ದಾವಣಗೆರೆಯಲ್ಲಿ ಸಂಚಾರಿ ನಿಯಮ ಅರಿವು ಮೂಡಿಸುವ ಚಂದದ ಕಲಿಕೆಯ ‘ಟ್ರಾಫಿಕ್ ಅವೇರ್ನೆಸ್ ಪಾರ್ಕ್’ – ನೀವೂ ಒಮ್ಮೆ ಭೇಟಿ ನೀಡಿ…

ಸುದ್ದಿ360 ದಾವಣಗೆರೆ ಜ.11: ರಸ್ತೆ ಮೇಲಿನ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ರಸ್ತೆಬದಿಯಲ್ಲಿನ ಸಂಚಾರಿ ನಿಯಮಗಳ ಸೂಚನಾ ಫಲಕಗಳ ಬಗ್ಗೆ ವಿದ್ಯಾರ್ಥಿದಿಸೆಯಿಂದಲೇ ಅರಿವು ಮೂಡಿಸಿದಲ್ಲಿ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಅಭಿಪ್ರಾಯಪಟ್ಟರು. ನಗರದ ನಿಜಲಿಂಗಪ್ಪ ಬಡಾವಣೆಯ  ಶ್ರೀಮತಿ ಗಂಗೂಬಾಯಿ ಹಾನಗಲ್ಲ ಉದ್ಯಾನವನ (ಗಸೆಗಸೆ ಪಾರ್ಕ್)  ದಲ್ಲಿ ನಿರ್ಮಿಸಲಾಗಿದ್ದ ‘‘ಸಂಚಾರ ಜಾಗೃತಿ ಉದ್ಯಾನವನ’ ಉದ್ಘಾಟಿಸಿ ಅವರು ಮಾತನಾಡಿದರು. ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಸಹಯೋಗದೊಂದಿಗೆ 24ಕ್ಕೂ ಹೆಚ್ಚು ಸೂಚನಾ … Read more

ಹೊರ ರಾಜ್ಯಕ್ಕೆ ಟ್ರ್ಯಾಕ್ಟರ್ ಬಿಡಿ ಭಾಗಗಳ ಅಕ್ರಮ ಮಾರಾಟ – ತಡೆದ ದಾವಣಗೆರೆ ಪೊಲೀಸರು

ಸುದ್ದಿ360 ದಾವಣಗೆರೆ, ಸೆ.07: ಯಾವುದೇ ದಾಖಲೆ ಹೊಂದಿರದೇ ಆರ್‌ಟಿಒ ದಿಂದ ಪರವಾನಿಗೆ ಪಡೆಯದೇ ದಾವಣಗೆರೆಯಿಂದ ಪಂಜಾಬ್‌ಗೆ ಅಕ್ರಮವಾಗಿ ಟ್ರಾಕ್ಟರ್ ಬಿಡಿ ಭಾಗಗಳನ್ನು ಮಾರಾಟವಾಗುತ್ತಿದ್ದುದನ್ನು ಜಿಲ್ಲಾ ಪೊಲೀಸರು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಆರ್‌ಬಿ ಘಟಕದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಿ. ಎಸ್. ಬಸವರಾಜ್ ಮತ್ತು ಅಧಿಕಾರಿ, ಸಿಬ್ಬಂದಿಗಳು ದಾವಣಗೆರೆ ನಗರದ ರೈತರ ಸಂಘದ ಕಾಂಪೌಂಡ್, ಬಿಲಾಲ್ ಕಾಂಪೌಂಡ್ ಬಳಿ ಇರುವ ಗ್ಯಾರೇಜುಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಹಳೇಯ ಟ್ರಾಕ್ಟರ್‌ಗಳನ್ನು … Read more

ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ ‘ತುಂಗಾ’ ಇನ್ನು ನೆನಪು ಮಾತ್ರ – ಸರಕಾರಿ ಗೌರವದೊಂದಿಗೆ ವಿದಾಯ

650 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಹಾಜರಾಗಿದ್ದ ‘ತುಂಗಾ’ ಸುದ್ದಿ 360, ದಾವಣಗೆರೆ ಆ.26: ಜಿಲ್ಲಾ ಪೊಲೀಸ್ ಇಲಾಖೆಗೆ ಇಂದು ತುಂಬಲಾರದ ನಷ್ಟ ಎಂದರೆ ತಪ್ಪಾಗದು. ಪೊಲೀಸ್ ಕುಟುಂಬದ ಕಣ್ಮಣಿ, ಅಧಿಕಾರಿಗಳು, ಸಿಬ್ಬಂದಿಯ ಅಚ್ಚುಮೆಚ್ಚಿನ ಶ್ವಾನ ‘ತುಂಗಾ’ ಇಂದು ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾಳೆ. ಪೊಲೀಸ್ ಇಲಾಖೆಯ ಅಪರಾಧ ಪತ್ತೆ ದಳದಲ್ಲಿ ಶಿಸ್ತಿನ ಸಿಪಾಯಿಯಂತೆ ಸೇವೆ ಸಲ್ಲಿಸಿರುವ ತುಂಗಾ (ಡಾಬರ್‌ಮನ್ ತಳಿಯ ಶ್ವಾನ), ಹತ್ತು ವರ್ಷಗಳಿಗೂ ಹೆಚ್ಚು ಕಾಲ ತನ್ನದೇ ಆದ ಸೇವೆ ಸಲ್ಲಿಸಿ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗುವ ಜೊತೆಗೆ … Read more

ಅಪರಾಧ ಪ್ರಕರಣ ಪತ್ತೆಯಲ್ಲಿ ನೆರವಾಗುತ್ತಿದ್ದ ‘ತುಂಗಾ’ಕ್ಕೆ ಜಿಲ್ಲಾ ಪೊಲೀಸ್ ನಿಂದ ಭಾವಪೂರ್ಣ ಶ್ರದ್ಧಾಂಜಲಿ

ಸುದ್ದಿ360 ದಾವಣಗೆರೆ, ಆ.26:  ಹಲವು ಅಪರಾಧ ಪ್ರಕರಣ ಪತ್ತೆಯಲ್ಲಿ ಪೊಲೀಸರಿಗೆ ನೆರವಾಗುವ ಮೂಲಕ ಪ್ರಮುಖ ಪಾತ್ರ ನಿರ್ವಹಿಸಿದ್ದ ಶ್ವಾನ ದಳದ ತುಂಗಾ ಇಂದು ವಿಧಿವಶವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತುಂಗಾ ನಿಧನಕ್ಕೆ ಜಿಲ್ಲಾ ಪೊಲೀಸ್ ನಲ್ಲಿ ದುಃಖ ಮಡುಗಟ್ಟಿದ್ದು, ಅಗಲಿದ ತುಂಗಾಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ದಾವಣಗೆರೆ ಜಿಲ್ಲಾ  ಅಪರಾಧ ವಿಭಾಗದಲ್ಲಿ ತುಂಗಾ ಶ್ವಾನವು ಇಲಾಖೆಗೆ ತನ್ನದೇ ಆದ ಅಮೂಲ್ಯ ಸೇವೆ ಸಲ್ಲಿಸಿತ್ತು.

error: Content is protected !!