‘ಅಮಿತ್ ಶಾ ಹತ್ರ ಏನು ಮಂತ್ರದಂಡ ಇಲ್ಲ – ನರೇಂದ್ರ ಮೋದಿ ಬಂದ್ರು ಇಲ್ಲಿ ಗೆಲ್ಲಲ್ಲ’

ಸುದ್ದಿ360 ದಾವಣಗೆರೆ, ಡಿ.30: ಅಮಿತ್ ಶಾ ರಾಜ್ಯಭೇಟಿ ಕುರಿತಂತೆ, ಅಮಿತ್ ಶಾ ಹತ್ರ ಏನು ಮಂತ್ರದಂಡ ಇದೆಯಾ, ಅವರು ಎಷ್ಟು ಬಾರಿ ಬಂದ್ರು ಅಷ್ಟೇ, ಅವರ ಜಾದೂ ಇಲ್ಲೆನು ನಡೆಯಲ್ಲ. ನರೇಂದ್ರ ಮೋದಿಯವರೇ ಬಂದ್ರೂ ಬಿಜೆಪಿ ಗೆಲ್ಲಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಮಧ್ಯಮದವರಿಗೆ ಪ್ರತಿಕ್ರಿಯಿಸಿದರು. ಅವರು ದಾವಣಗೆರೆಯಲ್ಲಿ ನಡೆಯುತ್ತಿರುವ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ನಗರದ ಬಾಪೂಜಿ ಕಾಲೇಜು ಗ್ರೌಂಡ್‍ನಲ್ಲಿ ಸಿದ್ಧರಾಮಯ್ಯನವರು ಹೆಲೆಕಾಪ್ಟರ್‍ನಿಂದ ಇಳಿಯುತ್ತಿದ್ದ ಹಾಗೆ ಚಾಮುಂಡೇಶ್ವರಿ ತಾಯಿ … Read more

ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಬೆಂಗಳೂರು ನವೆಂಬರ್ 11 : ರಾಜ್ಯದ ಬಹುನಿರೀಕ್ಷಿತ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ವಿಶೇಷ ರೈಲಿಗೆ ಹಸಿರು ನಿಶಾನೆ ತೋರುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಂದು ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದರು. ಎಂಟು ದಿನಗಳ ಕಾಶಿ ದರ್ಶನದ ಈ ರೈಲು ವಾರಣಾಸಿ, ಪ್ರಯಾಗ್ ರಾಜ್, ಅಯೋಧ್ಯಾ ಮುಂತಾದ ಪವಿತ್ರ ಸ್ಥಳಗಳಿಗೆ ಯಾತ್ರಿಕರನ್ನು ಕರೆದೊಯ್ಯುತ್ತದೆ. ಮುಜರಾಯಿ ಇಲಾಖೆ ಭಾರತ ಸರ್ಕಾರದ ಸಹಯೋಗದಲ್ಲಿ ಈ ಕಾಶಿ ದರ್ಶನ ಯಾತ್ರೆ ಆಯೋಜಿಸಲಾಗಿದೆ. ಈ ಯಾತ್ರೆಗೆ … Read more

ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ವಿರುದ್ಧ ಎಸ್ ಡಿ ಪಿ ಐ ಆರೋಪ

ಸುದ್ದಿ360 ದಾವಣಗೆರೆ, ಆ.27: ನಾ ಖಾವೂಂಗಾ ನಾ ಖಾನೇ ದೂಂಗಾ ಎನ್ನುವ ಪ್ರಧಾನ ಮಂತ್ರಿ ಮೋದಿಯವರು, ಕರ್ನಾಟಕದಲ್ಲಿನ ಕಮೀಷನ್ ದಂಧೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಎಸ್ ಡಿ ಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರರು ಪ್ರಧಾನಿಯವರಲ್ಲಿ ತಮ್ಮ ಅಳಲನ್ನು ತೋಡಿಕೊಂಡರೂ ಸ್ಪಂದಿಸದ ಪ್ರಧಾನಿಯವರ ಕುಮ್ಮಕ್ಕು 40 ಪರ್ಸೆಂಟ್ ಗಿಂತಲೂ ಹೆಚ್ಚುತ್ತಿರುವ ಕಮೀಷನ್ ವ್ಯವಹಾರಕ್ಕೆ ಕುಮ್ಮಕ್ಕು ಇರುವುದಾಗಿ ಆರೋಪಿಸುವ ಸ್ಥಿತಿ ಬಂದೊದಗಿದೆ ಎಂದು ಅವರು ಹೇಳಿದರು. ಸರ್ಕಾರಿ ಉದ್ಯೋಗಗಳಲ್ಲಿನ … Read more

ಪ್ರವೀಣ್ ಹತ್ಯೆ ಯೋಜನಾಬದ್ಧವಾದ ಭಯೋತ್ಪಾದಕ ಕೃತ್ಯ: ಮುಖ್ಯಮಂತ್ರಿ ಬೊಮ್ಮಾಯಿ

ಸರ್ಕಾರ ಮತ್ತು ಬಿಜೆಪಿ ಪಕ್ಷದಿಂದ ತಲಾ 25 ಲಕ್ಷ ರೂ ಚೆಕ್ ಪ್ರವೀಣ್ ಕುಟುಂಬಕ್ಕೆ ಸುದ್ದಿ360 ಮಂಗಳೂರು, ಜು. 28 : ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಲೆಪ್ರಕರಣವನ್ನು ಬೇಧಿಸುವವರೆಗೆ ಅಕ್ಷರಶ: ದಣಿವಿಲ್ಲದೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಅವರು ಇಂದು ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಭೇಟಿ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರವೀಣ್ ತಮ್ಮ … Read more

ರಾಹುಲ್ ಬಂಧನಕ್ಕೆ ಯುವ ಕಾಂಗ್ರೆಸ್ ಖಂಡನೆ

ಸುದ್ದಿ360 ದಾವಣಗೆರೆ, ಜು.26: ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪೊಲೀಸರು ಬಂಧಿಸಿರುವ ಕ್ರಮದ ವಿರುದ್ಧ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಸಂಜೆ ಯುವ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಎಚ್.ಜೆ. ಮೈನುದ್ದೀನ್, ಬೆಲೆ ಏರಿಕೆ, ಇಡಿ ದುರ್ಬಳಕೆ ಖಂಡಿಸಿ ಸಂಸತ್ ಭವನದ ಎದುರು ಮೌನ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿಯವರನ್ನು ದೆಹಲಿ ಪೊಲೀಸರು ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಇಂದು … Read more

ಇ-ಕೆವೈಸಿಗೆ 31 ಕಡೆಯ ದಿನ

ಸುದ್ದಿ360 ದಾವಣಗೆರೆ ಜು.25: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುವ ಧನ ಸಹಾಯ ಪಡೆಯಲು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಜು.31 ಕಡೆಯ ದಿನವಾಗಿದೆ. ಜಿಲ್ಲೆಯ 1.51 ಲಕ್ಷ ರೈತರು ಯೋಜನೆ ಅಡಿ ಆರ್ಥಿಕ ನೆರವು ಪಡೆಯುತ್ತಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಯೋಜನೆಯ ಫಲ ನೈಜ ಫಲಾನುಭವಿಗಳ ತಲುಪುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಫಲಾನುಭವಿಗಳು http://pmkisan.gov.in ವೆಬ್ ಪೋರ್ಟಲ್‌ಗೆ ಭೇಟಿ ನೀಡಿ ಫಾರ್ಮರ್ ಕಾರ್ನರ್‌ನಲ್ಲಿ … Read more

ನಿದ್ದೆ ಮಾಡುವ  ಸಿಂಹವನ್ನೇ ನಂಬಿಕೊಂಡ ಸಂಸ್ಕೃತಿಯವರು ವಿರೋಧ ಪಕ್ಷದವರು :ಸಿಎಂ

ಸುದ್ದಿ360 ಉಡುಪಿ, ಜು.13: ಪ್ರಧಾನಿ ನರೇಂದ್ರ ಮೋದಿ ಕ್ರಿಯಾಶೀಲವಾಗಿದ್ದಾರೆ. ಅದಕ್ಕೆ ತಕ್ಕ ಹಾಗೆ ನಮ್ಮ ದೇಶದ ಲಾಂಛನವಾಗಿರುವ ಸಿಂಹ ಸಶಕ್ತ ಹಾಗೂ ಘರ್ಜನಾ ರೂಪದಲ್ಲಿ ಇರಬೇಕು. ಆ ರೀತಿಯಲ್ಲಿ ಸಿಂಹ ಲಾಂಛನ ಇದೆ. ಆದರೆ ವಿರೋಧ ಪಕ್ಷದವರು ನಿದ್ದೆ ಮಾಡಿಕೊಂಡೇ ಇರುವ ಸಿಂಹವನ್ನು ನಂಬಿಕೊಂಡಿರುವ ಸಂಸ್ಕೃತಿಯವರು. ಇದು ಉಡುಪಿಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸಿಂಹ ಲಾಂಛನ ವಿಚಾರವಾಗಿ ನೀಡಿದ ಪ್ರತಿಕ್ರಿಯೆ. ಸಿಂಹದ ಲಾಂಛ ಉಗ್ರವಾಗಿದೆ, ವ್ಯಗ್ರವಾಗಿದೆ ಎಂಬುದು ನೋಡುವವರ ದೃಷ್ಟಿಕೋನವಾಗಿದೆ. ಕಾಂಗ್ರೆಸ್ … Read more

ಅಶೋಕ ಲಾಂಛನವನ್ನೊಮ್ಮೆ ಮ್ಯೂಸಿಯಂನಲ್ಲಿ ನೋಡಲಿ – ಆರೋಪಗಳು ಯಾರನ್ನೂ ಬಿಟ್ಟಿಲ್ಲ : ಜಗ್ಗೇಶ್

ಆರಾಧಿಸುವವರು 98% ಇದ್ರೆ, ವಿರೋಧಿಸುವವರು 2% ಏನ್ ಮಾಡೋಕಾಗುತ್ತೆ. . . ಸುದ್ದಿ360 ತುಮಕೂರು ಜು.13: ಅಶೋಕ ಲಾಂಛನದ ಮೂಲ ಇವರುಗಳು ಮ್ಯೂಸಿಯಂನಲ್ಲಿ ನೋಡಲಿ. ಸುಖಾಸುಮ್ಮನೆ ಮೋದಿ ವಿರುದ್ದ ಮಾತಾಡುತ್ತಾರೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಬುಧವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಷ್ಟ್ರೀಯ ಲಾಂಛನ ತಿರುಚಿದ್ದಾರೆ ಎಂಬ ಆರೋಪ ವಿಚಾರವಾಗಿ ಅವರು, ಮ್ಯೂಸಿಯಂನಲ್ಲಿ ಇರುವ ಹಾಗೆ ಯಥಾವತ್ ಸಿಂಹ ಲಾಂಛನವನ್ನು ಸೆಂಟ್ರಲ್ ವಿಸ್ತಾದಲ್ಲಿ ಮಾಡಲಾಗಿದೆ. ಇಷ್ಟು ವರ್ಷ … Read more

ಗುಂಡಿಕ್ಕಿ ಎಂದವನ ಬಂಧಿಸಿ: ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಗ್ರಹ

ಸುದ್ದಿ360 ದಾವಣಗೆರೆ, ಜು.02:  ಇತ್ತೀಚೆಗೆ ಸುದ್ದಿ ವಾಹಿನಿಯೊಂದರ ಫೋನ್ ಇನ್ ಕಾರ್ಯಕ್ರಮವೊಂದರಲ್ಲಿ ಕರೆ ಮಾಡಿದ ವ್ಯಕ್ತಿ, ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂದು ಹೇಳಿಕೆ ನೀಡಿದ್ದಾನೆ. ಈತನನ್ನು ಕೂಡಲೆ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಗ್ರಹಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆಯ ವೀರಪ್ಪ ಎಂಬ ವ್ಯಕ್ತಿ ಈ ರೀತಿಯಾಗಿ ಮಾತನಾಡಿದ್ದು, ಒಂದು ಕೋಮಿನ ವಿರುದ್ಧ ಕೀಳಾಗಿ ಹೇಳಿಕೆ ನೀಡಿದ್ದಾನೆ. ಈ … Read more

ಕನ್ನಯ್ಯಲಾಲ್ ಹತ್ಯೆ; ಹಂತಕರನ್ನು ಗುಂಡಿಕ್ಕಿ ಕೊಲ್ಲಬೇಕು: ಶ್ರೀನಿವಾಸ್ ದಾಸಕರಿಯಪ್ಪ

ಸುದ್ದಿ360 ದಾವಣಗೆರೆ, ಜೂ.30: ರಾಜಸ್ತಾನದ ಉದಯಪುರದಲ್ಲಿ ಕನ್ನಯ್ಯ ಲಾಲ್ ಹೆಸರಿನ ವ್ಯಕ್ತಿಯನ್ನು ಕೊಂದು ಹಾಕಿದ ಹಂತಕರನ್ನು ಗುಂಡಿಟ್ಟಿ ಕೊಲ್ಲಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಹೇಳಿದ್ದಾರೆ. ನಗರದ ಜಯದೇವ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. ರಾಜಸ್ತಾನದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಇಲ್ಲವೇ ಗುಂಡಿಟ್ಟು ಕೊಲ್ಲಬೇಕು. ತಪ್ಪಿದಲ್ಲಿ ದೇಶದಲ್ಲಿ ಹಿಂದೂಗಳ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು … Read more

error: Content is protected !!