ದಾವಣಗೆರೆ ವಿ ವಿ ಕುಲಪತಿಯಾಗಿ ಪ್ರೊ.ಬಿ.ಡಿ. ಕುಂಬಾರ ನೇಮಕ

ಸುದ್ದಿ360, ದಾವಣಗೆರೆ, ಜು.12: ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಡಿ.ಕುಂಬಾರ ಅವರು ದಾವಣಗೆರೆ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ನೇಮಕವಾಗಿದ್ದಾರೆ. ಕುಲಪತಿಯಾಗಿದ್ದ ಪ್ರೊ. ಶರಣಪ್ಪ ವಿ.ಹಲಸೆ ಅವರು ಮಾರ್ಚ್ 26ರಂದು ನಿವೃತ್ತಿಯಾಗಿದ್ದರು. ಪ್ರೊ.ಪಿ.ಲಕ್ಷ್ಮಣ ಅವರು ಹಂಗಾಮಿ ಕುಲಪತಿಯಾಗಿದ್ದರು. ಪ್ರೊ. ಕುಂಬಾರ ಅವರು ಸೋಮವಾರ ವಿಶ್ವವಿದ್ಯಾನಿಲಯದ ನಾಲ್ಕನೇ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು.

error: Content is protected !!