ಹರಿಹರ ನಗರದ ಬೀಡಿ ಕಾಲೋನಿ ನಿವಾಸಿಗಳಿಂದ ಹಕ್ಕುಪತ್ರಕ್ಕಾಗಿ ಪ್ರತಿಭಟನೆ

ಸುದ್ದಿ360 ದಾವಣಗೆರೆ ಜ.5: ಕಳೆದ ಹತ್ತು ವರ್ಷಗಳಿಂದ ಬೀಡಿ ಕಾಲೋನಿಯಲ್ಲಿ ವಾಸಿಸುತ್ತಿದ್ದರೂ ನಮಗೆ ಹಕ್ಕುಪತ್ರ ದೊರೆತಿಲ್ಲ. ಇದರಿಂದ ಅಗತ್ಯ ಮೂಲಭೂತ ಸೌಕರ್ಯಗಳೂ ಮರೀಚಿಕೆಯಾಗಿದ್ದು ಕೂಡಲೇ ನ್ಯಾಯ ಒದಗಿಸಿಕೊಡುವಂತೆ ಕೋರಿ ಹರಿಹರ ನಗರದ ಬೀಡಿ ಕಾಲೋನಿಯ ನಿವಾಸಿಗಳು ಜಿಲ್ಲಾಡಳಿತದ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು. ಬಹುಜನ ಸಮಾಜ ಪಾರ್ಟಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ, ಹರಿಹರದ ಬೀಡಿ ಕಾಲೋನಿಯಲ್ಲಿ ಕಳೆದ … Read more

ದಾವಣಗೆರೆಯ ಯುವ ಮತದಾರರು ಎಷ್ಟು? ಕ್ಷೇತ್ರವಾರು ಮತದಾರರು ಎಷ್ಟಿದ್ದಾರೆ – ಲೇಟೆಸ್ಟ್ ಮಾಹಿತಿ

ಸುದ್ದಿ360 ದಾವಣಗೆರೆ ಜ.5: ಜಿಲ್ಲೆಯಲ್ಲಿ ಪರಿಷ್ಕೃತ ಮತದಾರರ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 14,05,710 ಮತದಾರರಿದ್ದು, 7,05,233 ಪುರುಷರು, 7,00,357 ಮಹಿಳೆಯರು ಸೇರಿ ಒಟ್ಟು 14,05,710 ಮತದಾರರಿದ್ದಾರೆ. ಈ ಹಿಂದೆ ನ.9ರಂದು ಪ್ರಕಟಿಸಿದ್ದ ಕರಡು ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 13,88,343 ಮತದಾರರಿದ್ದರು, ಪರಿಷ್ಕರಣೆ ಬಳಿಕ ಅಂತಿಮ ಪಟ್ಟಿಯಲ್ಲಿ 17,276 ಮತದಾರರ ಹೆಚ್ಚಳವಾಗಿದೆ. ಏಳು ವಿಧಾನಸಭೆ ಕ್ಷೇತ್ರಗಳಲ್ಲಿ 1683 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೂ ಒಬ್ಬರಂತೆ ಅಧಿಕಾರಿ (ಬಿಎಲ್‌ಒ) ಗಳನ್ನು ನೇಮಿಸಲಾಗಿದೆ. ಇವರೊಂದಿಗೆ 166 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ … Read more

2023ರ ಜ.1ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶ

ಸುದ್ದಿ360 ದಾವಣಗೆರೆ ಜ.5: ಚುನಾವಣಾ ಆಯೋಗದ ಆದೇಶದಂತೆ ಜಿಲ್ಲೆಯಲ್ಲಿ ಹೊಸ ಮತದಾರರ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಿದ್ದು, 2023ರ ಜ.1ಕ್ಕೆ 18 ವರ್ಷ ತುಂಬಿದ ಯುವಕ, ಯುವತಿಯರು ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಜಿಲ್ಲೆಯ ಎಲ್ಲ ಏಳು ವಿಧಾನಸಭೆ ಕ್ಷೇತ್ರಗಳ ಮತದಾರರ ಪರಿಷ್ಕೃತ ಅಂತಿಮ ಪಟ್ಟಿ ಸಿದ್ಧವಾಗಿದೆ. ಆದರೆ, ಈಗಲೂ ಹೊಸ ಮತದಾರರ ಹೆಸರು ಸೇರಿಸಲು ಅವಕಾಶ ಇರುವುದಾಗಿ … Read more

ನಕಲಿ ಎಪಿಕ್ ಬಗ್ಗೆ ಎಚ್ಚರ !!! ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ಸುದ್ದಿ360 ದಾವಣಗೆರೆ ಜ.5: ಮತದಾರರ ಗುರುತಿನ ಚೀಟಿಗಳನ್ನು ಚುನಾವಣಾ ಆಯೋಗದಿಂದಲೇ ಉಚಿತವಾಗಿ ಮತದಾರರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಹೀಗಾಗಿ, ಸಾರ್ವಜನಿಕರು ಯಾವುದೇ ಕಾರಣಕ್ಕೂ ಜೆರಾಕ್ಸ್ ಕೇಂದ್ರ ಅಥವಾ ಸೈಬರ್ ಸೆಂಟರ್‌ಗಳಲ್ಲಿ ಎಪಿಕ್ ಕಾರ್ಡ್ಗಳನ್ನು ಪ್ರಿಂಟ್ ಪಡೆಯಬಾರದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಜಿಲ್ಲೆಯ ಎಲ್ಲ ಏಳು ವಿಧಾನಸಭೆ ಕ್ಷೇತ್ರಗಳ ಮತದಾರರ ಪರಿಷ್ಕೃತ ಅಂತಿಮ ಪಟ್ಟಿ ಸಿದ್ಧವಾಗಿದೆ. ಆದರೆ, ಈಗಲೂ ಹೊಸ ಮತದಾರರ ಹೆಸರು ಸೇರಿಸಲು … Read more

‘ಮುನಿಸಿಕೊಳ್ಳದ, ತೆಗಳದ, ಜಗಳವಾಡದ ಈ ಪುಸ್ತಕ ಸ್ನೇಹ ನಿಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ’

ಪುಸ್ತಕ ಪಂಚಮಿ ಕಾರ್ಯಕಮದಲ್ಲಿ ಶಿಕ್ಷಣಾಧಿಕಾರಿ ಬಿ.ಎಂ. ದಾರುಕೇಶ್ ಸುದ್ದಿ360 ದಾವಣಗೆರೆ ಜ.5: ಎಂದಿಗೂ ಮುನಿಸಿಕೊಳ್ಳದ, ಜಗಳವಾಡದ, ತೆಗಳದ, ಬೇಸರ ಮೂಡಿಸದ ಮತ್ತು ಮುಖ್ಯವಾಗಿ ಸನ್ಮಾರ್ಗದತ್ತ ನಡೆಸುವ ಉತ್ತಮ ಸ್ನೇಹಿತನೆಂದರೆ ಶ್ರೇಷ್ಠ ಪುಸ್ತಕಗಳಾಗಿವೆ. ಅಂತಹ ಪುಸ್ತಕಗಳನ್ನು ವಿದ್ಯಾರ್ಥಿಗಳು ತಮ್ಮ ಆಪ್ತ ಸಂಗಾತಿಗಳನ್ನಾಗಿ ಮಾಡಿಕೊಂಡರೆ ಅವುಗಳ ಮಾರ್ಗದರ್ಶನ ಜೀವನದ ಕಡೆಯವರೆಗೂ ಇರುತ್ತದೆ ಎಂದು ದಾವಣಗೆರೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಕಾರಿ ಬಿ.ಎಂ. ದಾರುಕೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಪಿಜೆ ಬಡಾವಣೆಯ ಈಶ್ವರಮ್ಮ ಪ್ರೌಢಶಾಲೆಯಲ್ಲಿ ಡಾ.ಎಚ್.ಎಫ್ ಕಟ್ಟೀಮನಿ ಪ್ರೌಢ ಶಿಕ್ಷಣ … Read more

ಇಂದು ಮತ್ತು ನಾಳೆ ಜೆ.ಪಿ. ನಡ್ಡಾ, ಬಿಜೆಪಿ ನಾಯಕರ ದಾವಣಗೆರೆ ವಿಭಾಗ ಪ್ರವಾಸ

ಸುದ್ದಿ360 ದಾವಣಗೆರೆ ಜ.5: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಶಿ ಹಾಗೂ ರಾಜ್ಯಸಭಾ  ಸದಸ್ಯ ಅರುಣ್ ಸಿಂಗ್ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜ.5 ಮತ್ತು 6ರಂದು ಎರಡು ದಿನಗಳ ಕಾಲ ದಾವಣಗೆರೆ ವಿಭಾಗದಲ್ಲಿ ಪ್ರವಾಸ ಕೈಗೊಂಡಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಅವರು, ದಾವಣಗೆರೆ, ಚಿತ್ರದುರ್ಗ, ತುಮಕೂರು ಹಾಗೂ ಮಧುಗಿರಿ ವಿಭಾಗಗಳಲ್ಲಿ ಪ್ರವಾಸ ಕೈಗೊಂಡಿರುವ ಬಿಜೆಪಿ ನಾಯಕರ ತಂಡ ಪಕ್ಷ … Read more

ಜಿಎಂಐಟಿಯ ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ ಆಯ್ಕೆ

ಸುದ್ದಿ360 ದಾವಣಗೆರೆ ಜ.3: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯು ಇತ್ತೀಚೆಗೆ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ 20 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂತಿಮ ವರ್ಷದ ಎಲ್ಲಾ ಅರ್ಹ ವಿದ್ಯಾರ್ಥಿ ಪಾಲ್ಗೊಂಡು ಕೊನೆಗೆ 20 ವಿದ್ಯಾರ್ಥಿಗಳು ಆಯ್ಕೆಯಾದರು. ಆಯ್ಕೆಯಾದ 20 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು ಟಿಸಿಎಚ್ ಡಿಜಿಟಲ್ ಮತ್ತು ಉಳಿದ 17 ವಿದ್ಯಾರ್ಥಿಗಳು ಟಿಸಿಎಸ್ ನಿಂಜ ಆಫರ್ ನೀಡಿವೆ … Read more

ಜ.5,6 ಚಿತ್ರದುರ್ಗದ ಶ್ರೀ ಮಡಿವಾಳ ಮಾಚಿದೇವ ಮಠದಲ್ಲಿ ‌ಕಾಯಕ ಜನೋತ್ಸವ

ಸುದ್ದಿ360 ದಾವಣಗೆರೆ ಜ.3: ಚಿತ್ರದುರ್ಗದ ಜಗದ್ಗುರು ಶ್ರೀಮಾಚಿದೇವ ಮಹಾಸಂಸ್ಥಾನ ಮಠದ ಶಂಕುಸ್ಥಾಪನೆಯ 14ನೇ ವಾರ್ಷಿಕೋತ್ಸವ, ಮಹಾಸ್ವಾಮಿಗಳವರ ಜಂಗಮ ದೀಕ್ಷೆಯ 24ನೇ ಹಾಗೂ 39ನೇ ಜನ್ಮದಿನದ ವಾರ್ಷಿಕೋತ್ಸವ ಮತ್ತು ಜಗದ್ಗುರು ಡಾ.ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳವರ 5ನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಇದೇ ಜನವರಿ 5 ಮತ್ತು 6ರಂದು 2 ದಿನಗಳ ಕಾಲ ಕಾಯಕ ಜನೋತ್ಸವ 2023ನ್ನು ಆಯೋಜಿಸಲಾಗಿದೆ ಎಂದು  ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್ … Read more

ಜ.4ಕ್ಕೆ ಪುಸ್ತಕ ಪಂಚಮಿ

ದಾವಣಗೆರೆ ನಗರದ ಆಯ್ದ 68 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಸುದ್ದಿ360 ದಾವಣಗೆರೆ ಜ.3: ಡಾ ಹೆಚ್ ಎಫ್ ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ , ಧಾರವಾಡ, ದಾವಣಗೆರೆ ಘಟಕದಿಂದ‌ ಪುಸ್ತಕ ವಾಚನ ಸಹಾಯ ಯೋಜನೆಯಡಿಯಲ್ಲಿ ‘ಪುಸ್ತಕ ಪಂಚಮಿ’ 13ನೇ ವಾರ್ಷಿಕೋತ್ಸವ ಸಮಾರಂಭವನ್ನು ಜ.4ರಂದು ನಗರದ ಪಿಜೆ ಬಡಾವಣೆಯ ಈಶ್ವರಮ್ಮ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಪ್ರಕಾಶ್ ಬೂಸ್ನೂರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, … Read more

ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದಿಂದ ಬಿ.ಎಸ್. ಜಗದೀಶ್ ಜನ್ಮದಿನಾಚರಣೆ

ಸುದ್ದಿ360 ದಾವಣಗೆರೆ ಜ.3: ಶ್ರೀ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವತಿಯಿಂದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಅವರ ಹುಟ್ಟುಹಬ್ಬವನ್ನು ಜ.5ರಂದು ಸಂಜೆ 6 ಗಂಟೆಗೆ ನಗರದ ದಾವಣಗೆರೆ-ಹರಿಹರ ಅರ್ಬನ್ ಕೋ-ಆಫ್ ಬ್ಯಾಂಕ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವುದಾಗಿ ಮಾಜಿ ಮಹಾಪೌರರಾದ ಪಿ.ಎಸ್. ಜಯಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಸೇವಕ ಕೆ.ಬಿ. ಶಂಕರನಾರಾಯಣ ಅವರು ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ, ಸಂಸದರಾದ ಡಾ. ಜಿ.ಎಂ. ಸಿದ್ದೇಶ್ವರ, ಬಿಜೆಪಿ ಜಿಲ್ಲಾಧ್ಯಕ್ಷ  ಎಸ್.ಎಂ. … Read more

error: Content is protected !!