ದೂಡಾ ಧಾರಾವಾಹಿ ನೋಡಿ ಸಾಕಾಗಿದೆ – ಎಕರೆಗೆ ಐದು ಕೋಟಿ ಕೊಟ್ಟರೂ ನಾವು ಜಮೀನು ಕೊಡೊಲ್ಲ

ಸುದ್ದಿ360 ದಾವಣಗೆರೆ, ಸೆ.17: ಕುಂದುವಾಡ ಲೇಔಟ್‌ಗೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ಲೇಔಟ್ ನಿರ್ಮಿಸಿ ಹಣ ನೀಡುವುದಾಗಿ ಹೇಳಿದ್ದ ದೂಡಾ ಮೂರು ವರ್ಷಗಳಿಂದ ರೈತರಿಗೆ ಮೆಘಾ ಧಾರಾವಾಹಿ ತೋರಿಸುತ್ತಿದೆ. ಇದರಿಂದ ನಾವು ರೋಸಿ ಹೋಗಿದ್ದೇವೆ. ಇನ್ನು ಎಕರೆಗೆ 5 ಕೋಟಿ ರೂ. ಕೊಡುತ್ತೇವೆ ಎಂದರೂ ನಮ್ಮ ಕೃಷಿ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಹಳೇಕುಂದುವಾಡ ರೈತರು ಹೇಳಿದ್ದಾರೆ. ಜಿಲ್ಲಾ ವರದಿಗಾರರ ಕೂಟದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ರೈತ ಎನ್. ಮಲ್ಲಿಕಾರ್ಜುನ್, ಭೂಮಿ ಖರೀದಿಸುವುದಾಗಿ ಇಷ್ಟು ದಿನಗಳ ಕಾಲ … Read more

ಇ-ಕೆವೈಸಿಗೆ 31 ಕಡೆಯ ದಿನ

ಸುದ್ದಿ360 ದಾವಣಗೆರೆ ಜು.25: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುವ ಧನ ಸಹಾಯ ಪಡೆಯಲು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಜು.31 ಕಡೆಯ ದಿನವಾಗಿದೆ. ಜಿಲ್ಲೆಯ 1.51 ಲಕ್ಷ ರೈತರು ಯೋಜನೆ ಅಡಿ ಆರ್ಥಿಕ ನೆರವು ಪಡೆಯುತ್ತಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಯೋಜನೆಯ ಫಲ ನೈಜ ಫಲಾನುಭವಿಗಳ ತಲುಪುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಫಲಾನುಭವಿಗಳು http://pmkisan.gov.in ವೆಬ್ ಪೋರ್ಟಲ್‌ಗೆ ಭೇಟಿ ನೀಡಿ ಫಾರ್ಮರ್ ಕಾರ್ನರ್‌ನಲ್ಲಿ … Read more

ಗೊಲ್ಲರಹಳ್ಳಿಯಲ್ಲಿ ಸಂಭ್ರಮದ ಅಜ್ಜಿ ಹಬ್ಬ

ಸುದ್ದಿ360, ದಾವಣಗೆರೆ, ಜು.16: ಜಿಲ್ಲೆಯಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಣಜಿ ಬಳಿಯ ಗೊಲ್ಲರಹಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ಅಜ್ಜಿ ಹಬ್ಬವನ್ನು ಆಚರಿಸಲಾಯಿತು. ಎಂದಿನಂತೆ ಆಷಾಢ ಮಾಸದ ಕೊನೆಯ ಶುಕ್ರವಾರದಂದು ಈ ಹಬ್ಬ ಆಚರಿಸಲಾಯಿತು. ಅಜ್ಜಿಹಬ್ಬ ಬಂತೆಂದರೆ, ರೈತರ ಮೊಗದಲ್ಲಿ ಒಂದು ರೀತಿಯ ಮಂದಹಾಸ. ಈ ಹಬ್ಬ ಬರುವುದರೊಳಗೆ ರೈತರು ತಮ್ಮ ಬಿತ್ತನೆ ಕಾರ್ಯಗಳನ್ನು ಮುಗಿಸಿ, ಬೆಳೆಗಳು ಸಮೃದ್ಧವಾಗಿ ಬರಲೆಂದು ದೇವಿಯನ್ನು ಆರಾಧಿಸುತ್ತಾರೆ. ಮನೆಗಳಲ್ಲಿನ ದನ-ಕರುಗಳು ಚೆನ್ನಾಗಿರಲಿ, ರೈತರ ಆರೋಗ್ಯ ವೃದ್ಧಿಯಾಗಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಲೆಂದು ಹಾಗೂ ಸಣ್ಣ ಮಕ್ಕಳ … Read more

ಹಂದಿ ಹಾವಳಿ ತಡೆಗೆ ರೈತರ ಆಗ್ರಹ

ಸುದ್ದಿ360, ದಾವಣಗೆರೆ, ಜು.12: ನಗರದ ಹೊರವಲಯದ ಗ್ರಾಮಗಳಲ್ಲಿ ಭತ್ತದ ಸಸಿ ಮಡಿ ಮತ್ತಿತರ ಬೆಳೆಗಳ ಮೇಲೆ ಹಂದಿಗಳು ದಾಳಿ ಮಾಡಿ ಹಾನಿ ಮಾಡುತ್ತಿರುವುದನ್ನು ತಡೆಯುವಂತೆ ಆಗ್ರಹಿಸಿ ಅಖಿಲ ಭಾರತ ಹಿಸಾನ್ ಸಭಾ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ರೈತರು, ದೊಡ್ಡ ಬೂದಿಹಾಳ್, ಚಿಕ್ಕ ಬೂದಿಹಾಳ್ ಹಾಗೂ ಯರಗುಂಟೆ ಗ್ರಾಮಗಳಲ್ಲಿ ರೈತರ ವಿವಿಧ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವ ಹಂದಿಗಳ ಕಾಟ ತಡೆಯುವಂತೆ ಆಗ್ರಹಿಸಿದರು. ಈ … Read more

ಭದ್ರಾ ಜಲಾಶಯ: ಜು.10ರ ರಾತ್ರಿಯಿಂದ ಕಾಲುವೆಗಳಿಗೆ ನೀರು ಬಿಡುಗಡೆ

ಸುದ್ದಿ360, ಶಿವಮೊಗ್ಗ, ಜು.9:  ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ನಾಳೆ (ಜು. 10) ರಾತ್ರಿಯಿಂದಲೇ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯೂಸೆಕ್ ನೀರು ಹರಿಸಲು ಕಾಡಾ ತೀರ್ಮಾನಿಸಿದೆ. ಉತ್ತಮ ಮಳೆಯಾದ ಹಿನ್ನೆಲೆ ಭದ್ರಾ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಂದಿನ (ಜು.09) ನೀರಿನ ಮಟ್ಟ 168.8 ತಲುಪಿದೆ. ಹೀಗಾಗಿ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯುಸೆಕ್ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾ ಕಾಡಾ … Read more

ರೈತರಿಗೆ ಪಶುಸಂಗೋಪನಾ ತರಬೇತಿ

ಸುದ್ದಿ360 ದಾವಣಗೆರೆ.ಜು.04: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ದಾವಣಗೆರೆ ಪಿ.ಬಿ. ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಜುಲೈ ಮಾಹೆಯಲ್ಲಿ ರೈತರಿಗೆ ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜು.07 ಮತ್ತು 08 ರಂದು 25 ಜನರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್, ಎರಡು ಪಾಸ್ … Read more

ಸಾಲ ಮರುಪಾವತಿಯಲ್ಲಿ ರೈತರೇ ಮಾದರಿ – ಡಿಸಿಸಿಯಿಂದ ಸಕ್ಕರೆ ಕಾರ್ಖಾನೆಗಳಿಗೆ ಸಾಲ ಇಲ್ಲ

ದಾವಣಗೆರೆಯಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ಸುದ್ದಿ360 ದಾವಣಗೆರೆ, ಜೂನ್ 28: ರಾಜ್ಯ ಸಹಕಾರ ಸಂಘ ಹಾಗೂ ಡಿಸಿಸಿ ಬ್ಯಾಂಕುಗಳಿಂದ ಸಾಲ ಪಡೆದ ಒಟ್ಟು ರೈತರಲ್ಲಿ ಶೇ.97 ಮಂದಿ ಸಕಾಲಕ್ಕೆ ಮರು ಪಾವತಿ ಮಾಡಿ ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಶೂನ್ಯ ಬಡ್ಡಿ ಸಾಲ ಮೊತ್ತ ಹೆಚ್ಚಿಸುವ ಚಿಂತನೆ ನಡೆಯುತ್ತಿದೆ ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೊಮಶೇಖರ್ ಹೇಳಿದರು. ನಗರದ ತ್ರಿಶೂಲ್ ಕಲಾಭವನದಲ್ಲಿ ಇಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಮ್ಮಿಕೊಂಡಿದ್ದ … Read more

ರೈತರಿಗೆ ಸಿಬಿಲ್ ಸ್ಕೋರ್ ಪರಿಶೀಲನೆ ಬೇಡ: ಸಂಸದ ಜಿ.ಎಂ. ಸಿದ್ದೇಶ್ವರ

ಸುದ್ದಿ360 ದಾವಣಗೆರೆ, ಜೂನ್ 28: 3 ಲಕ್ಷ ರೂ. ಮೇಲ್ಪಟ್ಟು ಸಾಲ ಪಡೆಯುವ ರೈತರಿಗೂ ಸಿಬಿಲ್ ಸ್ಕೋರ್ ಪರಿಶೀಲನೆ ಕಡ್ಡಾಯ ಎಂಬ ಸರಕಾರದ ಆದೇಶದಿಂದ ಬಹಳಷ್ಟು ರೈತರಿಗೆ ತೊಂದರೆಯಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ಅವರು ನಗರದ ತ್ರಿಶೂಲ್ ಕಲಾಭವನದಲ್ಲಿ ಇಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸರಕಾರದ ಈ ನೀತಿಯಿಂದ ರೈತರು ಸಾಲ ಪಡೆಯಲು ಸಾಧ್ಯವಾಗದೆ, ಬಹಳಷು ಕೃಷಿಕರು ಸರಕಾರದ ಸಾಲ ಸೌಲಭ್ಯದಿಂದ ವಂಚಿತರಾಗುತ್ತಾರೆ. ಆದಕಾರಣ ಕೇಂದ್ರ … Read more

ಹೆಲಿಕಾಪ್ಟರ್ ಖರೀದಿಗೆ ಬ್ಯಾಂಕ್‍ ಮೊರೆ ಹೋದ ರೈತ!

ಸುದ್ದಿ 360 ಔರಂಗಾಬಾದ್‌ ಜೂ.21:  ಕೃಷಿಯಲ್ಲಿ ಲಾಭವಿಲ್ಲ ಎಂದೆಣಿಸಿದ ಯುವ ರೈತನ ತಲೆಯಲ್ಲಿ ಹೊಸದೊಂದು ಆಲೋಚನೆ ಮೂಡಿದೆ. ಇದನ್ನು ಕಾರ್ಯಗತಗೊಳಿಸಲು ಹೆಲೆಕಾಪ್ಟರ್‍ ಖರೀದಿಗೆ ಮುಂದಾಗಿದ್ದಾನೆ. ಹೀಗೆ ಹೆಲಿಕಾಪ್ಟರ್‍ ಖರೀದಿಗೆ ಮುಂದಾಗಿರುವ ಮಹಾರಾಷ್ಟ್ರದ ಹಿಂಗೋಲಿಯ ತಕ್ಕೋಡಾ ಗ್ರಾಮದ ಕೈಲಾಸ್‌’ ಪತಂಗೆ (22) ಇದಕ್ಕಾಗಿ 6.6 ಕೋಟಿ ರೂ. ಸಾಲ ನೀಡುವಂತೆ  ಗೋರೆಗಾಂವ್‌ನ ಬ್ಯಾಂಕ್‌ಗೆ ತೆರಳಿ ಗುರುವಾರ ಸಾಲ ಕೇಳಿಬಂದಿದ್ದಾನೆ. ರೈತ ಹೆಲಿಕಾಪ್ಟರ್‍ ತಗೊಂಡು ಏನು ಮಾಡ್ತಾನೆ ಅಂತೀರಾ ? ಹೆಲಿಕಾಪ್ಟರ್ ಪಡೆದು ಅದನ್ನು ಬಾಡಿಗೆಗೆ ನೀಡಿ ನೆಮ್ಮದಿಯ ಜೀವನ … Read more

error: Content is protected !!