ಪ್ರಶ್ನೆ ಪತ್ರಿಕೆಗಾಗಿ ಕಾದು ಕುಳಿತಿರುವ ಮತದಾರ – ಕೊಡುಗೈ ಬಿಕ್ಷುಕರ ಭರಪೂರ ಪ್ರಚಾರ

– ಕೂಡ್ಲಿ ಸೋಮಶೇಖರ್ ಚುನಾವಣೆ ಎಂದ ಮೇಲೆ ಇಲ್ಲಿ ಪಕ್ಷಗಳ ಹೈಕಮಾಂಡ್ನಿಂದ ಹಿಡಿದು ಸಾಮಾನ್ಯ ಕಾರ್ಯಕರ್ತನ ವರೆಗೆ ಮತ್ತು ಹಿರಿಯ ನಾಗರೀಕರಿಂದ ಹಿಡಿದು ಈಗಷ್ಟೇ ಮತದಾನಕ್ಕೆ ಅರ್ಹತೆ ಪಡೆದ ಯುವಪೀಳಿಗೆ ವಿವಿಧ ಬಗೆಗಳಲ್ಲಿ ಚುನಾವಣಾ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಮತದಾನ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಮತ್ತು ಕರ್ತವ್ಯವಾಗಿದ್ದರೂ ಸಹ ಸಾಕಷ್ಟು ಮಂದಿ ಮತದಾನದಿಂದ ದೂರವೇ ಉಳಿಯುವುದು ವಿಪರ್ಯಾಸ. ಚುನಾವಣಾ ಆಯೋಗ ಮತದಾನದ ಕುರಿತು ಜಾಗೃತಿ ಮೂಡಿಸುವಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಮತಯಾಚನೆಗೆ ಬರುವ … Read more

ಸಿದ್ದರಾಮಯ್ಯ ಹರಕೆಯ ಕುರಿಯಾಗಲಿದ್ದಾರೆ: ಎಚ್.ಡಿ.ಕೆ

ಸುದ್ದಿ360 ಕಲಬುರಗಿ ಜ.13: ಸಿದ್ಧರಾಮಯ್ಯನವರನ್ನು ಕೋಲಾರದಲ್ಲಿ ಕಣಕ್ಕಿಳಿಸುವ ಮೂಲಕ ಅವರ ಪಕ್ಷದವರೇ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಶುಕ್ರವಾರ ಅವರು ಜಿಲ್ಲೆಯ ಕಡಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ಧರಾಮಯ್ಯರಿಗೆ  ಕೋಲಾರ ಕ್ಷೇತ್ರ ಸೇಫ್ ಅಲ್ಲ. ಅವರಿಗೆ ಅಲ್ಲಿ  ನಿಲ್ಲುವಂತೆ ಯಾರು ಒತ್ತಡ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಸ್ವತಃ ಕೋಲಾರದಲ್ಲಿ ಸುತ್ತಾಡಿ, ಅಲ್ಲಿಯ ಜನರ ಭಾವನೆ ಅರಿತುಕೊಂಡಿದ್ದೇನೆ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಲಿ ಅಥವಾ ನಾಯಕರಿಗಾಗಲಿ ಮತ ಪಡೆಯುವ ಶಕ್ತಿ … Read more

ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಕುಮಾರಣ್ಣ ತಿರುಗೇಟು

ಸುದ್ದಿ360 ಬೀದರ್ ಜ.6: ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಕುಮಾರಣ್ಣ ಇಂದು ಬೀದರ್ನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಒಂದು ವೀಡಿಯೋ ಕ್ಲಿಪ್ ಇಲ್ಲಿದೆ.

ಅರ್ಹರ ಮುಡಿ ಏರಿದ ಎಚ್‌ ಡಿ ದೇವೇಗೌಡ ಪ್ರಶಸ್ತಿ: ಮಾಜಿ ಸಚಿವ ಬಂಡೆಪ್ಪ ಕಾಶಂಪುರ್

ಸುದ್ದಿ360 ದಾವಣಗೆರೆ, ಆ.07:  ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರಿನಲ್ಲಿ ಅರ್ಹ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಷಯ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಹೇಳಿದರು. ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಇಂದು ಶ್ರೀ ಎಚ್.ಡಿ. ದೇವೇಗೌಡ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ‘ಎಚ್.ಡಿ. ದೇವೇಗೌಡ ಪ್ರಶಸ್ತಿ ಪ್ರದಾನ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಪ್ರಶಸ್ತಿಗೆ ಆಯ್ಕೆಯಾಗಿರುವ ಜನಪದ ಕ್ಷೇತ್ರದ ಶ್ರೇಷ್ಠ ಸಾಧಕ ಸಿದ್ಧನಮಠದ ಯುಗಧರ್ಮ ರಾಮಣ್ಣ, ಕೋವಿಡ್ ಸಂದರ್ಭದಲ್ಲಿ ಜನ ಮೆಚ್ಚುವಂತೆ ಸೇವೆ ಸಲ್ಲಿಸಿದ ದಾವಣಗೆರೆ ಜಿಲ್ಲಾ … Read more

ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಹುಮಾತದೊಂದಿಗೆ ಗೆಲುವು ನಿಶ್ಚಿತ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360, ಬೆಂಗಳೂರು, ಜು.18: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಆಯ್ಕೆಯನ್ನು ಹಲವಾರು ಪಕ್ಷಗಳು ಬೆಂಬಲಿಸಿರುವುದರಿಂದ 2/3  ಬಹುಮತದೊಂದಿಗೆ ಗೆಲ್ಲುವುದು ನಿಶ್ಚಿತ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಷ್ಟ್ರಪತಿ ಚುನಾವಣೆಯಲ್ಲಿ ಇದ್ದ ಹಿಂದಿನ  ದಾಖಲೆಯನ್ನ ಮುರಿಯುವ ಎಲ್ಲಾ ಸಾಧ್ಯತೆಗಳಿವೆ.  ದ್ರೌಪದಿ ಮುರ್ಮು ಅವರು ಮಾನವೀಯ ಗುಣಗಳನ್ನು ಹೊಂದಿದ್ದು, ಅತ್ಯುನ್ನತ ಸ್ಥಾನ ಕ್ಕೇರುವುದು ಭಾರತದ ಪ್ರಜಾಪ್ರಭುತ್ವ ಹಾಗೂ ಭವಿಷ್ಯಕ್ಕೆ ಒಳ್ಳೆಯದಾಗಲಿದೆ ಎಂಬ ನಿರೀಕ್ಷೆ ನಮ್ಮದು ಎಂದರು. ದೇಶಾದ್ಯಂತ ರಾಷ್ಟ್ರಪತಿ … Read more

ಭ್ರಷ್ಟ ರಾಜಕಾರಣ ಕೊನೆಗಾಣಿಸಲು ಜನಚೈತನ್ಯ ಯಾತ್ರೆ : ಕೆ ಆರ್ ಎಸ್ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ

ಸುದ್ದಿ360, ದಾವಣಗೆರೆ, ಜು.16: ಕೆಆರ್ ಎಸ್ ಪಕ್ಷದಿಂದ ಎರಡನೇ ಹಂತದ ಜನ ಚೈತನ್ಯ ಯಾತ್ರೆ ಜು.15 ರಂದು ಚಿತ್ರದುರ್ಗ ಜಿಲ್ಲೆಯಿಂದ ಆರಂಭವಾಗಿದ್ದು, ಜುಲೈ ಅಂತ್ಯದವರೆಗೆ 16ಜಿಲ್ಲೆಗಳಲ್ಲಿ ಸಂಚರಿಸಿ, ಭ್ರಷ್ಟ, ಹಾಗೂ ಪರಮನೀಚ ರಾಜಕಾರಣ ಕೊನೆಗಾಣಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪಕ್ಷ ಹಮ್ಮಿಕೊಂಡಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಚೈತನ್ಯ ಯಾತ್ರೆಯ ಅಂಗವಾಗಿ ಇಂದು ದಾವಣಗೆರೆಯಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯಾತ್ರೆಯುದ್ದಕ್ಕೂ ಬಹಿರಂಗ ಸಭೆಗಳು, ಪತ್ರಿಕಾಗೋಷ್ಠಿಗಳು, … Read more

ಶಾಲಾಮಕ್ಕಳಿಗೆ ಶೂ, ಸಾಕ್ಸ್  ಹಂಚಿಕೆಗೆ 132 ಕೋಟಿ ರೂ.ಗಳ ಅನುಮೋದನೆ: ಸಿಎಂ

ಸುದ್ದಿ360, ಬೆಂಗಳೂರು, ಜು. 08: ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್  ಹಂಚಿಕೆಗೆ 132 ಕೋಟಿ ರೂ.ಗಳನ್ನು ಒದಗಿಸಿ ಅನುಮೋದನೆ ನೀಡಲಾಗಿದೆ ಎಂದು  ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಮವಸ್ತ್ರದ ವಿಚಾರದಲ್ಲಿ ಸರ್ಕಾರ ಈಗಾಗಲೇ ಸಮವಸ್ತ್ರಕ್ಕೆ ಅನುಮೋದನೆ ನೀಡಿದೆ. ಸಮವಸ್ತ್ರ ತಯಾರಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ನಂತರ ವಿತರಣೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದರು. ಆಗ ಭಿಕ್ಷೆ ಬೇಡಿರುವ ಹಣ ಎಲ್ಲಿ? ಕೆಪಿಸಿಸಿ ಅಧ್ಯಕ್ಷ  … Read more

ಜಿಲ್ಲಾ ಸರ್ವೇಕ್ಷಣಾಕಾರಿ ರಾಘವನ್‌ಗೆ ಎಚ್‌ಡಿಡಿ ಪ್ರಶಸ್ತಿ

ಸುದ್ದಿ360 ದಾವಣಗೆರೆ, ಜೂ.23: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಡಿನ ಗಣ್ಯರಿಗೆ ನೀಡುವ 2022ನೇ ಸಾಲಿನ ಎಚ್.ಡಿ. ದೇವೇಗೌಡ ಪ್ರಶಸ್ತಿಗೆ ಜಿಲ್ಲಾ ಸರ್ವೇಕ್ಷಣಾಕಾರಿ ಡಿ.ಜಿ. ರಾಘವನ್ ಭಾಜನರಾಗಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಎಚ್.ಡಿ. ದೇವೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ  ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಘವನ್ ಅವರೊಂದಿಗೆ 2020ನೇ ಸಾಲಿನ ಪ್ರಶಸ್ತಿಗೆ ಆಂಧ್ರಪ್ರದೇಶ ಮೂಲದ ಮಂದಕೃಷ್ಣ ಮಾದಿಗ, 2021ನೇ ಸಾಲಿನ … Read more

error: Content is protected !!