ಹಾರಂಗಿ: ಸಂಗೀತ ಕಾರಂಜಿ ವೇಳೆ ಕಾಡಾನೆ ಪ್ರತ್ಯಕ್ಷ – ಪ್ರವಾಸಿಗರು ದಿಕ್ಕಾಪಾಲು
ಸುದ್ದಿ360 ಮಡಿಕೇರಿ, ಜು.23: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹಾರಂಗಿ ಉದ್ಯಾನವನದಲ್ಲಿ ಕಾಡಾನೆ ಕಾಣಿಸಿಕೊಂಡ ಪರಿಣಾಮ ಪ್ರವಾಸಿಗರು ದಿಕ್ಕಾಪಾಲಾಗಿ ಓಡಿ ಹೋದ ಘಟನೆ ಶನಿವಾರ ಸಂಜೆ ನಡೆದಿದೆ. ಉದ್ಯಾನವನದಲ್ಲಿ ಸಂಗೀತ ಕಾರಂಜಿ ನಡೆಯುವ ವೇಳೆ ಈ ಕಾಡಾನೆ ಪ್ರವೇಶಿಸಿದೆ. ಹಾರಂಗಿ ಅಣೆಕಟ್ಟೆಗೆ ಹೊಂದಿಕೊಂಡಂತೆ ಇರುವ ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಉದ್ಯಾನವನ ಪ್ರವೇಶಿಸಿದ ಕಾಡಾನೆ ಪ್ರವಾಸಿಗರನ್ನು ಭಯಭೀತಗೊಳಿಸಿದೆ. ಜಲಾಶಯದ ಭದ್ರತಾಪಡೆಯ ಸಿಬ್ಬಂದಿಗಳು ಪ್ರವಾಸಿಗರನ್ನು ಸುರಕ್ಷಿತವಾಗಿ ಉದ್ಯಾನವನದಿಂದ ಹೊರ ಕಳುಹಿಸಿದ್ದಾರೆ. ನಂತರ ಹಾರಂಗಿ ಗ್ರಾಮದ ಕಿರು ಸೇತುವೆಯ ಬಳಿಯ … Read more