ರಾಮನಗರ: ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಆತಂಕ

ಸುದ್ದಿ360 ರಾಮನಗರ, ಸೆ.10: ರಾಮನಗರ ತಾಲ್ಲೂಕಿನ ಹಲವಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಇಂದು ಸಂಜೆ 5:40 ಹಾಗೂ 7:15 ರ ಸುಮಾರಿಗೆ ಎರಡು ಬಾರಿ ಭೂ ಕಂಪನ ಉಂಟಾಗಿರುವುದು ಜನರ ಅನುಭವಕ್ಕೆ ಬಂದಿದೆ. ಎರಡು ಭಾರಿ ಕಂಪಿಸಿದ ಭೂಮಿ. ರಾಮನಗರ ತಾಲ್ಲೂಕಿನ ಬೆಜ್ಜರಹಳ್ಳಿ ಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಶಬ್ದ ಬಂದ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರ ಬಂದಿದ್ದಾರೆ. ಭೂಕಂಪಿಸಿದ ಅನುಭವವಾಗಿದ್ದು, ಜನರು ಭಯದಿಂದ ಮನೆಯಿಂದ ಹೊರಗಡೆ ಬಂದಿದ್ದಾರೆ. ಭಾರಿ ಪ್ರಮಾಣದಲ್ಲಿ ಭೂಮಿ.ಕಂಪಿಸಿದ ಅನುಭವವಾಗಿದ್ದು, ಬೆಳಗ್ಗೆ 5.30 ರ … Read more

ಎಸಿಬಿ ರದ್ದು: ಬಲಗೊಂಡ ಲೋಕಾಯುಕ್ತ

ಸುದ್ದಿ360 ಬೆಂಗಳೂರು, ಸೆ.09:ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಈ ಹಿಂದೆ ನೀಡಿದ್ದ ಅಧಿಕಾರಗಳನ್ನು ಮರುಸ್ಥಾಪಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ಹೈಕೋರ್ಟ್ ಆದೇಶದಂತೆ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಲಾಗಿದೆ. ಎಸಿಬಿಯಲ್ಲಿ ತನಿಖಾ ಹಂತದಲ್ಲಿರುವ ಪ್ರಕರಣಗಳು, ಬಾಕಿ ಉಳಿದಿರುವ ವಿಚಾರಣೆಗಳು, ಶಿಸ್ತುಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳು ಮತ್ತು ಖಾಸಗಿ ದೂರುಗಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಸಿದ್ಧರಾಮೋತ್ಸವ ಬಳಿಕ ಬೆಣ್ಣೆನಗರಿಯಲ್ಲಿ ಮತ್ತೊಂದು ಬೃಹತ್ ಸಮಾವೇಶ

ಎಸ್‌ಎಸ್‌ಎಂ 55  ಅದ್ದೂರಿ ಕಾರ್ಯಕ್ರಮಕ್ಕೆ ಭೂಮಿಪೂಜೆ ಸುದ್ದಿ360 ದಾವಣಗೆರೆ, ಸೆ.09: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರವರ 55ನೇ ಜನ್ಮದಿನಾಚರಣೆ ಇದೇ ತಿಂಗಳ 22 ರಂದು ನಡೆಯಲಿದ್ದು, ಜನ್ಮದಿನಾಚರಣೆ ಅಂಗವಾಗಿ ನಗರದ ಎಸ್‌ಎಸ್ ಲೇಔಟ್ ಬಿ ಬ್ಲಾಕ್‌ನಲ್ಲಿರುವ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ (ಎಂಬಿಎ ಕಾಲೇಜು) ಮೈದಾನದಲ್ಲಿ ಶುಕ್ರವಾರ ಎಸ್‌ಎಸ್‌ಎಂ 55ನೇ ಜನ್ಮದಿನ ಸಮಾರಂಭದ ವೇದಿಕೆ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು. ಎಸ್‌ಎಸ್‌ಎಂ ಅಭಿಮಾನಿ ಬಳಗ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಬೆಣ್ಣೆನಗರಿಯಲ್ಲಿ ಯಶಸ್ವಿಯಾಗಿ ಮತ್ತು ಅದ್ದೂರಿಯಾಗಿ … Read more

4ನೇ ದಿನಕ್ಕೆ ಕಾಲಿಟ್ಟ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಮುಷ್ಕರ – ಜಿಲ್ಲಾಧಿಕಾರಿಗಳಿಗೆ ಮನವಿ

ಸುದ್ದಿ360 ದಾವಣಗೆರೆ, ಸೆ.09: ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಸಿದರು. ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಯುಬಿಡಿಟಿ ಕಾಲೇಜಿನಿಂದ ಕಾಲ್ನಡಿಗೆಯಲ್ಲಿ ಹೊರಟ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ತಮ್ಮ ಬೇಡಿಕೆಗಳ ಈಡೆರಿಸುವಂತೆ ಘೋಷಣೆಗಳನ್ನು ಕೂಗಿದರು. ಕಾಲೇಜಿನಲ್ಲಿ … Read more

ಹೊರ ರಾಜ್ಯಕ್ಕೆ ಟ್ರ್ಯಾಕ್ಟರ್ ಬಿಡಿ ಭಾಗಗಳ ಅಕ್ರಮ ಮಾರಾಟ – ತಡೆದ ದಾವಣಗೆರೆ ಪೊಲೀಸರು

ಸುದ್ದಿ360 ದಾವಣಗೆರೆ, ಸೆ.07: ಯಾವುದೇ ದಾಖಲೆ ಹೊಂದಿರದೇ ಆರ್‌ಟಿಒ ದಿಂದ ಪರವಾನಿಗೆ ಪಡೆಯದೇ ದಾವಣಗೆರೆಯಿಂದ ಪಂಜಾಬ್‌ಗೆ ಅಕ್ರಮವಾಗಿ ಟ್ರಾಕ್ಟರ್ ಬಿಡಿ ಭಾಗಗಳನ್ನು ಮಾರಾಟವಾಗುತ್ತಿದ್ದುದನ್ನು ಜಿಲ್ಲಾ ಪೊಲೀಸರು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಆರ್‌ಬಿ ಘಟಕದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಿ. ಎಸ್. ಬಸವರಾಜ್ ಮತ್ತು ಅಧಿಕಾರಿ, ಸಿಬ್ಬಂದಿಗಳು ದಾವಣಗೆರೆ ನಗರದ ರೈತರ ಸಂಘದ ಕಾಂಪೌಂಡ್, ಬಿಲಾಲ್ ಕಾಂಪೌಂಡ್ ಬಳಿ ಇರುವ ಗ್ಯಾರೇಜುಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಹಳೇಯ ಟ್ರಾಕ್ಟರ್‌ಗಳನ್ನು … Read more

ಪತ್ನಿಯ ಕತ್ತು ಕುಯ್ದು ಆತ್ಮಹತ್ಯೆಗೆ ಯತ್ನಿಸಿದ ಪತಿ

ಸುದ್ದಿ360 ಶಿವಮೊಗ್ಗ, ಸೆ.07: ಗಂಡ ಹೆಂಡತಿಯ ನಡುವಿನ ಜಗಳದಿಂದಾಗಿ ಹೆಂಡತಿ ರಕ್ತದಮಡುವಿನಲ್ಲಿ ಕೊನೆಯುಸಿರೆಳೆದರೆ, ಪತಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿರುವ ಘಟನೆ ಶಿವಮೊಗ್ಗ ನಗರದಲ್ಲಿ ವರದಿಯಾಗಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಗರದ ಪ್ರಿಯಾಂಕ ಲೇ ಔಟ್ ನಲ್ಲಿನ ಮನೆಯೊಂದರಲ್ಲಿನ ಅಡುಗೆ ಮನೆಯ ರಕ್ತದ ಮಡುವಿನಲ್ಲಿ ಪತ್ನಿ ಪತ್ತೆಯಾಗಿದ್ದಾಳೆ. ಮೃತ ಮಹಿಳೆಯನ್ನ ಮಂಜುಳ (30) ಎಂದು ಗುರುತಿಸಲಾಗಿದೆ.ಪತಿ ದಿನೇಶ್ ಮೆಸ್ಕಾಂ ಉದ್ಯೋಗಿ ಎನ್ನಲಾಗಿದ್ದು, ಆತ ಸಹ ಕೈಕೊಯ್ದುಕೊಂಡಿದ್ದಾನೆ. ಆತನಿಗೆ ನಾರಾಯಣ ಹೃದಯಾಲಯಕ್ಕೆ ದಾಖ ಲಿಸಲಾಗಿದೆ. … Read more

ಸೋತಾಗ ಮೇಲೆತ್ತುವ ಕೈಗಳು ನೀವಾಗಿ : ಜಿ.ಎಸ್.ನಾರಾಯಣರಾವ್

ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ, ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಹಾಗೂ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವತಿಯಿಂದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಂತರ ಕಾಲೇಜುಗಳ ಮಹಿಳಾ ಥ್ರೋ ಬಾಲ್ ಮತ್ತು ಟೆನಿಕಾಯ್ಟ್ ಪಂದ್ಯಾವಳಿ

ಆ್ಯಂಥೆ ಪರೀಕ್ಷೆ ನೋಂದಣಿಗೆ ಚಾಲನೆ – ಇಬ್ಬರಿಗೆ ನಾಸಾಗೆ ಭೇಟಿ ನೀಡುವ ಅವಕಾಶ !

ಸುದ್ದಿ360 ದಾವಣಗೆರೆ, ಸೆ. 06: ನಗರದ ಅಕ್ಕಮಹಾದೇವಿ ರಸ್ತೆಯ ಎವಿಕೆ ಕಾಲೇಜು ಎದುರಿರುವ ಆಕಾಶ್ ಬೈಜೂಸ್ ಶಾಖೆಯಲ್ಲಿ ಮಂಗಳವಾರ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆ-2022ರ ದಿನಾಂಕಗಳನ್ನು ಘೋಷಿಸಿ, ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಯಿತು. ಆಕಾಶ್ ಬೈಜೂಸ್ ಸಂಸ್ಥೆ ಉಪ ನಿರ್ದೇಶಕ ಸುಧೀರ್ ಕುಮಾರ್ ಮಾತನಾಡಿ, ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಮ್ (ಆ್ಯಂಥೆ) ರಾಷ್ಟ್ರಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆಯಾಗಿದೆ. ಇದು ಆನ್‌ಲೈನ್ ಮತ್ತು ಆಫ್‌ಲೈನ್ ಮಾದರಿಯಲ್ಲಿ ನಡೆಯಲಿದ್ದು, ನ.5ರಿಂದ ನ.13ರವರೆಗೆ ಬೆಳಗ್ಗೆ 10ರಿಂದ ಸಂಜೆ … Read more

ಶಸ್ತ್ರಚಿಕಿತ್ಸೆಯಿಂದ ತೆಗೆದ ಪತಿಯ ಕಾಲನ್ನು ಮಣ್ಣು ಮಾಡಲು ಪತ್ನಿಯ ಕೈಗೆ ಕೊಟ್ಟರು !!!

ಸುದ್ದಿ360 ಮಂಡ್ಯ ಸೆ.06: ಗ್ಯಾಂಗ್ರೀನ್ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಕತ್ತರಿಸಿದ್ದ ರೋಗಿಯ ಕಾಲನ್ನು ಮಣ್ಣು ಮಾಡುವಂತೆ ಪತ್ನಿ ಕೈಗೆ ಕೊಟ್ಟಿರುವ ಘಟನೆ ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಇಂದು ನಡೆದಿದೆ. ತಾಲೂಕಿನ ಕೀಲಾರ ಗ್ರಾಮದ ಭಾಗ್ಯಮ್ಮ ಎಂಬುವರ ಪತಿ ಪ್ರಕಾಶ್‌ ಅವರ ಕಾಲಿಗೆ ಗ್ಯಾಂಗ್ರೀನ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಮಿಮ್ಸ್ ನಲ್ಲಿ‌ ಶಸ್ತ್ರಚಿಕಿತ್ಸೆ ನಡೆದಿದೆ. ಆತನ ಕಾಲನ್ನು ಕತ್ತರಿಸಿ ಕವರ್‌ನಲ್ಲಿ ಸುತ್ತಿ ಎಲ್ಲಾದರೂ ಮಣ್ಣು ಮಾಡುವಂತೆ ಪತ್ನಿಯ ಕೈಗೆ ಕೊಟ್ಟಿದ್ದಾರೆ. ಇದರಿಂದ ದಿಗ್ಬಮ್ರೆಗೊಂಡ ಭಾಗ್ಯಮ್ಮ … Read more

ವೈದ್ಯಕೀಯ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನ

ಸುದ್ದಿ360 ಶಿವಮೊಗ್ಗ, ಸೆ. 06: 2022-23ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣಕ್ಕಾಗಿ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದ ಮಾಜಿ ಸೈನಿಕರು ಮತ್ತು ಮಾಜಿ ಸೈನಿಕರ ಅವಲಂಬಿತರ ಮಕ್ಕಳು ಕೇಂದ್ರೀಯ ಸೈನಿಕ ಮಂಡಳಿ ಮುಖಾಂತರ ವಿತರಿಸಲಾಗುವ ಸೀಟುಗಳನ್ನು ಪಡೆಯಲಿಚ್ಚಿಸುವವರು, ನೀಟ್ ಅರ್ಹತಾ ಪರೀಕ್ಷೆಯ ಫಲಿತಾಂಶದ 20 ದಿನಗಳೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಂದ ಮಾಜಿ ಸೈನಿಕ ಅರ್ಹತಾ ಪ್ರಮಾಣ ಪತ್ರವನ್ನು ಪಡೆದು, ಇಲಾಖೆಯ ನಿರ್ದೇಶನಾಲಯದಿಂದ ಮೇಲು ರುಜು ಪಡೆದ ನಂತರ … Read more

error: Content is protected !!