲ್ಲಿದ್ದಾಗಲೇ ಗದಗಯ್ಯನ ಕುತ್ತಿಗೆಯ ಭಾಗಕ್ಕೆ ಮಾರಕಾಸ್ತ್ರ ಬೀಸಿದ್ದು, ಕುತ್ತಿಗೆಯ ಬಹುಪಾಲು ತುಂಡರಿಸಿದೆ. ಇದರಿಂದ ಬೈಕ್ ಸಮೇತ ಬಿದ್ದ ಗದಗಯ್ಯ ಸ್ಥಳದಲ್ಲೇ … Read more

ನಕಲಿ ಬಂಗಾರದ ಬಿಲ್ಲೆ ನೀಡಿ 22 ಲಕ್ಷ ವಂಚನೆ: ಆರೋಪಿಯ ಬಂಧನ

ಸುದ್ದಿ360 ದಾವಣಗೆರೆ, ಆ.23: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಬಂಗಾರದ ಬಿಲ್ಲೆ ಜಾಲ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ 22 ಲಕ್ಷ ವಂಚನೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಬಂಧಿಸಿದಂತೆ ಆರೋಪಿ ದುರುಗಪ್ಪ (70) ಚನ್ನಗಿರಿ ನಗರದ ಎಸ್ ಬಿಆರ್ ಕಾಲೋನಿಯ ಬಸ್ ನಿಲ್ದಾಣ ಬಳಿ ವಶಕ್ಕೆ ಪಡೆದಿದ್ದಾರೆ. ಡಿವೈಎಸ್ ಪಿ ಎಸ್.‌ಸಂತೋಷ್, ಸಿಪಿಐ ಮಹೇಶ್, ಪಿಎಸ್ ಐ ಶಿವರುದ್ರಪ್ಪ‌ ಎಸ್.ಮೇಟಿ ಹಾಗೂ ಸಿಬ್ಬಂದಿಗಳಾದ … Read more

ದಾವಣಗೆರೆ: ಇಸ್ಫೀಟ್ ಜೂಜಾಟದ ಮೇಲೆ ಪೊಲೀಸ್ ದಾಳಿ 14 ಜನರ ಬಂಧನ

ಸುದ್ದಿ360 ದಾವಣಗೆರೆ, ಆ.08: ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಭಾನುವಾರ (ಆ.7) ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಕನಿಕಾ ಸಿಕ್ರಿವಾಲ್ ರವರ ನೇತೃತ್ವದ  ಪೊಲೀಸ್ ತಂಡ ದಾಳಿನಡೆಸಿದೆ. ಕಾನೂನು ಬಾಹಿರವಾಗಿ ಜೂಜಾಟದಲ್ಲಿ ತೊಡಗಿದ್ದ 14 ಜನರನ್ನು ಬಂಧಿಸಿದ್ದು, ಆರೋಪಿತರಿಂದ ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು  39,960 ರೂ.ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ … Read more

ಬೈಕಿಗೆ ಗುದ್ದಿ ಮನೆಗೆ ನುಗ್ಗಿದ ರಿಟ್ಜ್ ಕಾರು –ಬೈಕ್ ಸವಾರನಿಗೆ ಗಂಭೀರ ಗಾಯ

ಸುದ್ದಿ360 ಚಿಕ್ಕಮಗಳೂರು, ಆ.5 : ಜಿಲ್ಲೆಯ ಕೊಪ್ಪ ತಾಲೂಕಿನ  ಶಾಂತಿಪುರ ಬಳಿಯ ರಾಜ್ಯ ಹೆದ್ದಾರಿ 27ರಲ್ಲಿ ರಿಟ್ಜ್ ಕಾರೊಂದು ಬೈಕ್ ಗೆ ಗುದ್ದಿರುವುದಲ್ಲದೆ ಮುಂದುವರೆದು ಮನೆಗೆ ನುಗ್ಗಿದ ಪರಿಣಾಮ ಮನೆಯ ಮುಂಭಾಗದ ಗೋಡೆ ಕುಸಿದಿದೆ. ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಪಲ್ಸರ್ ಬೈಕ್ ಸವಾರನಿಗೆ ಕಾರು ಗುದ್ದಿದ ಪರಿಣಾಮ ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಾರು ನುಗ್ಗಿದ  ರಭಸಕ್ಕೆ ಮನೆಯ ಮುಂಭಾಗದ ಗೋಡೆ ಕುಸಿದಿದ್ದು, ಮನಯಲ್ಲಿದ್ದವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇಲ್ಲಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ … Read more

ಪ್ರವೀಣ್ ಕೊಲೆ ಹಿನ್ನೆಲೆಯಲ್ಲಿ ಬಂದ್ ಗೆ ಕರೆ: ಬಸ್ ಗೆ ಕಲ್ಲು – ಸಂಚಾರ ಸ್ಥಗಿತ

ಸುದ್ದಿ360 ದಕ್ಷಿಣ ಕನ್ನಡ, ಜು.27: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರೆಯ ಕೊಲೆ ಹಿನ್ನೆಲೆಯಲ್ಲಿ ಸಂಘಪರಿವಾರ ಸಂಘಟನೆಗಳು ಪುತ್ತೂರು, ಸುಳ್ಯ ಕಡಬ, ತಾಲ್ಲೂಕುಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವಾಹನ ಸಂಚಾರ ನಿಲ್ಲಿಸಿ ಬಂದ್ ಗೆ ಕರೆ ಕೊಡಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಬಸ್ ಒಂದಕ್ಕೆ ಪುತ್ತೂರಿನ ಬೊಳುವಾರು ಬಳಿ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರದೇಶಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಸ್ ಸೌಕರ್ಯವಿಲ್ಲದೆ  ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೌಕರರು … Read more

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರೆಯ ಕೊಲೆ – ಮೃತದೇಹ ಮೆರವಣಿಗೆ

ಸುದ್ದಿ360 ದಕ್ಷಿಣ ಕನ್ನಡ, ಜು.27: ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಎಂಬುವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಮಂಗಳವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದ್ದು,  ತಲವಾರಿನೊಂದಿಗೆ  ಬೈಕ್ ನಲ್ಲಿ ಬಂದ ತಂಡ ಪ್ರವೀಣ್ ತಲೆಗೆ ತಲವಾರ್ ಬೀಸಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಷಯ ಕೋಳಿ ಅಂಗಡಿ ನಡೆಸುತ್ತಿದ್ದ ಪ್ರವೀಣ್, ಬಜರಂಗದಳ ಸೇರಿದಂತೆ ಸಂಘಪರಿವಾರದ ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಮೃತದೇಹ … Read more

ಹಂದಿ ಅಣ್ಣಿ ಹತ್ಯೆ ಆರೋಪಿಗಳು ಶಿವಮೊಗ್ಗ ಪೊಲೀಸರ ವಶಕ್ಕೆ

ಸುದ್ದಿ360, ಶಿವಮೊಗ್ಗ, ಜು.20: ಶಿವಮೊಗ್ಗದ ರೌಡಿ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪನ ಕೊಲೆ ಮಾಡಿ ನಿನ್ನೆ ತಡರಾತ್ರಿ ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಎದುರು ಶರಣಾಗಿದ್ದ 8 ಆರೋಪಿಗಳನ್ನು ಕಳೆದ ರಾತ್ರಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆ ತರಲಾಗಿದೆ. ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ತೆರಳಿದ್ದ ಪೊಲೀಸರ ತಂಡ ಆರೋಪಿಗಳಾದ ಕಾರ್ತಿಕ್(32), ನಿತಿನ್(29), ಮಧುಸೂಧನ್(32), ಫಾರುಖ್(40), ಆಂಜನೇಯ(26), ಮದನ್(25), ಮಧು (27), ಚಂದನ್(22) ಅವರುಗಳನ್ನು ಹೆಚ್ಚುವರಿ ತನಿಖೆಗಾಗಿ ಕರೆ ತರಲಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯಲಿದೆ. ಈಗಾಗಲೇ ಮ್ಯಾಜಿಸ್ಟ್ರೇಟ್ … Read more

ಹಾಲು ವ್ಯಾಪಾರಿಗೆ ಚಾಕು ತೋರಿಸಿ ದರೋಡೆ

ಸುದ್ದಿ360,ಶಿವಮೊಗ್ಗ ಜು.06 : ಎಂದಿನಂತೆ ನಸುಕಿನಲ್ಲಿ ಬಂದು ಹಾಲಿನ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಿದ್ದ ಹಾಲು ವ್ಯಾಪಾರಿಯೋರ್ವರಿಗೆ ಚಾಕುವಿನಿಂದ ಬೆದರಿಕೆಯೊಡ್ಡಿ, ನಗದು ಮತ್ತು ಮೊಬೈಲ್ ದೋಚಿಕೊಂಡು ಹೋಗಿರುವ ಘಟನೆ ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ನಡೆದಿದೆ. ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕುವೆಂಪು ರಸ್ತೆಯಲ್ಲಿರುವ ಹಾಲಿನ ಬೂತ್ ನಲ್ಲಿ ಪ್ಯಾಕೆಟ್ ಹಾಲು ವ್ಯಾಪಾರ ಮಾಡುತ್ತಿದ್ದ ಹೊಸಮನೆ ಬಡಾವಣೆ ನಿವಾಸಿ ಮೋಹನ್  ದರೋಡೆಗೊಳಗಾದ ಹಾಲಿನ ವ್ಯಾಪಾರಿ ಎಂದು ಗುರುತಿಸಲಾಗಿದೆ. ವ್ಯಾಪಾರದಲ್ಲಿ ತೊಡಗಿದ್ದ ಮೋಹನ್ ನನ್ನು ಬೈಕ್ ನಲ್ಲಿ … Read more

102 ಕೆ.ಜಿ. ಬೆಳ್ಳಿ ಕಾಲ್ಗೆಜ್ಜೆ ಪೊಲೀಸರ ವಶ – ಇಬ್ಬರ ಬಂಧನ

ಸುದ್ದಿ360,ದಾವಣಗೆರೆ,ಜು.05: ತಮಿಳುನಾಡಿನ ಸೇಲಂನಿಂದ ನಗರಕ್ಕೆ 102 ಕೆ.ಜಿ ಬೆಳ್ಳಿ ಕಾಲ್ಗೆಜ್ಜೆಗಳನ್ನು ಅಕ್ರಮವಾಗಿ ತಂದಿದ್ದ 20 ಲಕ್ಷ ರೂ. ಮೌಲ್ಯದ 102 ಕೆಜಿ ಬೆಳ್ಳಿ ಕಾಲ್ಗೆಜ್ಜೆಗಳನ್ನು ನಗರದ ಬಡಾವಣೆ ಠಾಣೆ ಪೊಲೀಸರು ವಶಕ್ಕೆ ಪಡೆದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್, ಆರೋಪಿಗಳಾದ ಸೆಲ್ವಿ ಮತ್ತು ಬಾಲಾಜಿ ಎಂಬುವರು ತಮಿಳುನಾಡಿನ ಸೇಲಂನಿಂದ ನಗರಕ್ಕೆ 102 ಕೆ.ಜಿ ಬೆಳ್ಳಿ … Read more

ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಅಟ್ಟಾಡಿಸಿ ಕೊಲೆ

ಸುದ್ದಿ360 ಬೆಳಗಾವಿ, ಜೂ.30:  ನಗರದ ಮದ್ಯಭಾಗದಲ್ಲಿ ವ್ಯಕ್ತಿಯೋರ್ವನನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ತಾಲ್ಲೂಕಿನ ಮಜಗಾವಿ ಗ್ರಾಮದ ಅಂಬೇಡ್ಕರ್ ಗಲ್ಲಿಯ ನಿವಾಸಿ, 27ರ ವಯೋಮಾನದ ಯಲ್ಲೇಶ ಶಿವಾಜಿ ಕೊಲ್ಕರ್ ಕೊಲ್ಲಲ್ಪಟ್ಟ ವ್ಯಕ್ತಿಯಾಗಿದ್ದು, ಅನೈತಿಕ ಸಂಬಂಧದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಉದ್ಯಮಭಾಗ ಠಾಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

error: Content is protected !!