ರಾಮನಗರ: ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಆತಂಕ

ಸುದ್ದಿ360 ರಾಮನಗರ, ಸೆ.10: ರಾಮನಗರ ತಾಲ್ಲೂಕಿನ ಹಲವಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಇಂದು ಸಂಜೆ 5:40 ಹಾಗೂ 7:15 ರ ಸುಮಾರಿಗೆ ಎರಡು ಬಾರಿ ಭೂ ಕಂಪನ ಉಂಟಾಗಿರುವುದು ಜನರ ಅನುಭವಕ್ಕೆ ಬಂದಿದೆ. ಎರಡು ಭಾರಿ ಕಂಪಿಸಿದ ಭೂಮಿ. ರಾಮನಗರ ತಾಲ್ಲೂಕಿನ ಬೆಜ್ಜರಹಳ್ಳಿ ಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಶಬ್ದ ಬಂದ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರ ಬಂದಿದ್ದಾರೆ. ಭೂಕಂಪಿಸಿದ ಅನುಭವವಾಗಿದ್ದು, ಜನರು ಭಯದಿಂದ ಮನೆಯಿಂದ ಹೊರಗಡೆ ಬಂದಿದ್ದಾರೆ. ಭಾರಿ ಪ್ರಮಾಣದಲ್ಲಿ ಭೂಮಿ.ಕಂಪಿಸಿದ ಅನುಭವವಾಗಿದ್ದು, ಬೆಳಗ್ಗೆ 5.30 ರ … Read more

ಮಡಿಕೇರಿಯಲ್ಲಿ ಭಾರೀ ಸದ್ದಿನೊಂದಿಗೆ ಭೂಕಂಪನದ ಅನುಭವ

ಸುದ್ದಿ360 ಮಡಿಕೇರಿ ಜು.2: ತಾಲೂಕಿನ ಪರಾಜೆ ಗ್ರಾಮದಲ್ಲಿ ಶನಿವಾರ ರಾತ್ರಿ 8.25ರ ಸುಮಾರಿಗೆ ಭೂಮಿಯಿಂದ ಭಾರೀ ಪ್ರಮಾಣದ ಶಬ್ಧ ಕೇಳಿ ಬಂದಿದ್ದು, ಗ್ರಾಮಸ್ಥರನ್ನು ಭಯಬೀತಗೊಳಿಸಿದೆ. ಭೂಕಂಪನದ ಭಯದಿಂದ ಮನೆಯೊಳಗಡೆ ಇದ್ದವರು ಹೊರಗೆ ಓಡಿ ಬಂದಿದ್ದಾರೆ. ಇಲ್ಲಿನ ಚೆಂಬು, ಸಂಜಾಜೆ, ಗೂನಡ್ಕ ಭಾಗಗಳಲ್ಲಿ ಈ ಶಬ್ಧ ಕೇಳಿ ಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಇದು ಭೂಕಂಪನ ಹೌದೋ ಇಲ್ಲೋ ಎಂದು ಇನ್ನು ಸ್ಪಷ್ಟಪಡಿಸಿಲ್ಲ.

ಕೆ.ಆರ್.ಪೇಟೆಯಲ್ಲಿ ಭೂಕಂಪ –ಆತಂಕಗೊಂಡ ಜನ

ಸುದ್ದಿ360 ಮಂಡ್ಯ ಜೂ.23:  ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಐಕನಹಳ್ಳಿ, ಮಾದಾಪುರ, ಚಿನ್ನೇನಹಳ್ಳಿ, ಗೊಂದಿಹಳ್ಳಿ, ಬಿದರಹಳ್ಳಿ, ಗೂಡೇಹೊಸಹಳ್ಳಿ ಗ್ರಾಮದ ಭಾಗಗಳಲ್ಲಿ ಇಂದು ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಸಾರ್ವಜನಿರು ಭಯಭೀತಗೊಂಡಿದ್ದು, ಆತಂಕಕ್ಕೊಳಗಾಗಿದ್ದಾರೆ. ಪಕ್ಕದ ಹಾಸನ, ಹೊಳೆನರಸೀಪುರ, ಅರಕಲಗೂಡು ತಾಲೂಕು ವ್ಯಾಪ್ತಿಯಲ್ಲಿಯೂ ಕೂಡ ಭೂಕಂಪದ ಅನುಭವವಾಗಿದೆ. ಇದೇ ವ್ಯಾಪ್ತಿಯಲ್ಲಿ ಬರುವ ಕೆ.ಆರ್.ಪೇಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ಮುಂಜಾನೆ 4.30 ರಿಂದ 5 ಗಂಟೆ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.  ಇದರಿಂದ ಆತಂಕಗೊಂಡ ಜನರು ಮನೆಯಿಂದ ಹೊರಗೆ ಓಡಿ  … Read more

error: Content is protected !!