ಅವರ ಬಿಟ್ಟು ಅವರ ಬಿಟ್ಟು ಇವರ್ಯಾರು ?

ಸುದ್ದಿ360: ರಾಜಕಾರಣಿಗಳು ತಮ್ಮ ತಮ್ಮ ಸ್ತರದಲ್ಲಿ ನಡೆಯುವ ವಿದ್ಯಮಾನಗಳಿಗಿಂತಲೂ ವಿರೋಧಿ ಪಾಳಯದಲ್ಲಿನ ಆಗುಹೋಗುಗಳಲ್ಲಿ ಅತೀವ ಆಸಕ್ತಿ ವಹಿಸಿರುತ್ತಾರೆ. ಅಲ್ಲದೆ ಅದರಿಂದ ರಾಜಕೀಯವಾಗಿ ಆಗುವ ಲಾಭದ ಲೆಕ್ಕಾಚಾರದಲ್ಲಿ ಸದಾ ಇರುತ್ತಾರೆ ಎಂದರೆ ತಪ್ಪಾಗಲಾರದು.  ಇದು ಚುನಾವಣೆಗಳು ಸಮೀಪಿಸುತ್ತಿದ್ದಂತೆ ಮತ್ತಷ್ಟು ಬಿರುಸುಗೊಳ್ಳುತ್ತದೆ. ಹಾಗೆಯೇ ಕೆಸರೆರೆಚಾಟವೂ ಶುರುವಾಗುತ್ತೆ ನೋಡಿ… ಮತದಾರ ಮಾತ್ರ ಹೈರಾಣಾಗಿ ಹೋಗುತ್ತಾನೆ. ನಾವು ಮತ ಚಲಾಯಿಸಿದ್ದು ಈ ವ್ಯಕ್ತಿಗಾ. . .!? ಎಂಬ ಆಶ್ಚರ್ಯದಾಯಕ ಪ್ರಶ್ನೆಗಳು ಉದ್ಭವಿಸೋದ್ರಲ್ಲಿ ಸಂಶಯವಿಲ್ಲ. ಬಲ್ಲವನೇ ಬಲ್ಲ ಬೆಲ್ಲದಾ ಸವಿಯ… ಎಂಬಂತೆ ರಾಜಕಾರಣಿಗಳಿಗಷ್ಟೇ ಗೊತ್ತು … Read more

‘ಅಮಿತ್ ಶಾ ಹತ್ರ ಏನು ಮಂತ್ರದಂಡ ಇಲ್ಲ – ನರೇಂದ್ರ ಮೋದಿ ಬಂದ್ರು ಇಲ್ಲಿ ಗೆಲ್ಲಲ್ಲ’

ಸುದ್ದಿ360 ದಾವಣಗೆರೆ, ಡಿ.30: ಅಮಿತ್ ಶಾ ರಾಜ್ಯಭೇಟಿ ಕುರಿತಂತೆ, ಅಮಿತ್ ಶಾ ಹತ್ರ ಏನು ಮಂತ್ರದಂಡ ಇದೆಯಾ, ಅವರು ಎಷ್ಟು ಬಾರಿ ಬಂದ್ರು ಅಷ್ಟೇ, ಅವರ ಜಾದೂ ಇಲ್ಲೆನು ನಡೆಯಲ್ಲ. ನರೇಂದ್ರ ಮೋದಿಯವರೇ ಬಂದ್ರೂ ಬಿಜೆಪಿ ಗೆಲ್ಲಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಮಧ್ಯಮದವರಿಗೆ ಪ್ರತಿಕ್ರಿಯಿಸಿದರು. ಅವರು ದಾವಣಗೆರೆಯಲ್ಲಿ ನಡೆಯುತ್ತಿರುವ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ನಗರದ ಬಾಪೂಜಿ ಕಾಲೇಜು ಗ್ರೌಂಡ್‍ನಲ್ಲಿ ಸಿದ್ಧರಾಮಯ್ಯನವರು ಹೆಲೆಕಾಪ್ಟರ್‍ನಿಂದ ಇಳಿಯುತ್ತಿದ್ದ ಹಾಗೆ ಚಾಮುಂಡೇಶ್ವರಿ ತಾಯಿ … Read more

ಜಿಂಕೆ ಮರಿ ಓಡ್ತಾಯ್ತೆ ನೋಡ್ಲಾ ಮಗಾ. . . ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಅಕ್ರಮ ವನ್ಯಜೀವಿ ಸಾಕಾಣಿಕೆ?

ಆಡಳಿತ ಪಕ್ಷಕ್ಕೆ ನುಂಗಲಾರದ ತುತ್ತಾಯಿತೆ. . . !? ಸುದ್ದಿ360 ದಾವಣಗೆರೆ: ಇಲ್ಲಿ ಯಾರನ್ನಾದರೂ ರಾಜಕೀಯ ಕುರಿತು ಮಾತಿಗೆಳೆದರೆ, ಜಿಂಕೆ ನಿಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಅಷ್ಟೇ ಅಲ್ಲ ಕೃಷ್ಣಮೃಗ, ಕಾಡು ಹಂದಿ, ನರಿ, ಮುಂಗಸಿ ಇವುಗಳೂ ಕೂಡ ನಿಮ್ಮ ಕಣ್ಣಮುಂದೆ ಬರದೇ ಇರವು. ಅರೆರೆ ರಾಜಕೀಯಕ್ಕು ಈ ವನ್ಯಜೀವಿಗಳಿಗೂ ಏನು ಸಂಬಂಧ ಅಂತೀರಾ . . .? ನಗರದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ವನ್ಯಜೀವಿಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಳೆದ ಒಂದು ವಾರದಿಂದ ದಾವಣಗೆರೆಯಲ್ಲಿ … Read more

ವನ್ಯಜೀವಿ ಪತ್ತೆ ಪ್ರಕರಣ: ಎಸ್ ಎಸ್ ಮಲ್ಲಿಕಾರ್ಜುನ್ ಬಂಧನಕ್ಕೆ ಆಗ್ರಹ

ಉಪ್ಪು ತಿಂದವರು ನೀರು ಕುಡಿಯಲೇಬೇಕು- ಜಿ.ಎಂ. ಸಿದ್ದೇಶ್ವರ್ ಸುದ್ದಿ360 ದಾವಣಗೆರೆ ಡಿ.25:  ನಗರದ ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ವನ್ಯಜೀವಿಗಳ ಪತ್ತೆಯಾಗಿದ್ದು, ಇದು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಒಡೆತನದ ಮಿಲ್ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಹೀಗಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಅಧಿಕಾರಿಗಳು ಹಿಂದೆಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎಫ್ಓ ಯಾರದೋ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅನುಮಾನ ವ್ಯಕ್ತಪಡಿಸಿದರು. ಅವರು ಇಂದು ಜಿಎಂಐಟಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದಲ್ಲಿ … Read more

ಎಸ್ಸೆಸ್ಸೆಂ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ: ಮೇಯರ್ ಎಚ್ಚರಿಕೆ

ಸುದ್ದಿ360  ದಾವಣಗೆರೆ ಡಿ.25: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಒಡೆತನದ ಫಾರ್ಮ್‌ಹೌಸ್‌ನಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಸಾಕಣೆ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ಎಸ್ಸೆಸ್ಸೆಂ ಒಡೆತನದ ಕಲ್ಲೆಶ್ವರ ರೈಸ್‌ಮಿಲ್ ಆವರಣದಲ್ಲಿ ಅಕ್ರಮವಾಗಿ ಸಾಕಣೆ ಮಾಡಿದ್ದ ಜಿಂಕೆ, ಕೃಷ್ಣಮೃಗ, ನರಿ, ಮುಂಗುಸಿ, ಕಾಡುಹಂದಿ, ಗೌಜುಗ ಸಏರಿದಂತೆ ಸುಮಾರು ೩೦ಕ್ಕೂ ಅಧಿಕ ವನ್ಯಜೀವಿಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರಷ್ಟೇ ಹೊರತಾಗಿ ತಪ್ಪಿತಸ್ಥರನ್ನು ಇದುವರೆಗೂ ಬಂಧಿಸಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. … Read more

error: Content is protected !!