ಶ್ರೀಗಂಧದಲ್ಲಿ ಮಂತ್ರಮುಗ್ಧಗೊಳಿಸಿದ ತಂದೆ-ಮಗಳ ಸಂಗೀತ ಸುಧೆ

shrigandha-residency-sangeetha-shrigandha-davangere

ದಾವಣಗೆರೆ: ನಗರದ ಪಿ.ಬಿರಸ್ತೆಯಲ್ಲಿರುವ ಶ್ರೀ ಗಂಧ ರೆಸಿಡೆನ್ಸಿಯ ಗಿಹಾನ್‍ ಸಭಾಂಗಣದಲ್ಲಿ ಭಾನುವಾರ ಸಂಜೆ  ಮನೋಲ್ಲಾಸ ನೀಡುವಂತಹ ಸಂಗೀತ ಕಾರ್ಯಕ್ರಮ ಕಲಾರಸಿಕರನ್ನು ಮಂತ್ರಮುಗ್ಧಗೊಳಿಸಿತು. ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ರಿ. ಗದಗ, ಶ‍್ರೀಗಂಧ ರೆಸಿಡಿನ್ಸಿ, ಪಿ.ಬಿ.ರಸ್ತೆ, ದಾವಣಗೆರೆ ಹಾಗೂ ಕಲಾ ವಿಕಾಸ ಪರಿಷತ್‍ ರಿ. ಗದಗ  ಇವರ ಸಂಯುಕ್ತಾಶ್ರಯದಲ್ಲಿ ನಡೆದ ‘ಸಂಗೀತ ಶ‍್ರೀಗಂಧ’ ಮಾಸಿಕ ಕಾರ್ಯಕ್ರಮ-2ರಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದ, ಆಕಾಶವಾಣಿ ಕಲಾವಿದರೂ ಆದ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರು, ಧಾರವಾಡ ಇವರ ತಬಲಾ ಸಾಥ್‍ನಲ್ಲಿ ಸ್ವತಃ ತಮ್ಮ … Read more

ಚಿಕಿತ್ಸೆಯ ಸಹಾಯಕ್ಕಾಗಿ ಕೈ ಚಾಚಿರುವ 13ರ ಬಾಲಕ ಕೌಶಿಕ್ ಗೆ ಯೋಧನಾಗುವ ಬಯಕೆ

kowshik

ಹೊಳೆಹೊನ್ನೂರು, (ಶಿವಮೊಗ್ಗ): ಆತನ  ಹೆಸರು ಕೌಶಿಕ್ ವಯಸ್ಸು 13 ವರ್ಷ,  ಊರು ಶಿವಮೊಗ್ಗ ಸಮೀಪದ ಹೊಳೆ ಹೊನ್ನುರು. ಆತನ ಬಹುದೊಡ್ಡ ಆಸೆ ದೇಶ ಕಾಯುವ ಸೈನಿಕನಾಗಬೇಕು, ರಕ್ಷಕನಾಗಬೇಕು ಎಂಬುದು. ಅದು ಫಲಿಸುತ್ತದೋ ಇಲ್ಲವೋ ತಿಳಿಯದು. ಆದರೆ ಅವನೀಗ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಈ ಮಗುವಿನ ಜೀವ ಉಳಿಸಲು ಮಣಿಪಾಲ ಆಸ್ಪತ್ರೆಯ ವೈದ್ಯರು ಬೋನ್ ಮ್ಯಾರೋ ಬದಲಾವಣೆ ಚಿಕಿತ್ಸೆಗೆ (ಮೂಳೆ ಮಜ್ಜೆಯ ಕಸಿ) ಸೂಚಿಸಿದ್ದಾರೆ. ಆ ಚಿಕಿತ್ಸೆಯ ಖರ್ಚು ಬರೋಬ್ಬರಿ  40 ಲಕ್ಷ ರೂಪಾಯಿ. ಒಂದೊತ್ತಿನ ಊಟಕ್ಕು ಇನ್ನೊಬ್ಬರ ಮುಂದೆ … Read more

ಪಿ ಎಂ ಶ್ರೀ ಕೇಂದ್ರೀಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

kendriya vidyalaya davangere

ದಾವಣಗೆರೆ: ಪಿ ಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ 1 ನೇ ತರಗತಿ ಮತ್ತು ಬಾಲ್ವಾಟಿಕ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಪೋಶಕರು ಜಾಲತಾಣದಲ್ಲಿ ಕೊಟ್ಟಿರುವ ಸೂಚನೆಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಲು ಅವಕಾಶವಿರುತ್ತದೆ.1ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಬಳಸಿರಿ. https://kvsonlineadmission.kvs.gov.in/index.html ದಾವಣಗೆರೆಯಲ್ಲಿ 2023-24 ರಿಂದ ಬಾಲ್ವಾಟಿಕ -3 (ಯುಕೆಜಿ) ಪ್ರಾರಂಭಿಸಲಾಗಿದೆ. ಬಾಲ್ವಾಟಿಕ-3 ಪ್ರವೇಶಾತಿಗೆ ಈ ಕೆಳಗಿನ‌ ಲಿಂಕ್ ಬಳಸಬಹುದಾಗಿದೆ. … Read more

ಹರಿಹರ ರೈಲ್ವೇ ಪ್ಲಾಟ್‍ಫಾರ್ಮ್‍ನಲ್ಲಿ ಅಪರಿಚಿತ ಶವ ಪತ್ತೆ

ದಾವಣಗೆರೆ: ಹರಿಹರ ರೈಲ್ವೇನಿಲ್ದಾಣದ ಪ್ಲಾಟ್‍ಫಾರ್ಮ್‍ ನಂ.1 ರ ಕಿ.ಮೀ. ನಂ 338/000-100 ರ ನಡುವೆ ಅಪರಿಚಿತ  ವ್ಯಕ್ತಿಯ ಶವ ಮೇ.29ರ ಬೆಳಗ್ಗೆ ಪತ್ತೆಯಾಗಿದ್ದು, ದಾವಣಗೆರೆ ರೈಲ್ವೇ ಪೊಲೀಸ್‍ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿ 35-40 ವರ್ಷ ವಯಸ್ಸಿನ ಅಪರಿಚಿತ ಪುರುಷ ವ್ಯಕ್ತಿಯಾಗಿದ್ದು, 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಸುಮಾರು ಒಂದು ಇಂಚು ಉದ್ದನೆಯ ಬಿಳಿ ಮಿಶ್ರಿತ ಕಪ್ಪು ಬಣ್ಣದ ತಲೆ ಕೂದಲು, ಕಪ್ಪು ಬಣ್ಣದ ಮೀಸೆ ಹೊಂದಿದ್ದು, ಗಡ್ಡವನ್ನು … Read more

ವಿದೇಶದಲ್ಲಿ ಉದ್ಯೋಗವೇ ?ಇಲ್ಲೊಂದು ಕಿವಿಮಾತಿದೆ ನೋಡಿ. . .!

street play-davan college

ದವನ್‍ ಕಾಲೇಜು ವಿದ್ಯಾರ್ಥಿಗಳ ಬೀದಿನಾಟಕ ದಾವಣಗೆರೆ: ನೋಡಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದು ವಿಚಾರಿಸಿ ಯೋಚಿಸಿದಾಗ ವಿಷಯ ತಿಳಿವುದು. . .  ಹೀಗೆ ಬೋರ್ಗರೆದ ದನಿ ಇಂದು ನಗರದ ರಾಮ್‍ ಅಂಡ್‍ ಕೋ ಸರ್ಕಲ್‍ ನಲ್ಲಿ ನೆರೆದಿದ್ದವರ ಮನಕ್ಕೆ ನಾಟಿತು ಎಂದರೆ ತಪ್ಪಾಗಲಾರದು. ಹೌದು ನಗರದ ದವನ್‍ ಕಾಲೇಜು ವಿದ್ಯಾರ್ಥಿಗಳು ಇಂದು ರಾಮ್‍ ಅಂಡ್‍ ಕೋ ಸರ್ಕಲ್‍ನಲ್ಲಿ ಬೀದಿನಾಟಕ ಮಾಡುವ ಮೂಲಕ ಇಂದಿನ ಯುವ ಪೀಳಿಗೆಯಲ್ಲಿ ಅದರಲ್ಲೂ ವಿದೇಶ ವ್ಯಾಮೋಹದಿಂದ ದೇಶ ತೊರೆಯಲು ಹಾತೊರೆಯುವವರ ಮನ ಮಿಡಿಯುವಂತೆ ಬೀದಿ … Read more

ಕಲ್ಲಡ್ಕ ಭಟ್ಟರ ಹೇಳಿಕೆ ಅವರ ಸಂಸ್ಕೃತಿಯನ್ನು ಸೂಚಿಸುತ್ತದೆ -ಸೈಯದ್ ಖಾಲಿದ್ ಅಹ್ಮದ್

kalladka-bhattas-statement-indicates-his-culture-sayyid-khalid-ahmad

ಸುದ್ದಿ360 ದಾವಣಗೆರೆ: ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂದು. ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ. ಇಂಥ ಭವ್ಯವಾದ ಸಂಸ್ಕಾರವಿರುವ ದೇಶದಲ್ಲಿ ಇನ್ನೊಬ್ಬ ಹೆಣ್ಣುಮಕ್ಕಳ ಬಗ್ಗೆ ತುಚ್ಚಾವಾಗಿ ಮಾತನಾಡುವ ಕಲ್ಲಡ್ಕ ಭಟ್ ಅವರ ಹೇಳಿಕೆ ಅವರ ಸಂಸ್ಕೃತಿ ಅವರ ಸಂಸ್ಕಾರವನ್ನು ಸೂಚಿಸುತ್ತದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಆಕ್ರೋಶ … Read more

ಸ್ಕ್ವಾಯ್ ಕ್ರೀಡಾಪಟು ಶಶಾಂಕ್‍ಗೆ ಶಿಕ್ಷಣ ಸಚಿವರಿಂದ ಶುಭ ಹಾರೈಕೆ

education-minister-wishes-squash-athlete-shashank

ಸುದ್ದಿ360 ಶಿವಮೊಗ್ಗ: ಬೆಂಗಳೂರಿನ ಹೊಸಕೆರೆಹಳ್ಳಿ ಯಲ್ಲಿ ಇತ್ತೀಚೆಗೆ ನಡೆದ  ಸ್ಕ್ವಾಯ್ ಕ್ರೀಡೆಯ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆಯ ವತಿಯಿಂದ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿವಮೊಗ್ಗದ ಡಿವಿಎಸ್‍ ಶಾಲೆಯ ವಿದ್ಯಾರ್ಥಿ ಶಶಾಂಕ್‍ಗೆ  ಶಿಕ್ಷಣ ಸಚಿವ ಮಧುಬಂಗಾರಪ್ಪ  ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನವನ್ನು ತೋರಿ ಪದಕ ಗೆಲ್ಲುವಂತೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ತರಬೇತಿದಾರ ರಮೇಶ್ ಮತ್ತು ಮಾರುತಿ ಕರಾಟೆ ಹಾಗೂ ಕ್ರೀಡಾ ತರಬೇತಿ ಕೇಂದ್ರದ ಸಹ ಕಾರ್ಯದರ್ಶಿ ರಾಮಚಂದ್ರ ಖಜಾಂಚಿ ನಾಗರಾಜ್ ಉಪಸ್ಥಿತರಿದ್ದರು.

ತರಬೇತುದಾರ ಹೆಚ್.ದಾದಾಪೀರ್‌ಗೆ ‘ಅತ್ಯುತ್ತಮ ಶಿಸ್ತು ತೀರ್ಪುಗಾರ’ ಪ್ರಶಸ್ತಿ: ಅಭಿನಂದನೆ

best-disciplined-referee-award-to-coach-h-dadapir-congratulations

ಸುದ್ದಿ360 ದಾವಣಗೆರೆ: ದಾವಣಗೆರೆಯ ಹಿರಿಯ ಕ್ರೀಡಾಪಟು ಅಂತರಾಷ್ಟ್ರೀಯ ತೀರ್ಪುಗಾರರಾದ ಏಕಲವ್ಯ ಪ್ರಶಸ್ತಿ ವಿಜೇತ ಹೆಚ್.ದಾದಾಪೀರ್‌ (H Dadapir) ಇವರು ನವದೆಹಲಿಯಲ್ಲಿಇತ್ತೀಚೆಗೆ ನಡೆದಕೇಲೋ ಇಂಡಿಯಾ ಪ್ಯಾರಾ ಪವರ್ ಲಿಫ್ಟಿಂಗ್‌ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ‘ಅತ್ಯುತ್ತಮ ಶಿಸ್ತು ತೀರ್ಪುಗಾರ’ ಪ್ರಶಸ್ತಿಗೆ (best disciplined referee award) ಭಾಜನರಾಗಿದ್ದಾರೆ. ಹೆಚ್.ದಾದಾಪೀರ್‌ ಅವರಿಗೆ ದಾವಣಗೆರೆ ಜಿಲ್ಲಾಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ್, ಗ್ರೂಪ್‌ ಆಫ್‌ ಐರನ್‌ ಗೇಮ್ಸ್ ಹಾಗೂ … Read more

ದಸರಾ: ಸರೋದ್‍ ದಿಗ್ಗಜರ ಬಳಿ ಅಧಿಕಾರಿ ಕೇಳಿದ್ದ ಕಮಿಷನ್ ಎಷ್ಟು. . .!?

dussehra-commission-asked-by-the-official-from-the-sarod-giant pt-taranath

ಸುದ್ದಿ360 ಅ.15: ವಿಶ್ವ ವಿಖ್ಯಾತ ದಸರಾ (Dussehra) ಮಹೋತ್ಸವದಲ್ಲಿ ಖ್ಯಾತ ಸರೋದ್ (sarodh) ವಾದಕ ಪಂ. ರಾಜೀವ್ ತಾರಾನಾಥ್ (Pt. Rajeev Taranath) ಅವರಿಗೆ ಕಾರ್ಯಕ್ರಮ ನೀಡಲು ದಸರಾ ಅಧಿಕಾರಿಗಳು ಕಮಿಷನ್ (commission) ಕೇಳಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್‍ ವಾದಕ ಪಂ. ರಾಜೀವ ತಾರಾನಾಥ್‍ ಅವರನ್ನು ದಸರಾ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ಸಂಗೀತ ಕಚೇರಿ  ನೀಡುವಂತೆ  ಆಹ್ವಾನಿಸಿರುವ ದಸರಾ ಅಧಿಕಾರಿಗಳು ಕಮಿಷನ್‍ ಬೇಡಿಕೆ ಇಟ್ಟಿರುವುದಾಗಿ ಆಂದೋಲನ ಪತ್ರಿಕೆ ವರದಿ ಮಾಡಿದೆ. ಕಾರ್ಯಕ್ರಮ ನೀಡುವಂತೆ ಪಂ. … Read more

ದಸರಾ ರಜೆ: ಏನಾದ್ರೂ ಕಲೀಬೇಕಲ್ಲಾ ಅನ್ನೋ ಮಕ್ಕಳಿಗೆ – ಚೆಸ್‍ ತರಬೇತಿ ಶಿಬಿರ

ಸುದ್ದಿ360 ದಾವಣಗೆರೆ (Davangere): ದಸರಾ ರಜೆ (Dussehra Holidays) ಶುರುವಾಯಿತು. ಮನೆಯಲ್ಲೇ ಉಳಿಯುವ ಮಕ್ಕಳನ್ನು ಒಂದಿಷ್ಟು ಯ್ಯಾಕ್ಟಿವ್‍ ಮಾಡೋಣ ಎಂದೆಣಿಸುವ ಪೋಷಕರಿಗೆ ಇಲ್ಲೊಂದು ಅವಕಾಶ ಇದೆ ನೋಡಿ. ಏನು ಅಂತೀರ ಮಕ್ಕಳ ಮನಸನ್ನು ಹಿಡಿದಿಡುವ, ಹೊಸ ಹೊಸ ಟಾಸ್ಕ್ ಗಳನ್ನು ಮಕ್ಕಳ ಮುಂದಿರಿಸುವ ಗೇಮ್‍ ಚದುರಂಗ (chess) ಇದೇ ಅ.15ರಿಂದ 15 ದಿನಗಳ ಚೆಸ್‍ ತರಬೇತಿ ಶಿಬಿರ ಆರಂಭಗೊಂಡಿದೆ. ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿರುವ  15 ದಿನಗಳ ಚೆಸ್‍ ತರಬೇತಿ ಶಿಬಿರವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳು … Read more

error: Content is protected !!