ದಾವಣಗೆರೆಯಲ್ಲಿ ಸಂಚಾರಿ ನಿಯಮ ಅರಿವು ಮೂಡಿಸುವ ಚಂದದ ಕಲಿಕೆಯ ‘ಟ್ರಾಫಿಕ್ ಅವೇರ್ನೆಸ್ ಪಾರ್ಕ್’ – ನೀವೂ ಒಮ್ಮೆ ಭೇಟಿ ನೀಡಿ…

ಸುದ್ದಿ360 ದಾವಣಗೆರೆ ಜ.11: ರಸ್ತೆ ಮೇಲಿನ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ರಸ್ತೆಬದಿಯಲ್ಲಿನ ಸಂಚಾರಿ ನಿಯಮಗಳ ಸೂಚನಾ ಫಲಕಗಳ ಬಗ್ಗೆ ವಿದ್ಯಾರ್ಥಿದಿಸೆಯಿಂದಲೇ ಅರಿವು ಮೂಡಿಸಿದಲ್ಲಿ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಅಭಿಪ್ರಾಯಪಟ್ಟರು. ನಗರದ ನಿಜಲಿಂಗಪ್ಪ ಬಡಾವಣೆಯ  ಶ್ರೀಮತಿ ಗಂಗೂಬಾಯಿ ಹಾನಗಲ್ಲ ಉದ್ಯಾನವನ (ಗಸೆಗಸೆ ಪಾರ್ಕ್)  ದಲ್ಲಿ ನಿರ್ಮಿಸಲಾಗಿದ್ದ ‘‘ಸಂಚಾರ ಜಾಗೃತಿ ಉದ್ಯಾನವನ’ ಉದ್ಘಾಟಿಸಿ ಅವರು ಮಾತನಾಡಿದರು. ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಸಹಯೋಗದೊಂದಿಗೆ 24ಕ್ಕೂ ಹೆಚ್ಚು ಸೂಚನಾ … Read more

‘ಶೌಚಾಲಯ ಸೌಲಭ್ಯವಿಲ್ಲದೆ ಉದ್ಘಾಟನೆಗೊಂಡಿರುವ ಸ್ಮಾರ್ಟ್ ಸಿಟಿ ಬಸ್ ಸ್ಟ್ಯಾಂಡ್ – ನಾಚಿಕೆ ಯಾರಿಗೆ ಆಗಬೇಕು?’ ಕೆ.ಎಲ್.ಹರೀಶ್ ಬಸಾಪುರ

ಶೌಚಾಲಯವಿದ್ದರೂ ಬಳಕೆಗೆ ಲಭ್ಯವಿಲ್ಲ ಹಳೆ ದಾವಣಗೆರೆಯಲ್ಲಿ ತಿಂಗಳ ಹಿಂದೆಯೇ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಸ್ ಸ್ಟ್ಯಾಂಡ್ ನಿರ್ಮಾಣಗೊಂಡು, ಸಾರ್ವಜನಿಕ  ಉಪಯೋಗಕ್ಕೆ ನೀಡಲಾಗಿದೆ. ಇದಾಗಿ ತಿಂಗಳು ಕಳೆಯುತ್ತಾ ಬಂದರು ಶೌಚಾಲಯ ಮಾತ್ರ ಬೀಗ ತೆರೆದಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಎಂದರೆ ಕಳಪೆ ಕಾಮಗಾರಿಗಳು ಹಾಗೂ ಮೂಲಭೂತ ಸೌಕರ್ಯ ಒದಗಿಸದೆ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆಗೊಂಡ ಯೋಜನೆಗಳು ಎಂಬ ಸಾರ್ವಜನಿಕ ಆಕ್ರೋಶಕ್ಕೆ ಒಳಗಾಗಿರುವ ಯೋಜನೆಗಳಲ್ಲಿ ಯೋಜನಯೇ ಹಳೆ ದಾವಣಗೆರೆಯಲ್ಲಿ ನಿರ್ಮಾಣಗೊಂಡಿರುವ ನೂತನ ಬಸ್ ಸ್ಟ್ಯಾಂಡ್ ಕೂಡ ಸೇರಿದೆ ಎಂದು ಕೆ.ಎಲ್ … Read more

ದಾವಣಗೆರೆ: ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ ಜಿಲ್ಲಾ ಉಸ್ತುವಾರಿ ಸಚಿವರು

ಸುದ್ದಿ360 ದಾವಣಗೆರೆ, ಜೂನ್ 28: ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ್, ಸಚಿವರಾದ ಎಸ್ ಟಿ ಸೋಮಶೇಖರ್ ಇಂದು ದಾವಣಗೆರೆಗೆ ಆಗಮಿಸಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಸಂಸದರಾದ ಜಿಎಂ ಸಿದ್ದೇಶ್ವರ್, ಶಾಸಕರಾದ ರವೀಂದ್ರನಾಥ್,  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ವರಿಷ್ಠಾಧಿಕಾರಿ ರಿಷ್ಯಂತ್ ಕುಮಾರ್, ಮಹಾಪೌರರಾದ ಜಯಮ್ಮ ಆರ್ ಗೋಪಿ ನಾಯ್ಕ್, ನಿಕಟಪೂರ್ವ ಮಹಾಪೌರರಾದ ಎಸ್ ಟಿ ವೀರೇಶ್ ಮಹಾನಗರ ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಗಾಜಿನ ಮನೆಗೆ ದಾರಿ ಕಾಣದೆ ಪರದಾಟ

ಸುದ್ದಿ360 ದಾವಣಗೆರೆ: ದೇವನಗರಿ ದಾವಣಗೆರೆಗೆ ಬರುವ ಪ್ರವಾಸಿಗರು ಗ್ಲಾಸ್ ಹೌಸ್ ನೋಡದಿದ್ದರೆ ಪ್ರವಾಸ ಪೂರ್ಣವಾಗುವುದಿಲ್ಲ. ಅಂತೆಯೇ ಇಲ್ಲಿ ಯಾರಿಗಾದರೂ ವಾಯುವಿಹಾರ ಮತ್ತು ಮನಸ್ಸಿಗೆ ಮುದ ನೀಡುವ ಜಾಗ ಹೇಳಿ ಎಂದರೆ ಥಟ್ ಅಂತ ಬರುವ ಮೊದಲ ಉತ್ತರ ಗ್ಲಾಸ್ ಹೌಸ್. ಹೀಗಿದ್ದರೂ ಗಾಜಿನ ಮನೆ ಸಂಪರ್ಕಿಸುವ ರಸ್ತೆ ಕಾಮಗಾರಿಯಿಂದಾಗಿ ಪ್ರವಾಸಿಗರಿಂದ ದೂರ ಸರಿದಿದೆ. ಗಾಜಿನ ಮನೆಗೆಂದು ಆಗಮಿಸುವ ಪ್ರವಾಸಿಗರು ನೋಡು ಗಾಜಿನ ಮನೆ ಕಾಣಿಸುತ್ತಿದೆ. ಇನ್ನೇನು ಬಂದೇಬಿಟ್ಟೆವು ಎಂದು ಖುಷಿಯಾಗುತ್ತಿದ್ದಂತೆ ಅಗೆದು ಹಾಕಿರುವ ರಸ್ತೆ ದುತ್ತೆಂದು ಎದುರಾಗುತ್ತದೆ. … Read more

error: Content is protected !!