ದಾವಣಗೆರೆ: ಅಭಿವೃದ್ಧಿ – ಮತದಾನ ಕುರಿತು ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದೇನು?

ದಾವಣಗೆರೆ, ಏ. 1: ಅಭಿವೃದ್ಧಿಯ ವಿಷಯ ಬಂದಾಗ ನೆನಪಾಗುವ ಮಲ್ಲಿಕಾರ್ಜುನ್, ಮತದಾನದ ಸಂದರ್ಭದಲ್ಲಿ ನೆನಪಾಗದಿರುವುದು ಬೇಸರದ ಸಂಗತಿ ಎಂದು ಎಸ್ ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ  ಡಾ. ಪ್ರಭಾ ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಸೇಂಟ್ ಜಾನ್ಸ್  ಶಾಲಾ ಆವರಣದಲ್ಲಿ 34ನೇ ವಾರ್ಡ್ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ ರವರು ಅಭಿವೃದ್ಧಿಯ ವಿಷಯ ಬಂದಾಗ ನೆನಪಾಗುವ ಮಲ್ಲಿಕಾರ್ಜುನ್, ಮತದಾನದ ಸಂದರ್ಭದಲ್ಲಿ ನೆನಪಾಗದಿರುವುದು ಮಾತ್ರ ಬೇಸರವಾಗುತ್ತದೆ … Read more

ಸ್ಯಾಮ್ ಸನ್ ಡಿಸ್ಟಿಲರಿಯಲ್ಲೇನು ನಂದಿನಿ ಹಾಲು ತಯಾರಿಸುತ್ತಿದ್ದರಾ!?

ದಾವಣಗೆರೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಪ್ರಶ್ನೆ ಸುದ್ದಿ360 ದಾವಣಗೆರೆ ಜ.18:  ನಾವು ಬುದ್ದಿಹೀನರೇ ಹಾಗಾಗಿಯೇ ನಾವು ವನ್ಯ  ಜೀವಿಗಳ ತಂಟೆಗೆ ಹೋಗಿಲ್ಲ. ಬುದ್ದಿವಂತರು ಅವುಗಳನ್ನು ತಮ್ಮ ಫಾರ್ಮ್ ಹೌಸ್‍ನಲ್ಲಿ ಇಟ್ಟುಕೊಂಡಿದ್ದರು. ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಳ್ಳುವವರು ಬುದ್ದಿವಂತಿಕೆಯಿಂದ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಕುಟುಕಿದ್ದಾರೆ. ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವನ್ಯ ಜೀವಿ ಪತ್ತೆ … Read more

ಕುಹೂ… ಕುಹೂ… ದಾವಣಗೆರೆ ಕೋಗಿಲೆ – ಡಾ. ಪುನೀತ್ ರಾಜ್ ಕುಮಾರ್ ಅವಾರ್ಡ್

ಎಸ್‌ಎಸ್‌ಎಂ ಜನ್ಮದಿನ – Kannada-Hindi Karoke Singing Talent Hunt Show ಸುದ್ದಿ360 ದಾವಣಗೆರೆ, ಆ.25: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಜನ್ಮ ದಿನದ ಅಂಗವಾಗಿ ಕುಹೂ ಕುಹೂ ದಾವಣಗೆರೆ ಕೋಗಿಲೆ, ಕನ್ನಡ ಮತ್ತು ಹಿಂದಿ ಹಾಡುಗಳ ಕರೋಕೆ ಗಾಯನ ಸ್ಪರ್ಧೆ ಹಾಗೂ ಡಾ. ಪುನೀತ್‌ರಾಜ್‌ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದು, ಸಮಾರಂಭದಲ್ಲಿ ನಟ ದರ್ಶನ್ ಭಾಗವಹಿಸಲಿದ್ದಾರೆ ಎಂದು ದಿನೇಶ್ ಕೆ. ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕುಹೂ ಕುಹೂ … Read more

ಸಿದ್ದರಾಮಯ್ಯ ಅಮೃತ ಮಹೋತ್ಸವ: ಎಸ್ ಎಸ್ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ

ಸುದ್ದಿ360 ದಾವಣಗೆರೆ ಜು.31: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಹಿನ್ನೆಲೆ ಆ.1ರ ಸೋಮವಾರ ಮಧ್ಯಾಹ್ನ 2.30 ಗಂಟೆಗೆ ಆನೆಕೊಂಡದ ಬಸವೇಶ್ವರ ದೇವಸ್ಥಾನದ ಆವರಣದಿಂದ ಬೃಹತ್ ಬೈಕ್ ರ್ಯಾಲಿಯನ್ನು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಆನೆಕೊಂಡದ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಕೊರಚರಹಟ್ಟಿ, ಅರಳಿಮರ ಸರ್ಕಲ್, ಹಳೆ ಬೇತೂರ್ ರಸ್ತೆ, ಭಾಷಾ ನಗರ ಮುಖ್ಯ ರಸ್ತೆ ಮುಖಾಂತರ ಅಕ್ಬರ್ ರಾಜ್ ಸರ್ಕಲ್, ಎಸ್. ಪಿ.ಎಸ್ ನಗರ, ಹೊಂಡದ ಸರ್ಕಲ್ ಮಾರ್ಗವಾಗಿ ಚೌಕಿಪೇಟೆ, ಬಂಬೂ … Read more

error: Content is protected !!