ದಾವಣಗೆರೆಯ ಶಿವಗಂಗೋತ್ರಿಯಲ್ಲಿ ಘಟಿಕೋತ್ಸವ: ವಿದ್ಯಾರ್ಥಿನಿಯರದೇ ಮೇಲುಗೈ

81ಸ್ವರ್ಣಪದಕಗಳನ್ನು ಹಂಚಿಕೊಂಡ 45 ವಿದ್ಯಾರ್ಥಿಗಳು – 3 ಗೌರವ ಡಾಕ್ಟರೇಟ್ ಸುದ್ದಿ360 ದಾವಣಗೆರೆ ಫೆ.28:  ದಾವಣಗೆರೆ ವಿಶ್ವ ವಿದ್ಯಾಲಯ ಶಿವಗಂಗೋತ್ರಿಯ ಜ್ಞಾನಸೌಧದಲ್ಲಿ ಇಂದು ಹತ್ತನೇ ಘಟಿಕೋತ್ಸವ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 81 ವಿದ್ಯಾರ್ಥಿಗಳು ಸ್ವರ್ಣ ಪದಕದೊಂದಿಗೆ ತೇರ್ಗಡೆ ಹೊಂದಿದರು. ಇದೇ ವೇಳೆ ಟಿ.ಎಂ. ಚಂದ್ರಶೇಖರಯ್ಯ, ಅಥಣಿ ಎಸ್ ವೀರಣ್ಣ ಹಾಗೂ ಮರಣೋತ್ತರವಾಗಿ ಎಂ.ಎಸ್. ಶಿವಣ್ಣ ಅವರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಯಿತು. ಒಟ್ಟು 81 ಸ್ವರ್ಣ ಪದಕಗಳಲ್ಲಿ ಸ್ನಾತಕ … Read more

ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಜು.25ರಿಂದ ಮೂರು ದಿನ ಚಿತ್ರೋತ್ಸವ

ಸುದ್ದಿ360 ದಾವಣಗೆರೆ, ಜು.23: ಇಲ್ಲಿನ ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಜು.25ರಿಂದ 27ರವರೆಗೆ ಮೂರು ದಿನಗಳ ಚಿತ್ರೋತ್ಸವ -2022 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 25ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭಕ್ಕೆ ದಾವಣಗೆರೆ ವಿವಿ ಉಪಕುಲಪತಿ ಪ್ರೊ.ಬಿ.ಡಿ. ಕುಂಬಾರ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದ ನಾಡೋಜ ಡಾ.ವಿ.ಟಿ. ಕಾಳೆ, ಅತಿಥಿಯಾಗಿ ಕಲಾ ನಿಕಾಯದ ಡೀನ್ ಡಾ. ವೆಂಕಟರಾವ್ ಎಂ. ಪಲಾಟೆ ಪಾಲ್ಗೊಳ್ಳುವರು.  ಮಹಾವಿದ್ಯಾಲಯದ ಸಂಯೋಜನಾಕಾರಿ … Read more

ದಾವಣಗೆರೆ ವಿ ವಿ ಕುಲಪತಿಯಾಗಿ ಪ್ರೊ.ಬಿ.ಡಿ. ಕುಂಬಾರ ನೇಮಕ

ಸುದ್ದಿ360, ದಾವಣಗೆರೆ, ಜು.12: ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಡಿ.ಕುಂಬಾರ ಅವರು ದಾವಣಗೆರೆ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ನೇಮಕವಾಗಿದ್ದಾರೆ. ಕುಲಪತಿಯಾಗಿದ್ದ ಪ್ರೊ. ಶರಣಪ್ಪ ವಿ.ಹಲಸೆ ಅವರು ಮಾರ್ಚ್ 26ರಂದು ನಿವೃತ್ತಿಯಾಗಿದ್ದರು. ಪ್ರೊ.ಪಿ.ಲಕ್ಷ್ಮಣ ಅವರು ಹಂಗಾಮಿ ಕುಲಪತಿಯಾಗಿದ್ದರು. ಪ್ರೊ. ಕುಂಬಾರ ಅವರು ಸೋಮವಾರ ವಿಶ್ವವಿದ್ಯಾನಿಲಯದ ನಾಲ್ಕನೇ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು.

error: Content is protected !!