ಶಿವಶರಣ ಹಡಪದ ಅಪ್ಪಣ್ಣ ಜಯಂತಿ

ಸುದ್ದಿ360 ದಾವಣಗೆರೆ, ಜು.13: ಶಿವಶರಣ ಹಡಪದ ಅಪ್ಪಣ್ಣನವರು 12ನೇ ಶತಮಾನದಲ್ಲಿ ಆದ್ಯ ವಚನಕಾರರಾಗಿ, ಪ್ರಮುಖವಾದ ವಚನಗಳ ಮುಖಾಂತರ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆದ ಮಹನೀಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಎ.ಚನ್ನಪ್ಪ ಹೇಳಿದರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ನಿಜಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ನಂತರ ಅವರು ಮಾತನಾಡಿದರು. … Read more

ಗುರು ಪೂರ್ಣಿಮೆ – ಸಾಯಿಬಾಬಾ ದರ್ಶನ ಪಡೆದ ಸಹಸ್ರಾರು ಭಕ್ತರು

ಶ್ರೀ ಸಾಯಿ ಟ್ರಸ್ಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದ ಗುರು ಪೂರ್ಣಿಮೆ ಸುದ್ದಿ360 ದಾವಣಗೆರೆ, ಜು.13:  ಗುರು ಪೂರ್ಣಿಮೆ ಪ್ರಯುಕ್ತ ಇಂದು ಬುಧವಾರ ಬಾಬಾ ಮಂದಿರಗಳಲ್ಲಿ ನೆರೆದ ಭಕ್ತರು, ಸಾಯಿಬಾಬಾರ ದರ್ಶನ ಪಡೆದು, ಜೈ ಸಾಯಿರಾಂ ಘೋಷದೊಂದಿಗೆ ಭಕ್ತಿ ಸಮರ್ಪಿಸಿ ಧನ್ಯತಾಭಾವ ಮೆರೆದರು. ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಜರುಗಿದವು. ಶ್ರೀ ಸಾಯಿ ಟ್ರಸ್ಟ್ ನೇತೃತ್ವದಲ್ಲಿ ನಡೆದ ಗುರು ಪೂರ್ಣಿಮೆಾ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ … Read more

ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಎಆರ್‌ಜಿ ವಿದ್ಯಾರ್ಥಿ ಉಮೇಶ್ ಗೆ ಚಿನ್ನ

ಸುದ್ದಿ360 ದಾವಣಗೆರೆ, ಜು.13: ಥಾಯ್ಲೆಂಡ್‌ನ ಸ್ಪೋರ್ಟ್ಸ್ ಯೂನಿವರ್ಸಿಟಿ ಆಫ್ ಚೌನಬುರಿ ವತಿಯಿಂದ ಜೂನ್ ತಿಂಗಳಲ್ಲಿ ಆಯೋಜಿಸಿದ್ದ ಥಾಯ್ಲೆಂಡ್ ಸೌಥ್ ಏಷಿಯನ್ ಗೇಮ್ಸ್-2022ರ ಕುಸ್ತಿ ಪಂದ್ಯದಲ್ಲಿ ನಗರದ ಎಆರ್‌ಜಿ ಕಾಲೇಜು ವಿದ್ಯಾರ್ಥಿ ಬಿ. ಉಮೇಶ ಚಿನ್ನದ ಪದಕ ಗೆದ್ದಿದ್ದಾರೆ. ಪಂದ್ಯಾವಳಿಯ 65 ಕೆ.ಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಸಿದ್ದ ಎಆರ್‌ಜಿ ಕಾಲೇಜು ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಉಮೇಶ್, ಮಲೇಶಿಯಾ ಕುಸ್ತಿಪಟು ವಿರುದ್ಧ 10-00 ಅಂತರದಲ್ಲಿ ಭರ್ಜರಿ ಗೆಲುವು ಸಾಸಿದರು. ಬಿ. ಉಮೇಶ ಈಗಾಗಲೇ ಮೂರು ರಾಷ್ಟ್ರೀಯ ಪದಕಗಳ ಸಾಧನೆ … Read more

ನಿದ್ದೆ ಮಾಡುವ  ಸಿಂಹವನ್ನೇ ನಂಬಿಕೊಂಡ ಸಂಸ್ಕೃತಿಯವರು ವಿರೋಧ ಪಕ್ಷದವರು :ಸಿಎಂ

ಸುದ್ದಿ360 ಉಡುಪಿ, ಜು.13: ಪ್ರಧಾನಿ ನರೇಂದ್ರ ಮೋದಿ ಕ್ರಿಯಾಶೀಲವಾಗಿದ್ದಾರೆ. ಅದಕ್ಕೆ ತಕ್ಕ ಹಾಗೆ ನಮ್ಮ ದೇಶದ ಲಾಂಛನವಾಗಿರುವ ಸಿಂಹ ಸಶಕ್ತ ಹಾಗೂ ಘರ್ಜನಾ ರೂಪದಲ್ಲಿ ಇರಬೇಕು. ಆ ರೀತಿಯಲ್ಲಿ ಸಿಂಹ ಲಾಂಛನ ಇದೆ. ಆದರೆ ವಿರೋಧ ಪಕ್ಷದವರು ನಿದ್ದೆ ಮಾಡಿಕೊಂಡೇ ಇರುವ ಸಿಂಹವನ್ನು ನಂಬಿಕೊಂಡಿರುವ ಸಂಸ್ಕೃತಿಯವರು. ಇದು ಉಡುಪಿಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸಿಂಹ ಲಾಂಛನ ವಿಚಾರವಾಗಿ ನೀಡಿದ ಪ್ರತಿಕ್ರಿಯೆ. ಸಿಂಹದ ಲಾಂಛ ಉಗ್ರವಾಗಿದೆ, ವ್ಯಗ್ರವಾಗಿದೆ ಎಂಬುದು ನೋಡುವವರ ದೃಷ್ಟಿಕೋನವಾಗಿದೆ. ಕಾಂಗ್ರೆಸ್ … Read more

ಸ್ವರಾಜ್ಯಕ್ಕೆ ಮುಕ್ಕಾಲು ನೂರು ಸಂಭ್ರಮಕ್ಕೆ ಕನ್ನಡ ತೇರು

ಜು.14ರಿಂದ 17ರವರೆಗೆ ದಾವಣಗೆರೆ ಜಿಲ್ಲಾ ಸಂಚಾರ ಸುದ್ದಿ360, ದಾವಣಗೆರೆ, ಜು.13: ಭಾರತದ 75ನೇ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಯುವಾ ಬ್ರಿಗೇಡ್ ವತಿಯಿಂದ ಸ್ವರಾಜ್ಯಕ್ಕೆ ಮುಕ್ಕಾಲು ನೂರು ಸಂಭ್ರಮಕ್ಕೆ ಕನ್ನಡ ತೇರು ಹೆಸರಿನ ತೇರು ದಾವಣಗೆರೆ ಜಿಲ್ಲೆಯಲ್ಲಿ ಜುಲೈ 14ರಂದು ದಾವಣಗೆರೆ ಜಿಲ್ಲೆ ಪ್ರವೇಶಿಸಿ 17ರವರೆಗೆ ಸಂಚರಿಸಲಿದೆ ಎಂದು ಯುವಾ ಬ್ರಿಗೇಡ್ ನ ಜಿಲ್ಲಾ ಸಂಚಾಲಕ ಕೆ.ಎಸ್. ಗಜೇಂದ್ರ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜೂನ್ 27ರಂದು ಬೀಳಗಿಯಿಂದ ಸಂಚಾರ ಆರಂಭಿಸಿರುವ ತೇರು 100 … Read more

ಕನಿಷ್ಠ ವೇತನ ನಿಗದಿಗೆ ಗ್ರಾಮ ಪಂಚಾಯಿತಿ ನೌಕರರ ಒತ್ತಾಯ

ದಾವಣಗೆರೆ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ಸುದ್ದಿ360, ದಾವಣಗೆರೆ, ಜು.13:  ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ನಿಗದಿ ಮತ್ತು ಬಾಕಿ ವೇತನಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರ ಸಂಘ (ಸಿಐಟಿಯು ಸಂಯೋಜಿತ) ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಪಿಬಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ  ಗ್ರಾಮ ಪಂಚಾಯಿತಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಕಗೆ ಒತ್ತಾಯಿಸಿ, ಕಾರ್ಮಿಕ … Read more

2023ರಲ್ಲಿ 135 ಕ್ಕೂ ಹೆಚ್ಚು ಸ್ಥಾನ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ

ದಾವಣಗೆರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಸುದ್ದಿ360 ದಾವಣಗೆರೆ, ಜು.12:  2023ರಲ್ಲಿ ನೂರಕ್ಕೆ  ನೂರರಷ್ಟು ಕಾಂಗ್ರೆಸ್ ಸರ್ಕಾರ ಬರುತ್ತದೆ. 135 ಕ್ಕೂ ಹೆಚ್ಚು ಸ್ಥಾನಗಳನ್ನ ಕಾಂಗ್ರೆಸ್ ಗೆಲ್ಲುತ್ತದೆ. ಈಗ ಚುನಾವಣೆ ಮಾಡಿದರೂ ನಾವು ಚುನಾವಣೆಗೆ ಸಿದ್ಧರಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ನಾಯಕರಿಗೆ ಈಗಾಗಲೇ ಭಯ ಶುರುವಾಗಿದೆ. ವಿಶೇಷವಾಗಿ ಸಚಿವ ಸ್ಥಾನ ಕಳೆದುಕೊಂಡಿರುವ ಕೆಎಸ್ ಈಶ್ವರಪ್ಪ ಅವರಿಗೆ ಭಯ ಶುರುವಾಗಿದೆ‌. ಇದೇ ಕಾರಣಕ್ಕೆ ಅವರು ಅಮೃತ ಮಹೋತ್ಸವದ ಬಗ್ಗೆ … Read more

ದ್ರೋಣ ಎಜು ಇ ಲರ್ನಿಂಗ್ ನಿಂದ ವಿದ್ಯಾರ್ಥಿಗಳಿಗೆ ಇ-ತರಗತಿ

ಸುದ್ದಿ360 ದಾವಣಗೆರೆ, ಜು.12: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಶಿಕ್ಷಣ ಕ್ಷೇತ್ರದ ಆಧುನಿಕ ಸೌಲಭ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿಸುವ ಆಶಯದಿಂದ ದ್ರೋಣ ಎಜುಕೇಷನ್ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ ಎಂದು ಜಾವ ಟೆಕ್ ಬಿಸಿನೆಸ್ ಸಲ್ಯೂಷನ್ಸ್ ಸಂಸ್ಥೆಯ ರಾಜ್ಯ ಮುಖ್ಯಸ್ಥ ಸಂಜೀವ್ ತಿಳಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗುತ್ತಿದ್ದು, ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಶೈಕ್ಷಣಿಕ ಅಧ್ಯಯನಕ್ಕೆ ಪೂರಕ ಆಗಿರುವ ಪುಸ್ತಕಗಳು ಆನ್‌ ಲೈನ್‌ ಮೂಲಕವೇ ಸಿಗುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ದೃಶ್ಯ … Read more

ನಿಗಮ ಮಂಡಳಿ: ಹೊಸಬರಿಗೆ ಅವಕಾಶ

ಸುದ್ದಿ360 ಮೈಸೂರು, ಜು.12: ನಿಗಮ ಮಂಡಳಿಗಳಿಗೆ ಹೊಸಬರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಿಗಮ ಮಂಡಳಿಗಳ ಕೋರ್ ಕಮಿಟಿಯಲ್ಲಿ  ಒಂದೂವರೆ ವರ್ಷ ಮೇಲ್ಪಟ್ಟವರನ್ನು ತೆಗೆದು ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ತೀರ್ಮಾನ ಆರು ತಿಂಗಳ ಹಿಂದೆಯೇ ಆಗಿದೆ. ಈ ನಿಟ್ಟಿನಲ್ಲಿ ಬೇರೆಯವರಿಗೂ ಅವಕಾಶ ಒದಗಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

ರೈತರ ಬೇಡಿಕೆಗೆ ಮುಖ್ಯಮಂತ್ರಿಯಿಂದ ಸಕಾರಾತ್ಮಕ ಸ್ಪಂದನೆಯ ಭರವಸೆ

ಸುದ್ದಿ360, ದಾವಣಗೆರೆ, ಜು.12: ಕರ್ನಾಟಕ ರಾಜ್ಯ ರೈತ ಸಂಘದವರ ನಿಯೋಗ ಸೋಮವಾರ‌ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವ ನಿರ್ಧಾರ ಪ್ರಕಟಿಸಿದರು. ರೈತರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ನಾರಾಯಣಗೌಡ, ಶಾಸಕ ಸಿ ಪಿ ಯೋಗೇಶ್ವರ  ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!