ಭೀಕರ ಅಪಘಾತ: ಬಾಲಕ ಸೇರಿ 7 ಮಂದಿ ದುರ್ಮರಣ

ಸುದ್ದಿ360, ಹೊಸಪೇಟೆ (hospet) ಅ.09: ಎರಡು ಮೈನಿಂಗ್ ಟಿಪ್ಪರ್ ಲಾರಿಗಳು ಮತ್ತು ಕ್ರ್ಯೂಸರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ (accident) 7 ಜನರ ದುರ್ಮಣ ಹೊಂದಿದ್ದಾರೆ. ಹೊಸಪೇಟೆ ನಗರದ ಹೊರವಲಯದ ಟನಲ್ ಬಳಿ ಈ ಅಪಘಾತ ಸಂಭವಿಸಿದ್ದು, ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್‍ನಲ್ಲಿದ್ದ 7 ಜನರು ಮೃತಪಟ್ಟಿದ್ದು, ವಾಹನದಲ್ಲಿ ಸಿಲುಕಿರುವ ಶವಗಳನ್ನು ಹೊರ ತೆಗೆಯಲು ಪೊಲೀಸರ ಹರಸಾಹಸಪಟ್ಟಿದ್ದಾರೆ. ಕ್ರೂಸರ್‍ನಲ್ಲಿದ್ದವರು ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ದುರ್ಘಟನೆ ನಡೆದಿದೆ‌. ಕ್ರ್ಯೂಸರ್ … Read more

ಮಾಜಿ ಪ್ರೇಯಸಿಯ ರುಂಡ ಕಡಿದು ಪೊಲೀಸರಿಗೆ ಶರಣಾದ ಪಾಗಲ್ ಪ್ರೇಮಿ

ಸುದ್ದಿ360, ವಿಜಯನಗರ (ಹೊಸಪೇಟೆ): ಇಲ್ಲೊಬ್ಬ ಪಾಗಲ್ ಪ್ರೇಮಿ ಮಾಜಿ ಪ್ರೇಯಸಿಯ ರುಂಡ ಕಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ಗುರುವಾರ ನಡೆದಿದೆ. ನಿರ್ಮಲಾ( 23 ) ಭೀಕರವಾಗಿ ಹತ್ಯೆಯಾದ ಯುವತಿ ಎಂದು ಗುರುತಿಸಲಾಗಿದೆ. ಬಿಎಸ್ಸಿ ನರ್ಸಿಂಗ್ ವಿಧ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದಳು.  ಬೋಜರಾಜ ಎನ್ನುವ ಪಾಗಲ್ ಪ್ರೇಮಿ ಇಂತಹ ದುಷ್ಕೃತ್ಯ ನಡೆಸಿದ್ದಾನೆ.  ಈ ಮೊದಲು ನಿರ್ಮಲಾಳನ್ನು ತನಗೆ ಮದುವೆ ಮಾಡಿಕೊಂಡುವಂತೆ ಯುವತಿಯ ಮನೆಯವರನ್ನು ಕೇಳಿದ್ದು, … Read more

ಜಲಾಶಯದಿಂದ 1.3 ಲಕ್ಷ ಕ್ಯೂಸೆಕ್ ನೀರು ನದಿಗೆ – ಹಂಪಿ ಸ್ಮಾರಕಗಳು ಜಲಾವೃತ

ಸುದ್ದಿ360, ವಿಜಯನಗರ ಜು.13: ಹೊಸಪೇಟೆ ತುಂಗಭದ್ರ ಜಲಾಶಯ ಭರ್ತಿಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಜಲಾಶಯದಿಂದ 30 ಕ್ರಸ್ಟ್ ಗೇಟ್ ಗಳ ಮೂಲಕ 103174 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಅಪಾರ ಪ್ರಮಾಣದ ನೀರು ನದಿಗೆ ಹರಿದು ಬಂದ ಪರಿಣಾಮ ಐತಿಹಾಸಿಕ ಹಂಪಿಯ ಸ್ಮಾರಕಗಳು ಜಲಾವೃತಗೊಂಡಿವೆ. ನದಿ ಪಾತ್ರದಲ್ಲಿರುವ ವಿಶ್ವವಿಖ್ಯಾತ ಹಂಪಿಯ ವಿಜಯನಗರ ಕಾಲದ ಸೇತುವೆ, ಪುರಂದರ ಮಂಟಪ, ರಾಮಲಕ್ಷ್ಮಣ ದೇವಸ್ಥಾನ, ಚಕ್ರತೀರ್ಥ ಸ್ನಾನಘಟ್ಟ ಜಲಾವೃತಗೊಂಡಿದ್ದು, ಪ್ರವಾಸಿಗರು ಅತ್ತ ಹೋಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಲಾಶಯದಿಂದ ಸಧ್ಯ … Read more

ಬಸ್ – ಲಾರಿ ಮುಖಾಮುಖಿ ಡಿಕ್ಕಿ, 25 ಜನರಿಗೆ ಗಾಯ

ಸುದ್ದಿ 360, ವಿಜಯನಗರ,ಜೂ16: ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಹೊಸಪೇಟೆ ತಾಲೂಕಿನ ಕೊಟಗಿನಾಳ ಗ್ರಾಮದ ಸಮೀಪ ಗುರುವಾರ ಬೆಳಗ್ಗೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ 25 ಜನರು ಗಾಯಗೊಂಡಿದ್ದಾರೆ. ಹೊಸಪೇಟೆಯಿಂದ ಬಳ್ಳಾರಿ ಕಡೆ ಚಲಿಸುತ್ತಿದ್ದ ಸರಕಾರಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಲಾರಿ ಚಾಲಕನ ನಿರ್ಲಕ್ಷ್ಯತನ ಅಪಘಾತಕ್ಕೆ ಕಾರಣ ಎನ್ನಲಾಗಿದೆ‌.  ಅಪಘಾತದಿಂದ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಗೊಂಡ ಕೆಲವರನ್ನ ಕೂಡಲೇ ಹೊಸಪೇಟೆಯ ತಾಲೂಕು ಆಸ್ಪ್ರತ್ರೆಯಲ್ಲಿ ದಾಖಲಿಸಲಾಗಿದೆ.. ಗಾಯಗೊಂಡವರಲ್ಲಿ ಬಹುತೇಕರು … Read more

error: Content is protected !!