ಬಡವರ ಅನ್ನಕ್ಕೆ ಕನ್ನ: ಕೇಂದ್ರದ ನಡೆಯ ವಿರುದ್ಧ ದಾವಣಗೆರೆಯಲ್ಲಿ ‘ಕೈ’ ಪ್ರತಿಭಟನೆ

ಸುದ್ದಿ360 ದಾವಣಗೆರೆ: ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಬಡ ಜನರಿಗೆ ವಿತರಿಸುತ್ತಿದ್ದ ಅಕ್ಕಿಗೆ ಕೇಂದ್ರ ಸರ್ಕಾರ ಕನ್ನ ಹಾಕಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಶಾಸಕರು ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಅನ್ನಭಾಗ್ಯ ಯೋಜನೆಯಿಂದ ಕಾಂಗ್ರೆಸ್‌ಗೆ ಹೆಸರು ಬರುತ್ತದೆ ಎಂದು ಬೆದರಿರುವ ಕೇಂದ್ರ ಬಿಜೆಪಿ ಸರಕಾರ, ಕರ್ನಾಟಕಕ್ಕೆ ಅಕ್ಕಿ ಸರಬರಾಜು ಮಾಡದಂತೆ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಸೂಚನೆ ನೀಡುವ ಮೂಲಕ ರಾಜ್ಯದ ಬಡ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು … Read more

ಉಚಿತ ಪ್ರಯಾಣ – ನೂಕುನುಗ್ಗಲು – ಮಾಂಗಲ್ಯ ಸರ ಮಂಗಮಾಯ

ಸುದ್ದಿ360 ದಾವಣಗೆರೆ: ಸರ್ಕಾರಿ ಬಸ್ಗಳಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದ್ದು, ಅಂತೆಯೇ ಕಳ್ಳರ ಕೈಚಳಕಕ್ಕೂ ದಾರಿಯಾಗಿದೆ. ಬಸ್ ಹತ್ತಲು ಬಂದಿದ್ದ ಮಹಿಳೆಯೊಬ್ಬರ 1.80 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ ಘಟನೆ ಜಿಲ್ಲೆಯ ಹರಿಹರ ಬಸ್ ನಿಲ್ದಾಣದಲ್ಲಿ ನಡೆದಿದೆ. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿರುವುದರಿಂದ ಮಹಿಳೆಯರ ಬಸ್ ಸಂಚಾರ ಸಹಜವಾಗಿಯೇ ಹೆಚ್ಚಾಗಿದೆ. ಮಹಿಳೆಯರು ಜಾಗರೂಕತೆಯಿಂದ ಪ್ರಯಾಣ ಬೆಳೆಸಬೇಕಿದ್ದು, ಪೊಲೀಸ್ ಪ್ರಕಟಣೆಗಳನ್ನು ಪಾಲಿಸುವ ಮೂಲಕ ಕಳ್ಳರ ಕುಕೃತ್ಯವನ್ನು ತಡೆಯಬಹುದಾಗಿದೆ. ಹರಿಹರ ಬಸ್ ನಿಲ್ದಾಣದಲ್ಲಿ … Read more

ಹೆಣ್ಣುಮಕ್ಕಳು ಸ್ವಾವಲಂಬನೆಯತ್ತ ಹೆಜ್ಜೆ ಹಾಕಲಿ: ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ .ವಾಮದೇವಪ್ಪ ಸಲಹೆ

ಸುದ್ದಿ360 ದಾವಣಗೆರೆ: ಹೆಣ್ಣುಮಕ್ಕಳು ವಿದ್ಯಾಭ್ಯಾಸದ ನಂತರದಲ್ಲಿ ಸರ್ಕಾರಿ ಉದ್ಯೋಗ ಸಿಗಲಿಲ್ಲವೆಂದು ಕೈಕಟ್ಟಿ ಕೂರದೆ ಸ್ವ–ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುವತ್ತ ಹೆಜ್ಜೆ ಹಾಕಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಬಿ.ವಾಮದೇವಪ್ಪ ಸಲಹೆ ನೀಡಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಪಠ್ಯಪೂರಕ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಭಾಗವಹಿಸಿ ಮಾತನಾಡಿದರು. ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಉತ್ತಮ ಸಾಧನೆ ತೋರಿರುವುದು … Read more

‘ಮಾವನವರ ಮಾತು ನನಗೆ ಆಶೀರ್ವಾದ’ ಎನ್ನುತ್ತಲೇ ಸವಾಲು ಸ್ವೀಕರಿಸಲು ಸಿದ್ಧ ಎಂದಿರುವ ಸಂಸದ ಜಿ.ಎಂ. ಸಿದ್ದೇಶ‍್ವರ

ಸುದ್ದಿ360 ದಾವಣಗೆರೆ: `ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಿದ್ದೇಶ್ವರ ಸೋಲುವುದನ್ನು ನೋಡುತ್ತೇನೆ’ ಎಂದು ಹೇಳಿರುವ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮಾತಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು “ಹಿರಿಯರು ಹಾಗೂ ನಮ್ಮ ಮಾವನವರಾಗಿರುವ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಏನೇ ಹೇಳಿರಲಿ, ಅವರ ಮಾತುಗಳು ನನಗೆ ಆಶೀರ್ವಾದ ಇದ್ದಂತೆ” ಎಂದಿದ್ದಾರೆ. ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಿಂತರೆ ಫಂಡ್ ಕೊಡುವುದಾಗಿ ಹಿರಿಯರಾಗಿರುವ … Read more

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ, ಉದ್ಯಮ, ಸೇವಾ ಕ್ಷೇತ್ರದಲ್ಲಿ ಎಸ್‌ಎಸ್ ಸಾಧನೆ ಅನನ್ಯ: ಸಚಿವ ಈಶ್ವರ ಖಂಡ್ರೆ

ಸುದ್ದಿ360 ದಾವಣಗೆರೆ: 93ನೇ ವಯಸ್ಸಿನಲ್ಲಿ ಶಾಸಕರಾಗಿ ಯುವ ರಾಜಕಾರಣಿಗಳು ನಾಚುವಂತೆ ಕೆಲಸ ಮಾಡುತ್ತಿರುವ ಶಾಮನೂರು ಶಿವಶಂಕರಪ್ಪನವರದು ವಿಶಿಷ್ಟವಾದ ವ್ಯಕ್ತಿತ್ವ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ನಗರದ ಎಸ್‌ಎಸ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ನಾವು ಮಾಡುವ ಒಳ್ಳೆಯ ಕೆಲಸಗಳು ಅಜರಾಮರವಾಗಿ ಉಳಿಯುತ್ತವೆ. ಅಂತಹ ಕೆಲಸಗಳನ್ನು ಶಾಮನೂರು ಶಿವಶಂಕರಪ್ಪ ಮಾಡಿದ್ದಾರೆ. ಜಾತಿ, ಮತ, ಧರ್ಮ ಭೇದವಿಲ್ಲದೆ ನೆರವಾಗುವ ಅವರ ಗುಣ ಎಲ್ಲರಿಗೂ ಆದರ್ಶ. ಅತ್ಯಂತ ಅಪರೂಪದ … Read more

ಸಚಿವ ಈಶ್ವರ ಬಿ. ಖಂಡ್ರೆ ದಾವಣಗೆರೆ ಭೇಟಿ

ದಾವಣಗೆರೆ: ಕರ್ನಾಟಕ ಸರ್ಕಾರದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಆದ ಈಶ್ವರ ಬಿ. ಖಂಡ್ರೆ ಅವರು ಜೂನ್ 16ರಂದು ದಾವಣಗೆರೆ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದು, ಪ್ರವಾಸದ ವಿವರ ಇಂತಿದೆ. ಸಚಿವರು ಬೆ.10ಕ್ಕೆ ಬೆಂಗಳೂರಿನಿಂದಿ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದು, ಬೆ.12ಕ್ಕೆ ಚಿತ್ರದುರ್ಗ ತಲುಪಿ, ಶ್ರೀ ಇಮ್ಮಡಿ ಸಿದ್ರಾಮೇಶ್ವರ ಭೋವಿ ಗುರುಪೀಠ ಸ್ವಾಮಿಜಿಯವರನ್ನು ಭೇಟಿ ಮಾಡಲಿದ್ದಾರೆ. 12.30ಕ್ಕೆ ಚಿತ್ರದುರ್ಗದಿಂದ ಹೊರಟು 1.30ಕ್ಕೆ ದಾವಣಗೆರೆ ತಲುಪಿ, ಕಾಂಗ್ರೆಸ್ನ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ 93ನೇ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ … Read more

ಜಿಎಂಐಟಿಯಲ್ಲಿ ಸಾರಸ್-3D ಯಶಸ್ವಿ ಕಾರ್ಯಗಾರ

ದಾವಣಗೆರೆ: ನಗರದ ಜಿ ಎಮ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಸಾರಸ್-3D ಕಾರ್ಯಗಾರವು ಯಶಸ್ವಿಯಾಗಿ ಪೂರ್ಣಗೊಂಡಿತು. ಸಾರಸ್-3D ಸಂಸ್ಥೆಯು ಹಮ್ಮಿಕೊಂಡಿದ್ದ ಈ ಕಾರ್ಯಗಾರದಲ್ಲಿ ವಿವಿಧ ಸ್ಕೂಲ್ ಮತ್ತು ಕಾಲೇಜಿನ ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಾರಸ್-3D ಸಂಸ್ಥೆಯು ರಸಾಯನಶಾಸ್ತ್ರ ಭೌತಶಾಸ್ತ್ರ ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಮೇಲೆ 3D ಮಾಡಲ್‌ಗಳನ್ನು ರಚಿಸಿದ್ದು, ಪ್ರಾಧ್ಯಾಪಕರುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮೂಡಿಬಂದಿವೆ. 6ನೇ ತರಗತಿಯಿಂದ 12ನೇ ತರಗತಿವರೆಗೂ ಈ ನಾಲ್ಕು ವಿಷಯಗಳ ಮೇಲೆ 3D ಮಾಡೆಲ್ ಗಳು … Read more

ದಾವಣಗೆರೆ ಪಾಲಿಕೆ ಆಯುಕ್ತರ ಮೊಬೈಲ್ಗೆ ಬಂದ ಲಂಚಾವತಾರದ ವೀಡಿಯೋ – ಕರ ವಸೂಲಿಕಾರ ಅಮಾನತು

ದಾವಣಗೆರೆ: ಲಂಚ ಸ್ವೀಕರಿಸುತ್ತಿರುವ ವೀಡಿಯೋ ಅಧರಿಸಿ, ಮಹಾನಗರ ಪಾಲಿಕೆ ವಲಯ ಕಚೇರಿ 3ರ ಕಂದಾಯಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ ವಸೂಲಿಕಾರನನ್ನು ಅಮಾನತುಗೊಳಿಸಿ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಎನ್. ಶಿವಣ್ಣ ಅಮಾನತುಗೊಂಡ ಕರ ವಸೂಲಿಕಾರನಾಗಿದ್ದು, ಆಸ್ತಿ ಒಂದರ ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ಲಂಚ ಪಡೆದ ಆರೋಪದಲ್ಲಿ ಅಮಾನತು ಮಾಡಲಾಗಿದೆ. ಶಿವಣ್ಣ ಖಾತೆ ವರ್ಗಾವಣೆ ಮಾಡಲು ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿರುವ ಕುರಿತ ವಿಡಿಯೋವನ್ನು ಸಾರ್ವಜನಿಕರೊಬ್ಬರು ಆಯುಕ್ತರ ಮೋಬೈಲ್‌ಗೆ ವಾಟ್ಸ್ಆ್ಯಪ್ ಮಾಡಿ, ವಿಡಿಯೋ ಆಧಾರದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ವೀಡಿಯೋ … Read more

ಪ್ರತಿಭಾ ಪುರಸ್ಕಾರ: ಗಂಗಾಮತಸ್ಥರ ಸಂಘದಿಂದ ಅರ್ಜಿ ಆಹ್ವಾನ

ಸುದ್ದಿ360 ದಾವಣಗೆರೆ: ಜಿಲ್ಲಾ ಗಂಗಾಮತಸ್ಥರ (ಬೆಸ್ತರ ) ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸಮಾಜದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕಳೆದ ಸಾಲಿನಲ್ಲಿ  ವೈದ್ಯಕೀಯ ಇಂಜಿನಿಯರಿಂಗ್ ಪ್ರವೇಶ ಪಡೆದಿರುವ,  ಪ್ರಸಕ್ತ ಸಾಲಿನ ಪಿಯುಸಿ ಮತ್ತು ಎಸ್ಎಸ್ಎಲ್ ಸಿ, ತರಗತಿಗಳಲ್ಲಿ, ಶೇಕಡ 75ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಅರ್ಹ ವಿದ್ಯಾರ್ಥಿಗಳು ದಿನಾಂಕ 15.06.2023ರ ಬೆಳಗ್ಗೆ 10:30 ರಿಂದ ಸಂಜೆ 5:50 ಗಂಟೆಯವರೆಗೆ ಸ್ವ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿಯೊಂದಿಗೆ ಅಂಕಪಟ್ಟಿ, … Read more

ಬಿಸಿಯೂಟ ತಯಾರಕರ ವೇತನ ಹೆಚ್ಚಳಕ್ಕೆ ಎಐಟಿಯುಸಿ ಮನವಿ

ಸುದ್ದಿ360 ದಾವಣಗೆರೆ: ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ ಇರುವ ಶಾಲೆಗಳಲ್ಲಿಅಡುಗೆ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರ ವೇತನವನ್ನು ಆರು ಸಾವಿರ ರೂ. ಗಳಿಗೆ ಹೆಚ್ಚಿಸುವಂತೆ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ ಸಂಯೋಜಿತ) ರಾಜ್ಯ ಸಮಿತಿ ಕರೆಯ ಮೇರೆಗೆ ದಾವಣಗೆರೆ ಜಿಲ್ಲಾ ಸಮಿತಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು. 2023 ಜುಲೈ ತಿಂಗಳನಲ್ಲಿ ಮಂಡಿಸುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಬಿಸಿಯೂಟ ತಯಾರಕರಿಗೆ ಅವರ ವೇತನವನ್ನು ಆರು ಸಾವಿರ … Read more

error: Content is protected !!