ಇದೀಗ ಪ್ರತಿ ಕನ್ನಡಿಗರಿಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ  ಸದಸ್ಯರಾಗುವ ಅವಕಾಶ

ಸುದ್ದಿ360 ದಾವಣಗೆರೆ, ಆ.22: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಜೀವ ಸದಸ್ಯತ್ವ ಪಡೆಯಲು, ರೂಪಾಯಿ 250-00 ಆನ್ಲೈನ್ ಮೂಲಕವೇ  ಪಾವತಿಸಿ ಸದಸ್ಯತ್ವ ಪಡೆಯುವ ಸದಾವಕಾಶವನ್ನು 18 ವರ್ಷ ತುಂಬಿದ ಪ್ರತಿಯೊಬ್ಬ ಕನ್ನಡಿಗರಿಗೂ ಕಲ್ಪಿಸಿ ಕೊಟ್ಟಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ ವಾಮದೇವಪ್ಪ ಅವರು  ತಮ್ಮ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಸದುದ್ದೇಶದಿಂದಲೂ, ವಿಶ್ವದಾದ್ಯಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸುವ … Read more

ದಾವಣಗೆರೆ ಎಂಸಿಸಿ ಬಿ ಬ್ಲಾಕ್ ನಲ್ಲಿ ವೋಟರ್ ಐಡಿ – ಆಧಾರ್ ಕಾರ್ಡ್ ಸಂಖ್ಯೆಗಳ ಜೋಡಣೆ ಶಿಬಿರ ಇಂದು

ಸುದ್ದಿ360 ದಾವಣಗೆರೆ ಆ. 22: ನಗರದ ಎಂಸಿಸಿ ಬಿ ಬ್ಲಾಕ್‌ನ ನಾಗರಿಕರ ಅನುಕೂಲಕ್ಕಾಗಿ ಆ. 22ರಂದು ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಸಂಖ್ಯೆಗಳ ಜೋಡಣಾ ಶಿಬಿರ ಆಯೋಜಿಸಲಾಗಿದೆ. ಬೆಳಿಗ್ಗೆ10 ಗಂಟೆಯಿಂದ ಇಲ್ಲಿನ ಐಎಂಎ ಹಾಲ್ ನಲ್ಲಿ ಶಿಬಿರ ನಡೆಯಲಿದೆ. ಸಾರ್ವಜನಿಕರು ತಮ್ಮ ಚುನಾವಣಾ ಗುರುತಿನ ಚೀಟಿಗೆ (ವೋಟರ್ ಐಡಿ) ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಅತ್ಯಗತ್ಯ. ಆದ ಕಾರಣ ಶಿಬಿರ ಆಯೋಜಿಸಲಾಗಿದೆ.  ಜನರು ಈ ಶಿಬಿರಕ್ಕೆ ಬರುವಾಗ ತಮ್ಮ ವೋಟರ್ ಐ.ಡಿ., ಆಧಾರ್ ಕಾರ್ಡ್, ಆಧಾರ್ … Read more

ಕೊಡಗು ಘಟನೆಗೆ  ಮಹಬೂಬ್ ಭಾಷಾ ತೀವ್ರ ಖಂಡನೆ

ಸುದ್ದಿ360 ದಾವಣಗೆರೆ, ಆ.22: ಕೊಡಗಿಗೆ ಜನರ ಸಮಸ್ಯೆ ಆಲಿಸಲು ಹೋಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ತೀವ್ರವಾಗಿ ಖಂಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಭದ್ರತೆ ಒದಗಿಸುವುದರಲ್ಲಿ ವಿಫಲವಾಗಿರುವುದನ್ನು ನೋಡಿದರೆ ಈ ಸರ್ಕಾರ ವಿರೋಧ ಪಕ್ಷಗಳ ನಾಯಕರನ್ನು ಅಪಮಾನಿಸುವ ದುರುದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ. ಈ ದೇಶಕ್ಕೆ ಪ್ರಜಾಪ್ರಭುತ್ವದ ಗಟ್ಟಿ ಅಡಿಪಾಯವಿದೆ. ಅಭಿಪ್ರಾಯ, ವಿಚಾರ ಹಂಚಿಕೊಳ್ಳಲು ಸಂವಿಧಾನದಲ್ಲಿಯೇ ಪ್ರತಿಯೊಬ್ಬರಿಗೂ ಅವಕಾಶವಿದೆ. … Read more

ಮುಖ್ಯಮಂತ್ರಿಗಳು ನಾಳೆ ದಾವಣಗೆರೆಗೆ ಬರುತ್ತಿಲ್ಲ. .

shimoga-riots-were-the-result-of-the-governments-appeasement-policy-basavaraj-bommai

ಶಿಗ್ಗಾವಿ, ಸವಣೂರಿನಲ್ಲಿ ವಕೀಲರ ಸಂಘಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ ಸುದ್ದಿ360 ಬೆಂಗಳೂರು, ಆ. 20: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ (ಭಾನುವಾರ) ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಶಿಕ್ಷಣ ಸೇವೆಯಲ್ಲಿ 75 ಸಾರ್ಥಕ ವಸಂತಗಳನ್ನು ಕಳೆದು ಲಕ್ಷಾಂತರ ವಿದ್ಯಾರ್ಥಿಗಳ ಬಾಳು ಹಸನು ಮಾಡುತ್ತಾ ಬಂದಿರುವ ಸಂತ ಪೌಲರ ಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮುಖ್ಯಮಂತ್ರಿಗಳ ಹಾವೇರಿ ಹಾಗೂ … Read more

ಆ.20, 21 ಸಂತ ಪೌಲರ ಶಾಲೆ ಅಮೃತ ಮಹೋತ್ಸವ

ಸುದ್ದಿ360 ದಾವಣಗೆರೆ, ಆ.19: ಸ್ವಾತಂತ್ರ್ಯ ಪೂರ್ವದಿಂದಲೂ ಶಿಕ್ಷಣ ಸೇವೆ ಸಲ್ಲಿಸುತ್ತಾ ಬಂದಿರುವ ಖ್ಯಾತಿಯನ್ನು ಹೊಂದಿರುವ ಸಂತ ಪೌಲರ ಶಾಲೆಯ ಅಮೃತ ಮಹೋತ್ಸವ ಸಮಾರಂಭ ಆ.20, 21ರಂದು ನಡೆಯಲಿರುವುದಾಗಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಗರದ ಚರ್ಚ್ ರಸ್ತೆಯಲ್ಲಿರುವ ಸಂತ ಪೌಲರ ಶಾಲೆ ಆವರಣದಲ್ಲಿ ಆ.21ರಂದು ಸಂಜೆ 5 ಗಂಟೆಗೆ ನಡೆಯುವ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯ … Read more

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರಾಂಡ್ ಫಿನಾಲೆಗೆ ಜಿಎಂಐಟಿ ಕಾಲೇಜಿನ ಎರಡು ತಂಡಗಳು

ಸುದ್ದಿ360 ದಾವಣಗೆರೆ ಆ.17: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರಾಂಡ್ ಫಿನಾಲೆಗೆ ನಗರದ ಜಿಎಂಐಟಿ ಕಾಲೇಜಿನ ಎರಡು ತಂಡಗಳು ಆಯ್ಕೆಯಾಗಿವೆ. ಇದೆ ಆಗಸ್ಟ್ 25 ಮತ್ತು 26 ರಂದು ಮಹಾರಾಷ್ಟ್ರದಲ್ಲಿ ನಡೆಯುವ ಗ್ರಾಂಡ್ ಫಿನಾಲೆಯಲ್ಲಿ ತಂಡಗಳು ಭಾಗವಹಿಸಲಿರುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಟ್ಟು 12 ತಂಡಗಳು ಮೊದಲನೇ ಸುತ್ತಿನಲ್ಲಿ ಭಾಗವಹಿಸಿ ಕೊನೆಗೆ ಎರಡು ಅತ್ಯುತ್ತಮ ತಂಡಗಳು ಗ್ರಾಂಡ್ ಫಿನಾಲೆಗೆ ಆಯ್ಕೆಯಾದವು ಎಂದು ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರು ಮತ್ತು ಸ್ಮಾರ್ಟ್ … Read more

ಎಫ್ ಆರ್ ಪಿ ದರ ಪರಿಷ್ಕರಿಸುವಂತೆ ಆಗ್ರಹಿಸಿ,  ಕಬ್ಬುಬೆಳೆಗಾರರಿಂದ ರಸ್ತೆ ತಡೆ – ಮನವಿ

ಸುದ್ದಿ360 ದಾವಣಗೆರೆ, ಆ.12: ಕೇಂದ್ರ ಸರ್ಕಾರ ಕಬ್ಬಿಗೆ ಘೋಷಿಸಿರುವ ಎಫ್ ಆರ್ ಪಿ ದರ ಅವೈಜ್ಞಾನಿಕವಾಗಿದ್ದು, ಕೂಡಲೇ ಪರಿಷ್ಕರಿಸುವಂತೆ ಆಗ್ರಹಿಸಿದ ಕಬ್ಬುಬೆಳೆಗಾರರು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ಇಂದು ರಸ್ತೆ ತಡೆ ನಡೆಸಿದರು. ದಾವಣಗೆರೆ ಜಿಲ್ಲಾ ಪಂಚಾಯತಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ಕಬ್ಬು ಬೆಳೆಗಾರರು ತಸ್ತೆ ತಡೆ ನಡೆಸಿದರು. ಈ ವೇಳೆ ಮಾತನಾಡಿದ ತೇಜಸ್ವಿ ವಿ. ಪಟೇಲ್ ಕಳೆದ ಸಾಲಿನಲ್ಲಿ ರೂ. 2900  ಇದ್ದ ಎಫ್‌ಆರ್‌ಪಿಯನ್ನು 3050ಕ್ಕೆ … Read more

ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಿ

ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆ ಪೊಲೀಸ್ ಇನ್ಸ್ಪೆಕ್ಟರ್ ಮುಸ್ತಕ್ ಅಹಮದ್ ಶೇಕ್ ಕರೆ ಸುದ್ದಿ360 ದಾವಣಗೆರೆ, ಆ. 10: ನಗರದ ನಿಂಚನ ಪಬ್ಲಿಕ್ ಸ್ಕೂಲ್ ನಲ್ಲಿ ಇತ್ತಿಚೆಗೆ ನಡೆದ 2022-23 ನೇ ಸಾಲಿನ ವಿದ್ಯಾರ್ಥಿಗಳಿಗೆ ಶಾಲಾ ಮಂತ್ರಿ ಮಂಡಲ ರಚನೆ ಗೆ ಚುನಾವಣೆ ನಡೆಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪದಗ್ರಹಣ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರೈಲ್ವೆ ಇಲಾಖೆ ಪೊಲೀಸ್ ಇನ್ಸ್ಪೆಕ್ಟರ್ ಮುಸ್ತಕ್ ಅಹಮದ್ ಶೇಕ್ ಮುಖ್ಯ ಅತಿಥಿ ಗಳಾಗಿ ಭಾಗವಾಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ನಾಯಕತ್ವ ಗುಣಬೆಳಸಿಕೊಳ್ಳಬೇಕು ಮತ್ತು ಸತತ … Read more

ದಾವಣಗೆರೆ: ಖೋಟಾ ನೋಟು ಜಾಲ ಪತ್ತೆ – ಇಬ್ಬರ ಬಂಧನ

ಸುದ್ದಿ360 ದಾವಣಗೆರೆ, ಆ. 10: ನಗರದಲ್ಲಿ ಖೋಟಾ ನೋಟು ಮುದ್ರಣ ಮತ್ತು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ದಾವಣಗೆರೆ ಜಿಲ್ಲಾ ಡಿಸಿಆರ್ ಬಿ ಪೊಲೀಸರು ಪೊಲೀಸರು ಬಂಧಿಸಿ, ಆರೋಪಿಗಳಿಂದ 1,20,700 ಮುಖಬೆಲೆಯ ಖೋಟಾ ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್, ಇಂದು (ಆ.10) ದಾವಣಗೆರೆಯ ಯಲ್ಲಮ್ಮನಗರ 4ನೇ ಮೇನ್ 6ನೇ ಕ್ರಾಸ್ ತೆಲಗಿ ಶೇಖರಪ್ಪನವರ ಮನೆ ಸಮೀಪ ಕಲರ್ ಜೆರಾಕ್ಸ್ ಮಿಷಿನ್‌ನಿಂದ ಜೆರಾಕ್ಸ್ ಮಾಡಿದ ಖೋಟಾ ನೋಟುಗಳನ್ನು ತೆಗೆದುಕೊಂಡು ಚಲಾವಣೆ … Read more

ಆ.11ಕ್ಕೆ ದಾವಣಗೆರೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಬೈಕ್ ರ್ಯಾಲಿ

ಸುದ್ದಿ360 ದಾವಣಗೆರೆ, ಆ. 10: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಬೈಕ್‌ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಗದೀಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಆಗಸ್ಟ್ 11ರ ಬೆಳಗ್ಗೆ 10ಕ್ಕೆ ನಗರದ ಬೇತೂರು ರಸ್ತೆಯಲ್ಲಿರುವ ವೆಂಕಟೇಶ್ವರ ವೃತ್ತದಿಂದ ಬೈಕ್ ರ್ಯಾಲಿ ಆರಂಭವಾಗಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್‌ ಹನಗವಾಡಿ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ಸಂಸದರು, ಶಾಸಕರು ರ್ಯಾಲಿಯಲ್ಲಿ ಭಾಗವಹಿಸಲಿದ್ದು, ತಿರಂಗದೊಂದಿಗೆ ಹೊರಡುವ … Read more

error: Content is protected !!