ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಸಂಪನ್ನ
ಸುದ್ದಿ360, ದಾವಣಗೆರೆ, ಜು.10: ಸಾವಿರಾರು ಭಕ್ತಗಣದ ಸಮ್ಮುಖದಲ್ಲಿ ಶ್ರೀ ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನಗರದ ತ್ರಿಶೂಲ್ ಕಲಾಭವನದಲ್ಲಿ ಭಾನುವಾರ ಸಾಂಗವಾಗಿ ನೆರವೇರಿತು. ನೆರೆದ ಭಕ್ತಗಣ ಶ್ರೀಗಳು ನೆರವೇರಿಸಿದ ಮಹಾಪೂಜೆಯಲ್ಲಿ ಭಕ್ತಪರವಶರಾಗಿ ದೈವಾನುಗ್ರಹಕ್ಕೆ ಪಾತ್ರರಾದರು. ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಬೆಳಗ್ಗೆ 9 ಗಂಟೆಗೆ ಆರಂಭವಾದ ಇಷ್ಟಲಿಂಗ ಮಹಾಪೂಜೆ ಮಧ್ಯಾಹ್ನ 1.30ರ ಸುಮಾರಿಗೆ ಸಂಪನ್ನಗೊಂಡಿತು. ಇಷ್ಟಲಿಂಗ ಪೂಜೆಯ ನಂತರ … Read more