ದಾವಣಗೆರೆ ಎಸ್‌ಪಿ ರಿಷ್ಯಂತ್ ವರ್ಗಾವಣೆಗೆ ಕಾರಣ ಏನು ಅಂತೀರಾ?

ಸುದ್ದಿ360 ದಾವಣಗೆರೆ ಏ. 23: ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಯಾಗಿ‌ ಸೇವೆ ಸಲ್ಲಿಸುತ್ತಿದ್ದ ಸಿ.ಬಿ ರಿಷ್ಯಂತ್ ಅವರ ವರ್ಗಾವಣೆಯಾಗಿದ್ದು. ಸ್ಥಳ ಸೂಚಿಸಿಲ್ಲ. ಈ ಕುರಿತಾಗಿ ರಿಷ್ಯಂತ್ ಅವರು ಮಾಧ್ಯಮದವರಿಗೆ‌ ಮಾಹಿತಿ‌ ನೀಡಿದ್ದು,  ಅವರು ತಮ್ಮ ವರ್ಗಾವಣೆಗೆ ಕಾರಣವನ್ನು ತಿಳಿಸಿದ್ದಾರೆ.  ತಮ್ಮ ಹತ್ತಿರದ ಸಂಬಂಧಿಯೊಬ್ಬರು ವಿಧಾನಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ಮೆಲೆಯಲ್ಲಿ  ಚುನಾವಣಾ ಮಾರ್ಗಸೂಚಿಗಳ ಪ್ರಕಾರ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಕಟ ಸಂಬಂಧಿ ಚುನಾವಣೆಯಲ್ಲಿ ನಿಂತಿದ್ದರೆ ಅಧಿಕಾರಿ ಚುನಾವಣಾ ಪ್ರಕ್ರಿಯೆಯ ಭಾಗವಾಗಿರಬಾರದು. ಈ ಕಾರಣದಿಂದಾಗಿ ನನ್ನನ್ನು ದಾವಣಗೆರೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು … Read more

ಡಾ.ಕೆ. ಅರುಣ್ ದಾವಣಗೆರೆ ನೂತನ ಎಸ್ ಪಿ

ಸುದ್ದಿ360, ದಾವಣಗೆರೆ ಏ.23: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಆಗಿ ಡಾ.ಕೆ. ಅರುಣ್ ನಿಯೋಜನೆಗೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಬಿ. ರಿಷ್ಯಂತ್ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಡಾ.ಕೆ. ಅರುಣ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ಆದರೆ, ರಿಷ್ಯಂತ್ ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ಈ ಹಿಂದೆ ವಿಜಯನಗರ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಡಾ. ಅರುಣ್ ಅವರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಆಗುವ … Read more

33 ವರ್ಷಗಳಿಂದ ಲಿಂಗಾಯತರನ್ನು ಸಿಎಂ ಮಾಡದ ಕಾಂಗ್ರೆಸ್ನದ್ದು ಓಲೈಕೆ ರಾಜಕಾರಣ – ವೀರೇಶ್ ಹನಗವಾಡಿ

ಸುದ್ದಿ360 ದಾವಣಗೆರೆ, ಏ.23: ಕಳೆದ 33 ವರ್ಷಗಳಿಂದ ಲಿಂಗಾಯತರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸದ, ಕಾಂಗ್ರೆಸ್ ಈಗ ಓಲೈಕೆ ರಾಜಕಾರಣ ಮಾಡಲು ಮುಂದಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವೀರಶೈವ-ಲಿಂಗಾಯತರನ್ನು ವಿಭಜಿಸಲು ಪ್ರಯತ್ನಿಸಿದ್ದನ್ನು ಜನ ಮರೆತಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ಹೇಳಿದರು. ಜಗದೀಶ್ ಶೆಟ್ಟರ್ ಶೆಟ್ಟರ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಾವುಟ ಬದಲಾದಾಕ್ಷಣ ಅವರಲ್ಲಿರುವ ಭಾವನೆಗಳು ಬದಲಾಗಲು ಸಾಧ್ಯವಿಲ್ಲ. -ಡಾ.ಎ.ಎಚ್. ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ . ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಸಮುದಾಯ ಪ್ರಜ್ಞಾವಂತ … Read more

ಮಹಿಳೆ ನಾಪತ್ತೆ ಪ್ರಕರಣ – ಫೋನ್ ಪೇ ಮೂಲಕ 50 ಸಾವಿರ ಲಂಚ – ಪಿಎಸ್ಐ, ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ

ಸುದ್ದಿ360 ದಾವಣಗೆರೆ, ಏ.22: ಮಹಿಳೆ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯ ಮಾಡಲು ಪೋನ್ ಪೇ ಮೂಲಕ ಲಂಚದ ಹಣ ಸ್ವೀಕರಿಸಿದ್ದ ದಾವಣಗೆರೆ ಗ್ರಾಮಾಂತರ ಠಾಣೆ ಪಿಎಸ್ಐ ಶಿವನಗೌಡ ಹಾಗೂ ಕಾನ್ಸ್ಟೇಬಲ್ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇವರಿಬ್ಬರು  ನಾಪತ್ತೆ ಪ್ರಕರಣದಲ್ಲಿ ಕಾಣೆಯಾದ ಮಹಿಳೆಯನ್ನು ಜೊತೆಗೆ ಕಳಿಸಿಕೊಡಲು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತಾಳೆಕಟ್ಟೆ ಗ್ರಾಮದ ಕೆ.ರಂಗಸ್ವಾಮಿ ಎಂಬುವರಿಗೆ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರಂಗಸ್ವಾಮಿ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ … Read more

ಪೇಸ್ ಡಿಟಿಟೆಕ್ ಇನ್ಫ್ರಾ ಪ್ರೈ ಲಿ  ಕಂಪನಿಗೆ ಜಿಎಂಐಟಿ ಇಸಿ ವಿಭಾಗದ 48 ವಿದ್ಯಾರ್ಥಿಗಳು ಆಯ್ಕೆ

ಪ್ರಸಕ್ತ ಸಾಲಿನಲ್ಲಿ 507 ಆಫರ್ಸ್ ಸ್ವೀಕರಿಸಿದ ಮದ್ಯ ಕರ್ನಾಟಕದ  ಜಿಎಂಐಟಿ ಕಾಲೇಜ್ ಸುದ್ದಿ360 ದಾವಣಗೆರೆ, ಏ.21: ಪೇಸ್ ಡಿಟಿಟೆಕ್ ಇನ್ಫ್ರಾ ಪ್ರೈ ಲಿ  ಕಂಪನಿ ಕಳೆದ ಗುರುವಾರ ನಡೆಸಿದ ಸಂದರ್ಶನ ಪ್ರಕ್ರಿಯೆಯಲ್ಲಿ ನಗರದ ಜಿಎಮ್ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ 48 ವಿದ್ಯಾರ್ಥಿಗಳು ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಗಳಾಗಿ ಆಯ್ಕೆಯಾಗಿರುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ  2022-23 ರ ಸಾಲಿನಲ್ಲಿ ಇದುವರೆಗೆ 507 … Read more

ಎಸ್ ಯುಸಿಐ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಕಾ. ಭಾರತಿ ಮತಯಾಚನೆ

ಸುದ್ದಿ360, ದಾವಣಗೆರೆ ಏ.18: ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಎಸ್ ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾ. ಭಾರತಿ ಕೆ. ನಗರದ ಕೆ. ಆರ್. ಮಾರುಕಟ್ಟೆಯಲ್ಲಿ ಸಂಚರಿಸಿ ಮತಯಾಚನೆ ಮಾಡಿದರು. ಬೀದಿ ಬದಿ ತರಕಾರಿ ವ್ಯಾಪಾರಸ್ಥರ ಮಧ್ಯೆ ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪಾದ ಯತ್ರೆಯ ಮೂಲಕ ಮತಯಾಚನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಪರಶುರಾಮ್, ಪೂಜಾ, ಕಾವ್ಯ, ಬನಶ್ರೀ, ಮಂಜುನಾಥ್ ರೆಡ್ಡಿ, ಮಮತಾ, ಸ್ಮಿತಾ, ಶಶಿಕುಮಾರ್, ಧನುಷಾ, ನಾಗಜ್ಯೋತಿ, ಮನೋಜ್ ಇತರರು ಇದ್ದರು.

ಪ್ರಶ್ನೆ ಪತ್ರಿಕೆಗಾಗಿ ಕಾದು ಕುಳಿತಿರುವ ಮತದಾರ – ಕೊಡುಗೈ ಬಿಕ್ಷುಕರ ಭರಪೂರ ಪ್ರಚಾರ

– ಕೂಡ್ಲಿ ಸೋಮಶೇಖರ್ ಚುನಾವಣೆ ಎಂದ ಮೇಲೆ ಇಲ್ಲಿ ಪಕ್ಷಗಳ ಹೈಕಮಾಂಡ್ನಿಂದ ಹಿಡಿದು ಸಾಮಾನ್ಯ ಕಾರ್ಯಕರ್ತನ ವರೆಗೆ ಮತ್ತು ಹಿರಿಯ ನಾಗರೀಕರಿಂದ ಹಿಡಿದು ಈಗಷ್ಟೇ ಮತದಾನಕ್ಕೆ ಅರ್ಹತೆ ಪಡೆದ ಯುವಪೀಳಿಗೆ ವಿವಿಧ ಬಗೆಗಳಲ್ಲಿ ಚುನಾವಣಾ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಮತದಾನ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಮತ್ತು ಕರ್ತವ್ಯವಾಗಿದ್ದರೂ ಸಹ ಸಾಕಷ್ಟು ಮಂದಿ ಮತದಾನದಿಂದ ದೂರವೇ ಉಳಿಯುವುದು ವಿಪರ್ಯಾಸ. ಚುನಾವಣಾ ಆಯೋಗ ಮತದಾನದ ಕುರಿತು ಜಾಗೃತಿ ಮೂಡಿಸುವಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಮತಯಾಚನೆಗೆ ಬರುವ … Read more

ಕೆಲವೇ ಕ್ಷಣಗಳಲ್ಲಿ ಜಗದೀಶ್ ಶೆಟ್ಟರ್ ನಿವಾಸಕ್ಕೆ ಮೂವರು ನಾಯಕರ ಭೇಟಿ . . .

ರಾಜಕಾರಣದಲ್ಲಿ ತಾಳ್ಮೆ ಬೇಕು – ವೈಯ್ಟ್ ಅಂಡ್ ಸಿ ಎಂದ ಜಗದೀಶ್‍ ಶೆಟ್ಟರ್ ಸುದ್ದಿ360 ಹುಬ್ಬಳ್ಳಿ ಏ.15: ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಕರ್ನಾಟಕ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾತ್ರಿ 8.30ಕ್ಕೆ ತಮ್ಮ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ತದನಂತರ ನಿರ್ಧಾರವನ್ನು ಪ್ರಕಟಿಸುವುದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್‍ ಶೆಟ್ಟರ್  ಹೇಳಿದ್ದಾರೆ. ಈ ಕುರಿತು ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿ, ವರಿಷ್ಠರಿಂದ ಸೂಕ್ತ ಸ್ಪಂದನೆ ಬರುವ ನಿರೀಕ್ಷೆಯಲ್ಲಿ ನಾನಿದ್ದೇನೆ ಎಂದು ತಿಳಿಸಿರುವ ಅವರು, ಪಕ್ಷದಿಂದ … Read more

ಕಾಂಗ್ರೆಸ್ 3ನೇ ಪಟ್ಟಿ ರಿಲೀಸ್: ಪಟ್ಟಿಯಲ್ಲಿ ಯಾರ್ಯಾರಿದ್ದಾರೆ. . .? ಸಿದ್ಧರಾಮಯ್ಯ ಕೋಲಾರದಿಂದ ಹಿಂದೆ ಸರುದ್ರಾ?

ಶಿವಮೊಗ್ಗ ನಗರಕ್ಕೆ ಎಚ್.ಸಿ. ಯೋಗೇಶ್ ಹೊನ್ನಾಳಿಯಿಂದ ಡಿ.ಜಿ. ಶಾಂತನಗೌಡ ಶಿಕಾರಿಪುರಕ್ಕೆ ಜಿ.ಬಿ. ಮಾಲತೇಶ್ ಜಗಳೂರಿನಿಂದ ಬಿ.ದೇವೇಂದ್ರಪ್ಪ ಸುದ್ದಿ360: ಕಾಂಗ್ರೆಸ್ನಿಂದ 3ನೇ ಪಟ್ಟಿ ರಿಲೀಸ್‍ ಆಗಿದ್ದು43 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಕೋಲಾರದಿಂದ ಸಿದ್ಧರಾಮಯ್ಯ ಕಣಕಿಳಿಯಲಿದ್ದಾರೆ ಎಂಬ ಮಾತುಗಳಿಗೆ ಈ ಪಟ್ಟಿ ಇತಿಶ್ರೀ ಹಾಡಿದ್ದು, ಕೋಲಾರದಿಂದ ಕೊತ್ತುರ್ ಜಿ. ಮಂಜುನಾಥ್ ಅವರಿಗೆ ಟಿಕೆಟ್ ಲಭಿಸಿದೆ. ಇನ್ನು ಪಕ್ಷಕ್ಕೆ ಸೇರುವಾಗಿನ ಒಪ್ಪಂದದಂತೆ ಲಕ್ಷ್ಮಣ ಸವದಿಗೆ ಅಥಣಿಯಿಂದ ಟಿಕೆಟ್ ಘೋಷಣೆಯಾಗಿದೆ. ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರುವ ಮೂಲಕ … Read more

ಮಾಯಕೊಂಡ ಬಿಜೆಪಿ ಟಿಕೆಟ್ ಆಕಾಂಕ್ಷಿತರ ಒಗ್ಗಟ್ಟಿನ ಬಂಡಾಯ

ಆರ್. ಎಲ್. ಶಿವಪ್ರಕಾಶ್‍ ಬಂಡಾಯ ಅಭ್ಯರ್ಥಿ ಸುದ್ದಿ360 ದಾವಣಗೆರೆ, ಏ.14 : ಬಿಜೆಪಿಯಲ್ಲಿನ ಬಂಡಾಯದ ಬಿಸಿ ಮಾಯಕೊಂಡ ಕ್ಷೇತ್ರದಲ್ಲೂ ಕಾಣಿಸಿಕೊಂಡಿದ್ದು, ಬಸವರಾಜ್ ನಾಯ್ಕ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸುತ್ತಿದ್ದಂತೆ ಆಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿದೆ. ಮಾಯಕೊಂಡ ಮೀಸಲು ಕ್ಷೇತ್ರದ ಮೂಲ ಬಿಜೆಪಿಯ 11 ಜನ ಟಿಕೆಟ್ ಆಕಾಂಕ್ಷಿತರು ಒಟ್ಟಾಗಿ ಆರ್. ಎಲ್. ಶಿವಪ್ರಕಾಶ್‍ರನ್ನು ಕಣಕ್ಕಿಳಿಸಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಹೆಚ್.ಕೆ. ಬಸವರಾಜ್, ಹಾಲಿ ಶಾಸಕರು ಮತ್ತು … Read more

error: Content is protected !!