ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ‌‌ ಜೈನಭಟ್ಟಾರಕ ಸ್ವಾಮೀಜಿ ವಿಧಿವಶ – ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ : ಸಿಎಂ ಬೊಮ್ಮಾಯಿ

ಸುದ್ದಿ360 ಹಾಸನ ಮಾ. 23: ಜೈನ‌ಕಾಶಿ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ‌‌ ಜೈನಭಟ್ಟಾರಕ ಸ್ವಾಮೀಜಿ ಅವರು ಇಂದು (ಮಾ.23) ವಿಧಿವಶರಾಗಿದ್ದಾರೆ. ಕಳೆದ ಮುರ್ನಾಲ್ಕು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳನ್ನು ಶ್ರವಣಬೆಳಗೊಳ ಮಠದಲ್ಲೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಸ್ವಸ್ತಿ ಶ್ರೀ ಚಾರುಕೀರ್ತಿ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿಗಳು ದೇಶಾದ್ಯಂತ ಅಪಾರ ಭಕ್ತವರ್ಗವನ್ನು ಹೊಂದಿದ್ದಾರೆ. ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ  ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ … Read more

ಶೇ.40ರಲ್ಲಿ ಸಂಸದರ ಮತ್ತು ಉಸ್ತುವಾರಿ ಸಚಿವರ ಸಮಪಾಲು – ಕಾಂಗ್ರೆಸ್ ಆರೋಪ

ವರ್ಷವಾದರೂ ಮುಗಿಯದ ರೈಲ್ವೆ ಅಂಡರ್ ಪಾಸ್ ಸುದ್ದಿ360 ದಾವಣಗೆರೆ ಮಾ.18: ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ ತಲಾ ಶೇ.20 ಕಮಿಷನ್ ಹಂಚಿಕೆ ಮಾಡಿಕೊಂಡಿದ್ದಾರೆ. ಶೇ.40 ಇಲ್ಲದೇ ಯಾವ ಕಾಮಗಾರಿಗಳು ಆಗುತ್ತಿಲ್ಲ. ಇದರಿಂದ ಕಾಮಗಾರಿಗಳು ಅಧೋಗತಿಯತ್ತ ಸಾಗಿವೆ  ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಇಂದು ಶನಿವಾರ ಪ್ರತಿಭಟನೆ ನಡೆಸಿದರು. ನಗರದ ಅಶೋಕ ಟಾಕೀಸ್ ರೈಲ್ವೆ ಗೇಟ್ ಬಳಿ ನಿರ್ಮಾಣ ಆಗುತ್ತಿರುವ ಅಂಡರ್ ಪಾಸ್ ಹತ್ತಿರ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ … Read more

ಅಭಿವೃದ್ಧಿ ಕಾರ್ಯಗಳೇ ನಮ್ಮ ಶಕ್ತಿ ಎನ್ನುವವರು ಆಮಿಶ ಒಡ್ಡುವುದಾದರೂ ಯಾಕೆ?! ಯಶ್ವಂತ್ ರಾವ್ ಜಾಧವ್ ಪ್ರಶ್ನೆ

ಸುದ್ದಿ360 ದಾವಣಗೆರೆ ಮಾ.18: ಹಗಲು ದರೋಡೆ ಮಾಡುವವರು ಕಾಂಗ್ರೆಸ್ ನವರು ಆದರೆ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಬಿಜೆಪಿ ಮುಖಂಡ ಯಶವಂತ್ ರಾವ್ ಜಾಧವ್ ಹರಿಹಾಯ್ದರು. ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮ್ಮ ಶಕ್ತಿ, ಇದರಿಂದಲೇ ಜನರು ನಮ್ಮನ್ನು ಗೆಲ್ಲಿಸಿದ್ದಾರೆ ಎನ್ನುವ ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಅವರು ಸೀರೆ, ಕುಕ್ಕರ್ ಗಳನ್ನು ನೀಡುವ ಮೂಲಕ ಮತದಾರರಿಗೆ ಆಮಿಷ  ಒಡ್ಡುತ್ತಿರುವುದಾದರೂ ಯಾಕೆ ಎಂದು ಪ್ರಶ್ನಿಸಿದರು. ಎಸ್ಸೆಸ್ ಹಾಗೂ ಮಲ್ಲಿಕಾರ್ಜುನ್ … Read more

ದಾವಣಗೆರೆ: ಜಿಲ್ಲಾಸ್ಪತ್ರೆ ಹೊರಗುತ್ತಿಗೆ ನೌಕರರ ಧರಣಿಗೆ ಅಲ್ಪ ವಿರಾಮ – ಕಪ್ಪುಪಟ್ಟಿಯೊಂದಿಗೆ  ಮರಳಿದ  ನೌಕರರು

ಮಾರ್ಚ್ 26ರೊಳಗೆ ಬೇಡಿಕೆ ಈಡೇರುವ ಆಶ್ವಾಸನೆ ಸುದ್ದಿ360 ದಾವಣಗೆರೆ, ಮಾ.18: ಹಲವು ಬೇಡಿಕೆಗಳ ಈಡೇರಿಸುವಂತೆ ಸತತ ನಾಲ್ಕು ದಿನಗಳಿಂದ ಕೆಲಸಕ್ಕೆ ಹಾಜರಾಗದೆ ಪ್ರತಿಭಟನಾ ಧರಣಿಯಲ್ಲಿ ನಿರತರಾಗಿದ್ದ ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಕಪ್ಪುಪಟ್ಟಿ ಧರಿಸಿ ಇಂದು ಸೇವೆಗೆ ಹಾಜರಾಗಿದ್ದಾರೆ. ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು ಮತ್ತು ಅಧೀಕ್ಷಕರು ನಮ್ಮ ಬೇಡಿಕೆಗೆ ಸ್ಪಂದಿಸಿ, ತಮ್ಮ ಬೇಡಿಕೆಗಳನ್ನು ಇದೇ ಮಾರ್ಚ್ 26 ರೊಳಗಾಗಿ ಈಡೇರಿಸುವ  ಆಶ್ವಾಸನೆ ನೀಡಿದ್ದರಿಂದ ನೌಕರರು ಸೇವೆಗೆ ಹಿಂದಿರುಗಲು ಒಪ್ಪಿದ್ದು, ಕೈಗೆ ಕಪ್ಪುಪಟ್ಟಿ ಧರಿಸಿ ಧರಣಿಯನ್ನು ಜೀವಂತವಾಗಿಡಲಾಗಿದೆ … Read more

ಕೊಲೆ ಆರೋಪಿಗಳಿಗೆ ನೆರವು: ಪತ್ರಕರ್ತ ಮೆಹಬೂಬ್ ಮುನವಳ್ಳಿ ಬಂಧನ

ಸುದ್ದಿ360 ದಾವಣಗೆರೆ ಮಾ.18 : ಶಿವಮೊಗ್ಗದ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದೊಂದಿಗೆ ತಳಕು ಹಾಕಿಕೊಂಡಿರುವ ಚೀಲೂರು ಬಳಿ ಬುಧವಾರ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಿಗೆ ನೆರವಾಗಿರುವ ಆರೋಪದಲ್ಲಿ ಧಾರವಾಡದ ಪತ್ರಕರ್ತರೊಬ್ಬರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ ಖಾಸಗಿ ಸುದ್ದಿವಾಹಿನಿಯ ವರದಿಗಾರ ಮೆಹಬೂಬ್ ಮುನವಳ್ಳಿಯನ್ನು ನ್ಯಾಮತಿ ಠಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಂದಿ ಅಣ್ಣಿ ಕೊಲೆ ಪ್ರಕರಣದ ಇಬ್ಬರು  ಆರೋಪಿಗಳ ಮೇಲೆ ಬುಧವಾರ ಚೀಲೂರು ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರು … Read more

ದಾವಣಗೆರೆ: ಮಾ.18ಕ್ಕೆ ಅಪ್ಪು ಮ್ಯೂಸಿಕಲ್ ನೈಟ್ – ಉಚಿತ ಪ್ರವೇಶ

ಪುನೀತ್ ರಾಜ್‍ಕುಮಾರ್  ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ವೈಭವ ಸುದ್ದಿ360 ದಾವಣಗೆರೆ, ಮಾ.17: ಶ್ರೀಹರ ಮ್ಯೂಸಿಕಲ್ ವರ್ಲ್ಡ್ ದಾವಣಗೆರೆ ಹಾಗೂ ಶ್ರೀನಿವಾಸ ದಾಸಕರಿಯಪ್ಪ ಇವರ ಸಹಯೋಗದೊಂದಿಗೆ ನಗರದ ಜಯದೇವ ವೃತ್ತದ ಬಳಿ ಇರುವ ಶಿವಯೋಗ ಮಂದಿರದಲ್ಲಿ ಮಾರ್ಚ್ 18ರಂದು ಸಂಜೆ 5ಕ್ಕೆ  ‘ಅಪ್ಪು ಮ್ಯೂಸಿಕಲ್ ನೈಟ್’ ಕಾರ್ಯಕ್ರಮ ನಡೆಯಲಿದೆ ಎಂದು ಸಂಗೀತ ನಿರ್ದೇಶಕ, ಗಾಯಕ ಸುನೀಲ್ ಮೈರಾ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ವೈಭವ ಕಾರ್ಯಕ್ರಮ ರೂಪಿಸಲಾಗಿದೆ. ಅಂದು … Read more

ಮಾರ್ಚ್ 19ಕ್ಕೆ ‘ಸಂಪಾದನಾ ಸೂಕ್ತಿಗಳು’ ಕೃತಿ ಲೋಕಾರ್ಪಣೆ

ಡಿ.ಜಿ.ರೇವಣಸಿದ್ದಪ್ಪ ಅವರ ಚೊಚ್ಚಲ ಕೃತಿ ಸುದ್ದಿ360 ದಾವಣಗೆರೆ ಮಾ.17: ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡಿರುವ ಡಿ.ಜಿ.ರೇವಣಸಿದ್ದಪ್ಪ ಅವರ ಚೊಚ್ಚಲ ಕೃತಿ ‘ಸಂಪಾದನಾ ಸೂಕ್ತಿಗಳು’ ಬಿಡುಗಡೆ ಸಮಾರಂಭ ಮಾ. 19 ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಸಾಹಿತಿ ಓಂಕಾರಯ್ಯ ತವನಿಧಿ ತಿಳಿಸಿದರು. ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು  ಮತ್ತು ರೇಣುಕಾ ಪ್ರಕಾಶನ ಇವರ ಸಹಯೋಗದಲ್ಲಿ ಕೃತಿ ಲೋಕಾರ್ಪಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಡಿ.ಜಿ.ರೇವಣಸಿದ್ದಪ್ಪ ಸಾವಯವ ಕೃಷಿಕರಾಗಿದ್ದು, … Read more

ಮಾ.17: ಉಡುತಡಿಯಲ್ಲಿ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ

ಸುದ್ದಿ360 ಶಿವಮೊಗ್ಗ ಮಾ. 16: ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಮಾ. 17ರ ಶುಕ್ರವಾರದಂದು ಮಧ್ಯಾಹ್ನ 12.30ಕ್ಕೆ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. 77 ಅಡಿ ಎತ್ತರದ ಈ ಪುತ್ಥಳಿಯು ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳವಾಗಿರುವ ಉಡುತಡಿಯಲ್ಲಿ ಮುಖ್ಯಮಂತ್ರಿಗಳು ಅನಾವರಣಗೊಳಿಸಲಿದ್ದು, ಇದೇ ಸಂದರ್ಭದಲ್ಲಿ ದೆಹಲಿ ಅಕ್ಷರಧಾಮ ಮಾದರಿಯಲ್ಲಿ ನಿರ್ಮಿಸಿರುವ ಉದ್ಯಾನವನ್ನು ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಕೆಎಸ್‌ಆರ್‌ಟಿಸಿ ಘಟಕ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕಸಬಾ … Read more

ಮಾ.17 – ಅಪ್ಪು ಹುಟ್ಟುಹಬ್ಬ: ದುರ್ಗಾದೇವಿಗೆ ವಿಶೇಷ ಪೂಜೆ

ಡಾ. ಪುನೀತ್ ರಾಜ್‌ಕುಮಾರ್ ಪುತ್ಥಳಿಗಾಗಿ ಮಹಾನಗರ ಪಾಲಿಕೆಗೆ ಮನವಿ ಸುದ್ದಿ360 ದಾವನಗೆರೆ ಮಾ. 16: ಕರ್ನಾಟಕ ರತ್ನ ಪುರಸ್ಕೃತ, ಅಭಿಮಾನಿಗಳ ಮನದಲ್ಲಿ ಸದಾ ನೆಲೆಸಿರುವ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಅಭಿಮಾನಿಗಳ ಬಳಗದಿಂದ ಮಾ.17ರಂದು ದುರ್ಗಾಂಬಿಕ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೇರಿದಂತೆ ಹಲವು ಕರ‍್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಪ್ಪು ಅಭಿಮಾನಿ ಶಂಕರ್ ಶಿರೇಕರ್ ಪವರ್ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 8 ಗಂಟೆಗೆ ದುರ್ಗಾದೇವಿಗೆ ಪೂಜೆ ಸಲ್ಲಿಸಿ, ನಂತರ 11 ಗಂಟೆಗೆ ಅಭಿಮಾನಿಗಳೆಲ್ಲರೂ … Read more

ಮಹಾರಾಷ್ಟ್ರ ಸಚಿವ ಸಂಪುಟದ  ನಿರ್ಣಯಕ್ಕೆ ಸಿಎಂ ಬೊಮ್ಮಾಯಿ ತೀವ್ರ ಖಂಡನೆ

ಬೆಂಗಳೂರು,  ಮಾರ್ಚ್ 16: ಗಡಿ ಕನ್ನಡಿಗರಿಗೆ ಆರೋಗ್ಯ ವಿಮೆ ಯೋಜನೆಯ ಮಹಾರಾಷ್ಟ್ರ ಸಚಿವ ಸಂಪುಟದ  ನಿರ್ಣಯವನ್ನು ತೀವ್ರವಾಗಿ ಖಂಡಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ  ಮಾತನಾಡಿದರು. ಕರ್ನಾಟಕ ಗಡಿ ಭಾಗದ ಜನರಿಗೆ ಆರೋಗ್ಯ ಯೋಜನೆ ವಿಮೆ ಯೋಜನೆಯನ್ನು ಮಹಾರಾಷ್ಟ್ರದ ಸಂಪುಟ ನಿರ್ಣಯ ಘೋಷಿಸಿರುವುದು ಅಕ್ಷಮ್ಯ ಅಪರಾಧ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮಾತನಾಡಿದಾಗ ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಕಾಯಬೇಕು. ಯಾವುದೇ ಪ್ರಚೋದನೆ ಯಾಗಬಾರದೆಂದು ಒಪ್ಪಲಾಗಿತ್ತು. … Read more

error: Content is protected !!