ಎಸ್ ಯುಸಿಐ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಕಾ. ಭಾರತಿ ಮತಯಾಚನೆ

ಸುದ್ದಿ360, ದಾವಣಗೆರೆ ಏ.18: ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಎಸ್ ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾ. ಭಾರತಿ ಕೆ. ನಗರದ ಕೆ. ಆರ್. ಮಾರುಕಟ್ಟೆಯಲ್ಲಿ ಸಂಚರಿಸಿ ಮತಯಾಚನೆ ಮಾಡಿದರು. ಬೀದಿ ಬದಿ ತರಕಾರಿ ವ್ಯಾಪಾರಸ್ಥರ ಮಧ್ಯೆ ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪಾದ ಯತ್ರೆಯ ಮೂಲಕ ಮತಯಾಚನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಪರಶುರಾಮ್, ಪೂಜಾ, ಕಾವ್ಯ, ಬನಶ್ರೀ, ಮಂಜುನಾಥ್ ರೆಡ್ಡಿ, ಮಮತಾ, ಸ್ಮಿತಾ, ಶಶಿಕುಮಾರ್, ಧನುಷಾ, ನಾಗಜ್ಯೋತಿ, ಮನೋಜ್ ಇತರರು ಇದ್ದರು.

error: Content is protected !!