ದಾವಣಗೆರೆ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಡಾ. ಕೆ ಅರುಣ್ ಅಧಿಕಾರ ಸ್ವೀಕಾರ

ಸುದ್ದಿ360 ದಾವಣಗೆರೆ, ಏ. 24: ದಾವಣಗೆರೆ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಡಾ. ಕೆ ಅರುಣ್ ಐಪಿಎಸ್ ರವರು  ಇಂದು ಅಧಿಕಾರ ವಹಿಸಿಕೊಂಡರು. ನೂತನ ಅಧಿಕಾರಿ ಡಾ. ಅರುಣ್ ಅವರು  ಈ ಮೊದಲು ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕಲಬುರಗಿಯ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಮೊದಲು ಜಿಲ್ಲೆಯ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಬಿ. ರಿಷ್ಯಂತ್‍ ಅವರು ಚುನಾವಣೆ ಮಾರ್ಗಸೂಚಿಯನ್ವಯ ವರ್ಗಾವಣೆ ಹೊಂದಿದ್ದಾರೆ. ಸಿ. ಬಿ. ರಿಷ್ಯಂತ್‍ ಅವರ … Read more

ಡಾ.ಕೆ. ಅರುಣ್ ದಾವಣಗೆರೆ ನೂತನ ಎಸ್ ಪಿ

ಸುದ್ದಿ360, ದಾವಣಗೆರೆ ಏ.23: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಆಗಿ ಡಾ.ಕೆ. ಅರುಣ್ ನಿಯೋಜನೆಗೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಬಿ. ರಿಷ್ಯಂತ್ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಡಾ.ಕೆ. ಅರುಣ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ಆದರೆ, ರಿಷ್ಯಂತ್ ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ಈ ಹಿಂದೆ ವಿಜಯನಗರ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಡಾ. ಅರುಣ್ ಅವರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಆಗುವ … Read more

ಹೊರ ರಾಜ್ಯಕ್ಕೆ ಟ್ರ್ಯಾಕ್ಟರ್ ಬಿಡಿ ಭಾಗಗಳ ಅಕ್ರಮ ಮಾರಾಟ – ತಡೆದ ದಾವಣಗೆರೆ ಪೊಲೀಸರು

ಸುದ್ದಿ360 ದಾವಣಗೆರೆ, ಸೆ.07: ಯಾವುದೇ ದಾಖಲೆ ಹೊಂದಿರದೇ ಆರ್‌ಟಿಒ ದಿಂದ ಪರವಾನಿಗೆ ಪಡೆಯದೇ ದಾವಣಗೆರೆಯಿಂದ ಪಂಜಾಬ್‌ಗೆ ಅಕ್ರಮವಾಗಿ ಟ್ರಾಕ್ಟರ್ ಬಿಡಿ ಭಾಗಗಳನ್ನು ಮಾರಾಟವಾಗುತ್ತಿದ್ದುದನ್ನು ಜಿಲ್ಲಾ ಪೊಲೀಸರು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಆರ್‌ಬಿ ಘಟಕದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಿ. ಎಸ್. ಬಸವರಾಜ್ ಮತ್ತು ಅಧಿಕಾರಿ, ಸಿಬ್ಬಂದಿಗಳು ದಾವಣಗೆರೆ ನಗರದ ರೈತರ ಸಂಘದ ಕಾಂಪೌಂಡ್, ಬಿಲಾಲ್ ಕಾಂಪೌಂಡ್ ಬಳಿ ಇರುವ ಗ್ಯಾರೇಜುಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಹಳೇಯ ಟ್ರಾಕ್ಟರ್‌ಗಳನ್ನು … Read more

ದುಷ್ಚಟದ ಸ್ನೇಹಿತರೆಡೆ ಅಸಡ್ಡೆ ತೋರದೆ ಸನ್ನಡತೆಯತ್ತ ಕರೆತನ್ನಿ: ಸಿ.ಬಿ. ರಿಷ್ಯಂತ್

ವಿದ್ಯಾರ್ಥಿಗಳು, ಯುವಜನತೆ ಸೇರಿದಂತೆ ನಾಗರಿಕರು ತಮ್ಮ ಸುತ್ತ ಯಾವುದೇ ರೀತಿಯ ತಪ್ಪು ನಡೆದಾಗ ಅದನ್ನು ತಪ್ಪು ಎಂದು ಧೈರ್ಯವಾಗಿ ಹೇಳುವ, ಖಂಡಿಸುವ ಮತ್ತು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ಸಲಹೆ ನೀಡಿದರು.

error: Content is protected !!