ಮಕ್ಕಳ ರಜೆಯ ಮೋಜಿಗೆ ಬೀದಿ ನಾಯಿಗಳ ಅಡ್ಡಿ – ದಾವಣಗೆರೆ ಮಹಾನಾಗರ ಪಾಲಿಕೆ ಮಕ್ಕಳ ರಜೆಗೆ ರಂಗು ನೀಡಬಹುದೆ?
-ಕೂಡ್ಲಿ ಸೋಮಶೇಖರ್ ಬೇಸಿಗೆ ರಜೆ ಬಂತೆಂದರೆ ಮಕ್ಕಳ ಆಟೋಪಾಟಕ್ಕೆ ಎಣೆಯುಂಟೆ? ಶಾಲಾ ದಿನಗಳಲ್ಲೇ ಅವರನ್ನು ನಿಯಂತ್ರಿಸಲು ಹರಸಾಹಸ ಪಡುವ ಪೋಷಕರು ರಜಾದಿನಗಳಲ್ಲಿ ಅವರನ್ನು ಸಂಬಾಳಿಸುವುದು ಹೇಗಪ್ಪಾ ಅನ್ನೋ ಪೇಚಿಗೆ ಸಿಲುಕುವುದು ಸರ್ವೆ ಸಾಮಾನ್ಯ. ಹೇಗೋ ಮನೆಯಾಚೆ ಸ್ನೇಹಿತರೊಡಗೂಡಿ ಆಟವಾಡಿಕೊಂಡು ಬರಲಿ ಎಂದು ಮನೆಯಾಚೆ ಕಳಿಸಿದರೆ ನಾಯಿಗಳ ಹಿಂಡೇ ಮಕ್ಕಳ ಮೇಲೆ ಎರಗುವ ಪ್ರಕರಣಗಳು ನಗರದ ಕೆಲವೆಡೆ ಆಗೊಮ್ಮೆ ಈಗೊಮ್ಮೆ ವರದಿಯಾಗುತ್ತಲೇ ಇದೆ. ನಗರದ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್ನಲ್ಲಿಯೂ ಕೂಡ ಇಂತಹ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ಪೋಷಕರು … Read more