ಪೋಷಕರನ್ನು ಬಾಲ್ಯದ ದಿನಕ್ಕೆ ಕರೆದೊಯ್ದ ದಾವಣಗೆರೆ ಪಿಬಿವಿ ವಿದ್ಯಾಲಯ

ಸುದ್ದಿ 360 ದಾವಣಗೆರೆ, ಜ.10: ದಿನಾ ಬೆಳಗೆದ್ದು ಮಕ್ಕಳ ಶಾಲೆಯ ಬ್ಯಾಗ್, ಲಂಚ್ ಬ್ಯಾಗ್, ನೀರು ಬಾಟಲ್, ಕರ್ಚಿಪ್, ಮಾಸ್ಕ್ ಹೀಗೆ ಮಕ್ಕಳನ್ನು ಶಾಲೆಗೆ ಸಜ್ಜುಗೊಳಿಸಿ ಶಾಲಾ ಆವರಣಕ್ಕೆ ತಲುಪಿಸಿ ಉಸ್ಸಪ್ಪ ಇವತ್ತಿನ ಅರ್ಧ ಕೆಲಸ ಮುಗೀತು ಎಂದು ನಿಟ್ಟುಸಿರು ಬಿಡುತ್ತಾ ಮನೆ ಕಡೆಗೆ ತೆರಳುತ್ತಿದ್ದ ಪೋಷಕರ ಈ ದಿನ ಕೊಂಚ ವಿಶೇಷವಾಗಿಯೇ ಇತ್ತು. ನಗರದ ದೇವರಾಜ ಅರಸು ಬಡಾವಣೆಯ ಬಿ ಬ್ಲಾಕ್ ನಲ್ಲಿರುವ ದೈವಜ್ಞ ವಿದ್ಯಾಸಂಸ್ಥೆ ಪಿಬಿವಿ ವಿದ್ಯಾಲಯದಲ್ಲಿ ಸೋಮವಾರ ಶಾಲಾ ವಿದ್ಯಾರ್ಥಿಗಳ ಪೋಷಕರಿಗಾಗಿ ಹಲವು … Read more

ಬಡ ಮಕ್ಕಳಿಗೆ ಪಿಯು, ಡಿಗ್ರಿ ಶಿಕ್ಷಣ ಉಚಿತ

ಪತ್ರಿಕಾ ವಿತರಕರು, ವಿತರಕರು ಮಕ್ಕಳು- ಪತ್ರಕರ್ತರ ಮಕ್ಕಳಿಗೂ ಉಚಿತ  ಪ್ರವೇಶ ಸುದ್ದಿ360 ಹುಬ್ಬಳ್ಳಿ, ಜು.04: ಧಾರವಾಡ ರಾಯಪುರ ದಲ್ಲಿರುವ ಡಾ. ಡಿ.ಜಿ. ಶೆಟ್ಟಿ ಎಜುಕೇಶನ್ ಸೊಸೈಟಿಯಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಡಿ ಜಿಎಂದು ಸಂಸ್ಥೆಯ ಅಧ್ಯಕ್ಷ ಡಾ.ಡಿ.ಜಿ.ಶೆಟ್ಟಿ ಹೇಳಿದರು. ಸೋಮವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2001 ರಲ್ಲಿ ಆರಂಭಗೊಂಡ ಸಂಸ್ಥೆ ಬಡ ಪ್ರತಿಭಾವಂತ ಅಷ್ಟೇ ಅಲ್ಲದೆ ಕಡಿಮೆ ಅಂಕಗಳನ್ನು ಪಡೆದು ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ … Read more

ಸರಕಾರಿ ಶಾಲಾ ಕಟ್ಟಡ ನೆಲಸಮ – ಲಕ್ಷಾಂತರ ರೂ. ಗುಳುಂ

ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಗ್ರಾಮಸ್ಥರ ಆಗ್ರಹ ಸುದ್ದಿ360 ದಾವಣಗೆರೆ.ಜು.04: ಇಲಾಖೆ ಗಮನಕ್ಕೆ ತಾರದೆ ಸರಕಾರಿ ಶಾಲೆಯ ಹಳೆಕಟ್ಟಡ ನೆಲಸಮಗೊಳಿಸಿ, ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಹಿಂದಿನ ಮುಖ್ಯ ಶಿಕ್ಷಕ ಹಾಗೂ ಗ್ರಾಪಂ ಸದಸ್ಯರು ಮಾರಿಕೊಂಡಿರುವುದಾಗಿ ತಾಲೂಕಿನ ಲೋಕಿಕೆರೆ ಗ್ರಾಮಸ್ಥರು ಆರೋಪಿಸಿದರು. ಈ ಕುರಿತು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗ್ರಾಮದ ನಿವಾಸಿ ಪುರಂದರ ಲೋಕಿಕೆರೆ ಮಾತನಾಡಿ, ಗ್ರಾಮದಲ್ಲಿನ ಶ್ರೀ ಮಾರುತಿ ಸರಕಾರಿ ಪ್ರೌಢಶಾಲೆಯ ಹಳೆಯ ಕಟ್ಟಡವನ್ನು ಶಿಕ್ಷಣ ಇಲಾಖೆ ಗಮನಕ್ಕೆ ತಾರದೇ ನೆಲಸಮಗೊಳಿಸಲಾಗಿದೆ. ಮತ್ತು ಅದರಲ್ಲಿದ್ದ … Read more

ದೇಶ-ನಾಡು ಕಟ್ಟಿದವರ ಗೌರವ ಕಾಪಾಡಲು ಸಿದ್ದ: ಮುಖ್ಯಮಂತ್ರಿ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಜೂ.19:  ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸ್ವಾಮೀಜಿ ಗಳು ನೀಡಿರುವ ಮನವಿಯನ್ನು ತರಿಸಿಕೊಂಡು ಏನೆಲ್ಲಾ ಬದಲಾವಣೆ ಮಾಡಬೇಕೋ ಅದನ್ನು ಮುಕ್ತ ಮನಸ್ಸಿನಿಂದ ಕೈಗೊಳ್ಳಲಾಗುವುದು. ಇದನ್ನು ಪ್ರತಿಷ್ಠೆ ಎಂದು ಪರಿಗಣಿಸಿಲ್ಲ. ಪಠ್ಯದ ಕುರಿತು ಆಕ್ಷೇಪವಿದ್ದರೆ, ಅದನ್ನು ನಿವಾರಿಸಲು ಸಿದ್ಧರಿದ್ದೇವೆ. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಭಾರತ ಹಾಗೂ ಕರ್ನಾಟಕ ಕಟ್ಟಲು ಶ್ರಮಿಸಿರುವ ಹಿರಿಯರು, ರಾಜಮಹಾರಾಜರು, ಸಾಹಿತಿಗಳು, ಕಲಾಕಾರರು, ಜ್ಞಾನಪೀಠ ವಿಜೇತರ ಬಗ್ಗೆ ಅಪಾರ ಗೌರವವಿದೆ. ಯಾವುದೇ … Read more

ಪಠ್ಯಪುಸ್ತಕ ಸಲಹೆಗೆ ಸರ್ಕಾರ ಮುಕ್ತವಾಗಿದೆ: ಸಿಎಂ ಬೊಮ್ಮಾಯಿ

ಸುದ್ದಿ360 ದಾವಣಗೆರೆ ಜೂ.16: ಈ ಹಿಂದಿನ ಪಠ್ಯಪುಸ್ತಕದ ಬಗ್ಗೆಯೂ ಆಕ್ಷೇಪಣೆಗಳಿವೆ.  ಯಾವುದನ್ನು ಸರಿಪಡಿಸಬೇಕು ಎಂಬುದರ ಬಗ್ಗೆ ಸಲಹೆಗೆ ಮುಕ್ತ ಅವಕಾಶವಿದೆ. ರಾಜ್ಯದ ಜನರ ಸಲಹೆ ಸೂಚನೆ ಪಡೆದು ವೆಬ್ ಸೈಟ್ ನಲ್ಲಿ ಹಾಕಲಾಗುವುದು. ಒಟ್ಟಾರೆ ಎಲ್ಲಾ ಆಕ್ಷೇಪಣೆಗಳಿಗೆ ಸಲಹೆ ಪಡೆದ ನಂತರ ಪಠ್ಯ ಪರಿಷ್ಕರಣೆ ಅಂತಿಮ ರೂಪ ಪಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಪ್ಪಳ್ಳಿಯಿಂದ ಬೆಂಗಳೂರಿಗೆ ಪ್ರಗತಿಪರರು ಪಾದಯಾತ್ರೆ ಮಾಡುತ್ತಿರುವ  ಕುರಿತ ಮಾಧ್ಯಮದವರ ಪ್ರಶ್ನೆಗೆ … Read more

error: Content is protected !!