ಪೇಸ್ ಡಿಟಿಟೆಕ್ ಇನ್ಫ್ರಾ ಪ್ರೈ ಲಿ  ಕಂಪನಿಗೆ ಜಿಎಂಐಟಿ ಇಸಿ ವಿಭಾಗದ 48 ವಿದ್ಯಾರ್ಥಿಗಳು ಆಯ್ಕೆ

ಪ್ರಸಕ್ತ ಸಾಲಿನಲ್ಲಿ 507 ಆಫರ್ಸ್ ಸ್ವೀಕರಿಸಿದ ಮದ್ಯ ಕರ್ನಾಟಕದ  ಜಿಎಂಐಟಿ ಕಾಲೇಜ್ ಸುದ್ದಿ360 ದಾವಣಗೆರೆ, ಏ.21: ಪೇಸ್ ಡಿಟಿಟೆಕ್ ಇನ್ಫ್ರಾ ಪ್ರೈ ಲಿ  ಕಂಪನಿ ಕಳೆದ ಗುರುವಾರ ನಡೆಸಿದ ಸಂದರ್ಶನ ಪ್ರಕ್ರಿಯೆಯಲ್ಲಿ ನಗರದ ಜಿಎಮ್ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ 48 ವಿದ್ಯಾರ್ಥಿಗಳು ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಗಳಾಗಿ ಆಯ್ಕೆಯಾಗಿರುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ  2022-23 ರ ಸಾಲಿನಲ್ಲಿ ಇದುವರೆಗೆ 507 … Read more

ಮಕ್ಕಳ ರಜೆಯ ಮೋಜಿಗೆ ಬೀದಿ ನಾಯಿಗಳ ಅಡ್ಡಿ – ದಾವಣಗೆರೆ ಮಹಾನಾಗರ ಪಾಲಿಕೆ ಮಕ್ಕಳ ರಜೆಗೆ ರಂಗು ನೀಡಬಹುದೆ?

-ಕೂಡ್ಲಿ ಸೋಮಶೇಖರ್ ಬೇಸಿಗೆ ರಜೆ ಬಂತೆಂದರೆ ಮಕ್ಕಳ ಆಟೋಪಾಟಕ್ಕೆ ಎಣೆಯುಂಟೆ? ಶಾಲಾ ದಿನಗಳಲ್ಲೇ ಅವರನ್ನು ನಿಯಂತ್ರಿಸಲು ಹರಸಾಹಸ ಪಡುವ ಪೋಷಕರು ರಜಾದಿನಗಳಲ್ಲಿ ಅವರನ್ನು ಸಂಬಾಳಿಸುವುದು ಹೇಗಪ್ಪಾ ಅನ್ನೋ ಪೇಚಿಗೆ ಸಿಲುಕುವುದು ಸರ್ವೆ ಸಾಮಾನ್ಯ. ಹೇಗೋ ಮನೆಯಾಚೆ ಸ್ನೇಹಿತರೊಡಗೂಡಿ ಆಟವಾಡಿಕೊಂಡು ಬರಲಿ ಎಂದು ಮನೆಯಾಚೆ ಕಳಿಸಿದರೆ ನಾಯಿಗಳ ಹಿಂಡೇ ಮಕ್ಕಳ ಮೇಲೆ  ಎರಗುವ ಪ್ರಕರಣಗಳು ನಗರದ ಕೆಲವೆಡೆ ಆಗೊಮ್ಮೆ ಈಗೊಮ್ಮೆ ವರದಿಯಾಗುತ್ತಲೇ ಇದೆ. ನಗರದ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್ನಲ್ಲಿಯೂ ಕೂಡ ಇಂತಹ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ಪೋಷಕರು … Read more

ಲ್ಯಾಪ್‍ಟಾಪ್‍ ಬೇಡಿಕೆ ಇಟ್ಟಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ

ಸುದ್ದಿ360 ದಾವಣಗೆರೆ, ಏ.19: ಶಾಲೆಯೊಂದಕ್ಕೆ ಅಗ್ನಿಶಾಮಕ ಎನ್ಓಸಿ ನೀಡಲು ಲ್ಯಾಪ್ ಟಾಪ್ ರೂಪದಲ್ಲಿ ಲಂಚದ ಬೇಡಿಕೆ ಇಟ್ಟಿದ್ದ ದಾವಣಗೆರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ ಫೈರ್‍ಮ್ಯಾನ್‍ ರನ್ನು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹರಿಹರದ ವಿಧ್ಯಾದಾಹಿನಿ ಶಾಲೆಯ ಛೇರ್ಮನ್  ಡಿ.ಜಿ. ರಘುನಾಥ್  ಶಾಲೆಗೆ ಅಗ್ನಿಶಾಮಕ ಕಚೇರಿಯಿಂದ  ನಿರಾಕ್ಷೇಪಣಾ ಪತ್ರ ಪಡೆಯಲು ಡೆಲ್ ಕಂಪನಿಯ ಲ್ಯಾಪ್‍ಟಾಪ್‍ ನೀಡುವಂತೆ ಲಂಚದ ಬೇಡಿಕೆ ಇರುವುದಾಗಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದ ದಾವಣಗೆರೆ ಲೋಕಾಯುಕ್ತ ಘಟಕದ ಪೊಲೀಸ್ … Read more

ಎಸ್ ಯುಸಿಐ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಕಾ. ಭಾರತಿ ಮತಯಾಚನೆ

ಸುದ್ದಿ360, ದಾವಣಗೆರೆ ಏ.18: ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಎಸ್ ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾ. ಭಾರತಿ ಕೆ. ನಗರದ ಕೆ. ಆರ್. ಮಾರುಕಟ್ಟೆಯಲ್ಲಿ ಸಂಚರಿಸಿ ಮತಯಾಚನೆ ಮಾಡಿದರು. ಬೀದಿ ಬದಿ ತರಕಾರಿ ವ್ಯಾಪಾರಸ್ಥರ ಮಧ್ಯೆ ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪಾದ ಯತ್ರೆಯ ಮೂಲಕ ಮತಯಾಚನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಪರಶುರಾಮ್, ಪೂಜಾ, ಕಾವ್ಯ, ಬನಶ್ರೀ, ಮಂಜುನಾಥ್ ರೆಡ್ಡಿ, ಮಮತಾ, ಸ್ಮಿತಾ, ಶಶಿಕುಮಾರ್, ಧನುಷಾ, ನಾಗಜ್ಯೋತಿ, ಮನೋಜ್ ಇತರರು ಇದ್ದರು.

ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ; ಏ.18 : ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸೆಕ್ಷನ್ ಆಫೀಸರ್, ಸಹಾಯಕ ಲೆಕ್ಕ ಪರಿಶೋಧನಾ ಆಧಿಕಾರಿ, ಸಹಾಯಕ ಲೆಕ್ಕಪತ್ರ ಅಧಿಕಾರಿ, ಇನ್ಸ್ಪೆಕ್ಟರ್, ಎಇಒ, ಸಬ್- ಇನ್ಸ್ಪೆಕ್ಟರ್, ಕಿರಿಯ ಅಂಕಿ ಅಂಶ ಅಧಿಕಾರಿ, ಎನ್‌ಹೆಚ್‌ಆರ್‌ಸಿ ಸಂಶೋಧನಾ ಸಹಾಯಕ, ಹಿರಿಯ ಸೆಕ್ರೆಟರಿಯೇಟ್ ಸಹಾಯಕ, ಅಪ್ಪರ್ ಡಿವಿಜನ್ ಕ್ಲರ್ಕ್, ಅಂಚೆ ಸಹಾಯಕ, ವಿಂಗಡಣೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ … Read more

ಟೊಯೋಟಾ ಆಟೋ ಪಾರ್ಟ್ಸ್ ಕಂಪನಿಗೆ ಜಿಎಂಐಟಿಯ 10 ವಿದ್ಯಾರ್ಥಿಗಳು ಆಯ್ಕೆ

ಸುದ್ದಿ360, ದಾವಣಗೆರೆ, ಏ.18: ಬೆಂಗಳೂರಿನ ಟೊಯೋಟಾ ಇಂಡಿಯಾ ಆಟೋ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ನಡೆಸಿದ ಸಂದರ್ಶನ ಪ್ರಕ್ರಿಯೆಯಲ್ಲಿ ದಾವಣಗೆರೆ ಜಿಎಂಐಟಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ 10 ವಿದ್ಯಾರ್ಥಿಗಳು ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಏ. 17ರಂದು ನಡೆದ ಸಂದರ್ಶನ ಪ್ರಕ್ರಿಯೆಯಲ್ಲಿ ಹಲವು ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸಂದರ್ಶನ ಸುತ್ತುಗಳಲ್ಲಿ ತಮ್ಮ … Read more

ಪ್ರಶ್ನೆ ಪತ್ರಿಕೆಗಾಗಿ ಕಾದು ಕುಳಿತಿರುವ ಮತದಾರ – ಕೊಡುಗೈ ಬಿಕ್ಷುಕರ ಭರಪೂರ ಪ್ರಚಾರ

– ಕೂಡ್ಲಿ ಸೋಮಶೇಖರ್ ಚುನಾವಣೆ ಎಂದ ಮೇಲೆ ಇಲ್ಲಿ ಪಕ್ಷಗಳ ಹೈಕಮಾಂಡ್ನಿಂದ ಹಿಡಿದು ಸಾಮಾನ್ಯ ಕಾರ್ಯಕರ್ತನ ವರೆಗೆ ಮತ್ತು ಹಿರಿಯ ನಾಗರೀಕರಿಂದ ಹಿಡಿದು ಈಗಷ್ಟೇ ಮತದಾನಕ್ಕೆ ಅರ್ಹತೆ ಪಡೆದ ಯುವಪೀಳಿಗೆ ವಿವಿಧ ಬಗೆಗಳಲ್ಲಿ ಚುನಾವಣಾ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಮತದಾನ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಮತ್ತು ಕರ್ತವ್ಯವಾಗಿದ್ದರೂ ಸಹ ಸಾಕಷ್ಟು ಮಂದಿ ಮತದಾನದಿಂದ ದೂರವೇ ಉಳಿಯುವುದು ವಿಪರ್ಯಾಸ. ಚುನಾವಣಾ ಆಯೋಗ ಮತದಾನದ ಕುರಿತು ಜಾಗೃತಿ ಮೂಡಿಸುವಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಮತಯಾಚನೆಗೆ ಬರುವ … Read more

ಕೆಲವೇ ಕ್ಷಣಗಳಲ್ಲಿ ಜಗದೀಶ್ ಶೆಟ್ಟರ್ ನಿವಾಸಕ್ಕೆ ಮೂವರು ನಾಯಕರ ಭೇಟಿ . . .

ರಾಜಕಾರಣದಲ್ಲಿ ತಾಳ್ಮೆ ಬೇಕು – ವೈಯ್ಟ್ ಅಂಡ್ ಸಿ ಎಂದ ಜಗದೀಶ್‍ ಶೆಟ್ಟರ್ ಸುದ್ದಿ360 ಹುಬ್ಬಳ್ಳಿ ಏ.15: ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಕರ್ನಾಟಕ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾತ್ರಿ 8.30ಕ್ಕೆ ತಮ್ಮ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ತದನಂತರ ನಿರ್ಧಾರವನ್ನು ಪ್ರಕಟಿಸುವುದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್‍ ಶೆಟ್ಟರ್  ಹೇಳಿದ್ದಾರೆ. ಈ ಕುರಿತು ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿ, ವರಿಷ್ಠರಿಂದ ಸೂಕ್ತ ಸ್ಪಂದನೆ ಬರುವ ನಿರೀಕ್ಷೆಯಲ್ಲಿ ನಾನಿದ್ದೇನೆ ಎಂದು ತಿಳಿಸಿರುವ ಅವರು, ಪಕ್ಷದಿಂದ … Read more

ಕಾಂಗ್ರೆಸ್ 3ನೇ ಪಟ್ಟಿ ರಿಲೀಸ್: ಪಟ್ಟಿಯಲ್ಲಿ ಯಾರ್ಯಾರಿದ್ದಾರೆ. . .? ಸಿದ್ಧರಾಮಯ್ಯ ಕೋಲಾರದಿಂದ ಹಿಂದೆ ಸರುದ್ರಾ?

ಶಿವಮೊಗ್ಗ ನಗರಕ್ಕೆ ಎಚ್.ಸಿ. ಯೋಗೇಶ್ ಹೊನ್ನಾಳಿಯಿಂದ ಡಿ.ಜಿ. ಶಾಂತನಗೌಡ ಶಿಕಾರಿಪುರಕ್ಕೆ ಜಿ.ಬಿ. ಮಾಲತೇಶ್ ಜಗಳೂರಿನಿಂದ ಬಿ.ದೇವೇಂದ್ರಪ್ಪ ಸುದ್ದಿ360: ಕಾಂಗ್ರೆಸ್ನಿಂದ 3ನೇ ಪಟ್ಟಿ ರಿಲೀಸ್‍ ಆಗಿದ್ದು43 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಕೋಲಾರದಿಂದ ಸಿದ್ಧರಾಮಯ್ಯ ಕಣಕಿಳಿಯಲಿದ್ದಾರೆ ಎಂಬ ಮಾತುಗಳಿಗೆ ಈ ಪಟ್ಟಿ ಇತಿಶ್ರೀ ಹಾಡಿದ್ದು, ಕೋಲಾರದಿಂದ ಕೊತ್ತುರ್ ಜಿ. ಮಂಜುನಾಥ್ ಅವರಿಗೆ ಟಿಕೆಟ್ ಲಭಿಸಿದೆ. ಇನ್ನು ಪಕ್ಷಕ್ಕೆ ಸೇರುವಾಗಿನ ಒಪ್ಪಂದದಂತೆ ಲಕ್ಷ್ಮಣ ಸವದಿಗೆ ಅಥಣಿಯಿಂದ ಟಿಕೆಟ್ ಘೋಷಣೆಯಾಗಿದೆ. ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರುವ ಮೂಲಕ … Read more

ನನಗೆ ಕ್ಷೇತ್ರವಿಲ್ಲ  ಎಂದ ಈಶ್ವರಪ್ಪಗೆ ಟಿಕೆಟ್ಟೇ ಸಿಕ್ಕಿಲ್ಲ: ಸಿದ್ಧರಾಮಯ್ಯ ವ್ಯಂಗ್ಯ

ಸುದ್ದಿ360 ಕಾರವಾರ : ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಕ್ಷೇತ್ರವಿಲ್ಲ  ಎಂದು ಹೇಳಿದ್ದ ಕೆ.ಎಸ್. ಈಶ್ವರಪ್ಪಗೆ ಈ ಬಾರಿ ಚುನಾವಣೆಯಲ್ಲಿ  ಸ್ಪರ್ಧಿಸಲು ಬಿಜೆಪಿಯವರು ಟಿಕೆಟ್ ನೀಡುವುದು ಇರಲಿ ಅವರನ್ನು ಚುನಾವಣಾ ರಾಜಕೀಯದಿಂದಲೇ ದೂರ ಇಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಹಳಿಯಾಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರು  ಪಕ್ಷವನ್ನು ಕಟ್ಟಿದ ಹಿರಿಯ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ. ಜಗದೀಶ್ ಶೆಟ್ಟರ್ ಉತ್ತಮ ನಾಯಕ ಅವರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಯಾಗಿಲ್ಲ. ಹಾಗೇನಾದರೂ ಒಂದು ವೇಳೆ ಅವರು ಸೇರಬಯಸಿದರೆ ಕಾಂಗ್ರೆಸ್ ಸ್ವಾಗತಿಸುತ್ತದೆ … Read more

error: Content is protected !!