ಎಷ್ಟೇ ಹಣ ನೀಡಿದರೂ ಭೂಮಿ ಬಿಡೆವು – ಭೂಸ್ವಾಧೀನ ವಿರೋಧಿಸಿ ರಸ್ತೆತಡೆದು ರೈತರ ಪ್ರತಿಭಟನೆ

ಸುದ್ದಿ360 ದಾವಣಗೆರೆ, ಆ.4: ಈಗಿರುವ ತುಂಡು ಭೂಮಿಯೇ ನಮ್ಮ ಜೀವನಾಧಾರ. ಸರಕಾರ ನಮಗೆ ಎಷ್ಟೇ ಹಣ ನೀಡಿದರೂ ಭೂಮಿ ಬಿಟ್ಟುಕೊಡಲು ನಾವು ಸಿದ್ಧರಿಲ್ಲ ಎಂಬುದಾಗಿ ತಾಲೂಕಿನ ಮೆಳ್ಳೇಕಟ್ಟೆ, ಅಣಜಿ ಮತ್ತು ಲಿಂಗಾಪುರ ಗ್ರಾಮಗಳ ರೈತರು ಇಂದು 45 ನಿಮಿಷಗಳ ಕಾಲ ಜಿಲ್ಲಾಡಳಿತ ಭವನ ವೃತ್ತದಲ್ಲಿ ಪಿಬಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಮೆಳ್ಳೇಕಟ್ಟೆ, ಅಣಜಿ, ಲಿಂಗಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣದ ಉದ್ದೇಶದಿಂದ 1156 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗಿರುವ ಕೆಐಎಡಿಬಿ … Read more

ಕರ್ನಾಟಕದಲ್ಲಿ ಆರ್ ಎಂಡ್ ಡಿ ನೀತಿಗೆ ಅನುಮೋದನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಆ.4 : ಕರ್ನಾಟಕದಲ್ಲಿ ಆರ್ ಎಂಡ್ ಡಿ ನೀತಿಗೆ ಸಚಿವಸಂಪುಟದ ಅನುಮೋದನೆ ದೊರೆತಿದ್ದು, ಗ್ಯಾರೇಜ್ ಸಂಶೋಧನೆಗಳಿಂದ ಹಿಡಿದು ಸಾಂಸ್ಥಿಕ ಸಂಶೋಧನೆಗಳವರೆಗೆ ಪ್ರೋತ್ಸಾಹ, ಸಹಕಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಷಾ ಅವರೊಂದಿಗೆ ಭಾಗವಹಿಸಿ ಮಾತನಾಡಿ, ಬೆಂಗಳೂರಿನಲ್ಲಿ ಜೆನೋಮ್ಯಾಟಿಕ್ಸ್ ನಿಂದ ಏರೋಸ್ಪೇಸ್ ವರೆಗೆ 400 ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ. ಬೆಂಗಳೂರು ನಗರದಲ್ಲಿ ಹೊರತುಪಡಿಸಿದರೆ, ಪ್ರಪಂಚದ ಯಾವುದೇ ನಗರಗಳಲ್ಲಿ ಈ … Read more

ಆ.6: ಕಲಾಕುಂಚ ಕೇರಳ ಶಾಖೆಯಿಂದ ‘ವನಸುಮ’ , ‘ಕಾವ್ಯ ಮೃಷ್ಟಾನ್ನ’ ಕವನ ಸಂಕಲನ ಲೋಕಾರ್ಪಣೆ

ಸುದ್ದಿ360 ದಾವಣಗೆರೆ, ಆ.4: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಕೇರಳ ಶಾಖೆಯ ಆಶ್ರಯದಲ್ಲಿ ಆಗಸ್ಟ್ 6 ರಂದು ಸಂಜೆ 5 ಗಂಟೆಗೆ ಕೇರಳ ಜಿಲ್ಲೆಯ, ಕಾಸರಗೋಡು ಜಿಲ್ಲೆಯ ಉಪ್ಪಳದ ಶ್ರೀಕ್ಷೇತ್ರ ಕೊಂಡವೂಡಿನಲ್ಲಿ ಕವಯತ್ರಿ ಲಕ್ಷ್ಮೀದೇವಿ ವಿ.ಭಟ್‌ ವಿರಚಿತ “ವನಸುಮ” ಹಾಗೂ “ಕಾವ್ಯ ಮೃಷ್ಟಾನ್ನ” ಕವನ ಸಂಕಲನಗಳ ಲೋಕಾರ್ಪಣೆ ಮತ್ತು ಗೀತಾಭಿಯಾನದ ಉದ್ಘಾಟನೆ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಕೊಂಡವೂರಿನ ಶ್ರೀಮಠದ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪ ಪ್ರಜ್ವಲನಗೊಳಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ … Read more

ಮುಂದಿನ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ ಅಮೃತ ಮಹೋತ್ಸವ

ಸುದ್ದಿ360 ದಾವಣಗೆರೆ, ಆ. 3: ಜನ ಸಾಗರದ ಮೂಲಕ ದಾವಣಗೆರೆಯ ಎಸ್.ಎಸ್. ಮೈದಾನ ಇತಿಹಾಸ ಪುಟ ಸೇರಿದೆ. ಇಲ್ಲಿ ನಡೆದ ಸಿದ್ಧರಾಮಯ್ಯ ಅಮೃತ ಮಹೋತ್ಸವ ರಾಜ್ಯಕ್ಕೆ, ವಿಶೇಷವಾಗಿ ಬಿಜೆಪಿ ಮತ್ತು ಜೆಡಿಎಸ್ ಗೆ ರಾಜಕೀಯವಾಗಿ ಮಹತ್ತರ  ಸಂದೇಶವನ್ನು ರವಾನಿಸಿದೆ. ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವದ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವಕ್ಕೆ ಬಲ ತುಂಬುವ ಪ್ರಯತ್ನ ಸಫಲವಾಗಿರುವ ಕೈ, ಮುಂದಿನ ವಿಧಾನಸಭಾ ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ರಣಕಹಳೆ ಮೊಳಗಿಸಿದೆ. ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ನಡೆದ … Read more

ಕೈ ಬಲಗೊಳಿಸಲು ಇದು ವಿಶೇಷ ಅವಕಾಶ – ಯಾರು ಏನೇ ಹೇಳಲಿ, ಡಿಕೆಶಿ ಬರೋದು ಗ್ಯಾರಂಟಿ

ಸುದ್ದಿ360 ದಾವಣಗೆರೆ, ಆ.2: ನಗರದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮ ಸಿದ್ದರಾಮಯ್ಯ ಅವರಿಗಾಗಿ ಮಾಡುತ್ತಿರುವ ಕಾರ್ಯಕ್ರಮವಲ್ಲ. ಕಾಂಗ್ರೆಸ್ ಪಕ್ಷದಿಂದ ಈ ಹಿಂದೆ ಹಲವು ಬೃಹತ್ ಸಮಾವೇಶಗಳು ನಡೆದಿವೆ. ಇದು ಪಕ್ಷದ ಸಂಘಟನೆಗೆ ಸಾಂದರ್ಭಿಕವಾಗಿ ಒದಗಿಬಂದಿರುವ ಒಂದು ವಿಶೇಷ ಅವಕಾಶ ಎಂದು ಎಚ್.ಎಂ. ರೇವಣ್ಣ ಹೇಳಿದರು. ಅವರು ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಮಾರಂಭದ ಸಿದ್ಧತೆ ಕುರಿತು ಮಾಹಿತಿ ನೀಡಿ, ಒಬ್ಬ ಸಮಾಜಮುಖಿ ಜನಪ್ರತಿನಿಧಿಯಾಗಿ ಸಿದ್ದರಾಮಯ್ಯ 40 ವರ್ಷಗಳಿಗೂ ಅಧಿಕ ಕಾಲ ರಾಜಕೀಯ ಜೀವನದಲ್ಲಿದ್ದಾರೆ. ಅವರ 75ನೇ ಜನ್ಮ ದಿನದ ಅಂಗವಾಗಿ … Read more

ಅಮೃತ ಮಹೋತ್ಸವಕ್ಕೆ ಕ್ಷಣಗಣನೆ – ಸಕಲ ಸಿದ್ಧತೆಗಳೊಂದಿಗೆ ಎಸ್‌ಎಸ್ ಅರಮನೆ ಆವರಣ

ಮಹೋತ್ಸವದ ಸಿದ್ಧತೆ ಕುರಿತು ಸುದ್ದಿಗೋಷ್ಠಿಯಲ್ಲಿ ಎಚ್.ಎಂ. ರೇವಣ್ಣ ಮಾಹಿತಿ ಸುದ್ದಿ360 ದಾವಣಗೆರೆ, ಆ.02: ನಾಳೆ (ಆ.3) ನಡೆಯುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ನಿಮಿತ್ತ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಶಾಮನೂರು ಶಿವಶಂಕರಪ್ಪ ಪ್ಯಾಲೆಸ್ ಆವರಣದಲ್ಲಿ ಸಕಲ ಸಿದ್ಧತೆಗಳೊಂದಿಗೆ ವೇದಿಕೆ ಸಜ್ಜಾಗಿದೆ ಎಂದು ಮಹೋತ್ಸವದ ವಾಹನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು. ನಗರದಲ್ಲಿ ಇಂದು ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮಾರಂಭದ ಸಿದ್ಧತೆ ಕುರಿತು ಮಾಹಿತಿ ನೀಡಿ, ಅಮೃತ ಮಹೋತ್ಸವಕ್ಕೆ … Read more

ಮನುಷ್ಯರಲ್ಲಿ ದೇವರನ್ನು ಕಾಣುವ ಮೂಲಕ ಹಬ್ಬಗಳನ್ನು ವೈಚಾರಿಕವಾಗಿ ಆಚರಿಸಲು ಬಸವಪ್ರಭುಶ್ರೀ ಕರೆ

ಸುದ್ದಿ360 ದಾವಣಗೆರೆ, ಆ.02: ದೇವರು, ಹಬ್ಬ ಹಾಗೂ ಮೂಡನಂಬಿಕೆಗಳ ಹೆಸರಿನಲ್ಲಿ ಪೌಷ್ಠಿಕವಾದ ಹಾಲನ್ನು ವ್ಯರ್ಥ ಮಾಡದೆ, ಅವಶ್ಯಕತೆ ಇರುವ ಮಕ್ಕಳ, ರೋಗಿಗಳ, ಹಿರಿಯರ ಸೇವನೆಗೆ ನೀಡುವ ಮೂಲಕ ಮನುಷ್ಯರಲ್ಲಿ ದೇವರನ್ನು ಕಾಣಬೇಕು. ಮನುಷ್ಯರೇ ನಿಜವಾದ ದೇವರು ಎಂದು ವಿರಕ್ತಮಠದ ಬಸವಪ್ರಭುಶ್ರೀ ಹೇಳಿದರು. ಶ್ರೀಗಳು ನಗರದ ದೊಡ್ಡಪೇಟೆಯಲ್ಲಿರುವ ವಿರಕ್ತಮಠದಲ್ಲಿ ಮಕ್ಕಳಿಗೆ ಹಾಲುಣಿಸುವುದರ ಮೂಲಕ ಹಾಲು ಕುಡಿಸುವ ಹಬ್ಬ, ಬಸವ ಪಂಚಮಿ ಆಚರಣೆಗೆ ಚಾಲನೆ ನೀಡಿ, ಆಶೀರ್ವಚನ ನೀಡಿದರು. ಪಂಚಮಿ ಹಬ್ಬ ಎಂದರೆ ಎಲ್ಲರೂ ನನ್ನ ಪಾಲು ಅಜ್ಜನ ಪಾಲು … Read more

ಹಾಲು ಕುಡಿಸುವ ಹಬ್ಬ

ಸುದ್ದಿ360, ದಾವಣಗೆರೆ ಆ. 01: ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಬಸವಪ್ರಭು ಸ್ವಾಮೀಜಿಯವರ ನೇತೃತ್ವದಲ್ಲಿ ಹಾಲು ಕುಡಿಸುವ ಹಬ್ಬವು ಮಂಗಳವಾರ (ಆಗಸ್ಟ್ 2) ದಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆಯ ವಿರಕ್ತಮಠದಲ್ಲಿ ಜರುಗಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯಶವಂತರಾವ್ ಜಾದವ್ ಭಾಗವಹಿಸಲಿದ್ದು, ಶ್ರೀ ಮಠದ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಓಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ – ಮನವಿ

ಸುದ್ದಿ360, ದಾವಣಗೆರೆ ಆ. 01: ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಪಂಗಡಗಳನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಜಮಾಯಿಸಿದ ವೀರಶೈವ ಲಿಂಗಾಯುತ ಸಮುದಾಯದವರು, ಅವರಗೊಳ್ಳ ಪುರ ವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ತಾವರಗೆರೆ ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಚನ್ನಗರಿ ಕೇದಾರ ಶಿವ ಶಾಂತವೀರ ಶ್ರೀ ಇವರುಗಳನ್ನೊಳಗೊಂಡ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಮೆರವಣಿಗೆ ಮೂಲಕ ಕಚೇರಿ ತಲುಪಿದರು. ಉಪವಿಭಾಗಾಧಿಕಾರಿಗಳ ಮೂಲಕ … Read more

ಭೋವಿ ಕುಲಕಸುಬಿಗೆ ವಿಶೇಷ ಅವಕಾಶ ಹಾಗೂ ರಿಯಾಯ್ತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360, ದಾವಣಗೆರೆ ಆ. 01: ತಳವರ್ಗದ ಸಮುದಾಯಗಳಿಗೆ ಶ್ರೀಮಂತಿಕೆ ಬರುವಂತೆ ನೋಡಿಕೊಳ್ಳುವ ಮೂಲಕ ಸಮತೋಲನದ ಸಮೃದ್ಧಿಯ ರಾಜ್ಯದ ನಿರ್ಮಾಣ ಸಾಧ್ಯ. ತಳಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ರಥ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗುರುಪೀಠವು ಸಮಾಜವನ್ನು ಒಗ್ಗೂಡಿಸಿ ಏಳಿಗೆಯ ಪಥದಲ್ಲಿ ಮುನ್ನಡೆಸುತ್ತಿದೆ. ಎಲ್ಲ ಜನಾಂಗಗಳ ಅಭಿವೃದ್ಧಿಯಾದಾಗ ಮಾತ್ರ ನಾಡು ಅಭಿವೃದ್ಧಿಯಾಗುತ್ತದೆ. ಕೆಳಸ್ತರದ ಹಾಗೂ ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕವಾಗಿ … Read more

error: Content is protected !!