ಮನೆ-ಮನೆಯಲ್ಲೂ ತಿರಂಗ – ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅಭಿಮಾನದ ವಿನಂತಿ

ಸುದ್ದಿ360 ದಾವಣಗೆರೆ, ಆ. 10: ಇದೇ ಆಗಸ್ಟ್ 13, 14 ಮತ್ತು 15ರಂದು ಭಾರತ ದೇಶ ಸ್ವತಂತ್ರ ಪಡೆದು 75 ವರ್ಷಗಳು ತುಂಬುತ್ತಿರುವ  ಈ ಶುಭ ಸಂದರ್ಭದಲ್ಲಿ ದೇಶದ ಅಮೃತ ಮಹೋತ್ಸವದ ಸಂಕೇತವಾಗಿ ದಿನಾಂಕ: 13ರ  ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 15 ರ ಸಂಜೆ 6:00 ಗಂಟೆವರೆಗೆ ನಿರಂತರವಾಗಿ ರಾಷ್ಟ್ರಧ್ವಜ ಹಾರಿಸುವಂತಹ ಅವಕಾಶವನ್ನು ಪ್ರತಿಯೊಬ್ಬರಿಗೂ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಕಲ್ಪಿಸಿಕೊಟ್ಟವೆ. ಇದು ದೇಶ ಅಭಿಮಾನದ ಪ್ರಶ್ನೆ ಅಷ್ಟೇ ಅಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ – … Read more

ಯುವಾ ಬ್ರಿಗೇಡ್ ಹರಿಹರ ತಂಡದಿಂದ ಹಳೆಯ ದೇವರ ಫೋಟೊಗಳ ವಿಸರ್ಜನೆ

ಸುದ್ದಿ360 ದಾವಣಗೆರೆ, ಆ.08:  ಯುವಾ ಬ್ರಿಗೇಡ್ ಹರಿಹರ ತಂಡ ಹರಿಹರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಅಕ್ಕಪಕ್ಕ ಬಿದ್ದಿದ್ದ ಹಳೆಯ ದೇವರ ಫೋಟೋಗಳನ್ನು ಸಂಗ್ರಹಿಸಿ ಸೂಕ್ತರೀತಿಯಲ್ಲಿ ವಿಸರ್ಜಿಸಿದ್ದಾರೆ. ದೇವಸ್ಥಾನದ ಸುತ್ತಮುತ್ತಲು ಇಲ್ಲವೆ ಅಲ್ಲಿನ ಆಸುಪಾಸಿನ ಮರ ಇಲ್ಲವೇ ಯಾವುದಾದರೂ ಮರದ ಕೆಳಗಡೆ ಊನವಾದ ದೇವರ ಫೋಟೋಗಳು ಇಟ್ಟಿರುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ಇದೂ ಸಹ ದೇವರಿಗೆ ಅಗೌರವ ತೋರಿಸಿದಂತೆಯೇ ಆಗುತ್ತದೆಯಲ್ಲದೆ. ಫೋಟೊಗೆ ಅಳವಡಿಸಲಾದ ಫ್ರೇಮ್ ಮತ್ತು ಗಾಜಿನ ಚೂರುಗಳು ಕಾಲ ಕ್ರಮೇಣ ಒಡೆದು ಸಾರ್ವಜನಿಕರಿಗೆ ಹಾನಿಯುಂಟು ಮಾಡುತ್ತದೆ. … Read more

ವಿದ್ಯುತ್ ಮಸೂದೆ 2022 ಬಿಲ್ ವಿರೋಧಿಸಿ AIUTUC ಯಿಂದ ಪ್ರತಿಭಟನೆ – ಮನವಿ

ಸುದ್ದಿ360 ದಾವಣಗೆರೆ, ಆ.08: ಕೇಂದ್ರ ಸರ್ಕಾರದ ವಿದ್ಯುತ್ ಮಸೂದೆ 2022 ಬಿಲ್ ನ್ನು ವಿರೋಧಿಸಿ AIUTUC ದಾವಣಗೆರೆ ಜಿಲ್ಲಾ ಸಮಿತಿ ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಮಾನ್ಯ ಪ್ರಧಾನ ಮಂತ್ರಿಗಳಿಗೆ ಉಪವಿಭಾಗಾಧಿಕಾರಿಗಳ ಮೂಲಕ  ಮನವಿ ಪತ್ರವನ್ನು ಸಲ್ಲಿಸಿತು. ಈ ಪ್ರತಿಭಟನೆಯಲ್ಲಿ ಮಂಜುನಾಥ್ ಕೈದಾಳೆ, ಜಿಲ್ಲಾ ಅಧ್ಯಕ್ಷರು ಎಐಯುಟಿಯುಸಿ. ಶಿವಾಜಿರಾವ್ ಜಿಲ್ಲಾ ಉಪಾಧ್ಯಕ್ಷರು, ತಿಪ್ಪೇಸ್ವಾಮಿ ಅಣಬೇರು ಜಿಲ್ಲಾ ಮುಖಂಡರು. ಮಧು ತೊಗಲೇರಿ ಎಐಕೆಕೆಎಂಎಸ್ ಜಿಲ್ಲಾ ಸಂಚಾಲಕರು, ನಾಗಸ್ಮಿತಾ, ಡಾ. ಸುನೀತ್ ಕುಮಾರ್, ಲೋಕೇಶ್, ಬೀರಲಿಂಗಪ್ಪ, ಹನುಮಂತಪ್ಪ, ವಿರುಪಾಕ್ಷಪ್ಪ, … Read more

ಹರ್ ಘರ್ ತಿರಂಗ: ರಾಜ್ಯದಲ್ಲಿ 1 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಗುರಿ

ಸುದ್ದಿ360 ಬೆಂಗಳೂರು, ಆ.08: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ‘ಹರ್ ಘರ್ ತಿರಂಗ’ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ಈ ಅಭಿಯಾನದ ಸಿದ್ಧತೆಯನ್ನು ಪರಿಶೀಲಿಸಿ ಮಾತನಾಡಿದರು.  ಈ ಕಾರ್ಯಕ್ರಮವನ್ನು ಕೇವಲ ಕಾಟಾಚಾರಕ್ಕೆ ಮಾಡದೆ, ದೇಶದ ಮೇಲಿನ ಅಭಿಮಾನ ಪ್ರೀತಿಯಿಂದ ಆಯೋಜಿಸಬೇಕು. ಇದನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ತುಡಿತದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ರಾಜ್ಯದಲ್ಲಿ ಸುಮಾರು 1 ಕೋಟಿಗೂ ಹೆಚ್ಚು … Read more

ದಾವಣಗೆರೆ: ಶ್ರೀ ಅರಕೇರಮ್ಮ ದೇವಿ ದೇವಸ್ಥಾನ ಕಳಸಾರೋಹಣ

ಸುದ್ದಿ360 ದಾವಣಗೆರೆ, ಆ.08: ನಗರದ  ಕುರುಬರ ಪೇಟೆಯಲ್ಲಿರುವ ಶ್ರೀ ಅರಕೇರಮ್ಮ ದೇವಿ ದೇವಸ್ಥಾನದಲ್ಲಿ ಆ.12 ರಂದು ಶ್ರೀ ಅರಕೇರಮ್ಮದೇವಿ ದೇವಸ್ಥಾನ ಕಳಸಾರೋಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಆ. 11 ರ ಗುರುವಾರ, ರಾತ್ರಿ 7-00 ರಿಂದ ಪ್ರಾಯಶ್ಚಿತ ಹೋಮ, ಗಣಹೋಮ, ವಾಸ್ತುಶಾಂತಿ, ನವಗ್ರಹ ಪೂಜೆಗಳನ್ನು ನೆರವೇರಿಸಲಾಗುವುದು. ಆ. 12 ರ ಶುಕ್ರವಾರ, ಬೆಳಗ್ಗೆ 11-30 ರಿಂದ 12-30 ರವರೆಗೆ ಸಲ್ಲುವ ಅಂಜನ್ ಲಗ್ನದ ಶುಭ ಮುಹೂರ್ತದಲ್ಲಿ ಕಳಸಾರೋಣ ನೆರವೇರಿಸಲಾಗುವುದು. ಈ ಕಾರ್ಯಕ್ರಮದ ಸಾನಿಧ್ಯವನ್ನು ಹದಡಿ ಚಂದ್ರಗಿರಿ … Read more

ದಾವಣಗೆರೆ: ಇಸ್ಫೀಟ್ ಜೂಜಾಟದ ಮೇಲೆ ಪೊಲೀಸ್ ದಾಳಿ 14 ಜನರ ಬಂಧನ

ಸುದ್ದಿ360 ದಾವಣಗೆರೆ, ಆ.08: ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಭಾನುವಾರ (ಆ.7) ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಕನಿಕಾ ಸಿಕ್ರಿವಾಲ್ ರವರ ನೇತೃತ್ವದ  ಪೊಲೀಸ್ ತಂಡ ದಾಳಿನಡೆಸಿದೆ. ಕಾನೂನು ಬಾಹಿರವಾಗಿ ಜೂಜಾಟದಲ್ಲಿ ತೊಡಗಿದ್ದ 14 ಜನರನ್ನು ಬಂಧಿಸಿದ್ದು, ಆರೋಪಿತರಿಂದ ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು  39,960 ರೂ.ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ … Read more

ಜಿಎಂಐಟಿ: ದಿಶಾ ಸಮಾರೋಪ – ಅಂತಿಮ ಎಂಬಿಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಸುದ್ದಿ360 ದಾವಣಗೆರೆ, ಆ.07:  ಜಿಎಂಐಟಿ ಎಂಬಿಎ ವಿಭಾಗದ ಫೋರಮ್ ದಿಶಾ ಸಮಾರೋಪ ಸಮಾರಂಭ ಮತ್ತು ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಶನಿವಾರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಉಡುಗೆ-ತೊಡುಗೆಗಳೊಂದಿಗೆ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದರು. ಸಮಾರಂಭದಲ್ಲಿ ವಿಭಾಗದ ನಿರ್ದೇಶಕರಾದ ಡಾ ಬಕ್ಕಪ್ಪ ಮಾತನಾಡಿ, ನಿರ್ವಹಣಾ ಕೌಶಲ್ಯ ಜೀವನದಲ್ಲಿ ಅತಿ ಮುಖ್ಯ ಹಾಗೂ ಅದನ್ನು ಅಳವಡಿಸಿಕೊಂಡು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಬೇಕೆಂದು ಕರೆಕೊಟ್ಟರು. ವಿಭಾಗದ ಮುಖ್ಯಸ್ಥರಾದ ಡಾ ಮಂಜುನಾಥ್ ಬಿ ಆರ್ ಮಾತನಾಡಿ, ಕಲ್ಲು … Read more

ಅರ್ಹರ ಮುಡಿ ಏರಿದ ಎಚ್‌ ಡಿ ದೇವೇಗೌಡ ಪ್ರಶಸ್ತಿ: ಮಾಜಿ ಸಚಿವ ಬಂಡೆಪ್ಪ ಕಾಶಂಪುರ್

ಸುದ್ದಿ360 ದಾವಣಗೆರೆ, ಆ.07:  ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರಿನಲ್ಲಿ ಅರ್ಹ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಷಯ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಹೇಳಿದರು. ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಇಂದು ಶ್ರೀ ಎಚ್.ಡಿ. ದೇವೇಗೌಡ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ‘ಎಚ್.ಡಿ. ದೇವೇಗೌಡ ಪ್ರಶಸ್ತಿ ಪ್ರದಾನ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಪ್ರಶಸ್ತಿಗೆ ಆಯ್ಕೆಯಾಗಿರುವ ಜನಪದ ಕ್ಷೇತ್ರದ ಶ್ರೇಷ್ಠ ಸಾಧಕ ಸಿದ್ಧನಮಠದ ಯುಗಧರ್ಮ ರಾಮಣ್ಣ, ಕೋವಿಡ್ ಸಂದರ್ಭದಲ್ಲಿ ಜನ ಮೆಚ್ಚುವಂತೆ ಸೇವೆ ಸಲ್ಲಿಸಿದ ದಾವಣಗೆರೆ ಜಿಲ್ಲಾ … Read more

ನೈಜ ಘಟನೆಯಾಧಾರಿತ ‘ತಾಜ್ ಮಹಲ್-2’ ಚಿತ್ರ ಸೆ.2ರಂದು ತೆರೆಗೆ

ಸುದ್ದಿ360 ದಾವಣಗೆರೆ, ಆ.07: ನೈಜ ಘಟನೆ ಆಧಾರಿತ ತಾಜ್ ಮಹಲ್-2 ಕನ್ನಡ ಚಲನಚಿತ್ರ ಸೆ.2ರಂದು ರಾಜ್ಯದ ಇನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಟ, ನಿರ್ದೇಶಕ ದೇವರಾಜ್ ಕುಮಾರ್ ತಿಳಿಸಿದರು. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತಾಜ್ ಮಹಲ್ 2  ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ ಕಥೆ ಹೊಂದಿರುವ ಚಿತ್ರವಾಗಿದೆ. ಚಿತ್ರದಲ್ಲಿ ನಾನೇ ನಾಯಕ ನಾಗಿ ಅಭಿನಯಿಸಬೇಕು ಎಂದು ನಿರ್ಧರಿಸಿ ಪ್ರಥಮ ಬಾರಿ ನಾಯಕನಾಗಿ ಅಭಿನಯ ಮಾಡಿರುವೆ. … Read more

ಆ.9ಕ್ಕೆ ಸವಿತಾ ಸಮಾಜದಿಂದ ಪ್ರತಿಭಾ ಪುರಸ್ಕಾರ

ಸುದ್ದಿ360 ದಾವಣಗೆರೆ, ಆ.07: ನಗರದ ಸವಿತಾ ಕ್ಷೇಮಾಭಿವೃದ್ಧಿ ಸಂಘದಿಂದ ಸವಿತಾ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆ.9ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಉಪಾಧ್ಯಕ್ಷ ಪಿ.ಬಿ.ವೆಂಕಟಾಚಲಪತಿ ಮಾತನಾಡಿ, ಅಂದು ಬೆಳಿಗ್ಗೆ 10.30ಕ್ಕೆ ನಗರದ ರೋಟರಿ ಸಭಾಂಗಣದಲ್ಲಿ 9ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಸಂಘದ ಅಧ್ಯಕ್ಷ ಪಿ.ಜಿ.ನಾಗರಾಜ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ, ಆಕಾಶವಾಣಿ ಕಲಾವಿದ ಎನ್.ಕೆ.ಶ್ರೀನಿವಾಸ್, ಎಸ್.ಪ್ರಕಾಶ್, … Read more

error: Content is protected !!