ಖೋ-ಖೋ, ಕಬ್ಬಡ್ಡಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅತ್ತಿಗೆರೆ ಕಾಲೇಜು ವಿದ್ಯಾರ್ಥಿಗಳು

sttigere-state-level-kho-kho-kabbaddi

ಸುದ್ದಿ360 ದಾವಣಗೆರೆ, ಸೆ.30: ದಾವಣಗೆರೆ ಜಿಲ್ಲೆ ಅತ್ತಿಗೆರೆಯ ಶ‍್ರೀಮತಿ ಚನ್ನಪ್ಪ ಶಿವಲಿಂಗಮ್ಮ ಗುರುಬಸಪ್ಪ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ರಾಜ್ಯ ಮಟ್ಟದ ಕ್ರೀಡೆಗೆ ಆಯ್ಕೆಯಾಗಿದ್ದಾರೆ. ಇಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಲೀಲಾವತಿ ಎ.ಎಂ. ಖೋ-ಖೋ ಟೀಂಗೆ ಹಾಗೂ ರಮ್ಯಾ ಹೆಚ್‍.ಟಿ. ಕಬ್ಬಡ್ಡಿ ಟೀಂಗೆ ಆಯ್ಕೆ ಯಾಗಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕಾಲೇಜು ಆಡಳಿತ ಮಂಡಳಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ  ಈ ಇಬ್ಬರು ವಿದ್ಯಾರ್ಥಿನಿಯರನ್ನು  ಪ್ರಶಂಸಿಸಿದೆ.   ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ … Read more

ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಅಜಯ್ ದ್ವಿತೀಯ

ಸುದ್ದಿ360 ಶಿವಮೊಗ್ಗ ನ. 12: ಶಿವಮೊಗ್ಗದ ಆಕ್ಸ್ ಫರ್ಡ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ  ಕರಾಟೆ ತರಬೇತಿ ದಾರರಾದ  ಸನ್ ಸೈ  ಶ್ರೇಯಸ್ ರವರ ವಿದ್ಯಾರ್ಥಿ ಯಾದ  ಅಜಯ್ ಮಂಗಳೂರಿನ ಕಟೀಲಿನಲ್ಲಿ ನಡೆಯುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ 60 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು  ಪಡೆದಿದ್ದಾರೆ. ವಿಜೇತ ಕ್ರೀಡಾಪಟುವಿಗೆ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಅಭಿನಂದಿಸಿದ್ದಾರೆ.

ಪವರ್ ಲಿಫ್ಟಿಂಗ್‌: ತಂದೆ-ಮಗ ಸಾಧನೆ – ರಾಷ್ಟ್ರಮಟ್ಟಕ್ಕೆ ಆಯ್ಕೆ

ಸುದ್ದಿ360 ದಾವಣಗೆರೆ, ಜೂ16:  ಮೈಸೂರಿನಲ್ಲಿ ಜೂ.10ರಿಂದ 12ರವರೆಗೆ ನಡೆದ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಾವಣಗೆರೆಯ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿ ವಿ. ರಕ್ಷಿತ್ ಚಿನ್ನದ ಪದಕ ಮತ್ತು ರಕ್ಷಿತ್ ತಂದೆ, ಶ್ರೀ ಬೀರೇಶ್ವರ ವ್ಯಾಯಾಮ ಶಾಲೆ ಕ್ರೀಡಾಪಟು ಪಿ. ವಿಶ್ವನಾಥ್ ಕಂಚಿನ ಪದಕಕ್ಕೆ ಭಾಜನರಾಗುವ ಮೂಲಕ ತಂದೆ-ಮಗ  ಇಬ್ಬರೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಮೂಲಕ ಹೈದರಾಬಾದ್‌ನಲ್ಲಿ ಜು.೫ರಿಂದ ೧೦ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ತಂದೆ ಮತ್ತು ಮಗ … Read more

error: Content is protected !!