ಮುರುಘಾ ಶರಣರ ಬಂಧನಕ್ಕೆ ವ್ಯಾಪಕ ಖಂಡನೆ – ದಾವಣಗೆರೆಯಲ್ಲಿ ವಿವಿಧ ಸಮುದಾಯಗಳಿಂದ ಪ್ರತಿಭಟನೆ

ಸುದ್ದಿ360 ದಾವಣಗೆರೆ, ಸೆ.02: ಚಿತ್ರದುರ್ಗದ ಮುರುಘಾ ಶ್ರೀಗಳ ಬಂಧನವನ್ನು ಖಂಡಿಸಿ, ನಗರದಲ್ಲಿ ಇಂದು ವಿವಿಧ ಧರ್ಮ, ಸಮುದಾಯಗಳ ಮುಖಂಡರು, ಶ್ರೀಮಠದ ಭಕ್ತರು, ಶ್ರೀಗಳ ಬೆಂಬಲಿಗರು ಶ್ರೀ ಮುರುಘರಾಜೇಂದ್ರ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಧರಣಿ ನಡೆಸಿದರು. ನಗರದ ಜಯದೇವ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಯಾರೋ ಮಾಡಿರುವ ಷಡ್ಯಂತ್ರದಿಂದಾಗಿ ಶ್ರೀಗಳು ಗಂಭೀರ ಆರೋಪದ ಪ್ರಕರಣ ಎದುರಿಸುವಂತಾಗಿದೆ. ತಪ್ಪು ಮಾಡದೇ ಇದ್ದರೂ ಶ್ರೀಗಳನ್ನು ಬಂಧಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶ್ರೀ ಬಸವಪ್ರಭು ಸ್ವಾಮೀಜಿ … Read more

ಕೆರೆಗಳಿಗೆ  ಸ್ಲೂಯೀಸ್ ಗೇಟ್ ಅಳವಡಿಸಲು ತೀರ್ಮಾನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಸೆ.01: ಕೆರೆಗಳ  ಒತ್ತುವರಿ ತೆರವುಗೊಳಿಸಿ  ಬೊಮ್ಮನಹಳ್ಳಿ, ಮಹದೇವಪುರ, ಕೆ.ಆರ್.ಪುರಂ ಅಥವಾ ಎತ್ತರದ ಪ್ರದೇಶದಲ್ಲಿ ಅತಿ ಹೆಚ್ಚು ಕೆರೆಗಳಿದ್ದು, ಒಂದಕ್ಕೊಂದು  ಹೊಂದಿಕೊಂಡಿರುವ ಕೆರೆಗಳಿಗೆ  ಸ್ಲೂಯೀಸ್ ಗೇಟ್ ಗಳನ್ನು ಅಳವಡಿಸಲು  ತೀರ್ಮಾನಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮಳೆ ನೀರು ಚರಂಡಿಗಳ ನಿರ್ವಹಣೆಗೆ  ಕೈಪಿಡಿ ತೆರೆವುಗೊಳಿಸುವ ಕಾರ್ಯ ನಿರಂತರವಾಗಿ ಆಗಬೇಕು.  ತಗ್ಗು ಪ್ರದೇಶದಲ್ಲಿ ನೀರು … Read more

ಮುರುಘಾ ಶರಣರ ಬಂಧನ – ಪ್ರತಿಭಟನೆಗೆ ಮುಂದಾದ ಅಭಿಮಾನಿಗಳು

ಸುದ್ದಿ360 ಚಿತ್ರದುರ್ಗ, ಸೆ.01: ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಗುರುವಾರ ರಾತ್ರಿ 10 ಗಂಟೆ ವೇಳೆಗೆ  ಮುರುಘಾ ಮಠದಲ್ಲಿಯೇ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮುರುಘಾ ಶರಣರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. ವೈದ್ಯಕೀಯ ತಪಾಸಣೆಗಾಗಿ ಅವರನ್ನು ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಕರೆದೊಯ್ಯಲು ಸಿದ್ಧತೆ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಮುರುಘಾ ಮಠಕ್ಕೆ ಬಂದಿದ್ದ ಪೊಲೀಸ್ ತನಿಖಾ ತಂಡ, … Read more

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ನಿಂದ ಭಾವೈಕ್ಯತೆಯ ಗಣಪತಿ ಪ್ರತಿಷ್ಠಾಪನೆ

ಸುದ್ದಿ360 ದಾವಣಗೆರೆ, ಸೆ.01: ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಾಮನೂರು ಶಿವಶಂಕರಪ್ಪ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸರ್ವಧರ್ಮದ ಹಿಂದೂ ಕ್ರೈಸ್ತ ಮುಸಲ್ಮಾನರು ಕೂಡಿ ಭಾವೈಕ್ಯತೆಯ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿಷ್ಠಾಪನೆ ವೇಳೆ ಮಾಜಿ ಸಚಿವರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಡಾ. ಶಾಮನೂರು ಶಿವಶಂಕರಪ್ಪನವರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಮಾಗನಳ್ಳಿ ಪರಶುರಾಮ್ ಜಿ.ಎಸ್.ಮಂಜುನಾಥ್, ಎ.ನಾಗರಾಜ್, ಮಹ್ಮದ್ ಸಮೀವುಲ್ಲಾ, … Read more

ಉಕ್ರೇನ್ ಮೇಲಿನ ರಷ್ಯಾ ಯುದ್ಧ ನಿಲ್ಲಿಸಲು ಎಐಯುಟಿಯುಸಿ ಆಗ್ರಹ – ‘ಯುದ್ಧ ಬೇಡ ಶಾಂತಿ ಬೇಕು’

ಸುದ್ದಿ360 ದಾವಣಗೆರೆ, ಸೆ.01: ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಶಕ್ತಿಗಳು ಅತಿ ಹೆಚ್ಚು ಲಾಭಗಳಿಸಲು ಈ ಯುದ್ಧಗಳನ್ನು ಹುಟ್ಟುಹಾಕತ್ತಿದ್ದು, ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧ ನಿಲ್ಲಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಕಾರ್ಯಕರ್ತರು ಇಂದು ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ವಿಶ್ವ ಕಾರ್ಮಿಕ ಸಂಘಟನೆಗಳ ಒಕ್ಕೂಟ ವರ್ಲ್ಡ್ ಫೆಡರೇಷನ್ ಆಫ್ ಟ್ರೇಡ್ ಯುನಿಯನ್ (WFTU )  ಸೆಪ್ಟೆಂಬರ್ 1 ರಂದು ‘ಶಾಂತಿಗಾಗಿ ಅಂತರಾಷ್ಟ್ರೀಯ ಕ್ರಿಯಾ ದಿನ’ ಎಂದು ಆಚರಿಸಲು ಕರೆನೀಡಿದ್ದು, ಈ … Read more

ಸೆ.5,6 ಶ್ರೀ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳವರ 75ನೇ ಜನ್ಮವರ್ಧಂತಿ ಅಮೃತ ಮಹೋತ್ಸವ

ಸುದ್ದಿ360 ದಾವಣಗೆರೆ, ಸೆ.01: ಚನ್ನಗಿರಿ ತಾಲೂಕಿನ ಪುರಾತನ ಮಠ ಹಾಗೂ ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾದ ತಾವರಕರೆ ಶ್ರೀಶಿಲಾಮಠದಲ್ಲಿ ಸೆ.5ಹಾಗೂ 6ರಂದು ಪರಮಪೂಜ್ಯ ಶ್ರೀ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳವರ 75ನೇ ಜನ್ಮವರ್ಧಂತಿ ಅಮೃತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಕಿರಿಯ ಪೂಜ್ಯರಾದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜಿ ಮಾಹಿತಿ ನೀಡಿದರು. ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಗಳು ಸೆ. 5ರಂದು ಸಂಜೆ 5ಕ್ಕೆ ಬಾಳೇಹೊನ್ನೂರು ರಂಭಾಪುರಿಪೀಠದ ಶ್ರೀ ರಂಭಾಪುರಿ ವೀರಸಿಂಹಾಸನಾಧೀಶ್ವರ ಸ್ವಾಮೀಜಿ ಹಾಗೂ … Read more

ದಾವಣಗೆರೆಯಲ್ಲಿ ಸೆ.5ರಿಂದ ನಾಲ್ಕು ದಿನಗಳ ಧರ್ಮಸಮ್ಮೇಳನ – ಸಂಗೀತಯುಕ್ತ ಇಷ್ಟಲಿಂಗ ಪೂಜೆ

ಸುದ್ದಿ360 ದಾವಣಗೆರೆ, ಸೆ.01: ಶ್ರೀಶೈಲ ಜಗದ್ಗುರು ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 36ನೇ ವಾರ್ಷಿಕ ಪುಣ್ಯಾರಾಧನೆ, ಶ್ರೀಶೈಲ ಜಗದ್ಗುರು ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 11ನೇ ವರ್ಷದ ಸ್ಮರಣೋತ್ಸವ, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ದ್ವಾದಶ ಪೀಠಾರೋಹಣ ಮಹೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ ಕಾರ್ಯಕ್ರಮಗಳು ಸೆ.5, 6, 7 ಮತ್ತು 8ರಂದು ನಗರದಲ್ಲಿ ಆಯೋಜಿಸಲಾಗಿದೆ. ಈ ಕುರಿತು ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ … Read more

ಶ್ರೀಸ್ವರ್ಣಗೌರಿ ವ್ರತ

ಭಾದ್ರಪದ ಮಾಸದ ತದಿಗೆಯಂದು ಹಸ್ತಾ ನಕ್ಷತ್ರವಿರುವ ದಿನ, ಶ್ರೀಪಾರ್ವತಿದೇವಿಯನ್ನು ಸ್ವರ್ಣಗೌರಿ ಎಂದು ಪೂಜಿಸಲಾಗುತ್ತದೆ. (ಆಗಸ್ಟ್ – 30- ಮಂಗಳವಾರ) ಗೌರಿ ಎಂದರೆ * ತಿಳಿಯಾದ ಬಿಳಿ ಬಣ್ಣ ಮಿಶ್ರಿತ ಸುವರ್ಣ (ಬಂಗಾರ) ವರ್ಣ ಎಂದರ್ಥ.* ಪಾರ್ವತಿ ದೇವಿ ಶಿವನನ್ನು ವರಿಸಲೆಂದು ಮಾಡಿದ ವ್ರತವಿದು. ಹಾಗಾಗಿ ಅತ್ಯಂತ ಫಲಪ್ರದವಾದ ವ್ರತವಾಗಿದೆ. ಈ ವ್ರತವನ್ನು ಕೇವಲ ಮಹಿಳೆಯರು ಮಾತ್ರ ಆಚರಿಸದೆ, ದಂಪತಿ ಒಟ್ಟಿಗೆ ಆಚರಣೆ ಮಾಡಿದರೆ ಫಲ ಹೆಚ್ಚು. ಈ ವ್ರತವನ್ನು ಮಾಡಿದ್ದರಿಂದ ಪಾರ್ವತಿ ದೇವಿ ಶಿವನನ್ನು ವರಿಸಿ ಅಖಂಡ … Read more

ವದಂತಿಗಳಿಗೆ ಕಿವಿಗೊಡಬೇಡಿ – ಪಲಾಯನವಾದವೇ ಇಲ್ಲ- ನೆಲದ ಕಾನೂನು ಗೌರವಿಸುತ್ತೇವೆ: ಮುರುಘಾಶ್ರೀ

ಸುದ್ದಿ360 ಚಿತ್ರದುರ್ಗ, ಆ.29: ನಾವು ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ. ನೆಲದ ಕಾನೂನಿಗೆ ಗೌರವಿಸಿ ಸಹಕಾರ ನೀಡುವುದಾಗಿ ಮುರುಘಾ ಶ್ರೀಗಳು ಹೇಳಿದ್ದಾರೆ. ಶ್ರೀಗಳು ಬಂಧನಕ್ಕೆ ಒಳಗಾಗಿದ್ದಾರೆ ಎಂಬ ವದಂತಿಗಳ ಬೆನ್ನೆಲ್ಲೇ ಶ್ರೀಗಳು ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ಮಠಕ್ಕೆ ಹಿಂದಿರುಗಿದ್ದಾರೆ. ಅವರು ಹಾವೇರಿಯಿಂದ ಬಿಗಿ ಪೊಲೀಸ್ ಭದ್ರೆತೆಯಲ್ಲಿ ಮಠಕ್ಕೆ ಹಿಂತಿರುಗಿದ ನಂತರ ಮಾತನಾಡಿ, ಭಕ್ತರು ಯಾವುದೇ ರೀತಿಯ ಗಾಳಿ ಸುದ್ದಿಗೆ ಕಿವಿಗೊಡದೇ ಧೈರ್ಯ ಹಾಗೂ ಶಾಂತ ರೀತಿಯಿಂದ  ಇರುವಂತೆ ಮನವಿ ಮಾಡಿದ್ದಾರೆ. ನಮ್ಮ ವಿರುದ್ಧ ಪಿತೂರಿ … Read more

ಆಕ್ಟಿವಾ ಗಾಡಿಯ ಸೀಟಿನ ಡಿಕ್ಕಿಯಲ್ಲಿದ್ದ 8 ಲಕ್ಷ ಕಳವು – ಪೊಲೀಸ್ ಠಾಣೆಯ ಎದುರೇ ಕದ್ದ ಖದೀಮರು

ಸುದ್ದಿ360 ಮಳವಳ್ಳಿ (ಮಂಡ್ಯ) ಆ.27: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್(ಕೊಳ್ಳೇಗಾಲ) ರಸ್ತೆಯ ಉಪನೋಂದಣಾಧಿಕಾರಿ ಕಚೇರಿ ಬಳಿ ನಿಲ್ಲಿಸಿದ್ದ ಬೈಕ್ ಸೀಟಿನ ಡಿಕ್ಕಿಯಲ್ಲಿ ಇಟ್ಟಿದ್ದ 8 ಲಕ್ಷ ರೂ.ಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ಮಳವಳ್ಳಿ ತಾಲ್ಲೂಕಿನ ಬಾಚನಹಳ್ಳಿ ಗ್ರಾಮದ ನರಸಿಂಹಸ್ವಾಮಿ ಹಣ ಕಳೆದುಕೊಂಡವರಾಗಿದ್ದಾರೆ. ಗುರುವಾರ ಜಮೀನೊಂದರ ನೋಂದಣಿ ಸಂಬಂಧ 8 ರೂ.ಲಕ್ಷವನ್ನು ತಮ್ಮ ಹೋಂಡಾ ಆಕ್ಟಿವಾ ಬೈಕ್ ನ ಸೀಟಿನ ಡಿಕ್ಕಿಯಲ್ಲಿ ಇಟ್ಟಿಕೊಂಡು ಬಂದಿದ್ದರು. ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿ ಮುಂದೆ ಬೈಕ್ ನಿಲ್ಲಿಸಿ ಕಚೇರಿ ಒಳಗೆ ಹೋಗಿ ವಾಪಾಸ್ ಬಂದು ಹಣ … Read more

error: Content is protected !!