ಮನುಷ್ಯರಲ್ಲಿ ದೇವರನ್ನು ಕಾಣುವ ಮೂಲಕ ಹಬ್ಬಗಳನ್ನು ವೈಚಾರಿಕವಾಗಿ ಆಚರಿಸಲು ಬಸವಪ್ರಭುಶ್ರೀ ಕರೆ
ಸುದ್ದಿ360 ದಾವಣಗೆರೆ, ಆ.02: ದೇವರು, ಹಬ್ಬ ಹಾಗೂ ಮೂಡನಂಬಿಕೆಗಳ ಹೆಸರಿನಲ್ಲಿ ಪೌಷ್ಠಿಕವಾದ ಹಾಲನ್ನು ವ್ಯರ್ಥ ಮಾಡದೆ, ಅವಶ್ಯಕತೆ ಇರುವ ಮಕ್ಕಳ, ರೋಗಿಗಳ, ಹಿರಿಯರ ಸೇವನೆಗೆ ನೀಡುವ ಮೂಲಕ ಮನುಷ್ಯರಲ್ಲಿ ದೇವರನ್ನು ಕಾಣಬೇಕು. ಮನುಷ್ಯರೇ ನಿಜವಾದ ದೇವರು ಎಂದು ವಿರಕ್ತಮಠದ ಬಸವಪ್ರಭುಶ್ರೀ ಹೇಳಿದರು. ಶ್ರೀಗಳು ನಗರದ ದೊಡ್ಡಪೇಟೆಯಲ್ಲಿರುವ ವಿರಕ್ತಮಠದಲ್ಲಿ ಮಕ್ಕಳಿಗೆ ಹಾಲುಣಿಸುವುದರ ಮೂಲಕ ಹಾಲು ಕುಡಿಸುವ ಹಬ್ಬ, ಬಸವ ಪಂಚಮಿ ಆಚರಣೆಗೆ ಚಾಲನೆ ನೀಡಿ, ಆಶೀರ್ವಚನ ನೀಡಿದರು. ಪಂಚಮಿ ಹಬ್ಬ ಎಂದರೆ ಎಲ್ಲರೂ ನನ್ನ ಪಾಲು ಅಜ್ಜನ ಪಾಲು … Read more