ಮಳೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಸಿಎಂ ಗೆ ಮಾಹಿತಿ

ಸುದ್ದಿ360 ಬೆಂಗಳೂರು, ಆ.2: ರಾಜ್ಯದ  ಹಲವೆಡೆ ಹಾಗೂ ಕರಾವಳಿ ಭಾಗದಲ್ಲಿ ಪುನ: ಹೆಚ್ಚು ಮಳೆಯಾಗುತ್ತಿದೆ.  ಮಳೆ ಅನಾಹುತದಿಂದ ಸಾವು ನೋವುಗಳಾಗಿದ್ದು, ಹೆಚ್ಚು ಮಳೆಯಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಮಳೆ ಪೀಡಿತ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ‌ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹಣಕಾಸು ಇಲಾಖೆ ಎಸಿಎಸ್ ಐಎಸ್ಎನ್ ಪ್ರಸಾದ, … Read more

ಮಳೆ ಪೀಡಿತ  ಜಿಲ್ಲೆಗಳಿಗೆ ಸಿಎಂ ಪ್ರವಾಸ

ಸ್ಥಿತಿಗತಿ ಪರಿಶೀಲಿಸಿ ಪರಿಹಾರಕ್ಕೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿ360, ಬೆಂಗಳೂರು, ಜು.11: ಅತಿವೃಷ್ಟಿ ಯಿಂದ ಹಾನಿಗೊಳಗಾದ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ನಾಳೆ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಮಲೆನಾಡು, ಕೊಡಗು, ಕರಾವಳಿ ಹಾಗೂ ಉತ್ತರ ಕನ್ನಡ ಭಾಗದಲ್ಲಿಕಳೆದ 10 ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಈಗಾಗಲೇ ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ಹಾಗೂ ನೇರವಾಗಿಯೂ ಮಾತನಾಡಿದ್ದು, ಮಳೆ … Read more

ಅಧಿಕಾರಿ ಎಂದು ನೌಕಾನೆಲೆ ಪ್ರವೇಶಿಸಲು ಯತ್ನಿಸಿದಾತ ಅಂದರ್

ಸುದ್ದಿ360 ಕಾರವಾರ,ಜು.06 : ಸಬ್ ಲೆಫ್ಟಿಂನೆಂಟ್ ಆಫೀಸರ್ ಎಂದು ನಕಲಿ ದಾಖಲೆ ಸೃಷ್ಠಿಸಿ ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯನ್ನು ನೌಕನೆಲೆಯ ಅಧಿಕಾರಿಗಳು ಬಂಧಿಸಿದ್ದಾರೆ. ತಾಲೂಕಿನ ಅರಗಾದಲ್ಲಿರುವ ನೌಕಾನೆಲೆಯ ಮುಖ್ಯ ದ್ವಾರಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದ್ದ  ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಕಿರಣ್ ಎಸ್.ಆರ್ ಎಂಬಾತ  ತಾನು ಸಬ್ ಲೆಫ್ಟಿಂನೆಂಟ್ ಆಫೀಸರ್ ಎಂದು ಹೇಳಿ ನೌಕಾನೆಲೆ ಪ್ರವೇಶಿಸಲು ಯತ್ನಿಸಿದ್ದಾನೆ. ಡಿ.ಎಂ.ಪಿ.ಆರ್ ಅಡಿ ತಾನು ನೇಮಕಾತಿಯಾಗಿದ್ದೇನೆ ಎಂದು ಗುರುತಿನ ಚೀಟಿ ನೀಡಿದ್ದಾನೆ. ಆದರೆ ಆತ ನೀಡಿದ … Read more

ಯಕ್ಷರಂಗದಿಂದ ಯಕ್ಷಗಾನ ತರಬೇತಿ ಶಿಬಿರ

ಸುದ್ದಿ360 ದಾವಣಗೆರೆ, ಜೂನ್ 18: ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ-ಯಕ್ಷಗಾನ ಸಂಸ್ಥೆಯ ಆಶ್ರಯದಲ್ಲಿ ನಿರಂತರ ಯಕ್ಷಗಾನ ತರಬೇತಿ ಶಿಬಿರ ಹಮ್ಮಿಕೊಂಡಿದೆ. ತರಬೇತಿಯು ನಗರದ ಕೆ.ಬಿ. ಬಡಾವಣೆ, ಕುವೆಂಪು ರಸ್ತೆಯಲ್ಲಿರುವ (ಲಾಯರ್ ರಸ್ತೆ), ಕಲಾಕುಂಚ ಕಛೇರಿಯ ಸಭಾಂಗಣದಲ್ಲಿ ಪ್ರತೀ ಭಾನುವಾರ ಬೆಳಿಗ್ಗೆ 6-30 ರಿಂದ 9-00 ಗಂಟೆಯವರೆಗೆ ನಡೆಯಲಿದ್ದು, ಈ ಶಿಬಿರವನ್ನು ಖ್ಯಾತ ವೃತ್ತಿನಿರತ ಯಕ್ಷಗಾನ ಕಲಾವಿದ ಹಟ್ಟಿಯಂಗಡಿ ಆನಂದಶೆಟ್ಟಿಯವರು ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಯಾವುದೇ ವಯಸ್ಸಿನ … Read more

error: Content is protected !!