ಪಿಎಚ್‍ಡಿ ಪದವಿ ಪ್ರದಾನ

ಡಾ. ಪ್ರಭಾಕರ ಎಸ್.

ಶಿವಮೊಗ್ಗ: ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಹಾಯಕ ಗ್ರಂಥಪಾಲಕರಾದ ಪ್ರಭಾಕರ. ಎಸ್. ಇವರಿಗೆ ಪಿಎಚ್‍ಡಿ ಪದವಿ ಲಭಿಸಿದೆ. ತಮಿಳುನಾಡಿನ ಕೊಯಮತ್ತೂರಿನ ಭಾರತೀಯಾರ್‍ ವಿಶ್ವವಿದ್ಯಾಲಯವು “Use of electronic services by students and faculty members in medical institutions libraries of Karnataka” (ಕರ್ನಾಟಕದಲ್ಲಿ ವೈದ್ಯಕೀಯ ಸಂಸ್ಥೆಗಳ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ಎಲೆಕ್ಟ್ರಾನಿಕ್ ಸೇವೆಗಳ ಬಳಕೆ) ಎಂಬ ಸಂಶೋಧನಾ ಗ್ರಂಥಕ್ಕೆ ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ.  ಇವರಿಗೆ ಚಿಕ್ಕಮಗಳೂರಿನ  ಎಸ್‍.ಟಿ.ಜೆ. ಮಹಿಳಾ ಕಾಲೇಜಿನ ಗ್ರಂಥಪಾಲಕರಾಗಿದ್ದ … Read more

ಕೈಗಾರಿಕೋದ್ಯಮಿಗಳ ಪ್ರತಿಭಟನೆ, ವಿದ್ಯುತ್ ನೀತಿ ಹಳಿ ತಪ್ಪಿರುವುದಕ್ಕೆ ಸಾಕ್ಷಿ : ಬಸವರಾಜ ಬೊಮ್ಮಾಯಿ

shimoga-riots-were-the-result-of-the-governments-appeasement-policy-basavaraj-bommai

ಸುದ್ದಿ360, ಬೆಂಗಳೂರು: ರಾಜ್ಯ ಸರ್ಕಾರದ ವಿದ್ಯುತ್ ನೀತಿ ಖಂಡಿಸಿ ಮೊದಲ ಬಾರಿಗೆ ಕೈಗಾರಿಕೋದ್ಯಮಿಗಳು ಮುಷ್ಕರ ನಡೆಸಿರುವುದು ರಾಜ್ಯದ ವಿದ್ಯುಶ್ಚಕ್ತಿ ಹಳಿ ತಪ್ಪಿರುವುದಕ್ಕೆ ಇದೇ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಕೈಗಾರಿಕೆಯಲ್ಲಿ ಅತ್ಯಂತ ಮುಂದುವರೆದ ರಾಜ್ಯವಾಗಿದೆ. ಇಲ್ಲಿ ಸಣ್ಣ ಉದ್ಯಮಗಳಿಂದ ಹಿಡಿದು ‌ಬೃಹತ್ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿದ್ಯುತ್ ನೀತಿ ಗ್ರಾಹಕರು ಹಾಗೂ ಕೈಗಾರಿಕೋದ್ಯಮಿಗಳಿಗೆ ಮಾರಕವಾಗಿರುವುದು ದುರ್ದೈವ ಮತ್ತು ಖಂಡನೀಯ.ಮುಂದಿನ … Read more

ಅವೈಜ್ಞಾನಿಕ ವಿದ್ಯುತ್ ಶುಲ್ಕ ಏರಿಕೆ ಹಿಂಪಡಿಯಲಿ : ರೈಸ್ ಮಿಲ್ ಮಾಲೀಕರ, ವರ್ತಕರಿಂದ ಮನವಿ

ಸುದ್ದಿ360, ದಾವಣಗೆರೆ: ವಿದ್ಯುತ್ ಶುಲ್ಕ ಹೆಚ್ಚಿಸಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ರೈಸ್ ಮಿಲ್ ಮಾಲೀಕರ ಸಂಘ, ದಲ್ಲಾಳಿಗಳ ಸಂಘ, ಮೆಕ್ಕೆಜೋಳ ವರ್ತಕರ ಸಂಘದ ಪದಾಕಾರಿಗಳು ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ವಿದ್ಯುತ್‌ಶಕ್ತಿ ನಿಯಂತ್ರಣ ಆಯೋಗ ಎಲ್ಲ ರೀತಿಯ ಗ್ರಾಹಕರ ಶುಲ್ಕ ಹೆಚ್ಚಿಸಿ ಆದೇಶಿಸಿದೆ. ಗ್ರಾಹಕರ ಕಷ್ಟ ಅರಿಯದೆ ಏಕಾಏಕಿ ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಿಸಲಾಗಿದೆ. ಗ್ರಾಹಕರಿಗೆ ಯಾವುದೇ ಮುನ್ಸೂಚನೆ … Read more

ಭರವಸೆ ಈಡೇರಿಸಿ ಇಲ್ಲ ಅಧಿಕಾರ ಬಿಟ್ಟು ತೊಲಗಿ: ಬಿಎಸ್‍ವೈ

‘ಅಧಿವೇಶನದ ಒಳಗೂ- ಹೊರಗೂ ಹೋರಾಟ’ ಸುದ್ದಿ360, ದಾವಣಗೆರೆ: ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿ ಜಾರಿಗೆ ಒತ್ತಾಯಿಸಿ ಜುಲೈ 4ರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ನಮ್ಮ ಶಾಸಕರು ಸದನದ ಒಳಗೆ ಹೋರಾಟ ನಡೆಸಲಿದ್ದಾರೆ. ಮತ್ತು ಸದನದ ಹೊರಗೆ ಸ್ವತಃ ನಾನೇ ಧರಣಿ ಆರಂಭಿಸಲಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ನಗರದ ಅಭಿನವ ರೇಣುಕಾ ಮಂದಿರದಲ್ಲಿ ಗುರುವಾರ ನಡೆದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸದನದ ಒಳಗೂ, ಹೊರಗೂ ಸರಕಾರದ ಮೂಗು ಹಿಡಿದು ಉಸಿರು ಗಟ್ಟುವಂತೆ … Read more

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸಚಿವ ತಿಮ್ಮಾಪುರ – ‘ತಡವಾಗಬಹುದು ಆದರೆ ಕೊಟ್ಟ ಮಾತಿಗೆ ತಪ್ಪೋದಿಲ್ಲ’

ಸುದ್ದಿ360 ದಾವಣಗೆರೆ: ಬಡವರ ಅನ್ನದ ಜತೆ ಕೇಂದ್ರ ಸರ್ಕಾರ  ಆಟವಾಡುತ್ತಿದೆ ಇದು ಖಂಡನೀಯ  ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆಯುತ್ತಿದ್ದು, ರಾಜ್ಯ ಸರಕಾರ ಹತ್ತು ಕೆಜಿ ಅಕ್ಕಿ ನೀಡಲು ಬದ್ಧವಾಗಿದೆ. ಆದರೆ, “ಕೇಂದ್ರ ಸರಕಾರ ಅಕ್ಕಿ ಪೂರೈಸದೆ ಅಸಹಕಾರ ನೀತಿ ಅನುಸರಿಸುತ್ತಿರುವ ಕಾರಣ ತಕ್ಷಣಕ್ಕೆ ಅಕ್ಕಿ ಕೊಡಲಾಗುತ್ತಿಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಆಹಾರ ಸಚಿವ … Read more

ದೈವಜ್ಞ ವಿದ್ಯಾ ಸಂಸ್ಥೆಯಲ್ಲಿ ಕಳೆಗಟ್ಟಿದ ವಿಶ್ವ ಯೋಗ ದಿನಾಚರಣೆ

ಸುದ್ದಿ360, ದಾವಣಗೆರೆ: ನಗರದ ದೇವರಾಜು ಅರಸು ಬಡವಾಣೆಯಲ್ಲಿರುವ ದೈವಜ್ಞ ವಿದ್ಯಾ ಸಂಸ್ಥೆಯ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಹಿರಿಯ ಶಿಕ್ಷಕಿ ಆಶಾ ಬಂಡಿಗೇರಿ ಯವರು  ಮಕ್ಕಳಿಗೆ ಯೋಗಾಭ್ಯಾಸದ ಜೊತೆ ಯೋಗದ ಮಹತ್ವವನ್ನು ವಿವರಿಸಿದರು. ಸೂರ್ಯನಮಸ್ಕಾರ, ಪ್ರಾಣಾಯಾಮ  ಹಾಗೂ ಯೋಗಾಸನ ಬಂಗಿಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು. ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗದವರು ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವ ಮೂಲಕ ಯೋಗದ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿದರು. ಹಾಗೆಯೇ ಪ್ರತಿ ಶನಿವಾರ ಬೆಳಿಗ್ಗೆ ಮಕ್ಕಳಿಗೆ ಯೋಗಾಸನ ತರಬೇತಿಯನ್ನು ನೀಡುವ … Read more

ಜೂ.25, 26: ಹೆಬ್ಬಾಳು ವಿರಕ್ತಮಠದಲ್ಲಿ ಸಾವಯವ ಕೃಷಿ ಅರಿವು

ಸುದ್ದಿ360 ದಾವಣಗೆರೆ: ಗೋಆಧಾರಿತ ಕೃಷಿ ಹಾಗೂ ಸಾವಯವ ಕೃಷಿ ಕುರಿತು  ಅರಿವು ಮೂಡಿಸುವ ಕಾರ್ಯಕ್ರಮವನ್ನು ಸಮೀಪದ ಹೆಬ್ಬಾಳು ವಿರಕ್ತ ಮಠದಲ್ಲಿ ಜೂ.25, 26ರಂದು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಆರ್. ಧನಂಜಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಹಾರಾಷ್ಟ್ರದ ಕೊಲ್ಲಾಪುರ ಸಿದ್ಧಗಿರಿ ಮಠದ ಶ್ರೀ ಅದೃಷ್ಯ ಕಾಡುಸಿದ್ಧೇಶ್ವರ ಸ್ವಾಮೀಜಿ ಹಾಗೂ ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಜೂ.25ರಂದು ಸಂಜೆ … Read more

ಬಡವರ ಅನ್ನಕ್ಕೆ ಕನ್ನ: ಕೇಂದ್ರದ ನಡೆಯ ವಿರುದ್ಧ ದಾವಣಗೆರೆಯಲ್ಲಿ ‘ಕೈ’ ಪ್ರತಿಭಟನೆ

ಸುದ್ದಿ360 ದಾವಣಗೆರೆ: ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಬಡ ಜನರಿಗೆ ವಿತರಿಸುತ್ತಿದ್ದ ಅಕ್ಕಿಗೆ ಕೇಂದ್ರ ಸರ್ಕಾರ ಕನ್ನ ಹಾಕಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಶಾಸಕರು ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಅನ್ನಭಾಗ್ಯ ಯೋಜನೆಯಿಂದ ಕಾಂಗ್ರೆಸ್‌ಗೆ ಹೆಸರು ಬರುತ್ತದೆ ಎಂದು ಬೆದರಿರುವ ಕೇಂದ್ರ ಬಿಜೆಪಿ ಸರಕಾರ, ಕರ್ನಾಟಕಕ್ಕೆ ಅಕ್ಕಿ ಸರಬರಾಜು ಮಾಡದಂತೆ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಸೂಚನೆ ನೀಡುವ ಮೂಲಕ ರಾಜ್ಯದ ಬಡ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು … Read more

ಉಚಿತ ಪ್ರಯಾಣ – ನೂಕುನುಗ್ಗಲು – ಮಾಂಗಲ್ಯ ಸರ ಮಂಗಮಾಯ

ಸುದ್ದಿ360 ದಾವಣಗೆರೆ: ಸರ್ಕಾರಿ ಬಸ್ಗಳಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದ್ದು, ಅಂತೆಯೇ ಕಳ್ಳರ ಕೈಚಳಕಕ್ಕೂ ದಾರಿಯಾಗಿದೆ. ಬಸ್ ಹತ್ತಲು ಬಂದಿದ್ದ ಮಹಿಳೆಯೊಬ್ಬರ 1.80 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ ಘಟನೆ ಜಿಲ್ಲೆಯ ಹರಿಹರ ಬಸ್ ನಿಲ್ದಾಣದಲ್ಲಿ ನಡೆದಿದೆ. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿರುವುದರಿಂದ ಮಹಿಳೆಯರ ಬಸ್ ಸಂಚಾರ ಸಹಜವಾಗಿಯೇ ಹೆಚ್ಚಾಗಿದೆ. ಮಹಿಳೆಯರು ಜಾಗರೂಕತೆಯಿಂದ ಪ್ರಯಾಣ ಬೆಳೆಸಬೇಕಿದ್ದು, ಪೊಲೀಸ್ ಪ್ರಕಟಣೆಗಳನ್ನು ಪಾಲಿಸುವ ಮೂಲಕ ಕಳ್ಳರ ಕುಕೃತ್ಯವನ್ನು ತಡೆಯಬಹುದಾಗಿದೆ. ಹರಿಹರ ಬಸ್ ನಿಲ್ದಾಣದಲ್ಲಿ … Read more

ಹೆಣ್ಣುಮಕ್ಕಳು ಸ್ವಾವಲಂಬನೆಯತ್ತ ಹೆಜ್ಜೆ ಹಾಕಲಿ: ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ .ವಾಮದೇವಪ್ಪ ಸಲಹೆ

ಸುದ್ದಿ360 ದಾವಣಗೆರೆ: ಹೆಣ್ಣುಮಕ್ಕಳು ವಿದ್ಯಾಭ್ಯಾಸದ ನಂತರದಲ್ಲಿ ಸರ್ಕಾರಿ ಉದ್ಯೋಗ ಸಿಗಲಿಲ್ಲವೆಂದು ಕೈಕಟ್ಟಿ ಕೂರದೆ ಸ್ವ–ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುವತ್ತ ಹೆಜ್ಜೆ ಹಾಕಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಬಿ.ವಾಮದೇವಪ್ಪ ಸಲಹೆ ನೀಡಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಪಠ್ಯಪೂರಕ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಭಾಗವಹಿಸಿ ಮಾತನಾಡಿದರು. ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಉತ್ತಮ ಸಾಧನೆ ತೋರಿರುವುದು … Read more

error: Content is protected !!