ಆನಂದ ಮಾಮನಿಯವರ ನಿಧನದಿಂದ ಉತ್ತಮ ಜನಪ್ರತಿನಿಧಿಯನ್ನು ಕಳೆದುಕೊಂಡಂತಾಗಿದೆ: ಸಿಎಂ

ಸುದ್ದಿ360 ಬೆಂಗಳೂರು, ಅ. 23 : ವಿಧಾನಸಭೆ ಉಪಾಧ್ಯಕ್ಷರಾಗಿದ್ದ ಆನಂದ ಮಾಮನಿ ಅವರ ನಿಧನದಿಂದ ಉತ್ತಮ ಜನಪ್ರತಿನಿಧಿಯನ್ನು ಹಾಗೂ ಕರ್ನಾಟಕ ರಾಜ್ಯ ಬೆಳೆಯುತ್ತಿರುವ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ಆರ್. ಟಿ. ನಗರ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ :ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಅವರ ನಿಧನ ದುರ್ದೈವದ ಸಂಗತಿ. ಅವರ ಪಾರ್ಥಿವ ಶರೀರ ಅವರ ಸ್ವಕ್ಷೇತ್ರವಾದ ಸವದತ್ತಿಗೆ ಒಯ್ಯಲಾಗಿದೆ. ಸಕಲ ಸರ್ಕಾರಿ … Read more

ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಸೆ.23: ಕಾಂಗ್ರೆಸ್ ಪಕ್ಷದವರದ್ದು ಹೆಜ್ಜೆ ಹೆಜ್ಜೆಗೂ ಸ್ಕ್ಯಾಮ್ಗಳಿವೆ. ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನಸಭೆಯ ಅಧಿವೇಶನ ಮುಕ್ತಾಯವಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಪಕ್ಷದ ವತಿಯಿಂದ ಪುಸಕ್ತವನ್ನೇ ಬಿಡುಗಡೆ ಮಾಡಿದ್ದೆವು. ಅವರು ಭ್ರಷ್ಟರಾಗಿದ್ದುಕೊಂಡು ಅಭಿಯಾನ ಮಾಡುತ್ತಾರಂತೆ. ಯಾವ ಅಭಿಯಾನವನ್ನಾದರೂ ಮಾಡಲಿ, ಕೊನೆಗೆ ಸತ್ಯಕ್ಕೆ ಜಯ ಸಿಗಲಿದೆ. ಒಂದು ಸಣ್ಣ ಪುರಾವೆ ಇಲ್ಲದೆ ಮಾತನಾಡುವ ಈ ಪ್ರವೃತ್ತಿ ಬಹಳ … Read more

ಜಾತಿ ಪ್ರಮಾಣಪತ್ರಕ್ಕೆ ಶಾಲಾ ದಾಖಲೆ ಪ್ರಮುಖವಲ್ಲ – ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ಬೇಡುವ ಜಂಗಮರೆಂದು ಎಸ್ಸಿ ಪ್ರಮಾಣಪತ್ರಕ್ಕೆ ಅರ್ಜಿಗಳ ರಾಶಿ ಸುದ್ದಿ360 ದಾವಣಗೆರೆ, ಸೆ. 21: ಮಕ್ಕಳನ್ನು ಶಾಲೆಗೆ ಸೇರಿಸುವಾಗ ಪೋಷಕರು ಹೇಳುವ ಜಾತಿಯನ್ನೇ ನಮೂದಿಸಿಕೊಳ್ಳುತ್ತಾರೆ. ಪೋಷಕರ ಜಾತಿಯನ್ನು ಪ್ರಶ್ನಿಸುವ ಅಧಿಕಾರ ಶಾಲೆಗಳಿಗೆ ಇರುವುದಿಲ್ಲ. ಅಲ್ಲದೆ, ಜಾತಿ ಪ್ರಮಾಣಪತ್ರ ನೀಡುವಾಗ ಶಾಲಾ ದಾಖಲೆಗಳನ್ನು ಪ್ರಮುಖ ಎಂದು ಪರಿಗಣಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು. ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯ ಕುಂದವಾಡ ಮಂಜುನಾಥ್, … Read more

ದಾವಣಗೆರೆಯಲ್ಲಿ ಸೆ.22ರಿಂದ 25ರ ವರೆಗೆ ಸತೀಶ ಮುಳ್ಥಳ್ಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಸುದ್ದಿ360 ದಾವಣಗೆರೆ, ಸೆ. 21: ಚಿತ್ರಕಲಾವಿದ ಸತೀಶ ಮುಳ್ಥಳ್ಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಸೆ.22ರಿಂದ 25ರ ವರೆಗೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯ ವಿಶ್ವ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ. ಈ ಕುರಿತು ಚಿತ್ರಕಲಾವಿದ ಸತೀಶ ಮುಳ್ಳಳ್ಳಿ ಸುದ್ದಿಗೋಷ್ಠಿಯಲ್ಲಿ ಇಂದು ಮಾಹಿತಿ ನೀಡಿದರು. ದೃಶ್ಯ ಛಂದೋಲಹರಿ ಆಶ್ರಯದಲ್ಲಿ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನವನ್ನು ಸೆ.22ರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ವಿಶ್ವವಿದ್ಯಾಲಯದ ಕಲಪತಿ ಪ್ರೊ. ಬಿ.ಟಿ. ಕುಂಬಾರ ಉದ್ಘಾಟಿಸುವರು. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, … Read more

ಎಲ್ಲಾ ಸ್ವಚ್ಛತಾ ಕಾರ್ಮಿಕರ ಖಾಯಮಾತಿಗೆ ಆಗ್ರಹ – ಪೌರ ಕಾರ್ಮಿಕ ದಿನಾಚರಣೆ ಬಹಿಷ್ಕಾರದ ಎಚ್ಚರಿಕೆ

ಸುದ್ದಿ360 ದಾವಣಗೆರೆ, ಸೆ. 21: ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ಸೆ.23ರಂದು ನಡೆಯಲಿರುವ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ, ಕಾರ್ಯಕ್ರಮ ಬಹಿಷ್ಕರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿರ ಮಹಾ ಸಂಘ ಸರಕಾರವನ್ನು ಎಚ್ಚರಿಸಿದೆ. ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಎಲ್. ಎಂ. ಹನುಮಂತಪ್ಪ ಮಾತನಾಡಿ, … Read more

ಶಿವಮೊಗ್ಗ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಶಟಲ್ ಗಾಗಿ ಮೀಸಲಾಯಿತೇ. . .?

ಇತರೆ ಕ್ರೀಡೆಗಳೆಡೆ ಮಹಾನಗರ ಪಾಲಿಕೆ, ಜಿಲ್ಲಾಡಳಿತದ ಧೋರಣೆಯಾದರೂ ಏನು..? ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ಹಾಗೂ ಕ್ರೀಡಾಪಟುಗಳಿಂದ ಪ್ರತಿಭಟನೆ ಸುದ್ದಿ360 ಶಿವಮೊಗ್ಗ, ಸೆ. 18: ಶಿವಮೊಗ್ಗ ನಗರದಲ್ಲಿರುವ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಇಲಾಖಾ ಕ್ರೀಡಾ ಚಟುವಟಿಕೆಗಳಿಗೆ ನೀಡಲು ನಿರಾಕರಿಸುತ್ತಿರುವ ಕ್ರೀಡಾಧಿಕಾರಿಯ ಧೋರಣೆಯನ್ನು ಖಂಡಿಸಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ಹಾಗೂ ಕ್ರೀಡಾಪಟುಗಳು ಭಾನುವಾರ ಕ್ರೀಡಾಂಗಣದ ಎದುರು ಪ್ರತಿಭಟನೆ ನಡೆಸಿದರು. ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ ಶಟಲ್ ಕೋರ್ಟ್ ಗಳಿಗಾಗಿ ಸಿಂಥೆಟಿಕ್ ಅಳವಡಿಕೆಯಿಂದ ಇತರೆ ಕ್ರೀಡೆಗಳಿಗೆ … Read more

ಎಸ್ಸಿ ಜಾತಿ ಪ್ರಮಾಣಪತ್ರ: ದಾರಿ ತಪ್ಪಿಸುತ್ತಿರುವವರ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ

ಸುದ್ದಿ360 ದಾವಣಗೆರೆ, ಸೆ.17: ವೀರಶೈವ-ಲಿಂಗಾಯತ ಜಂಗಮರಿಗೆ ಎಸ್ಸಿ ಜಾತಿ ಪ್ರಮಾಣಪತ್ರ ನೀಡುತ್ತಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಹರಿಹರದಲ್ಲಿ  ತುಂಗಭದ್ರ ನದಿ ನೀರಿಗೆ ಇಳಿದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಹರಿಹರದಲ್ಲಿ ಶುಕ್ರವಾರ ತುಂಗಭದ್ರಾ ನದಿ ಸಮೀಪ ಸೇರಿದ ಪ್ರತಿಭಟನಾಕಾರರು ಪರಿಶಿಷ್ಟರ ಸೌಲಭ್ಯವನ್ನು ಕಬಳಿಸುತ್ತಿರುವುದರ ಬಗ್ಗೆ ಕಿಡಿಕಾರಿದರು. ಈ ವೇಳೆ ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಜನರ ಏಳಿಗೆಗಾಗಿ ಸಂವಿಧಾನದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು … Read more

ದೂಡಾ ಧಾರಾವಾಹಿ ನೋಡಿ ಸಾಕಾಗಿದೆ – ಎಕರೆಗೆ ಐದು ಕೋಟಿ ಕೊಟ್ಟರೂ ನಾವು ಜಮೀನು ಕೊಡೊಲ್ಲ

ಸುದ್ದಿ360 ದಾವಣಗೆರೆ, ಸೆ.17: ಕುಂದುವಾಡ ಲೇಔಟ್‌ಗೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ಲೇಔಟ್ ನಿರ್ಮಿಸಿ ಹಣ ನೀಡುವುದಾಗಿ ಹೇಳಿದ್ದ ದೂಡಾ ಮೂರು ವರ್ಷಗಳಿಂದ ರೈತರಿಗೆ ಮೆಘಾ ಧಾರಾವಾಹಿ ತೋರಿಸುತ್ತಿದೆ. ಇದರಿಂದ ನಾವು ರೋಸಿ ಹೋಗಿದ್ದೇವೆ. ಇನ್ನು ಎಕರೆಗೆ 5 ಕೋಟಿ ರೂ. ಕೊಡುತ್ತೇವೆ ಎಂದರೂ ನಮ್ಮ ಕೃಷಿ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಹಳೇಕುಂದುವಾಡ ರೈತರು ಹೇಳಿದ್ದಾರೆ. ಜಿಲ್ಲಾ ವರದಿಗಾರರ ಕೂಟದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ರೈತ ಎನ್. ಮಲ್ಲಿಕಾರ್ಜುನ್, ಭೂಮಿ ಖರೀದಿಸುವುದಾಗಿ ಇಷ್ಟು ದಿನಗಳ ಕಾಲ … Read more

ಸಿದ್ಧರಾಮೋತ್ಸವಕ್ಕೆ ಬಂದು ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ

ಸುದ್ದಿ360 ಬಾಗಲಕೋಟೆ, ಸೆ.16: ಸಿದ್ಧರಾಮಾತ್ಸವಕ್ಕೆಂದು ದಾವಣಗೆರೆಗೆ ತೆರಳಿದಾಗ ಕಾಣೆಯಾಗಿದ್ದ ಜಮಖಂಡಿ ತಾಲೂಕಿನ ಅಡಿಹುಡಿಯ ಗಿರಿಮಲ್ಲಪ್ಪ ಖಂಡೇಕರ್ ಅವರನ್ನು ಪೊಲೀಸರು ಹುಬ್ಬಳ್ಳಿಯಲ್ಲಿ ಪತ್ತೆ ಮಾಡಿದ್ದಾರೆ. ಗಿರಿಮಲ್ಲಪ್ಪಗಾಗಿ ಶೋಧನೆ ಕೈಗೊಂಡಿದ್ದ ಪೊಲೀಸರು ಈ ವ್ಯಕ್ತಿ ಪತ್ತೆಯಾಗುತ್ತಿದ್ದಂತೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮದಿಂದ 50 ಜನ ಹುಬ್ಬಳ್ಳಿ ಗೆ ತೆರಳಿ ಗಿರಿಮಲ್ಲಪ್ಪ ಕರೆ ತಂದಿದ್ದಾರೆ. ಆತಂಕದಲ್ಲಿದ್ದ  ಗಿರಿಮಲ್ಲಪ್ಪ ಕುಟುಂಬದವರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಆ. 2 ರಂದು ದಾವಣಗೆರೆಗೆ ಸಿದ್ದರಾಮಯ್ಯ ಜನ್ಮದಿನ ಕ್ಕಾಗಿ ಗಿರಿಮಲ್ಲಪ್ಪ ಊರಿನವರೊಂದಿಗೆ ದಾವಣಗೆರೆಗೆ ತೆರಳಿದ್ದರು. ಆದರೆ ಸಮಾರಂಭ … Read more

ಗುರುಶಿಷ್ಯರ ಸಂಬಂಧ ಮತ್ತು ಈ ಮಣ್ಣಿನ ಆಟದ ವೈಭವ ‘ಗುರುಶಿಷ್ಯರು’

ಸುದ್ದಿ360 ದಾವಣಗೆರೆ, ಸೆ.16: ಖೋ-ಖೋ ನಮ್ಮ ಈ ಮಣ್ಣಿನಲ್ಲೇ ಹುಟ್ಟಿ ಬೆಳೆದ, ನಮ್ಮ ಸಂಸ್ಕೃತಿಯ ಒಂದು ಭಾಗವಾಗಿ ಬೆಳೆದು ಬಂದಿರುವ ಆಟ. ಅಂತಹ ಆಟದ ಸೊಗಡಿನ ವೈಭವ ಕಟ್ಟಿಕೊಡುವ ಮತ್ತು ಗುರು ಶಿಷ್ಯ ಸಂಬಂಧದ ಕುರಿತಾಗಿ ಮೂಡಿಬಂದಿರುವ ಚಿತ್ರ ಗುರು ಶಿಷ್ಯರು. ಈ ಚಿತ್ರ ಸೆ.23ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಟ ಶರಣ್ ಹೇಳಿದರು. ನಗರದ ಪಿಬಿ ರಸ್ತೆಯಲ್ಲಿನ ಹೋಟೆಲ್ ಪೂಜಾ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಗುರು ಶಿಷ್ಯರು ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ … Read more

error: Content is protected !!