ಸಾರವರ್ಧಿತ ಅಕ್ಕಿಯಿಂದ  ದೇಹಕ್ಕೆ ಅಗತ್ಯ ಪೌಷ್ಠಿಕಾಂಶ ಲಭ್ಯ

ಸುದ್ದಿ360 ದಾವಣಗೆರೆ ಜೂ.21:  ಸಾರವರ್ಧಿತ ಅಕ್ಕಿ ಹೆಚ್ಚು ಪೋಷಾಕಾಂಶಗಳನ್ನು ಒಳಗೊಂಡಿದ್ದು, ಇದರ ಸೇವನೆಯಿಂದ ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಕೇಂದ್ರ ಸರಕಾರ ಸಾರವರ್ಧಿತ ಅಕ್ಕಿಯನ್ನು ವಿತರಿಸುತ್ತಲಿದೆ ಎಂದು ಅಪರ ಜಿಲ್ಲದಿಕಾರಿ ಪಿ.ಎನ್. ಲೋಕೇಶ್ ಹೇಳಿದರು. ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಸರಕಾರದ ಸೂಚನೆ ಮೇರೆಗೆ, ಪಾಥ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾರವರ್ಧಿತ ಅಕ್ಕಿ ಕುರಿತು ಅರಿವು ಮೂಡಿಸುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, … Read more

ಸೋಮರ್ ಸಾಲ್ಟ್ ವೇಳೆ ಚಿತ್ರನಟ ದಿಗಂತ್‍ಗೆ ಪೆಟ್ಟು- ಗೋವಾದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಏರ್‍ಲಿಫ್ಟ್

ಸುದ್ದಿ360 ಗೋವಾ ಜೂ.21: ಚಿತ್ರನಟ ದಿಗಂತ್‍ ಕುಟುಂಬದೊಂದಿಗೆ ಗೋವಾ ಪ್ರವಾಸ ಕೈಗೊಂಡಿದ್ದರು. ಸಮುದ್ರ ದಡದಲ್ಲಿ ಸೋಮರ್‍ ಸಾಲ್ಟ್‍ ಜಂಪ್‍/ಬ್ಯಾಕ್‍ ಫ್ಲಿಪ್‍ ಮಾಡುವ ಸಮಯದಲ್ಲಿ ಆಯ ತಪ್ಪಿ ಪೆಟ್ಟಾಗಿದ್ದು, ಕುತ್ತಿಗೆ ಭಾಗದಲ್ಲಿ ಬಲವಾದ ಪೆಟ್ಟಾಗಿದೆ ಎನ್ನಲಾಗಿದೆ. ಗೋವಾದ ಆಸ್ಪತ್ರೆಯಲ್ಲಿ ಪ್ರಥಮ ಚಕಿತ್ಸೆ ಪಡೆದುಕೊಂಡಿರುವ ದಿಗಂತ್‍ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ  ಆಸ್ಪತ್ರೆಗೆ ಏರ್‍ ಲಿಫ್ಟ್‍ ಮೂಲಕ ಕರೆತರುತ್ತಿರುವುದಾಗಿ ವರದಿಯಾಗಿದೆ.

ಯೋಗದಿಂದ ವ್ಯಕ್ತಿ, ಸಮಾಜ, ರಾಷ್ಟ್ರ, ವಿಶ್ವಕ್ಕೆ ಶಾಂತಿ: ಮೋದಿ

ಸುದ್ದಿ 360 ಮೈಸೂರು, ಜೂ.21:  ಸಾಂಸ್ಕೃತಿಕ ರಾಜಧಾನಿ, ಆಧ್ಯಾತ್ಮ ಮತ್ತು ಯೋಗ ಸಾಧಕರ ನೆಲೆಬೀಡು ಮೈಸೂರಿನಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ನಡೆಯುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ನಮಿಸಿದ ಪ್ರಧಾನಿ ನರೇಂದ್ರ ಮೋದಿಯವರು, ದೇಶ ಮತ್ತು ವಿಶ್ವದ ಎಲ್ಲ ಸಹೃದಯರಿಗೂ 8ನೇ ವಿಶ್ವ ಯೋಗ ದಿನಾಚರಣೆ ಶುಭಾಶಯಗಳನ್ನು ಕೋರಿದರು. 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಭೂಮಿ ಮೈಸೂರಿನಲ್ಲಿ ಕಂಡ ಯೋಗದ ಬೆಳಕು ಇಂದು ವಿಶ್ವದ ಎಲ್ಲೆಡೆ ಪಸರಿಸಿದೆ. ವಿಶ್ವಕ್ಕೆ ಆರೋಗ್ಯದ ಮಹತ್ವವನ್ನು ತಿಳಿಸುತ್ತಿದೆ. … Read more

ಪ್ರಧಾನಿಯಿಂದ ಕೊಮ್ಮಘಟ್ಟದಲ್ಲಿ ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ

ಸುದ್ದಿ360 ಬೆಂಗಳೂರು, ಜೂ.20: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ 100% ವಿದ್ಯುದೀಕರಣ, ಸರ್.ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸೀಕೆರೆ- ತುಮಕೂರು ಜೋಡಿ ರೈಲು ಮಾರ್ಗ ಹಾಗೂ ಹೊಸ ರೈಲು ಸೇವೆ, ಯಲಹಂಕ – ಪೆನುಕೊಂಡ ಜೋಡಿ ರೈಲು ಮಾರ್ಗ ಉದ್ಘಾಟನೆ ಹಾಗೂ ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಬೆಂಗಳೂರು ಉಪ ನಗರ ರೈಲು ಯೋಜನೆಗೆ ಹಾಗೂ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ಮಂತ್ರಿ … Read more

ಪುಲ್ವಾಮಾ ದಾಳಿ ರಾಜಕೀಯ ಪ್ರೇರಿತ – ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆರೋಪ

ಪ್ರಧಾನಿಯ ರಾಜ್ಯ ಪ್ರವಾಸ ಅಧಿಕಾರದ ಕುರ್ಚಿಗಾಗಿ – ಯೋಗ ನೆಪಮಾತ್ರ . . ? ಸುದ್ದಿ360 ದಾವಣಗೆರೆ, ಜೂ.20: ೨೦೧೯ರಲ್ಲಿ ನಡೆದ ಪುಲ್ವಾಮಾ ದಾಳಿ ಒಂದು ರಾಜಕೀಯ ಪ್ರೇರಿತ. ಇಲ್ಲವೆಂದಾದರೆ ದಾಳಿಯ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ನೀಡಿರಲಿಲ್ಲವೇ, ನೀಡಿದ್ದರೂ ಅದನ್ನು ಹಗುರವಾಗಿ ಪರಿಗಣಿಸಿದ್ದು ಏಕೆ ..? ಇಂದೂ ಸಹ ಅಧಿಕಾರದ ಕುರ್ಚಿಗಾಗಿ ಯೋಗ ದಿನಾಚರಣೆ ನೆಪದಲ್ಲಿ ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಕಿಡಿಕಾರಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, … Read more

ಪ್ರಧಾನಿ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸ

ಸುದ್ದಿ360 ಬೆಂಗಳೂರು, ಜೂ.19: ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20 ಮತ್ತು 21ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20, ನಾಳೆ ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಿದುಳು ಸಂಶೋಧನಾ ಕೇಂದ್ರ ಲೋಕಾರ್ಪಣೆಗೊಳಿಸಿ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ 1.45 ಕ್ಕೆ ಪ್ರಧಾನಿಯವರು (ಬೇಸ್) ಕ್ಯಾಂಪಸ್ ಗೆ ತೆರಳಿ, ಡಾ:ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ, … Read more

ದ್ವಿತೀಯ ಪಿಯುಸಿ: ಶೇ.61.88 ಫಲಿತಾಂಶ – ದಕ್ಷಿಣ ಕನ್ನಡ ಪ್ರಥಮ

ಸುದ್ದಿ360 ಬೆಂಗಳೂರು, ಜೂನ್ 18:  ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.61.88ರಷ್ಟು ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‍ ತಿಳಿಸಿದ್ದಾರೆ. ಸುದ್ದೀಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು,  ಒಟ್ಟು 5,99,794 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,02,697 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮಾಂತರ ಪ್ರದೇಶದ ಫಲಿತಾಂಶ ಶೇ.62.18ರಷ್ಟಿದ್ದು ಉತ್ತಮವಾಗಿದೆ. ನಗರ ಪ್ರದೇಶದಲ್ಲಿ 61.78ರಷ್ಟಿದೆ ಎಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ … Read more

ಕಲಾಕುಂಚ: ವಿಶ್ವ ಪರಿಸರ ದಿನಾಚರಣೆ – ಉಚಿತ ಚಿತ್ರ ಬರೆಯುವ ಸ್ಪರ್ಧೆ ಫಲಿತಾಂಶ

ಸುದ್ದಿ360 ದಾವಣಗೆರೆ, ಜೂನ್ 18: ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಉಚಿತ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದರ  ಫಲಿತಾಂಶ ಪ್ರಕಟಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ  ತಿಳಿಸಿದ್ದಾರೆ. ರಾಜ್ಯ ಮಟ್ಟದ ಈ ಉಚಿತ ಚಿತ್ರ ಬರೆಯುವ ಸ್ಪರ್ಧೆಗೆ ಕರ್ನಾಟಕ ವಿವಿಧ ಜಿಲ್ಲೆಗಳೂ ಸೇರಿದಂತೆ ನೆರೆ ರಾಜ್ಯಗಳಿಂದಲೂ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಸುಮಾರು ಒಂದು ಸಾವಿರದ ಎಂಟುನೂರ ಆರವತ್ತಮೂರು ಚಿತ್ರಗಳು ಬಂದಿದ್ದವು ಎಂದು ಗಣೇಶ್‍ ಶೆಣೈ … Read more

ದ್ವಿತೀಯ ಪಿಯುಸಿ ಫಲಿತಾಂಶ- ಈ ಲಿಂಕ್‍ ಕ್ಲಿಕ್‍ ಮಾಡಿ

ಸುದ್ದಿ360 ಬೆಂಗಳೂರು, ಜೂನ್ 18: ದ್ವೀತಿಯ ಪಿಯುಸಿ ಫಲಿತಾಂಶ ಇಂದು (ಜೂ.18) ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ ಎಂದು ಪಿಯು ಬೋರ್ಡ್ ಪ್ರಕಟಿಸಿದೆ.2022 ನೇ ಸಾಲಿಗೆ ಏಪ್ರಿಲ್ 22 ರಿಂದ ಆರಂಭವಾಗಿ ಮೇ 18 ವರೆಗ ಪರೀಕ್ಷೆ ನಡೆದಿತ್ತು. ಇದೀಗ ಉತ್ತರ ಪತ್ರಿಕೆಯ ಮೌಲ್ಯಮಾಪನ ಮುಕ್ತಾಯವಾಗಿ ಫಲಿತಾಂಶ ಪ್ರಕಟಣೆಗೆ ಸಿದ್ಧವಾಗಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಫಲಿತಾಂಶ ಹೊರಬೀಳಲಿದೆ.ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ www.karresult.nic.in ನಲ್ಲಿ ಪಡೆಯಬಹುದಾಗಿದೆ. ಈ ಬಾರಿ ಒಟ್ಟು … Read more

ದಾವಣಗೆರೆಗೆ ಶಿಕ್ಷಣ ಸಚಿವರ ಭೇಟಿ

ದಾವಣಗೆರೆ, ಜೂ.13:  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಜೂ. 14 ರಂದು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 7.30 ಕ್ಕೆ ಬೆಂಗಳೂರಿನಿಂದ ಹೊರಟು 10.30 ಕ್ಕೆ ದಾವಣಗೆರೆಗೆ ಆಗಮಿಸುವರು. ನಂತರ 10.40 ಕ್ಕೆ ದಾವಣಗೆರೆ ದಕ್ಷಿಣ ವಲಯದ ಹಳೇ ಬಿಸಲೇರಿಯ ಕುಂದೂರು ಮುರಿಗೆಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸುವರು. ತದ ನಂತರ ಮಧ್ಯಾಹ್ನ 3 ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ಇಲಾಖಾ … Read more

error: Content is protected !!