ಕಾರದ ಪುಡಿ ಎರಚಿ ದರೋಡೆ ಮಾಡಿದ್ದ ಆರೋಪಿತರ ಬಂಧನ 24 ಲಕ್ಷದ ಮಾಲು ವಶ

ಸುದ್ದಿ360 ದಾವಣಗೆರೆ, ಏ.14:  ಆಟೋ ಗ್ಲಾಸ್ ಹೊಡೆದು ಕಣ್ಣಿಗೆ ಕಾರದ ಪುಡಿ ಎರಚಿ 20 ಲಕ್ಷ ನಗದು ಹಣ ಇದ್ದ ಬ್ಯಾಗನ್ನು ದೋಚಿಕೊಂಡು ಹೋಗಿದ್ದ ಆರೋಪಿತರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದು, ಆರೋಪಿತರಿಂದ ನಗದು ಸೇರಿದಂತೆ 24 ಲಕ್ಷದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಕುರಿತಂತೆ ಮಾ.14ರಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಭದ್ರಾವತಿಯ ದೇವರಾಜ್ ರವರು ಅಡಿಕೆ ಖೇಣಿ ಪಡೆದುಕೊಂಡಿದ್ದ ರೈತರಿಗೆ ಹಣವನ್ನು ಕೊಡಲು 20 ಲಕ್ಷ ನಗದು ಹಣವನ್ನು ತನ್ನ ಸ್ನೇಹಿತನಿಂದ ಪಡೆದುಕೊಂಡು ಎನ್.ಹೆಚ್-48 ಸರ್ವೀಸ್ … Read more

ಮಾಯಕೊಂಡ ಬಿಜೆಪಿ ಟಿಕೆಟ್ ಆಕಾಂಕ್ಷಿತರ ಒಗ್ಗಟ್ಟಿನ ಬಂಡಾಯ

ಆರ್. ಎಲ್. ಶಿವಪ್ರಕಾಶ್‍ ಬಂಡಾಯ ಅಭ್ಯರ್ಥಿ ಸುದ್ದಿ360 ದಾವಣಗೆರೆ, ಏ.14 : ಬಿಜೆಪಿಯಲ್ಲಿನ ಬಂಡಾಯದ ಬಿಸಿ ಮಾಯಕೊಂಡ ಕ್ಷೇತ್ರದಲ್ಲೂ ಕಾಣಿಸಿಕೊಂಡಿದ್ದು, ಬಸವರಾಜ್ ನಾಯ್ಕ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸುತ್ತಿದ್ದಂತೆ ಆಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿದೆ. ಮಾಯಕೊಂಡ ಮೀಸಲು ಕ್ಷೇತ್ರದ ಮೂಲ ಬಿಜೆಪಿಯ 11 ಜನ ಟಿಕೆಟ್ ಆಕಾಂಕ್ಷಿತರು ಒಟ್ಟಾಗಿ ಆರ್. ಎಲ್. ಶಿವಪ್ರಕಾಶ್‍ರನ್ನು ಕಣಕ್ಕಿಳಿಸಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಹೆಚ್.ಕೆ. ಬಸವರಾಜ್, ಹಾಲಿ ಶಾಸಕರು ಮತ್ತು … Read more

ಮಾಸಾಶನ ಪಡೆಯುತ್ತಿರುವ ಕಲಾವಿದರು  ಜೀವಂತ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

ದಾವಣಗೆರೆ; ಏ.13: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಶಾಸನ ಪಡೆಯುತ್ತಿರುವ ಸಾಹಿತಿ ಮತ್ತು ಕಲಾವಿದರು ಜೀವಿತಾವಧಿ ಪ್ರಮಾಣ ಪತ್ರವನ್ನು ಏಪ್ರಿಲ್ 25 ರೊಳಗಾಗಿ ಸಲ್ಲಿಸಬೇಕು. ಆಧಾರ್ ಕಾರ್ಡ್, ಪಿಂಚಣಿ ಪುಸ್ತಕದ ಪ್ರತಿ, ಇತ್ತೀಚಿನ ಭಾವಚಿತ್ರ ಮತ್ತು ಬ್ಯಾಂಕ್ ಪಾಸ್ ಬುಕ್‍ನೊಂದಿಗೆ ಜೀವಿತಾವಧಿ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್ ಸಹಿ ಪಡೆದು ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ.27 ರಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಮತ್ತು ಹೆಚ್ಚಿನ … Read more

ರಾಜಕಾರಣದಲ್ಲಿ ಪಕ್ಷಾಂತರ ಸಾಮಾನ್ಯ – ಭಿನ್ನಮತ ಶಮನವಾಗಲಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

shimoga-riots-were-the-result-of-the-governments-appeasement-policy-basavaraj-bommai

ಮಂಗಳೂರು, ಏಪ್ರಿಲ್ 13: ರಾಜಕಾರಣದಲ್ಲಿ ಪಕ್ಷ ಬದಲಿಸೋದು ಸಾಮಾನ್ಯ ಆಗ್ತಾ ಇರುತ್ತೆ. ಅಸಮಾಧಾನಗೊಂಡವರ ಮನವೊಲಿಕೆ ಮಾಡುತ್ತೇವೆ.  ಪಕ್ಷದಲ್ಲಿ ಎದ್ದಿರುವ ಅಸಮಾಧಾನ ಸರಿಪಡಿಸಲಾಗುತ್ತಿದೆ.  ಕಾರ್ಯಕರ್ತರು ಗಟ್ಟಿ ಇದ್ದಾರೆ, ಇದರಿಂದ ಯಾವುದೇ ಹಾನಿಯಾಗುವುದಿಲ್ಲ  ಬಹುತೇಕ ಕಡೆ ಪಕ್ಷದ ಭಿನ್ನಮತ ಶಮನ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಅಸಮಾಧಾನಗೊಂಡ ನಾಯಕರ ಜೊತೆ ಪಕ್ಷದ ಹಿರಿಯರು ಮಾತನಾಡುತ್ತಿರುವುದಾಗಿ ತಿಳಿಸಿದರು. ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಾಗಿದೆ.  ಇನ್ನೂ 12 ಕ್ಷೇತ್ರ ಉಳಿದಿದೆ.  ಕೆಲವೆಡೆ … Read more

ಡಾ.ಬಿ.ಆರ್ ಅಂಬೇಡ್ಕರ್ ರವರ 132ನೇ ಜಯಂತಿ ಸರಳ ಆಚರಣೆ

ದಾವಣಗೆರೆ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಏಪ್ರಿಲ್ 14 ರಂದು ಬೆಳಿಗ್ಗೆ 10.30 ಗಂಟೆಗೆ ಡಾ. ಬಿ.ಆರ್ ಅಂಬೇಡ್ಕರ್ ರವರ 132ನೇ ಜಯಂತಿ ಆಚರಣೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಗುತ್ತದೆ. ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಆಚರಣೆಯನ್ನು ಸರಳವಾಗಿ ಆಚರಿಸಲು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ

ದಾವಣಗೆರೆ: ಅಕ್ರಮ ಚುನಾವಣಾ ಪ್ರಚಾರ ಆರೋಪ – ಕಾರ್ಯಕರ್ತರ ಜಟಾಪಟಿ

59 ಲ್ಯಾಪ್ ಟಾಪ್ ಜಪ್ತಿ – ವಿಚಾರಣೆ ದಾವಣಗೆರೆ, ಸುದ್ದಿ 360: ಅನುಮತಿ ಪಡೆಯದೆ ಟೆಲಿಕಾಲಿಂಗ್ ಮೂಲಕ‌ ಮತಬೇಟೆಯ ತಂತ್ರದಲ್ಲಿ‌ ತೊಡಗಿದ್ದ ಬಿಜೆಪಿಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಬಟಾಬಯಲು ಮಾಡಿದೆ. ನಗರದ ಚೇತನಾ ಹೋಟೆಲ್ ಎದುರಿನ ಜೆಪಿ‌ ಫಂಕ್ಷನ್ ಹಾಲ್ನಲ್ಲಿ ಟೆಲಿಕಾಲಿಂಗ್ ಮೂಲಕ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿತ್ತು. ಇದರ ಸುಳಿವು‌ ಪತ್ತೆ ಹಚ್ಚಿದ ಕಾಂಗ್ರೆಸ್‌ ಮುಖಂಡರು ಪ್ರಕರಣ ಕುರಿತಾಗಿ‌‌ ದೂರು ನೀಡಿದ ಹಿನ್ನೆಲೆಯಲ್ಲಿ ದಾಳಿ ಮಾಡಿರುವ ಚುನಾವಣಾಧಿಕಾರಿಗಳು 59 ಲ್ಯಾಪ್ ಟಾಪ್ ಸೇರಿದಂತೆ ಕೆಲವರ  ಮೊಬೈಲ್ ಗಳನ್ನು … Read more

ಏ.6ಕ್ಕೆ ದಾವಣಗೆರೆಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಸಮಾವೆಶ

ಸುದ್ದಿ360 ದಾವಣಗೆರೆ, ಏ.5: ಬಿಜೆಪಿ ರೈತ ಮೋರ್ಚಾ ಜಿಲ್ಲಾ ಸಮಾವೇಶ ಏ.6ರಂದು ಮಧ್ಯಾಹ್ನ 3 ಗಂಟೆಗೆ ನಗರದ ಮಾಗನೂರು ಬಸಪ್ಪ ಮೈದಾನದಲ್ಲಿ ಆಯೋಜಿಸಲಾಗಿರುವುದಾಗಿ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ, ರೈತ ಮೋರ್ಚಾದ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ, ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ಎ. ರವಿಂದ್ರನಾಥ್ ಸೇರಿದಂತೆ ಬಿಜೆಪಿ ಶಾಸಕರು, ಸಚಿವರು ಪಾಲ್ಗೊಳ್ಳಲಿರುವುದಾಗಿ ಹೇಳಿದರು. … Read more

ದಾವಣಗೆರೆ: ಅಶೋಕ ಅಂಡರ್‌ ಪಾಸ್ ಸಂಚಾರಕ್ಕೆ ಮುಕ್ತ – ತೊಡಕು ಜೀವಂತ

ಸುದ್ದಿ360 ದಾವಣಗೆರೆ ಏ.04: ನಗರದ ಅಶೋಕ ರಸ್ತೆ ರೈಲ್ವೆ ಗೇಟ್  ಮೂಲಕ ಹಾದು ಹೋಗುವ ವಾಹನ ಸವಾರರು ಇದೀಗ ಕೊಂಚ ರಿಲೀಫ್ ಆಗಿದ್ದಾರೆ.  ಇದರಿಂದ ಜನ ರೈಲ್ವೇ ಗೇಟ್ ಕಾಯುವುದು ತಪ್ಪಿರುವುದು ಎಷ್ಟು ಸತ್ಯವೋ ಹಾಗೆಯೇ ಕೆಲವು ಸಮಸ್ಯೆಗಳು ಉದ್ಭವಿಸಿರುವುದು ಅಷ್ಟೇ ಸತ್ಯವಾಗಿದೆ. ಹೌದು ವಾಹನ ದಟ್ಟಣೆ ನಿಯಂತ್ರಿಸಲು ನಿರ್ಮಿಸಿರುವ ಅಂಡರ್ ಪಾಸ್ ಸೋಮವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ನಾಗರೀಕರ ಹಲವು ದಶಕಗಳ ಬೇಡಿಕೆ ಈಡೇರಿದಂತಾಗಿದೆ. ಅಶೋಕ ಟಾಕೀಸ್ ಎದುರು ಎಡಕ್ಕೆ ಯು ಟರ್ನ್ ತೆಗೆದುಕೊಳ್ಳುವುದು ತುಂಬಾ … Read more

ಈ ಬಾರಿ ಲಿಂಗಾಯತ ಮುಖ್ಯಮಂತ್ರಿ: ಶಾಮನೂರು ಶಿವಶಂಕರಪ್ಪ

ದಾವಣಗೆರೆ ಉತ್ತರ-ದಕ್ಷಿಣದಲ್ಲಿ ನಮ್ಮದೇ ಮೇಲುಗೈ – ಬೇರೆ ಯಾರು ಬಂದರೂ ಸೋಲು ಖಚಿತ –  ಎಸ್ ಎಸ್ ಸುದ್ದಿ360 ದಾವಣಗೆರೆ ಏ. 4: ದಾವಣಗೆರೆಯ ದಕ್ಷಿಣ ಮತ್ತು ಉತ್ತರ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಲಿದ್ದು, ಇಲ್ಲಿ ಯಾರೇ ಬಂದು ನಿಂತರೂ ಅವರಿಗೆ ಸೋಲು ಖಚಿತ  ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಹೇಳಿದರು. ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲಲಿದೆ. ಚುನಾವಣೆ ಬಳಿಕ … Read more

ಜಿಎಂಐಟಿ: ಕಿರ್ಲೋಸ್ಕರ್ ಟೊಯೋಟಾ ಕಂಪನಿಗೆ ಮೆಕ್ಯಾನಿಕಲ್ ವಿಭಾಗದ 27 ವಿದ್ಯಾರ್ಥಿಗಳು ಆಯ್ಕೆ

ಸುದ್ದಿ360 ದಾವಣಗೆರೆ ಏ.4: ನಗರದ ಜಿ ಎಮ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್ಟೈಲ್ ಮಷೀನರಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಂದರ್ಶನ ಪ್ರಕ್ರಿಯೆಯಲ್ಲಿ ಒಟ್ಟು 27 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಎಂಐಟಿ ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮತ್ತು ಅಂತಿಮ ವರ್ಷದ ವಿವಿಧ ಕಾಲೇಜಿನ ಡಿಪ್ಲೋಮೋ ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಈ ಸಂದರ್ಶನ … Read more

error: Content is protected !!