ಎಫ್ ಆರ್ ಪಿ ದರ ಪರಿಷ್ಕರಿಸುವಂತೆ ಆಗ್ರಹಿಸಿ,  ಕಬ್ಬುಬೆಳೆಗಾರರಿಂದ ರಸ್ತೆ ತಡೆ – ಮನವಿ

ಸುದ್ದಿ360 ದಾವಣಗೆರೆ, ಆ.12: ಕೇಂದ್ರ ಸರ್ಕಾರ ಕಬ್ಬಿಗೆ ಘೋಷಿಸಿರುವ ಎಫ್ ಆರ್ ಪಿ ದರ ಅವೈಜ್ಞಾನಿಕವಾಗಿದ್ದು, ಕೂಡಲೇ ಪರಿಷ್ಕರಿಸುವಂತೆ ಆಗ್ರಹಿಸಿದ ಕಬ್ಬುಬೆಳೆಗಾರರು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ಇಂದು ರಸ್ತೆ ತಡೆ ನಡೆಸಿದರು. ದಾವಣಗೆರೆ ಜಿಲ್ಲಾ ಪಂಚಾಯತಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ಕಬ್ಬು ಬೆಳೆಗಾರರು ತಸ್ತೆ ತಡೆ ನಡೆಸಿದರು. ಈ ವೇಳೆ ಮಾತನಾಡಿದ ತೇಜಸ್ವಿ ವಿ. ಪಟೇಲ್ ಕಳೆದ ಸಾಲಿನಲ್ಲಿ ರೂ. 2900  ಇದ್ದ ಎಫ್‌ಆರ್‌ಪಿಯನ್ನು 3050ಕ್ಕೆ … Read more

ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ – ಪೊಲೀಸ್ ಗೌರಗಳೊಂದಿಗೆ ಅಂತ್ಯಕ್ರಿಯೆ

ಸುದ್ದಿ360 ಬೆಂಗಳೂರು, ಆ.12: ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂಗೀತ ಪರಂಪರೆಯ ಮನೆತನದಿಂದ ಬಂದ ಸುಬ್ಬಣ್ಣ ಅವರು ಸುಗಮ ಸಂಗೀತ  ಹಾಗೂ ಚಲನ ಚಿತ್ರ ಹಿನ್ನಲೆ ಗಾಯಕರಾಗಿ ತಮ್ಮದೇ ಛಾಪು ಮೂಡಿಸಿದ್ದರು. ಅವರ ‘ಕಾಡು ಕುದುರೆ ಓಡಿ ಬಂದಿತ್ತಾ’ ಗೀತೆಯು ಇಂದಿಗೂ ಅಭಿಮಾನಿಗಳು ಗುನುಗುನಿಸುವ ಹಾಡು. ಇದಕ್ಕಾಗಿ ಭಾರತ ಸರ್ಕಾರದ ರಜತ ಕಮಲ ಪ್ರಶಸ್ತಿಗೂ ಭಾಜನರಾದರು. ಸಂತ ಶಿಶುನಾಳ ಶರೀಫರ ಗೀತೆಗಳಿಗೆ ದನಿಯಾಗಿ ಅವುಗಳನ್ನು … Read more

ಬಿಗ್ ಶಾಕಿಂಗ್ – ಪ್ರಸಿದ್ಧ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

ಸುದ್ದಿ360 ಬೆಂಗಳೂರು, ಆ.11: ತಮ್ಮ ಮೋಹಕ ಕಂಠದಿಂದ ನಾಡಿನಾದ್ಯಂತ ಜನಪ್ರಿಯರೂ, ಕರ್ನಾಟಕ ಸುಗಮ ಸಂಗೀತದ ಪ್ರಸಿದ್ಧ ಗಾಯಕರೂ ಆಗಿದ್ದ ಶಿವಮೊಗ್ಗ ಸುಬ್ಬಣ (83) ಅವರು ಹೃದಯಾಘಾತದಿಂದ ಗುರುವಾರ ರಾತ್ರಿ ಇಹಲೋಕ ತ್ಯಜಿಸಿದರು. ಕಾಡು ಕುದುರೆ ಓಡಿಬಂದಿತ್ತಾ… ಕೋಡಗನ ಕೋಳಿ ನುಂಗಿತ್ತಾ… ಬಿದ್ದಿಯಬ್ಬೇ ಮುದುಕಿ ಬಿದ್ದೀಯಬ್ಬೇ.. ಹಾಡುಗಳ ಮೂಲಕ ಮನೆಮಾತಾಗಿದ್ದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ ಇನ್ನಿಲ್ಲ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು ಎಂಬ ಖ್ಯಾತಿ ಹೊಂದಿದ್ದರು. … Read more

ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಿ

ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆ ಪೊಲೀಸ್ ಇನ್ಸ್ಪೆಕ್ಟರ್ ಮುಸ್ತಕ್ ಅಹಮದ್ ಶೇಕ್ ಕರೆ ಸುದ್ದಿ360 ದಾವಣಗೆರೆ, ಆ. 10: ನಗರದ ನಿಂಚನ ಪಬ್ಲಿಕ್ ಸ್ಕೂಲ್ ನಲ್ಲಿ ಇತ್ತಿಚೆಗೆ ನಡೆದ 2022-23 ನೇ ಸಾಲಿನ ವಿದ್ಯಾರ್ಥಿಗಳಿಗೆ ಶಾಲಾ ಮಂತ್ರಿ ಮಂಡಲ ರಚನೆ ಗೆ ಚುನಾವಣೆ ನಡೆಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪದಗ್ರಹಣ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರೈಲ್ವೆ ಇಲಾಖೆ ಪೊಲೀಸ್ ಇನ್ಸ್ಪೆಕ್ಟರ್ ಮುಸ್ತಕ್ ಅಹಮದ್ ಶೇಕ್ ಮುಖ್ಯ ಅತಿಥಿ ಗಳಾಗಿ ಭಾಗವಾಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ನಾಯಕತ್ವ ಗುಣಬೆಳಸಿಕೊಳ್ಳಬೇಕು ಮತ್ತು ಸತತ … Read more

ದಾವಣಗೆರೆ: ಖೋಟಾ ನೋಟು ಜಾಲ ಪತ್ತೆ – ಇಬ್ಬರ ಬಂಧನ

ಸುದ್ದಿ360 ದಾವಣಗೆರೆ, ಆ. 10: ನಗರದಲ್ಲಿ ಖೋಟಾ ನೋಟು ಮುದ್ರಣ ಮತ್ತು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ದಾವಣಗೆರೆ ಜಿಲ್ಲಾ ಡಿಸಿಆರ್ ಬಿ ಪೊಲೀಸರು ಪೊಲೀಸರು ಬಂಧಿಸಿ, ಆರೋಪಿಗಳಿಂದ 1,20,700 ಮುಖಬೆಲೆಯ ಖೋಟಾ ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್, ಇಂದು (ಆ.10) ದಾವಣಗೆರೆಯ ಯಲ್ಲಮ್ಮನಗರ 4ನೇ ಮೇನ್ 6ನೇ ಕ್ರಾಸ್ ತೆಲಗಿ ಶೇಖರಪ್ಪನವರ ಮನೆ ಸಮೀಪ ಕಲರ್ ಜೆರಾಕ್ಸ್ ಮಿಷಿನ್‌ನಿಂದ ಜೆರಾಕ್ಸ್ ಮಾಡಿದ ಖೋಟಾ ನೋಟುಗಳನ್ನು ತೆಗೆದುಕೊಂಡು ಚಲಾವಣೆ … Read more

ಆ.11ಕ್ಕೆ ದಾವಣಗೆರೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಬೈಕ್ ರ್ಯಾಲಿ

ಸುದ್ದಿ360 ದಾವಣಗೆರೆ, ಆ. 10: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಬೈಕ್‌ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಗದೀಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಆಗಸ್ಟ್ 11ರ ಬೆಳಗ್ಗೆ 10ಕ್ಕೆ ನಗರದ ಬೇತೂರು ರಸ್ತೆಯಲ್ಲಿರುವ ವೆಂಕಟೇಶ್ವರ ವೃತ್ತದಿಂದ ಬೈಕ್ ರ್ಯಾಲಿ ಆರಂಭವಾಗಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್‌ ಹನಗವಾಡಿ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ಸಂಸದರು, ಶಾಸಕರು ರ್ಯಾಲಿಯಲ್ಲಿ ಭಾಗವಹಿಸಲಿದ್ದು, ತಿರಂಗದೊಂದಿಗೆ ಹೊರಡುವ … Read more

ಮನೆ-ಮನೆಯಲ್ಲೂ ತಿರಂಗ – ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅಭಿಮಾನದ ವಿನಂತಿ

ಸುದ್ದಿ360 ದಾವಣಗೆರೆ, ಆ. 10: ಇದೇ ಆಗಸ್ಟ್ 13, 14 ಮತ್ತು 15ರಂದು ಭಾರತ ದೇಶ ಸ್ವತಂತ್ರ ಪಡೆದು 75 ವರ್ಷಗಳು ತುಂಬುತ್ತಿರುವ  ಈ ಶುಭ ಸಂದರ್ಭದಲ್ಲಿ ದೇಶದ ಅಮೃತ ಮಹೋತ್ಸವದ ಸಂಕೇತವಾಗಿ ದಿನಾಂಕ: 13ರ  ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 15 ರ ಸಂಜೆ 6:00 ಗಂಟೆವರೆಗೆ ನಿರಂತರವಾಗಿ ರಾಷ್ಟ್ರಧ್ವಜ ಹಾರಿಸುವಂತಹ ಅವಕಾಶವನ್ನು ಪ್ರತಿಯೊಬ್ಬರಿಗೂ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಕಲ್ಪಿಸಿಕೊಟ್ಟವೆ. ಇದು ದೇಶ ಅಭಿಮಾನದ ಪ್ರಶ್ನೆ ಅಷ್ಟೇ ಅಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ – … Read more

ಯುವಾ ಬ್ರಿಗೇಡ್ ಹರಿಹರ ತಂಡದಿಂದ ಹಳೆಯ ದೇವರ ಫೋಟೊಗಳ ವಿಸರ್ಜನೆ

ಸುದ್ದಿ360 ದಾವಣಗೆರೆ, ಆ.08:  ಯುವಾ ಬ್ರಿಗೇಡ್ ಹರಿಹರ ತಂಡ ಹರಿಹರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಅಕ್ಕಪಕ್ಕ ಬಿದ್ದಿದ್ದ ಹಳೆಯ ದೇವರ ಫೋಟೋಗಳನ್ನು ಸಂಗ್ರಹಿಸಿ ಸೂಕ್ತರೀತಿಯಲ್ಲಿ ವಿಸರ್ಜಿಸಿದ್ದಾರೆ. ದೇವಸ್ಥಾನದ ಸುತ್ತಮುತ್ತಲು ಇಲ್ಲವೆ ಅಲ್ಲಿನ ಆಸುಪಾಸಿನ ಮರ ಇಲ್ಲವೇ ಯಾವುದಾದರೂ ಮರದ ಕೆಳಗಡೆ ಊನವಾದ ದೇವರ ಫೋಟೋಗಳು ಇಟ್ಟಿರುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ಇದೂ ಸಹ ದೇವರಿಗೆ ಅಗೌರವ ತೋರಿಸಿದಂತೆಯೇ ಆಗುತ್ತದೆಯಲ್ಲದೆ. ಫೋಟೊಗೆ ಅಳವಡಿಸಲಾದ ಫ್ರೇಮ್ ಮತ್ತು ಗಾಜಿನ ಚೂರುಗಳು ಕಾಲ ಕ್ರಮೇಣ ಒಡೆದು ಸಾರ್ವಜನಿಕರಿಗೆ ಹಾನಿಯುಂಟು ಮಾಡುತ್ತದೆ. … Read more

ವಿದ್ಯುತ್ ಮಸೂದೆ 2022 ಬಿಲ್ ವಿರೋಧಿಸಿ AIUTUC ಯಿಂದ ಪ್ರತಿಭಟನೆ – ಮನವಿ

ಸುದ್ದಿ360 ದಾವಣಗೆರೆ, ಆ.08: ಕೇಂದ್ರ ಸರ್ಕಾರದ ವಿದ್ಯುತ್ ಮಸೂದೆ 2022 ಬಿಲ್ ನ್ನು ವಿರೋಧಿಸಿ AIUTUC ದಾವಣಗೆರೆ ಜಿಲ್ಲಾ ಸಮಿತಿ ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಮಾನ್ಯ ಪ್ರಧಾನ ಮಂತ್ರಿಗಳಿಗೆ ಉಪವಿಭಾಗಾಧಿಕಾರಿಗಳ ಮೂಲಕ  ಮನವಿ ಪತ್ರವನ್ನು ಸಲ್ಲಿಸಿತು. ಈ ಪ್ರತಿಭಟನೆಯಲ್ಲಿ ಮಂಜುನಾಥ್ ಕೈದಾಳೆ, ಜಿಲ್ಲಾ ಅಧ್ಯಕ್ಷರು ಎಐಯುಟಿಯುಸಿ. ಶಿವಾಜಿರಾವ್ ಜಿಲ್ಲಾ ಉಪಾಧ್ಯಕ್ಷರು, ತಿಪ್ಪೇಸ್ವಾಮಿ ಅಣಬೇರು ಜಿಲ್ಲಾ ಮುಖಂಡರು. ಮಧು ತೊಗಲೇರಿ ಎಐಕೆಕೆಎಂಎಸ್ ಜಿಲ್ಲಾ ಸಂಚಾಲಕರು, ನಾಗಸ್ಮಿತಾ, ಡಾ. ಸುನೀತ್ ಕುಮಾರ್, ಲೋಕೇಶ್, ಬೀರಲಿಂಗಪ್ಪ, ಹನುಮಂತಪ್ಪ, ವಿರುಪಾಕ್ಷಪ್ಪ, … Read more

ಹರ್ ಘರ್ ತಿರಂಗ: ರಾಜ್ಯದಲ್ಲಿ 1 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಗುರಿ

ಸುದ್ದಿ360 ಬೆಂಗಳೂರು, ಆ.08: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ‘ಹರ್ ಘರ್ ತಿರಂಗ’ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ಈ ಅಭಿಯಾನದ ಸಿದ್ಧತೆಯನ್ನು ಪರಿಶೀಲಿಸಿ ಮಾತನಾಡಿದರು.  ಈ ಕಾರ್ಯಕ್ರಮವನ್ನು ಕೇವಲ ಕಾಟಾಚಾರಕ್ಕೆ ಮಾಡದೆ, ದೇಶದ ಮೇಲಿನ ಅಭಿಮಾನ ಪ್ರೀತಿಯಿಂದ ಆಯೋಜಿಸಬೇಕು. ಇದನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ತುಡಿತದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ರಾಜ್ಯದಲ್ಲಿ ಸುಮಾರು 1 ಕೋಟಿಗೂ ಹೆಚ್ಚು … Read more

error: Content is protected !!