ಹಾಲು ವ್ಯಾಪಾರಿಗೆ ಚಾಕು ತೋರಿಸಿ ದರೋಡೆ
ಸುದ್ದಿ360,ಶಿವಮೊಗ್ಗ ಜು.06 : ಎಂದಿನಂತೆ ನಸುಕಿನಲ್ಲಿ ಬಂದು ಹಾಲಿನ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಿದ್ದ ಹಾಲು ವ್ಯಾಪಾರಿಯೋರ್ವರಿಗೆ ಚಾಕುವಿನಿಂದ ಬೆದರಿಕೆಯೊಡ್ಡಿ, ನಗದು ಮತ್ತು ಮೊಬೈಲ್ ದೋಚಿಕೊಂಡು ಹೋಗಿರುವ ಘಟನೆ ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ನಡೆದಿದೆ. ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕುವೆಂಪು ರಸ್ತೆಯಲ್ಲಿರುವ ಹಾಲಿನ ಬೂತ್ ನಲ್ಲಿ ಪ್ಯಾಕೆಟ್ ಹಾಲು ವ್ಯಾಪಾರ ಮಾಡುತ್ತಿದ್ದ ಹೊಸಮನೆ ಬಡಾವಣೆ ನಿವಾಸಿ ಮೋಹನ್ ದರೋಡೆಗೊಳಗಾದ ಹಾಲಿನ ವ್ಯಾಪಾರಿ ಎಂದು ಗುರುತಿಸಲಾಗಿದೆ. ವ್ಯಾಪಾರದಲ್ಲಿ ತೊಡಗಿದ್ದ ಮೋಹನ್ ನನ್ನು ಬೈಕ್ ನಲ್ಲಿ … Read more