ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆ ವಿಸ್ತರಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360, ಬೆಂಗಳೂರು, ಜು. 08: ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆಯ  ವಿಸ್ತರಣೆ ಮಾಡುವುದಾಗಿ   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು  ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ  ಆಯೋಜಿಸಿದ್ದ  ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ  ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ  ಮಾತನಾಡಿದರು. ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗನೆ  ಈ ಬಗ್ಗೆ ಘೋಷಣೆ ಮಾಡಲಾಗುವುದು. ನಿವೃತ್ತ ನೌಕರರು ನಿರಂತರವಾಗಿ  ಕ್ರಿಯಾಶೀಲರಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ ಕೆಲಸ ಮಾಡಬೇಕು ಎಂದರು. … Read more

ದಾವಣಗೆರೆ ಮಹಾನಗರ ಪಾಲಿಕೆ ಆಡಳಿತ ವೈಫಲ್ಯ – ಪಾಲಿಕೆಗೆ ಬೀಗ ಜಡಿಯಲು ಮುಂದಾದ ಕಾಂಗ್ರೆಸ್

ಸುದ್ದಿ360, ದಾವಣಗೆರೆ, ಜು.08: ಮಹಾನಗರ ಪಾಲಿಕೆ ಆಡಳಿತ ನಡೆಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ, ಬಿಜೆಪಿ ನಗರದ ಕುಂದುಕೊರತೆಗಳನ್ನು ನಿವಾರಿಸುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ  ಎಂದು ಆರೋಪಿಸಿ  ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಎದುರು ಪ್ರತಿಭಟನೆಗಿಳಿದರು. ಬಿಜೆಪಿಯ ಆಡಳಿತದಿಂದ ರೋಸಿ ಹೋಗಿದ್ದ ಕಾಗ್ರೆಸ್ ಕಾರ್ಯಕರ್ತರು ಈ ವೇಳೆ ಪಾಲಿಕೆ  ಮುಖ್ಯದ್ವಾರಕ್ಕೆ ಬೀಗ ಜಡಿಯಲು ಮುಂದಾಗಿ, ಪೊಲೀಸರು ಇದನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಗಡಿಗುಡಾಳ್ ಮಂಜುನಾಥ್, ನಗರದಾದ್ಯಂತ ಸಮಸ್ಯೆಗಳು ಉಲ್ಬಣಗೊಂಡಿವೆ. 5 ತಿಂಗಳಾದರೂ ಸಾಮಾನ್ಯಸಭೆ … Read more

ಜಿಎಂಐಟಿ:  750 ವಿದ್ಯಾರ್ಥಿಗಳಿಗೆ ಜಾಬ್ ಆಫರ್ – ಜು.15 ರಂದು ‘ಆನ್ ಕ್ಯಾಂಪಸ್ ಎಂಪ್ಲಾಯ್ಮೆಂಟ್ ಆಫರ್ಸ್ ಸೆಲೆಬ್ರೇಶನ್ ಡೇ’

ಮಧ್ಯ ಕರ್ನಾಟಕ ಭಾಗದ ಜಿಎಂಐಟಿಯಲ್ಲಿ ಅತಿ ಹೆಚ್ಚು ಜಾಬ್ ಆಫರ್ಸ್ ಸುದ್ದಿ360, ದಾವಣಗೆರೆ, ಜು.07: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿವಿಧ ಕಂಪನಿಗಳ ಸಂದರ್ಶನ ಪ್ರಕ್ರಿಯೆಯಲ್ಲಿ ಒಟ್ಟು 750 ಜಾಬ್ ಆಫರ್ಸ್ ಸ್ವೀಕರಿಸಿದ್ದಾರೆ. ಇದರಿಂದ ಮಧ್ಯ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಜಾಬ್ ಆಫರ್ಸ್ ಸ್ವೀಕರಿಸಿದ ಎಂಜಿನಿಯರಿಂಗ್ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ವಿವಿಧ ಪ್ರತಿಷ್ಠಿತ ಕಂಪನಿಗಳಾದ ವಿಪ್ರೋ, ಇನ್ಫೋಸಿಸ್, ಕ್ಯಾಪ್ಜೆಮಿನಿ, ಟಿಸಿಎಸ್,    ಎನ್ ಟಿಟಿ ಡೇಟಾ, ಹೆಚ್ ಸಿ … Read more

ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಎಸ್ ಯುಸಿಐ ಪ್ರತಿಭಟನೆ

ಸುಸುದ್ದಿ360, ದಾವಣಗೆರೆ, ಜು.08: ಕೇಂದ್ರ ಸರ್ಕಾರವು ಗೃಹ ಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆ ನಿರ್ಧಾರ ಖಂಡಿಸಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯಿಂದ ನಗರದ ಗಾಂಧಿ ವೃತ್ತದ ಬಳಿ ಗುರುವಾರ ಪ್ರತಿಭಟಿಸಲಾಯಿತು. ಕೇಂದ್ರ ಸರ್ಕಾರ ಬೆಲೆ ಏರಿಕೆ ನೀತಿಯ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಆಗ್ರೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಸ್.ಯು.ಸಿ.ಐ (ಸಿ) ಜಿಲ್ಲಾ ಸಂಘಟನಾ ಸಮಿತಿಯ ಕಾರ್ಯದರ್ಶಿ ಕಾಂ. ಕೈದಾಳೆ ಮಂಜುನಾಥ್ ರವರು ಮಾತನಾಡುತ್ತಾ “ಕೇಂದ್ರ ಸರ್ಕಾರ ಗೃಹ ಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆಯನ್ನು … Read more

ಮಾದಕ ವಸ್ತು ಸೇವಿಸುವವರ ಮೇಲೂ ಕ್ರಮ, ಹುಷಾರ್ . . .

ಸುದ್ದಿ360, ದಾವಣಗೆರೆ, ಜು.07: ಮಾದಕ ವಸ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಾದಕ ಸೇವಿಸುವವರ ಮೇಲೆಯೂ ಕಠಿಣ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ  ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ನೌಕರರು, ವಿದ್ಯಾರ್ಥಿಗಳು ಆಗಿರುತ್ತಾರೆ ಎಂಬ ಕಾರಣದಿಂದ  ಮಾದಕ ದ್ರವ್ಯ ಸೇವಿಸುವವರ ಮೇಲೆ ಮೃದು ಧೋರಣೆಯನ್ನು ಹೊಂದಲಾಗಿತ್ತು. … Read more

ಸಣ್ಣ ವಿಚಾರವೆಂದು ನಿರ್ಲಕ್ಷಿಸದೆ ಸೂಕ್ತ ಕ್ರಮ: ಎಡಿಜಿಪಿ ಅಲೋಕ್ ಕುಮಾರ್ ಸೂಚನೆ

ಸುದ್ದಿ360, ದಾವಣಗೆರೆ, ಜು.07: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮ ನಿರ್ವಹಣೆ ನಡೆಯುತ್ತಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ  ಎಂದು  ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಎರಡೂ ಜಿಲ್ಲೆಗಳ ಕಾರ್ಯ ನಿರ್ವಹಣೆಯನ್ನು ಪ್ರಶಂಸಿಸಿದರು. ಇದು  ಔಪಚಾರಿಕ ಭೇಟಿಯಾಗಿದ್ದು, ಇಂದಿನ ಸಭೆಯಲ್ಲಿ ಕೆಲವು ಸಲಹೆ ಸೂಚನೆಗಳನ್ನು ನೀಡಲಾಗಿದ್ದು, ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಗುರುತಿಸಿ ರಿವಾರ್ಡ್ ನೀಡುವ ಮೂಲಕ ಕರ್ತವ್ಯದಕ್ಷತೆ ಹೆಚ್ಚುವಂತೆ ಮೋಟಿವೇಟ್ ಮಾಡುವ ನಿಟ್ಟಿನಲ್ಲಿ ಇಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. … Read more

ಜು. 9,10ರಂದು ಧರ್ಮ ಸಮಾರಂಭ ಹಾಗೂ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ

ಸುದ್ದಿ360 ದಾವಣಗೆರೆ.ಜು.07:  ಶ್ರೀ ಮದ್ ರಂಭಾಪುರಿ ಜಗದ್ಗುರುಗಳ ಹಾಗೂ ಶ್ರೀ ಹಿಮವತ್ಕೇದಾರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪರಂಪರೆ ಪುನರ್‌ಮನನ ಧರ್ಮ ಸಮಾರಂಭ ಹಾಗೂ ಶ್ರೀ ಕೇದಾರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಸಮಾರಂಭ ಜು.9 ಮತ್ತು 10ರಂದು ನಗರದ ಪಿಬಿ ರಸ್ತೆಯ ತ್ರಿಶೂಲ್ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪೂಜಾ ಸಮಿತಿ ಸದಸ್ಯರು, ಧೂಡ ಅಧ್ಯಕ್ಷರೂ ಆದ ಕೆ.ಎಂ. ಸುರೇಶ್ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಧುನಿಕತೆಯ ಇಂದಿನ ದಿನಮಾನಗಳಲ್ಲಿ ಕೂಡು ಕುಟುಂಬದ ಪರಿಕಲ್ಪನೆ ಮರೆಯಾಗಿದ್ದು, ಪತಿ, ಪತ್ನಿ … Read more

ಜು.9ಕ್ಕೆ ವೃದ್ಧರಿಗೆ, ವಿಕಲಚೇತನರಿಗೆ ಉಚಿತ ತಪಾಸಣೆ

ಸುದ್ದಿ360 ದಾವಣಗೆರೆ.ಜು.06: ಹಿರಿಯ ನಾಗರೀಕರಿಗೆ ಮತ್ತು ಅಂಗವಿಕಲರಿಗೆ ಉಚಿತ ಕಿವಿ ಮೂಗು ಮತ್ತು ಗಂಟಲು ತಪಾಸಣೆ ಶಿಬಿರವು ಜುಲೈ 9ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1: 30 ಗಂಟೆವರೆಗೆ ನಗರದ ಎವಿಕೆ ಕಾಲೇಜು ರಸ್ತೆಯಲ್ಲಿರುವ ಶ್ರೀ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ (ಹಳೆ ಅಶ್ವಿನಿ ಆಸ್ಪತ್ರೆ)ಯಲ್ಲಿ ನುರಿತ ಕಿವಿ, ಮೂಗು ಮತ್ತು ಗಂಟಲು ಶಸ್ತ್ರಚಿಕಿತ್ಸೆ ತಜ್ಞ ವೈದ್ಯರಿಂದ ನಡೆಯಲಿದೆ. ಶಿಬಿರದಲ್ಲಿ ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ಔಷಧಿ ವಿತರಣೆ ಮತ್ತು ಉಚಿತವಾಗಿ ಶ್ರವಣಯಂತ್ರಗಳನ್ನು ನೀಡಲಾಗುತ್ತಿದ್ದು, ಶಾ … Read more

ಒಕ್ಕಲಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಸುದ್ದಿ360 ದಾವಣಗೆರೆ.ಜು.06: ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.80 ಕ್ಕಿಂತ ಅಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಿದೆ. ಜಿಲ್ಲಾ ಒಕ್ಕಲಿಗರ ಸಂಘದಿಂದ ಜುಲೈ 24 ರಂದು ನಗರದ ಸರಕಾರಿ ಬಸ್ ನಿಲ್ದಾಣ ಪಕ್ಕ ಇರುವ ಶ್ರೀ ಸಾಯಿ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಜುಲೈ 15 ರೊಳಗೆ ಅಂಕಪಟ್ಟಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ವಿದ್ಯಾರ್ಥಿ ಭವನ ವೃತ್ತದಲ್ಲಿರುವ ಸಂಘದ … Read more

ಜು.12: ಶ್ರೀ ಜಯದೇವ ಮುರುಘರಾಜೇಂದ್ರ ಶ್ರೀಗಳ 65ನೇ ಸ್ಮರಣೋತ್ಸವ

ಸುದ್ದಿ360 ದಾವಣಗೆರೆ.ಜು.06: ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65ನೇ ಸ್ಮರಣೋತ್ಸವ ಪ್ರಯುಕ್ತ ಜು.12ರಿಂದ 14ರವರೆಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು. ನಗರದ ಶ್ರೀ ಶಿವಯೋಗಾಶ್ರಮದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಶ್ರೀಗಳು ಮಾಹಿತಿ ನೀಡಿದರು. ಶ್ರೀಗಳ 65ನೇ ಸ್ಮರಣೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶರಣ ಸಂಸ್ಕೃತಿ ಉತ್ಸವ, ಮಹಾ ತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಲಿಂಗೈಕ್ಯ ಶತಮಾನೊತ್ಸವ, ಜಯದೇವಶ್ರೀ ಶೂನ್ಯಪೀಠ … Read more

error: Content is protected !!